ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPhoneನಿಂದ Macನಲ್ಲಿ ಸ್ಕೆಚ್‌ಗಳು, ಫೋಟೋಗಳು ಮತ್ತು ಸ್ಕ್ಯಾನ್‌ಗಳನ್ನು ಸೇರಿಸಿ

ಕಂಟಿನ್ಯುಯಿಟಿ ಸ್ಕೆಚ್ ಮತ್ತು ಕಂಟಿನ್ಯುಯಿಟಿ ಕ್ಯಾಮರಾ ಫೀಚರ್‌ಗಳ ಮೂಲಕ, ನಿಮ್ಮ ಸಮೀಪದ iPhone ಅನ್ನು ಬಳಸಿಕೊಂಡು ಸ್ಕೆಚ್ ಬಿಡಿಸಬಹುದು, ಫೋಟೋ ತೆಗೆದುಕೊಳ್ಳಬಹುದು ಅಥವಾ ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಬಹುದು ಹಾಗೂ ಅದನ್ನು ಕೂಡಲೇ ನಿಮ್ಮ Macನಲ್ಲಿ ಕಾಣಿಸುವಂತೆ ಮಾಡಬಹುದು, ನಿಖರವಾಗಿ ನೀವು ಎಲ್ಲಿಗೆ ಬಯಸುವಿರೋ ಅಲ್ಲಿಗೆ—ಉದಾಹರಣೆಗೆ, ಈಮೇಲ್‌ನಲ್ಲಿ, ಟಿಪ್ಪಣಿಯಲ್ಲಿ ಅಥವಾ ಫೋಲ್ಡರ್‌ನಲ್ಲಿ. ಕಂಟಿನ್ಯುಯಿಟಿ ಮಾರ್ಕಪ್ ಅನ್ನು ಬಳಸಿಕೊಂಡು ನಿಮ್ಮ iPhone ಮೂಲಕ ನಿಮ್ಮ Macನಲ್ಲಿ ಸಹ ನೀವು ಫೈಲ್ ಅನ್ನು ಗುರುತು ಮಾಡಬಹುದು.

iPhone ಮತ್ತು Mac ಜೊತೆಗೆ ನೀವು ಕಂಟಿನ್ಯುಯಿಟಿ ಕ್ಯಾಮರಾ, ಕಂಟಿನ್ಯುಯಿಟಿ ಸ್ಕೆಚ್ ಮತ್ತು ಕಂಟಿನ್ಯುಯಿಟಿ ಮಾರ್ಕಪ್ ಅನ್ನು ಬಳಸಬಹುದು.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

ಫೋಟೋ ಅಥವಾ ಸ್ಕ್ಯಾನ್ ಅನ್ನು ಎಲ್ಲಿ ಸೇರಿಸಲಾಗಿದೆ ಎಂಬುದರ ಆಧಾರದ ಮೇಲೆ, ನೀವು ಅದನ್ನು ಗುರುತು ಮಾಡಬಹುದು ಅಥವಾ ಅದನ್ನು ಕ್ರಾಪ್ ಮಾಡುವುದು ಅಥವಾ ಫಿಲ್ಟರ್ ಅನ್ನು ಅನ್ವಯಿಸುವಂತಹ ಇತರ ಅಂಶಗಳನ್ನು ಸರಿಹೊಂದಿಸಬಹುದು.

ನಿಮ್ಮ iPhoneನಿಂದ ಸ್ಕೆಚ್, ಫೋಟೋ ಅಥವಾ ಸ್ಕ್ಯಾನ್ ಅನ್ನು ಸೇರಿಸಿ

ನಿಮ್ಮ iPhoneನಲ್ಲಿ ನೀವು ಸ್ಕೆಚ್ ಬಿಡಿಸಬಹುದು ಮತ್ತು ಕಂಟಿನ್ಯುಯಿಟಿ ಸ್ಕೆಚ್ ಮೂಲಕ ಅದು ನಿಮ್ಮ Macನಲ್ಲಿ ಕಾಣಿಸುವಂತೆ ಮಾಡಬಹುದು ಅಥವಾ ನಿಮ್ಮ iPhoneನಲ್ಲಿ ಫೋಟೋ ತೆಗೆದುಕೊಳ್ಳಬಹುದು ಅಥವಾ ಡಾಕ್ಯುಮಂಟ್ ಸ್ಕ್ಯಾನ್ ಮಾಡಬಹುದು ಮತ್ತು ಕಂಟಿನ್ಯುಯಿಟಿ ಕ್ಯಾಮರಾ ಮೂಲಕ ಅದು ನಿಮ್ಮ Macನಲ್ಲಿ ಕಾಣಿಸುವಂತೆ ಮಾಡಬಹುದು.

  1. ನಿಮ್ಮ Macನಲ್ಲಿ, ನೀವು ಸ್ಕೆಚ್ ಅಥವಾ ಫೋಟೋ ಸೇರಿಸಲು ಬಯಸುವ ಕಡೆ ಕಂಟ್ರೋಲ್-ಕ್ಲಿಕ್ ಮಾಡಿ—ಉದಾಹರಣೆಗೆ, ತೆರೆದ ವಿಂಡೋದಲ್ಲಿ, ಟಿಪ್ಪಣಿ ಅಥವಾ ಈಮೇಲ್ ಸಂದೇಶದ ರೀತಿಯದ್ದು.

    ನೀವು Finder ವಿಂಡೋದಲ್ಲಿ ಡೆಸ್ಕ್‌ಟಾಪ್ ಅಥವಾ ಫೋಲ್ಡರ್ ಅನ್ನು ಸಹ ಕಂಟ್ರೋಲ್-ಕ್ಲಿಕ್ ಮಾಡಬಹುದು.

  2. iPhoneನಿಂದ ಇಂಪೋರ್ಟ್ ಅನ್ನು ಆಯ್ಕೆಮಾಡಿ, ನಂತರ ಸ್ಕೆಚ್ ಸೇರಿಸಿ ಅಥವಾ ಫೋಟೋ ತೆಗೆದುಕೊಳ್ಳಿ ಎಂಬುದನ್ನು ಆಯ್ಕೆಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಸ್ಕೆಚ್ ಸೇರಿಸಿ: ನಿಮ್ಮ iPhoneನಲ್ಲಿ, ನಿಮ್ಮ ಬೆರಳನ್ನು ಬಳಸಿಕೊಂಡು ಸ್ಕೆಚ್ ಬಿಡಿಸಿ.

    • ಫೋಟೋವನ್ನು ತೆಗೆದುಕೊಳ್ಳಿ: ನಿಮ್ಮ iPhoneನಲ್ಲಿ, ಫೋಟೋ ತೆಗೆದುಕೊಳ್ಳಿ, ನಂತರ ‘ಫೋಟೋ ಬಳಸಿ ಅಥವಾ ಪುನಃ ತೆಗೆದುಕೊಳ್ಳಿ’ ಎಂಬುದನ್ನು ಟ್ಯಾಪ್ ಮಾಡಿ.

    • ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಿ: ನಿಮ್ಮ iPhoneನಲ್ಲಿ, ಸ್ಕ್ಯಾನ್ ತೆಗೆದುಕೊಳ್ಳಿ. ನಿಮ್ಮ iPhone ಡಾಕ್ಯುಮಂಟ್‌ನ ಅಂಚುಗಳನ್ನು ಪತ್ತೆಹಚ್ಚುತ್ತದೆ ಮತ್ತು ಚಿತ್ರದ ಯಾವುದೇ ವಕ್ರತೆಯನ್ನು ಸ್ವಯಂಚಾಲಿತವಾಗಿ ಸರಿಪಡಿಸುತ್ತದೆ. ಸ್ಕ್ಯಾನ್‌ನಲ್ಲಿ ಸೇರಿಸಲಾದ ಪ್ರದೇಶವನ್ನು ಸರಿಹೊಂದಿಸಲು ನೀವು ಬಯಸಿದರೆ, ಫ್ರೇಮ್ ಅಥವಾ ಅದರ ಅಂಚುಗಳನ್ನು ಡ್ರ್ಯಾಗ್ ಮಾಡಿ. ನೀವು ಸಿದ್ಧರಾದಾಗ, ’ಸ್ಕ್ಯಾನ್ ಮಾಡುತ್ತಿರಿ’ ಅಥವಾ ’ಪುನಃತೆಗೆದುಕೊಳ್ಳಿ’ ಅನ್ನು ಟ್ಯಾಪ್ ಮಾಡಿ. ನೀವು ಪೂರ್ಣಗೊಳಿಸುವವರೆಗೆ ನೀವು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡುವುದನ್ನು ಮುಂದುವರಿಸಬಹುದು, ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

      ನಿಮ್ಮ Macನಲ್ಲಿ, ಸ್ಕೆಚ್, ಚಿತ್ರ ಅಥವಾ ಸ್ಕ್ಯಾನ್, ನೀವು ಹಂತ 1ರಲ್ಲಿ ಆಯ್ಕೆ ಮಾಡಿದ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಅದನ್ನು ಡೆಸ್ಕ್‌ಟಾಪ್ ಅಥವಾ ಫೋಲ್ಡರ್‌ನಿಂದ ಸೇರಿಸಿದರೆ, ಅದು ಫೈಲ್ ಆಗಿ ಕಾಣಿಸಿಕೊಳ್ಳುತ್ತದೆ.

ಗಮನಿಸಿ: ನಿಮ್ಮ iPhoneನಲ್ಲಿ ನೀವು ತೆಗೆದುಕೊಳ್ಳುವ ಸ್ಯ್ಯಾನ್‌ಗಳನ್ನು ಸಾಧನದಲ್ಲಿ ಸೇವ್ ಮಾಡಲಾಗುವುದಿಲ್ಲ.

ನಿಮ್ಮ Macನಲ್ಲಿ ಫೈಲ್ ಅನ್ನು ಗುರುತುಮಾಡಲು ನಿಮ್ಮ iPhone ಅನ್ನು ಬಳಸಿ

ನಿಮ್ಮ Macನಲ್ಲಿ, ಪಠ್ಯವನ್ನು ಸೇರಿಸಲು, ಡ್ರಾಯಿಂಗ್‌ಗಳನ್ನು ಮಾಡಲು, ತಿರುಗಿಸಲು ಮತ್ತು ಚಿತ್ರಗಳನ್ನು, PDF ಡಾಕ್ಯುಮಂಟ್‌ಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಕ್ರಾಪ್ ಮಾಡಲು, ಕಂಟಿನ್ಯುಯಿಟಿ ಮಾರ್ಕಪ್ ಎಂದು ಕರೆಯಲಾಗುವುದನ್ನು ಮಾಡುವುದಕ್ಕೆ ನಿಮ್ಮ iPhone ಅನ್ನು ಬಳಸಿ.

  1. ನಿಮ್ಮ Mac ನಲ್ಲಿ, Finder ಅನ್ನು ತೆರೆಯಲು ಡೆಸ್ಕ್‌ಟಾಪ್ ಅನ್ನು ಕ್ಲಿಕ್ ಮಾಡಿ.

  2. ನೀವು ಮಾರ್ಕಪ್ ಮಾಡಲು ಬಯಸುವ ಫೈಲ್ ಅನ್ನು ಕಂಟ್ರೋಲ್-ಕ್ಲಿಕ್ ಮಾಡಿ, ತ್ವರಿತ ಕ್ರಿಯೆಗಳನ್ನು ಆಯ್ಕೆಮಾಡಿ, ನಂತರ ಮಾರ್ಕಪ್ ಅನ್ನು ಆಯ್ಕೆಮಾಡಿ.

    ಫೈಲ್ ತೆರೆಯುತ್ತದೆ.

  3. ಟೂಲ್‌ಬಾರ್‌ನಲ್ಲಿ, iPhone ಬಟನ್ ಅನ್ನು ಕ್ಲಿಕ್ ಮಾಡಿ ಅಥವಾ ಮಾರ್ಕಪ್ ಬಟನ್ ಅನ್ನು ಕ್ಲಿಕ್ ಮಾಡಿ (ಬಟನ್‌ನ ಪಕ್ಕದಲ್ಲಿ ಬಾಣವನ್ನು ಹೊಂದಿರಬಹುದು) ನಂತರ ನಿಮ್ಮ ಸಾಧನವನ್ನು ಆಯ್ಕೆಮಾಡಿ.

  4. ಚಿತ್ರ ಬಿಡಿಸಲು, ಪಠ್ಯ ಅಥವಾ ಆಕಾರಗಳನ್ನು ಸೇರಿಸಲು ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನಿರ್ವಹಿಸಲು ಮಾರ್ಕಪ್ ಟೂಲ್‌ಗಳನ್ನು ಬಳಸಿ.

  5. ನೀವು ಪೂರ್ಣಗೊಳಿಸಿದಾಗ, ನಿಮ್ಮ iPhoneನಲ್ಲಿ ‘ಮುಗಿದಿದೆ’ ಟ್ಯಾಪ್ ಮಾಡಿ.

  6. ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಲು, ನಿಮ್ಮ Macನಲ್ಲಿ ‘ಮುಗಿದಿದೆ’ ಎಂಬುದನ್ನು ಕ್ಲಿಕ್ ಮಾಡಿ.

ಕಂಟಿನ್ಯುಯಿಟಿ ಕ್ಯಾಮರಾ, ಕಂಟಿನ್ಯುಯಿಟಿ ಸ್ಕೆಚ್ ಅಥವಾ ಕಂಟಿನ್ಯುಯಿಟಿ ಮಾರ್ಕಪ್ ಕಾರ್ಯನಿರ್ವಹಿಸದಿದ್ದರೆ:

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.