ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ iCloud Drive ಅನ್ನು ಸೆಟಪ್ ಮಾಡಿ

ನೀವು iCloud Drive ಅನ್ನು ಆ್ಯಕ್ಸೆಸ್ ಮಾಡಬಹುದು ಮತ್ತು ಫೈಲ್‌ಗಳನ್ನು ಸ್ಟೋರ್ ಮಾಡಬಹುದು, ಫೋಲ್ಡರ್‌ಗಳನ್ನು ರಚಿಸಬಹುದು ಮತ್ತು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಡಾಕ್ಯುಮಂಟ್‌ಗಳನ್ನು ಹಂಚಿಕೊಳ್ಳಬಹುದು. ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿರುವ ನಿಮ್ಮ ಎಲ್ಲಾ ಸಾಧನಗಳಿಂದ ನಿಮ್ಮ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು—ಇದರಲ್ಲಿ iCloud Drive Finderನಲ್ಲಿ ಇರುವಂತಹ Mac ಸಹ ಸೇರಿದೆ.

iOS 11, iPadOS 13, ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ ಸಾಧನಗಳಲ್ಲಿನ ಫೈಲ್ಸ್ ಆ್ಯಪ್‌ನಲ್ಲಿ iCloud Drive ಬಿಲ್ಟ್ ಇನ್ ಆಗಿರುತ್ತದೆ. ನೀವು Mac ಕಂಪ್ಯೂಟರ್‌ಗಳಲ್ಲಿ (OS X 10.10 ಅಥವಾ ನಂತರದ), Windows ಸಾಧನಗಳಲ್ಲಿ (Windows 7 ಅಥವಾ ನಂತರದ ಆವೃತ್ತಿಗಳಿಗಾಗಿ iCloud) ಅಥವಾ iCloud.comನಲ್ಲಿ ಆನ್‌ಲೈನ್‌ಲ್ಲಿ ಸಹ iCloud Drive ಅನ್ನು ಬಳಸಬಹುದು. ಸಂಗ್ರಹಣೆಯ ಮಿತಿಗಳು ನಿಮ್ಮ iCloud ಸಂಗ್ರಹಣೆಯ ಪ್ಲಾನ್ ಅನ್ನು ಅವಲಂಬಿಸಿವೆ.

iCloud Drive ಆನ್ ಮಾಡಿ

  1. ಸೆಟ್ಟಿಂಗ್ಸ್  > [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ.

  2. ಡ್ರೈವ್ ಅನ್ನು ಟ್ಯಾಪ್ ಮಾಡಿ, ನಂತರ ಈ iPhone ಅನ್ನು ಸಿಂಕ್ ಮಾಡಿ ಎಂಬುದನ್ನು ಆನ್ ಮಾಡಿ.

iCloud Drive ಬ್ರೌಸ್ ಮಾಡಿ

  1. ನಿಮ್ಮ iPhoneನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಥಳಗಳ ಕೆಳಗೆ iCloud Drive ಅನ್ನು ಟ್ಯಾಪ್ ಮಾಡಿ.

    ನೀವು ಸ್ಥಳಗಳನ್ನು ನೋಡದಿದ್ದರೆ, ಬ್ರೌಸ್ ಮಾಡಿ ಎಂಬುದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ. ನೀವು ಸ್ಥಳಗಳ ಕೆಳಗೆ iCloud Drive ಅನ್ನು ನೋಡದಿದ್ದರೆ, ಸ್ಥಳಗಳನ್ನು ಟ್ಯಾಪ್ ಮಾಡಿ.

  4. ಫೋಲ್ಡರ್ ಅನ್ನು ತೆರೆಯಲು, ಅದನ್ನು ಟ್ಯಾಪ್ ಮಾಡಿ.

    ಫೈಲ್‌ಗಳು, ಫೋಲ್ಡರ್‌ಗಳನ್ನು ಮಾರ್ಪಡಿಸಿ ಮತ್ತು ಡೌನ್‌ಲೋಡ್‌ಗಳನ್ನು ಹುಡುಕಿ ಎಂಬುದನ್ನು ನೋಡಿ.

iCloud Drive ಅನ್ನು ಯಾವ ಆ್ಯಪ್‌ಗಳು ಬಳಸುತ್ತವೆ ಎಂಬುದನ್ನು ಆಯ್ಕೆಮಾಡಿ

iCloud Driveನಲ್ಲಿ ಕಂಟೆಂಟ್ ಅನ್ನು ಸಂಗ್ರಹಿಸಲು ಮತ್ತು ಎಡಿಟ್ ಮಾಡಲು ಯಾವ ಆ್ಯಪ್‌ಗಳಿಗೆ ಆ್ಯಕ್ಸೆಸ್ ಇರುತ್ತದೆ ಎಂಬುದನ್ನು ನೀವು ಆಯ್ಕೆಮಾಡಬಹುದು.

  1. ಸೆಟ್ಟಿಂಗ್ಸ್  > [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ.

  2. iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಪಕ್ಕದಲ್ಲಿರುವ ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು iCloudನಲ್ಲಿ ಸೇವ್ ಮಾಡಲು ಬಯಸುವ ಪ್ರತಿಯೊಂದು ಆ್ಯಪ್ ಅನ್ನು ಆನ್ ಮಾಡಿ ಮತ್ತು ಸೇವ್ ಮಾಡಲು ನಿಮಗೆ ಇಷ್ಟವಿಲ್ಲದ ಪ್ರತಿಯೊಂದು ಆ್ಯಪ್ ಅನ್ನು ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.