ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಸಂದೇಶ ಆ್ಯಪ್‌ಲ್ಲಿ ಓದಿದ ಸ್ವೀಕೃತಿಗಳನ್ನು ಆನ್ ಅಥವಾ ಆಫ್ ಮಾಡಿ

ನೀವು ಯಾರದಾದರೂ ಪಠ್ಯ ಸಂದೇಶಗಳನ್ನು ನೋಡಿದಾಗ ಅದನ್ನು ಅವರಿಗೆ ಸ್ವಯಂಚಾಲಿತವಾಗಿ ತಿಳಿಸಲು ಓದಿದ ಸ್ವೀಕೃತಿಗಳನ್ನು ಬಳಸಬಹುದು.

ಓದಿದ ಸ್ವೀಕೃತಿಗಳನ್ನು ಆನ್ ಮಾಡಿದಾಗ, ಕಳುಹಿಸಿದವರು ನಿಮಗೆ ಕಳುಹಿಸಿದ ಸಂದೇಶಗಳ ಕೆಳಗೆ “ಓದಲಾಗಿದೆ” ಎಂಬ ಪದವನ್ನು ನೋಡುತ್ತಾರೆ, ಇದು ನೀವು ಅವರ ಸಂದೇಶವನ್ನು ಓದಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನೀವು ಕಳುಹಿಸಿದವರ ಸಂದೇಶವನ್ನು ಓದದೇ ಇದ್ದರೂ ಕೂಡ, ಅವರಿಗೆ“ಡೆಲಿವರ್ ಮಾಡಲಾಗಿದೆ” ಎಂಬ ಸ್ಟೇಟಸ್ ಕಾಣಿಸುತ್ತದೆ.

ನೀವು ಪ್ರತಿಯೊಬ್ಬರಿಗಾಗಿ ಅಥವಾ ಪ್ರತ್ಯೇಕ ಸಂಪರ್ಕಗಳಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಬಹುದು.

ಗಮನಿಸಿ: ಓದಿದ ಸ್ವೀಕೃತಿಗಳನ್ನು ಬಳಸಲು, ನೀವು ಮತ್ತು ನಿಮ್ಮ ಸ್ವೀಕೃತದಾರರು iMessage ಅನ್ನು ಆನ್ ಮಾಡಬೇಕು.

ಓದಿದ ಸ್ವೀಕೃತಿಗಳನ್ನು ಆನ್ ಮಾಡಿ

ಎಲ್ಲರಿಗೂ ನೀವು ಅವರ ಸಂದೇಶಗಳನ್ನು ತೆರೆದಿದ್ದೀರಿ ಎಂಬುದನ್ನು ತಿಳಿಸಲು ಓದಿದ ಸ್ವೀಕೃತಿಗಳನ್ನು ಆನ್ ಮಾಡಬಹುದು.

  1. ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂದೇಶ ಎಂಬಲ್ಲಿಗೆ ಹೋಗಿ.

  2. ಓದಿದ ಸ್ವೀಕೃತಿಗಳನ್ನು ಕಳುಹಿಸಿ ಎಂಬುದನ್ನು ಆನ್ ಮಾಡಿ.

ಗಮನಿಸಿ: ನೀವು ನಿರ್ದಿಷ್ಟ ಸಂಪರ್ಕಕ್ಕಾಗಿ ಓದಿದ ಸ್ವೀಕೃತಿಗಳನ್ನು ಆಫ್ ಮಾಡಿದರೆ, ನೀವು ಆ ಸಂಪರ್ಕಕ್ಕಾಗಿ ಪ್ರತ್ಯೇಕವಾಗಿ ಆ ಸೆಟ್ಟಿಂಗ್ ಅನ್ನು ಆನ್ ಮಾಡಬೇಕಾಗುತ್ತದೆ. (ಕೆಳಗೆ, ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಿ ಅನ್ನು ನೋಡಿ.)

ಓದಿದ ಸ್ವೀಕೃತಿಗಳನ್ನು ಆಫ್ ಮಾಡಿ

ಇತರರಿಗೆ ನೀವು ಅವರ ಸಂದೇಶಗಳನ್ನು ತೆರೆದಿದ್ದೀರಿ ಎಂಬುದು ತಿಳಿಯಬಾರದೆಂದು ನೀವು ಬಯಸಿದರೆ, ನೀವು ಓದಿದ ಸ್ವೀಕೃತಿಗಳನ್ನು ಆಫ್ ಮಾಡಬಹುದು.

  1. ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂದೇಶ ಎಂಬಲ್ಲಿಗೆ ಹೋಗಿ.

  2. ಓದಿದ ಸ್ವೀಕೃತಿಗಳನ್ನು ಕಳುಹಿಸಿ ಎಂಬುದನ್ನು ಆಫ್ ಮಾಡಿ.

ಗಮನಿಸಿ: ನೀವು ಯಾವ ಸಂಪರ್ಕಗಳ ಓದಿದ ಸ್ವೀಕೃತಿಗಳನ್ನು ಪ್ರತ್ಯೇಕವಾಗಿ ಎಂದಿಗೂ ಆನ್ ಮಾಡಿರುವುದಿಲ್ಲವೋ ಆ ಸಂಪರ್ಕಗಳೊಂದಿಗಿನ ಸಂಭಾಷಣೆಗಳ ಮೇಲೆ ಮಾತ್ರ ಈ ಆ್ಯಕ್ಷನ್ ಪರಿಣಾಮ ಬೀರುತ್ತದೆ. (ಕೆಳಗೆ, ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆಫ್ ಮಾಡಿ ಅನ್ನು ನೋಡಿ.)

ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಿ

ನೀವು ಸಾಮಾನ್ಯವಾಗಿ ಓದಿದ ಸ್ವೀಕೃತಿಗಳನ್ನು ಆಫ್ ಮಾಡಿದರೂ ಸಹ, ನೀವು ಒಬ್ಬ ಸ್ವೀಕೃತದಾರರರ ಒಳಬರುವ ಸಂದೇಶಗಳನ್ನು ನೋಡಿದಾಗ ಅವರಿಗೆ ತಿಳಿಸಲು ಸಂಭಾಷಣೆಯಲ್ಲಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯನ್ನು ಟ್ಯಾಪ್ ಮಾಡಿ, ನಂತರ ಸಂಭಾಷಣೆಯ ಮೇಲ್ಭಾಗದಲ್ಲಿರುವ, ನಿಮ್ಮೊಂದಿಗೆ ಸಂವಹನ ನಡೆಸುತ್ತಿರುವ ವ್ಯಕ್ತಿಯ ಸಂಖ್ಯೆ ಅಥವಾ ಹೆಸರನ್ನು ಟ್ಯಾಪ್ ಮಾಡಿ.

  3. ಓದಿದ ಸ್ವೀಕೃತಿಗಳನ್ನು ಕಳುಹಿಸಿ ಎಂಬುದನ್ನು ಆನ್ ಮಾಡಿ.

ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆಫ್ ಮಾಡಿ

ನೀವು ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಿದ್ದೀರಿ, ಆದರೆ ಅವರು ಓದಿದ ಸ್ವೀಕೃತಿಗಳನ್ನು ಪಡೆಯುವುದನ್ನು ನಿಲ್ಲಿಸಬೇಕೆಂದು ಬಯಸಿದರೆ, ನೀವು ಆ ಒಂದು ಸಂಪರ್ಕಕ್ಕಾಗಿ ಈ ಸೆಟ್ಟಿಂಗ್ ಅನ್ನು ಆಫ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯನ್ನು ಟ್ಯಾಪ್ ಮಾಡಿ, ನಂತರ ಸಂಭಾಷಣೆಯ ಮೇಲ್ಭಾಗದಲ್ಲಿರುವ, ನಿಮ್ಮೊಂದಿಗೆ ಸಂವಹನ ನಡೆಸುತ್ತಿರುವ ವ್ಯಕ್ತಿಯ ಸಂಖ್ಯೆ ಅಥವಾ ಹೆಸರನ್ನು ಟ್ಯಾಪ್ ಮಾಡಿ.

  3. ಓದಿದ ಸ್ವೀಕೃತಿಗಳನ್ನು ಕಳುಹಿಸಿ ಎಂಬುದನ್ನು ಆಫ್ ಮಾಡಿ.

ಬೇರೆ ಯಾವುದೇ ವ್ಯಕ್ತಿಯು ನಿಮ್ಮ ಸಂದೇಶಗಳನ್ನು ನೋಡಿದಾಗ ಓದಿದ ಸ್ವೀಕೃತಿಗಳನ್ನು ಪಡೆಯಿರಿ

ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಸಂದೇಶಗಳನ್ನು ತೆರೆದಾಗ ಓದಿದ ಸ್ವೀಕೃತಿಗಳನ್ನು ಸ್ವೀಕರಿಸಲು, ಅವುಗಳನ್ನು ಆನ್ ಮಾಡುವಂತೆ ಸ್ವೀಕೃತದಾರರಿಗೆ ಹೇಳಿ. ಮೇಲಿರುವ ಒಬ್ಬ ವ್ಯಕ್ತಿಗಾಗಿ ಓದಿದ ಸ್ವೀಕೃತಿಗಳನ್ನು ಆನ್ ಮಾಡಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.