ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ Safariಗೆ ಬೇರೆ ಬ್ರೌಸರ್‌ನಿಂದ ಡೇಟವನ್ನು ಇಂಪೋರ್ಟ್ ಮಾಡುವುದು

ನೀವು ಬೇರೆ ಬ್ರೌಸರ್‌ನಿಂದ ಎಕ್ಸ್‌ಪೋರ್ಟ್ ಮಾಡಿದ ಡೇಟವನ್ನು ನೀವು Safariಗೆ ಇಂಪೋರ್ಟ್ ಮಾಡಬಹುದು. ಬ್ರೌಸರ್ ಡೇಟ, ಬುಕ್‌ಮಾರ್ಕ್‌ಗಳು, ಇತಿಹಾಸ, ಎಕ್ಸ್‌ಟೆನ್ಶನ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.

ಇಂಪೋರ್ಟ್ ಮಾಡಿಕೊಳ್ಳಲು ಫೈಲ್ ಒಂದನ್ನು ಆಯ್ಕೆಮಾಡುವಂತೆ ನಿಮಗೆ ಕೇಳುತ್ತಿರುವ, ‘ಬ್ರೌಸಿಂಗ್ ಡೇಟವನ್ನು ಇಂಪೋರ್ಟ್ ಮಾಡಿ’ ಸ್ಕ್ರೀನ್.
  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಇತಿಹಾಸ ಮತ್ತು ವೆಬ್‌ಸೈಟ್ ಡೇಟದ ಕೆಳಗೆ, ಇಂಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ಫೈಲ್ ಅನ್ನು ಆರಿಸಿ ಎಂಬುದನ್ನು ಟ್ಯಾಪ್ ಮಾಡಿ, ಇಂಪೋರ್ಟ್ ಮಾಡಿಕೊಳ್ಳಲು ಫೈಲ್ (ಅಥವಾ ಫೈಲ್‌ಗಳ ZIP ಫೈಲ್) ಅನ್ನು ಆಯ್ಕೆಮಾಡಿ.

    ಬುಕ್‌ಮಾರ್ಕ್‌ಗಳು ಅಥವಾ ಇತಿಹಾಸದಂತಹ ಪ್ರತಿಯೊಂದು ಬ್ರೌಸಿಂಗ್ ಡೇಟದ ತುಣುಕಿಗೆ ಪ್ರತ್ಯೇಕ ಫೈಲ್‌ಗಳು ಲಭ್ಯವಿರಬಹುದು.

  5. Safariಗೆ ಇಂಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಇಂಪೋರ್ಟ್ ಮಾಡಿದ ಬ್ರೌಸರ್ ಡೇಟದ ವಿವರಣೆಯು ಕಾಣಿಸಿಕೊಳ್ಳುತ್ತದೆ.

    ಗಮನಿಸಿ: ನೀವು ಇಂಪೋರ್ಟ್ ಮಾಡುವ ಯಾವುದೇ ಪಾಸ್‌ವರ್ಡ್‌ಗಳು ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗುತ್ತವೆ.

  6. ಪೂರ್ಣಗೊಂಡಿದೆ ಎಂಬುದನ್ನು ಟ್ಯಾಪ್ ಮಾಡಿ.

    ಎಚ್ಚರಿಕೆ: ಭದ್ರತೆಗಾಗಿ, ನೀವು ಇಂಪೋರ್ಟ್ ಮಾಡಿದ ಫೈಲ್ ಅಥವಾ ಫೋಲ್ಡರ್ ಅನ್ನು ಡಿಲೀಟ್ ಮಾಡಿ. ಇದು ಎನ್‌ಕ್ರಿಪ್ಟ್ ಮಾಡದ ಡೇಟವನ್ನು ಒಳಗೊಂಡಿರಬಹುದು ಮತ್ತು ಅದನ್ನು ಆ್ಯಕ್ಸೆಸ್ ಮಾಡಬಹುದಾದ ಯಾರಿಗಾದರೂ ಇದು ಗೋಚರಿಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.