ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ iOS ಅನ್ನು ಅಪ್‌ಡೇಟ್ ಮಾಡಿ

iOSನ ಇತ್ತೀಚಿನ ಆವೃತ್ತಿಗೆ ನೀವು ಅಪ್‌ಡೇಟ್ ಮಾಡಿದಾಗ, ನಿಮ್ಮ ಡೇಟ ಮತ್ತು ಸೆಟ್ಟಿಂಗ್ಸ್ ಬದಲಾಗುವುದಿಲ್ಲ.

ನೀವು ಅಪ್‌ಡೇಟ್ ಮಾಡುವ ಮೊದಲು, ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಲು iPhone ಅನ್ನು ಸೆಟಪ್ ಮಾಡಿ ಅಥವಾ ನಿಮ್ಮ ಸಾಧನವನ್ನು ಹಸ್ತಚಾಲಿತವಾಗಿ ಬ್ಯಾಕಪ್ ಮಾಡಿ.

iPhone ಅನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಿ

ನಿಮ್ಮ iPhone ಅನ್ನು ಮೊದಲ ಬಾರಿಗೆ ಸೆಟಪ್ ಮಾಡಿದಾಗ ನೀವು ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಆನ್ ಮಾಡದಿದ್ದರೆ, ಈ ಕೆಳಗಿನವುಗಳನ್ನು ಮಾಡಿ:

  1. ಸೆಟ್ಟಿಂಗ್ಸ್  > ಸಾಮಾನ್ಯ > ಸಾಫ್ಟ್‌ವೇರ್ ಅಪ್‌ಡೇಟ್ > ಸ್ವಯಂಚಾಲಿತ ಅಪ್‌ಡೇಟ್‌ಗಳು ಎಂಬಲ್ಲಿಗೆ ಹೋಗಿ.

  2. ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಿ ಮತ್ತು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಿ ಎಂಬುದರ ಕೆಳಗೆ iOS ಅಪ್‌ಡೇಟ್‌ಗಳು ಎಂಬುದನ್ನು ಆನ್ ಮಾಡಿ.

ಅಪ್‌ಡೇಟ್ ಲಭ್ಯವಿದ್ದಾಗ, ಚಾರ್ಜ್ ಆಗುವಾಗ ಮತ್ತು Wi-Fiಗೆ ಕನೆಕ್ಟ್ ಮಾಡಿರುವಾಗ iPhone ರಾತ್ರಿಯ ವೇಳೆಯಲ್ಲಿ ಅಪ್‌ಡೇಟ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುತ್ತದೆ. ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡುವ ಮೊದಲು ನಿಮಗೆ ಸೂಚಿಸಲಾಗುತ್ತದೆ.

iPhone ಅನ್ನು ಹಸ್ತಚಾಲಿತವಾಗಿ ಅಪ್‌ಡೇಟ್ ಮಾಡಿ

ಯಾವುದೇ ಸಮಯದಲ್ಲಿ, ನೀವು ಸಾಫ್ಟ್‌ವೇರ್ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಬಹುದು ಮತ್ತು ಇನ್‌ಸ್ಟಾಲ್ ಮಾಡಬಹುದು.

ಸೆಟ್ಟಿಂಗ್ಸ್  > ಸಾಮಾನ್ಯ > ಸಾಫ್ಟ್‌ವೇರ್ ಅಪ್‌ಡೇಟ್ ಎಂಬಲ್ಲಿಗೆ ಹೋಗಿ.

ಪ್ರಸ್ತುತವಾಗಿ ಇನ್‌ಸ್ಟಾಲ್ ಮಾಡಲಾದ iOSನ ಆವೃತ್ತಿ ಮತ್ತು ಅದರ ಅಪ್‌ಡೇಟ್ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಕ್ರೀನ್ ತೋರಿಸುತ್ತದೆ.

ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಆಫ್ ಮಾಡಲು, ಸೆಟ್ಟಿಂಗ್ಸ್ > ಸಾಮಾನ್ಯ > ಸಾಫ್ಟ್‌ವೇರ್ ಅಪ್‌ಡೇಟ್ > ಸ್ವಯಂಚಾಲಿತ ಅಪ್‌ಡೇಟ್‌ಗಳು ಎಂಬಲ್ಲಿಗೆ ಹೋಗಿ.

ನಿಮ್ಮ ಕಂಪ್ಯೂಟರ್ ಅನ್ನು ಬಳಸಿ ಅಪ್‌ಡೇಟ್ ಮಾಡಿ

  1. iPhone ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • Macನಲ್ಲಿ (macOS 10.15 ಅಥವಾ ನಂತರದ ಆವೃತ್ತಿ): Finder ಸೈಡ್‌ಬಾರ್‌ನಲ್ಲಿ, ನಿಮ್ಮ iPhone ಅನ್ನು ಆಯ್ಕೆಮಾಡಿ, ನಂತರ ವಿಂಡೋ ಮೇಲ್ಭಾಗದ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ.

    • Mac (macOS 10.14 ಅಥವಾ ಹಿಂದಿನ ಆವೃತ್ತಿಯನ್ನು ಹೊಂದಿರುವ) ಅಥವಾ Windows ಸಾಧನದಲ್ಲಿ: iTunes ಆ್ಯಪ್ ತೆರೆಯಿರಿ, iTunes ವಿಂಡೋ ಮೇಲಿನ ಎಡಭಾಗದ ಸಮೀಪದಲ್ಲಿನ iPhone ಅನ್ನು ಹೋಲುವ ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಸಾರಾಂಶ ಎಂಬುದನ್ನು ಕ್ಲಿಕ್ ಮಾಡಿ.

      ಗಮನಿಸಿ: iTunesನ ಇತ್ತೀಚಿನ ಆವೃತ್ತಿಯನ್ನು ಬಳಸಿ. iTunesನ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

  3. ಅಪ್‌ಡೇಟ್‌ಗಾಗಿ ಪರಿಶೀಲಿಸಿ ಎಂಬುದನ್ನು ಕ್ಲಿಕ್ ಮಾಡಿ.

  4. ಲಭ್ಯವಿರುವ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಲು, ಅಪ್‌ಡೇಟ್ ಎಂಬುದನ್ನು ಕ್ಲಿಕ್ ಮಾಡಿ.

ಇತ್ತೀಚಿನ iOSಗೆ ಅಪ್‌ಡೇಟ್ ಮಾಡುವುದು ಮತ್ತು ನಿಮ್ಮ iPhone, iPad ಅಥವಾ iPod touch ಅನ್ನು ಅಪ್‌ಡೇಟ್ ಮಾಡಲು ಅಥವಾ ರಿಸ್ಟೋರ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಎಂಬ Apple ಬೆಂಬಲ ಲೇಖನಗಳನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.