ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ರಿಮೈಂಡರ್ಸ್ ಆ್ಯಪ್‌ನ ಬಳಕೆಯನ್ನು ಪ್ರಾರಂಭಿಸಿ

ನೀವು ಟ್ರ್ಯಾಕ್ ಮಾಡಬೇಕಾದ ಯಾವುದೇ ವಿಷಯವನ್ನು ನೆನಪಿಟ್ಟುಕೊಳ್ಳಲು ರಿಮೈಂಡರ್ಸ್ ಆ್ಯಪ್ ನಿಮಗೆ ಸಹಾಯ ಮಾಡುತ್ತದೆ. ನೀವು ರಿಮೈಂಡರ್‌ಗಳನ್ನು ಸೆಟ್ ಮಾಡಬಹುದು, ದಿನಸಿ ಪಟ್ಟಿಗಳನ್ನು ರಚಿಸಬಹುದು, ಪ್ರಾಜೆಕ್ಟ್‌ಗಳಿಗಾಗಿ ಚೆಕ್‌ಲಿಸ್ಟ್‌ಗಳನ್ನು ರಚಿಸಬಹುದು ಮತ್ತು ಮಾಡಬೇಕಾದ ಕೆಲಸಗಳ ಪಟ್ಟಿಗಳಲ್ಲಿ ಕೆಲಸಗಳನ್ನು ವ್ಯವಸ್ಥಿತಗೊಳಿಸಬಹುದು.

ರಿಮೈಂಡರ್‌ಗಳ ಪಟ್ಟಿಗೆ ಹೊಸ ಕೆಲಸವನ್ನು ಸೇರಿಸುತ್ತಿರುವುದನ್ನು ತೋರಿಸುತ್ತಿರುವ ರಿಮೈಂಡರ್ಸ್ ಆ್ಯಪ್.

ರಿಮೈಂಡರ್ ಅನ್ನು ಸೆಟ್ ಮಾಡಿ

ನೀವು ಏನನ್ನಾದರೂ ನೆನಪಿಟ್ಟುಕೊಳ್ಳಬೇಕಿದ್ದಾಗ, ಸುಮ್ಮನೇ ಟೈಪ್ ಮಾಡಿ, ಡಿಕ್ಟೇಟ್ ಮಾಡಿ ಅಥವಾ Siriಗೆ ಕೇಳಿ.

ಹಣ್ಣುತರಕಾರಿಗಳು ಮತ್ತು ಸೀಫುಡ್‌ನಂತಹ ವರ್ಗಗಳಲ್ಲಿ ಐಟಂಗಳಿರುವ ದಿನಸಿ ಪಟ್ಟಿಯನ್ನು ತೋರಿಸುತ್ತಿರುವ ರಿಮೈಂಡರ್ಸ್ ಆ್ಯಪ್.

ದಿನಸಿ ಪಟ್ಟಿಯನ್ನು ರಚಿಸಿ

ಐಟಂಗಳನ್ನು ಸ್ವಯಂಚಾಲಿತವಾಗಿ ವರ್ಗಗಳಾಗಿ ವಿಂಗಡಿಸುವ ದಿನಸಿ ಪಟ್ಟಿಯ ಮೂಲಕ ನಿಮ್ಮ ಶಾಪಿಂಗ್ ಅನ್ನು ಸುಲಭವಾಗಿಸಿ. ಸಾಮಾನ್ಯ ಪಟ್ಟಿಯನ್ನು ದಿನಸಿ ಪಟ್ಟಿಯಾಗಿ ಪರಿವರ್ತಿಸಲು ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ದಿನಸಿ ಸಾಮಗ್ರಿಗಳನ್ನು ಆಯ್ಕೆ ಮಾಡಿ.

ಕೆಳಭಾಗದಲ್ಲಿ ಹಂಚಿಕೊಳ್ಳುವ ಆಯ್ಕೆಗಳಿರುವ ದಿನಸಿ ಪಟ್ಟಿಯನ್ನು ತೋರಿಸುತ್ತಿರುವ ರಿಮೈಂಡರ್ಸ್ ಆ್ಯಪ್.

ಪಟ್ಟಿಯಲ್ಲಿ ಕೊಲಾಬೊರೇಟ್ ಮಾಡಿ

ಪಟ್ಟಿಯೊಂದರ ಮೇಲೆ ಕೆಲಸ ಮಾಡುವುದಕ್ಕಾಗಿ ಜನರನ್ನು ಆಹ್ವಾನಿಸಲು, ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹಂಚಿಕೊಳ್ಳುವ ಆಯ್ಕೆಯೊಂದನ್ನು ಆರಿಸಿ.

ಹಲವಾರು ಪಟ್ಟಿಗಳು ಮತ್ತು ಕೆಳಭಾಗದಲ್ಲಿ ಟ್ಯಾಗ್ ಬ್ರೌಸರ್ ಅನ್ನು ತೋರಿಸುತ್ತಿರುವ ರಿಮೈಂಡರ್ಸ್ ಆ್ಯಪ್.

ನಿಮ್ಮ ರಿಮೈಂಡರ್ಸ್ ವ್ಯವಸ್ಥಿತಗೊಳಿಸಿ

ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನೀವು ಹೊಸ ಪಟ್ಟಿಗಳನ್ನು ರಚಿಸಬಹುದು, ಟ್ಯಾಗ್‌ಗಳ ಮೂಲಕ ವರ್ಗೀಕರಿಸಬಹುದು ಮತ್ತು ಸ್ಮಾರ್ಟ್ ಪಟ್ಟಿಗಳೊಂದಿಗೆ ನಿಮ್ಮ ರಿಮೈಂಡರ್‌ಗಳನ್ನು ನಿರ್ವಹಿಸಬಹುದು.

ಗಮನಿಸಿ: ನೀವು iCloudನಲ್ಲಿ ಅಪ್‌ಡೇಟ್ ಮಾಡಲಾದ ರಿಮೈಂಡರ್‌ಗಳನ್ನು ಬಳಸಿದಾಗ ಈ ಗೈಡ್‌ನಲ್ಲಿ ವಿವರಿಸಲಾಗಿರುವ ರಿಮೈಂಡರ್ಸ್ ಆ್ಯಪ್‌ನ ಎಲ್ಲಾ ಫೀಚರ್‌ಗಳು ಲಭ್ಯವಿರುತ್ತವೆ. ಇತರ ಖಾತೆಗಳನ್ನು ಬಳಸುವಾಗ ಕೆಲವು ಫೀಚರ್‌ಗಳು ಲಭ್ಯವಿರುವುದಿಲ್ಲ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.