ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಡಿಸ್‌ಪ್ಲೇಯನ್ನು ದೀರ್ಘಾವಧಿಗೆ ಆನ್ ಮಾಡಿ ಇರಿಸಿ

ನೀವು iPhone ಕಡೆಗೆ ನೋಡುತ್ತಿರುವಾಗ ಅದರ ಡಿಸ್‌ಪ್ಲೇ ಆನ್ ಆಗಿರುತ್ತದೆ, ಆದರೆ ನೀವು ಕೆಲ ಸಮಯ ಬೇರೆ ಕಡೆ ನೋಡಿದಾಗ ಅದು ಮಂದವಾಗುತ್ತದೆ ಮತ್ತು ಅಂತಿಮವಾಗಿ ಲಾಕ್ ಆಗುತ್ತದೆ (ನಿಮ್ಮ ಸುರಕ್ಷತೆಗಾಗಿ). ಡಿಸ್‌ಪ್ಲೇ ಹೆಚ್ಚು ಸಮಯ ಇರಬೇಕೆಂದು ನೀವು ಬಯಸಿದರೆ (ಉದಾಹರಣೆಗೆ, ನಕ್ಷೆ ಆ್ಯಪ್ ಮೂಲಕ ನೀವು ನ್ಯಾವಿಗೇಟ್ ಮಾಡುವಾಗ), ಸ್ವಯಂಚಾಲಿತವಾಗಿ ಮಸುಕಾಗಲು ಮತ್ತು ಲಾಕ್ ಆಗಲು iPhone ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಬದಲಾಯಿಸಬಹುದು.

iPhone ಯಾವಾಗ ಸ್ವಯಂಚಾಲಿತವಾಗಿ ಲಾಕ್ ಆಗಬೇಕು ಎಂಬುದನ್ನು ಬದಲಾಯಿಸಿ

ಸ್ವಯಂಚಾಲಿತವಾಗಿ ಲಾಕ್ ಆಗಲು iPhone ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಸೆಟ್ ಮಾಡಬಹುದು.

ಸೆಟ್ಟಿಂಗ್ಸ್ ಆ್ಯಪ್  > ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ > ಸ್ವಯಂ-ಲಾಕ್ ಎಂಬಲ್ಲಿಗೆ ಹೋಗಿ, ನಂತರ ಸಮಯಾವಧಿಯನ್ನು ಸೆಟ್ ಮಾಡಿ.

ಗಮನಿಸಿ: ಆಟೋ-ಲಾಕ್ ಅನ್ನು ವಿಳಂಬಗೊಳಿಸಿದರೆ ಅಥವಾ ತಡೆಗಟ್ಟಿದರೆ ವಿದ್ಯುತ್ ಬಳಕೆ ಹೆಚ್ಚಾಗಬಹುದು.

ನಿಮ್ಮ ಲಾಕ್ ಸ್ಕ್ರೀನ್ ಅನ್ನು ಯಾವಾಗಲೂ ಆನ್ ಡಿಸ್‌ಪ್ಲೇಯೊಂದಿಗೆ ಗೋಚರಿಸುವಂತೆ ಇರಿಸಿ

ಬೆಂಬಲಿತ ಮಾಡಲ್‌ಗಳಲ್ಲಿ, ಯಾವಾಗಲೂ-ಆನ್ ಡಿಸ್‌ಪ್ಲೇ ಸೆಟ್ಟಿಂಗ್, ನಿಮ್ಮ iPhone ಲಾಕ್ ಆಗಿರುವಾಗಲೂ ಸಹ ಕಾಣಿಸುವಂತೆ ಇರಲು ನಿಮ್ಮ ಲಾಕ್ ಸ್ಕ್ರೀನ್‌ನ ಮಸುಕುಗೊಳಿಸಿದ ಆವೃತ್ತಿಗೆ ಅವಕಾಶ ಮಾಡಿಕೊಂಡುತ್ತದೆ. ಮಸುಕಾದ ಸ್ಕ್ರೀನ್ ಅನ್ನು ನೋಡುವ ಮೂಲಕ, ಅಗತ್ಯ ಮಾಹಿತಿಗಳಾದ ನೋಟಿಫಿಕೇಷನ್‌ಗಳು, ದಿನಾಂಕ ಮತ್ತು ಸಮಯ ಹಾಗೂ ನಿಮ್ಮ ವಿಜೆಟ್‌ಗಳಲ್ಲಿನ ಮಾಹಿತಿಯನ್ನು ನೀವು ಪರಿಶೀಲಿಸಬಹುದು.

iPhone ಕೆಳಮುಖವಾಗಿದ್ದರೆ ಅಥವಾ ವೀಕ್ಷಣೆಯಿಂದ ಅಡಚಣೆಗೆ ಒಳಗಾಗಿದ್ದರೆ, ಪೇರ್ ಆಗಿರುವ Apple Watchನ ಸಮೀಪ ಇಲ್ಲದಿದ್ದರೆ, CarPlay ಸೆಷನ್ ಪ್ರಾರಂಭವಾಗುವಾಗ, ಕಂಟಿನ್ಯುಯಿಟಿ ಕ್ಯಾಮರಾ ಬಳಕೆಯಲ್ಲಿರುವಾಗ, ಲೋ ಪವರ್ ಮೋಡ್ ಆನ್ ಆಗಿರುವಾಗ, ಸ್ಲೀಪ್ ಫೋಕಸ್ ಆನ್ ಇರುವಾಗ ಅಥವಾ ನಿಮ್ಮ ಸಾಮಾನ್ಯ ನಿದ್ರಿಸುವ ವೇಳೆಯಲ್ಲಿ ಡಿಸ್‌ಪ್ಲೇ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.

ಯಾವಾಗಲೂ-ಆನ್ ಡಿಸ್‌ಪ್ಲೇ ಸೆಟ್ಟಿಂಗ್ ಡಿಫಾಲ್ಟ್ ಆಗಿ ಆನ್ ಆಗಿದೆ. ಇದನ್ನು ಆಫ್ ಮಾಡಲು, ಸೆಟ್ಟಿಂಗ್ಸ್ ಆ್ಯಪ್  > ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ ಎಂಬುದಕ್ಕೆ ಹೋಗಿ, ನಂತರ ‘ಯಾವಾಗಲೂ ಆನ್ ಡಿಸ್‌ಪ್ಲೇ’ಯನ್ನು ಆಫ್ ಮಾಡಿ.

ಸಲಹೆ: ಯಾವಾಗಲೂ ಆನ್ ಎಂಬ ಡಿಸ್‌ಪ್ಲೇ ಆನ್ ಆಗಿರುವಾಗ, ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ನಿಮ್ಮ ವಾಲ್‌ಪೇಪರ್ ಅಥವಾ ನೋಟಿಫಿಕೇಷನ್‌ಗಳನ್ನು ತೋರಿಸಬೇಕೆ ಎಂಬುದನ್ನು ನೀವು ಆಯ್ಕೆ ಮಾಡಬಹುದು. ಸೆಟ್ಟಿಂಗ್ಸ್ ಆ್ಯಪ್ > ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ > ಡಿಸ್‌ಪ್ಲೇ ಯಾವಾಗಲೂ ಆನ್ ಎಂಬುದರಲ್ಲಿ, ವಾಲ್‌ಪೇಪರ್ ತೋರಿಸಿ ಅಥವಾ ನೋಟಿಫಿಕೇಷನ್‌ಗಳನ್ನು ತೋರಿಸಿ ಎಂಬುದನ್ನು ಆನ್ ಅಥವಾ ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.