ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಫೀಚರ್‌ಗಳನ್ನು ಬಳಸಿ

FaceTime ಆ್ಯಪ್ ಅಥವಾ ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ವೀಡಿಯೊ ಕರೆಯಲ್ಲಿರುವಾಗ, ನೀವು ಫುಲ್ ಸ್ಕ್ರೀನ್ ವೀಡಿಯೊ ಎಫೆಕ್ಟ್‌ಗಳನ್ನು ಬಳಸಬಹುದು ಮತ್ತು 3D ಎಫೆಕ್ಟ್‌ಗಳೊಂದಿಗೆ ಕ್ಯಾಮರಾ ಫ್ರೇಮ್ ಅನ್ನು ತುಂಬುವ ಪ್ರತಿಕ್ರಿಯೆಗಳನ್ನು ಕೈ ಜೆಸ್ಚರ್‌ಗಳಿಂದ ಸೇರಿಸಬಹುದು.

ವೀಡಿಯೊ ಕರೆಯಲ್ಲಿ ವೀಡಿಯೊ ಎಫೆಕ್ಟ್‌ಗಳನ್ನು ಬಳಸಿ

  1. ನಿಮ್ಮ iPhoneನಲ್ಲಿನ FaceTime ಆ್ಯಪ್‌ನಲ್ಲಿ ಅಥವಾ ಥರ್ಡ್ ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ನಲ್ಲಿ ವೀಡಿಯೊ ಕರೆಯಲ್ಲಿರುವಾಗ ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ.

  2. FaceTime ಕಂಟ್ರೋಲ್‌ಗಳನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಆರಿಸಿ:

    • ಪೋರ್ಟ್ರೇಟ್: ಹಿನ್ನೆಲೆಯನ್ನು ಸ್ವಯಂಚಾಲಿತವಾಗಿ ಬ್ಲರ್ ಮಾಡುತ್ತದೆ ಮತ್ತು ನಿಮ್ಮ ಮೇಲೆ ವಿಷುಯಲ್ ಫೋಕಸ್ ಅನ್ನು ಇರಿಸುತ್ತದೆ. ಹಿನ್ನೆಲೆ ಬ್ಲರ್‌ನ ಪ್ರಮಾಣವನ್ನು ಸರಿಹೊಂದಿಸಲು ಇನ್ನಷ್ಟು ಕಂಟ್ರೋಲ್‌ಗಳು ಬಟನ್ ಅನ್ನು ಟ್ಯಾಪ್ ಮಾಡಿ. ಪೋರ್ಟ್ರೇಟ್ ಮೋಡ್‌ನೊಂದಿಗೆ ಹಿನ್ನೆಲೆಯನ್ನು ಬ್ಲರ್ ಮಾಡಿ ಅನ್ನು ನೋಡಿ.

    • ಸ್ಟುಡಿಯೋ ಲೈಟ್: ಹಿನ್ನೆಲೆಯನ್ನು ಮಂದಗೊಳಿಸಿ ನಿಮ್ಮ ಮುಖವನ್ನು ಪ್ರಕಾಶಮಾನಗೊಳಿಸುತ್ತದೆ. ಸ್ಟುಡಿಯೋ ಲೈಟ್‌ನ ತೀವ್ರತೆಯನ್ನು ಸರಿಹೊಂದಿಸಲು ಇನ್ನಷ್ಟು ಕಂಟ್ರೋಲ್‌ಗಳು ಬಟನ್ ಅನ್ನು ಟ್ಯಾಪ್ ಮಾಡಿ.

    • ಪ್ರತಿಕ್ರಿಯೆಗಳು: ಪ್ರತಿಕ್ರಿಯೆಗಳನ್ನು ಸೇರಿಸುವುದಕ್ಕಾಗಿ ಕೈ ಜೆಸ್ಚರ್‌ಗಳನ್ನು ಬಳಸಲು ನಿಮಗೆ ಅನುವುಮಾಡಿಕೊಡುತ್ತದೆ. ಕಂಟ್ರೋಲ್ ಸೆಂಟರ್‌ನಲ್ಲಿ ಪ್ರತಿಕ್ರಿಯೆಗಳನ್ನು ಆಫ್ ಮಾಡಿರುವಾಗ,ನಿಮಗೆ ಕೈ ಜೆಸ್ಚರ್‌ಗಳನ್ನು ಮೂಲಕ ಪ್ರತಿಕ್ರಿಯೆಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಕರೆಯಲ್ಲಿ ನಿಮ್ಮ ಟೈಲ್ ಅನ್ನು ಒತ್ತಿ ಹಿಡಿದುಕೊಂಡಾಗ ಗೋಚರಿಸುವ ಐಕಾನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ನೀವು ಪ್ರತಿಕ್ರಿಯೆಗಳನ್ನು ಸೇರಿಸಬಹುದು. ವೀಡಿಯೊ ಕರೆಯಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸಿ ಅನ್ನು ನೋಡಿ.

    FaceTime ಕರೆಯ ಸಮಯದಲ್ಲಿ ಕಂಟ್ರೋಲ್ ಸೆಂಟರ್‌ನಲ್ಲಿನ ವೀಡಿಯೊ ಎಫೆಕ್ಟ್ ಸೆಟ್ಟಿಂಗ್ಸ್. ಪೋರ್ಟ್ರೇಟ್ ಮೋಡ್ ಅನ್ನು ಆನ್ ಮಾಡಲಾಗಿದೆ ಮತ್ತು ಕರೆ ಮಾಡಿದವರ ಚಿತ್ರವು ದೊಡ್ಡ ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಆ ಪೋರ್ಟ್ರೇಟ್ ಎಫೆಕ್ಟ್‌ನಲ್ಲಿ ಹಿನ್ನೆಲೆಯು ಬ್ಲರ್ ಆಗಿರುತ್ತದೆ ಮತ್ತು ಕರೆಮಾಡಿದವರನ್ನು ಎದ್ದುಕಾಣುವಂತೆ ತೋರಿಸಲಾಗುತ್ತದೆ.

ವೀಡಿಯೊ ಕರೆಯಲ್ಲಿ ಪ್ರತಿಕ್ರಿಯೆಗಳನ್ನು ಸೇರಿಸಿ

FaceTime ಆ್ಯಪ್‌ನಲ್ಲಿ (ಮತ್ತು ಥರ್ಡ್-ಪಾರ್ಟಿ ವೀಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ಗಳಲ್ಲಿ) ಸರಳವಾದ ಕೈ ಜೆಸ್ಟರ್‌ಗಳ ಮೂಲಕ, ನೀವು ಕ್ಯಾಮರಾ ಫ್ರೇಮ್‌ನಲ್ಲಿ ಹೃದಯಗಳು, ಬಲೂನ್‌ಗಳು, ಪಟಾಕಿಗಳು ಮತ್ತು ಇತ್ಯಾದಿಗಳಂತಹ ಮೋಜನ್ನು ತುಂಬುವ 3D ಆಗ್ಮೆಂಟೆಡ್ ರಿಯಾಲಿಟಿ ಎಫೆಕ್ಟ್‌ಗಳನ್ನು ಸೇರಿಸಬಹುದು.

ಕರೆಯಲ್ಲಿ ನಿಮ್ಮ ಟೈಲ್ ಅನ್ನು ಒತ್ತಿ ಹಿಡಿದುಕೊಂಡು ನಂತರ ಕಾಣಿಸಿಕೊಳ್ಳುವ ಐಕಾನ್‌ಗಳನ್ನು ಟ್ಯಾಪ್ ಮಾಡುವ ಮೂಲಕ ನೀವು ಈ ಪ್ರತಿಕ್ರಿಯೆಗಳನ್ನು ಸೇರಿಸಬಹುದು.

ಗಮನಿಸಿ: iPhone 12 ಅಥವಾ ನಂತರದ ಸಾಧನಗಳಲ್ಲಿ ಕೈ ಜೆಸ್ಚರ್‌ಗಳನ್ನು ಬಳಸಲು ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, FaceTime ಕಂಟ್ರೋಲ್‌ಗಳನ್ನು ಟ್ಯಾಪ್ ಮಾಡಿ, ನಂತರ ಪ್ರತಿಕ್ರಿಯೆಗಳು ಆನ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೆಸ್ಚರ್‌ಗಳನ್ನು ಬಳಸುವಾಗ, ನಿಮ್ಮ ಕೈಗಳನ್ನು ನಿಮ್ಮ ಮುಖದಿಂದ ದೂರ ಹಿಡಿದುಕೊಳ್ಳಿ ಮತ್ತು ಎಫೆಕ್ಟ್ ಅನ್ನು ಸಕ್ರಿಯಗೊಳಿಸಲು ಒಂದೆರಡು ಕ್ಷಣ ವಿರಾಮಗೊಳಿಸಿ. (ಮುಂಬದಿಯ ಕ್ಯಾಮರಾ ಮಾತ್ರ ಪ್ರತಿಕ್ರಿಯೆಗಳು ಮತ್ತು ಜೆಸ್ಚರ್‌ಗಳನ್ನು ಬೆಂಬಲಿಸುತ್ತದೆ.)

ಪ್ರತಿಕ್ರಿಯೆ

ಜೆಸ್ಚರ್

ಐಕಾನ್

ಹೃದಯಗಳು

ಹೃದಯದ ಜೆಸ್ಚರ್
ಲವ್ ಬಟನ್

ಥಂಬ್ಸ್ ಅಪ್

ಥಂಬ್ಸ್ ಅಪ್ ಜೆಸ್ಚರ್
ಲೈಕ್ ಬಟನ್

ಥಂಬ್ಸ್ ಡೌನ್

ಥಂಬ್ಸ್-ಡೌನ್ ಜೆಸ್ಚರ್
ಡಿಸ್‌ಲೈಕ್ ಬಟನ್

ಬಲೂನ್‌ಗಳು

ಬಲೂನ್‌ಗಳ ಜೆಸ್ಚರ್
ಬಲೂನ್ ಟೂ ಫಿಲ್ ಬಟನ್

ಮಳೆ

ಮಳೆಯ ಜೆಸ್ಚರ್
ಮಳೆ ಬಟನ್

ಕಾನ್ಫೆಟ್ಟಿ

ಕಾನ್ಫೆಟಿ ಜೆಸ್ಚರ್
ಪಾರ್ಟಿ-ಪಾಪರ್ ಫಿಲ್ ಬಟನ್

ಲೇಸರ್ ಬರ್ಸ್ಟ್

ಲೇಸರ್ ಬರ್ಸ್ಟ್ ಜೆಸ್ಚರ್
ಲೇಸರ್ ಬರ್ಸ್ಟ್ ಬಟನ್

ಪಟಾಕಿಗಳು

ಪಟಾಕಿಗಳ ಜೆಸ್ಚರ್
ಪಟಾಕಿಗಳ ಬಟನ್
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.