iPhoneನಲ್ಲಿರುವ ಪ್ರಿವ್ಯೂನಲ್ಲಿ PDF ಫಾರ್ಮ್‌ಗಳನ್ನು ಭರ್ತಿ ಮಾಡಿ ಮತ್ತು ಸಹಿ ಮಾಡಿ

ನೀವು iPhoneನಲ್ಲಿರುವ ಪ್ರಿವ್ಯೂ ಆ್ಯಪ್‌ನಲ್ಲಿ PDF ಫಾರ್ಮ್‌ಗಳನ್ನು ಭರ್ತಿ ಮಾಡಿ ಸಹಿ ಮಾಡಬಹುದು.

ಪ್ರಿವ್ಯೂ ಆ್ಯಪ್‌ನಲ್ಲಿ, ಭರ್ತಿ ಮಾಡಬಹುದಾದ ಫೀಲ್ಡ್‌ಗಳನ್ನು ಹೈಲೈಟ್ ಮಾಡಲಾದ PDF ಫಾರ್ಮ್ ಅನ್ನು ತೋರಿಸುತ್ತಿರುವ ಸ್ಕ್ರೀನ್. ಸ್ಕ್ರೀನ್‌ನ ಕೆಳಭಾಗದಲ್ಲಿ, ವಿವರಣಾತ್ಮಕ ಟಿಪ್ಪಣಿ ಸೇರಿಸಿ, ಮಾರ್ಕಪ್, ಸ್ವಯಂಭರ್ತಿ, ಕ್ರಾಪ್, ಮಾಹಿತಿ, ಹಂಚಿಕೊಳ್ಳಿ ಮತ್ತು ಹುಡುಕಿ ಬಟನ್‌ಗಳಿವೆ. ಸ್ವಯಂಭರ್ತಿ ಬಟನ್ ಅನ್ನು ಆಯ್ಕೆಮಾಡಲಾಗಿದೆ.
  1. ನಿಮ್ಮ iPhoneನಲ್ಲಿ ಪ್ರಿವ್ಯೂ ಆ್ಯಪ್‌ಗೆ ಹೋಗಿ.

  2. PDF ಫಾರ್ಮ್ ಅನ್ನು ತೆರೆಯಿರಿ.

  3. ಫಾರ್ಮ್ ಭರ್ತಿಮಾಡುವ ಬಟನ್ ಅನ್ನು ಟ್ಯಾಪ್ ಮಾಡಿ.

  4. ಫೀಲ್ಡ್ ಒಂದನ್ನು ಟ್ಯಾಪ್ ಮಾಡಿ, ನಂತರ ಮಾಹಿತಿಯನ್ನು ನಮೂದಿಸಿ (ಅಥವಾ ಆ ಮಾಹಿತಿಯನ್ನು ಸೇರಿಸಲು ಆನ್‌ಸ್ಕ್ರೀನ್ ಕೀಬೋರ್ಡ್ ಮೇಲಿರುವ ಸ್ವಯಂಭರ್ತಿ ಸಲಹೆಯನ್ನು ಟ್ಯಾಪ್ ಮಾಡಿ).

  5. ಸಹಿ ಅಥವಾ ಪಠ್ಯದ ಫಾರ್ಮ್ ಬಾಕ್ಸ್ ಅನ್ನು ಸೇರಿಸಲು, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.