ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಪುಸ್ತಕ ಆ್ಯಪ್‌ನಲ್ಲಿ ಆಡಿಯೊಬುಕ್‌ಗಳನ್ನು ಆಲಿಸಿ

ನಿಮ್ಮ iPhoneನಲ್ಲಿ ಆಡಿಯೊಬುಕ್‌ಗಳನ್ನು ಆಲಿಸಲು ಪುಸ್ತಕ ಆ್ಯಪ್ ಅನ್ನು ಬಳಸಿ.

ಆಡಿಯೊಬುಕ್ ಪ್ಲೇಯರ್ ಸ್ಕ್ರೀನ್ ಮೇಲಿನಿಂದ ಕೆಳಕ್ಕೆ, ಆಡಿಯೊಬುಕ್ ಕವರ್, ಪ್ಲೇ ಆಗುತ್ತಿರುವ ವಿಭಾಗದ ಹೆಸರು, ಪ್ಲೇಹೆಡ್, ವಿರಾಮ ಬಟನ್ ಹಾಗೂ ಮುಮದಕ್ಕೆ ಮತ್ತು ಹಿಂದಕ್ಕೆ ಸ್ಕಿಪ್ ಮಾಡಿ ಬಟನ್‌ಗಳನ್ನು ತೋರಿಸುತ್ತದೆ. ಕೆಳಭಾಗದಲ್ಲಿ ವಾಲ್ಯೂಮ್ ಸ್ಲೈಡರ್ ಮತ್ತು ಅದರ ಕೆಳಗೆ ಪ್ಲೇಬ್ಯಾಕ್ ವೇಗವನ್ನು ಕಂಟ್ರೋಲ್ ಮಾಡಲು, ಸ್ಲೀಪ್ ಟೈಮರ್ ಅನ್ನು ಸೆಟ್ ಮಾಡಲು, ಪ್ಲೇಬ್ಯಾಕ್ ಡೆಸ್ಟಿನೇಷನ್ ಅನ್ನು ಆಯ್ಕೆ ಮಾಡಲು ಮತ್ತು ಪುಸ್ತಕದ ಟ್ರ್ಯಾಕ್‌ಗಳ ಪಟ್ಟಿಯನ್ನು ವೀಕ್ಷಿಸಲು ಬಟನ್‌ಗಳಿವೆ.

ಆಡಿಯೊಬುಕ್ ಪ್ಲೇ ಮಾಡಿ

  1. ನಿಮ್ಮ iPhoneನಲ್ಲಿ ಪುಸ್ತಕ ಆ್ಯಪ್‌ಗೆ ಹೋಗಿ.

  2. ಆಡಿಯೊಬುಕ್‌ಗೆ ನ್ಯಾವಿಗೇಟ್ ಮಾಡಿ, ನಂತರ ಅದನ್ನು ಪ್ಲೇ ಮಾಡಲು ಕವರ್ ಅನ್ನು ಟ್ಯಾಪ್ ಮಾಡಿ.

  3. ಆಡಿಯೊಬುಕ್ ಪ್ಲೇ ಆಗುತ್ತಿರುವಾಗ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಮುಂದಕ್ಕೆ ಅಥವಾ ಹಿಂದಕ್ಕೆ ಸ್ಕಿಪ್ ಮಾಡಿ: ವಿರಾಮಗೊಳಿಸಿ ಬಟನ್‌ನ ಪಕ್ಕದಲ್ಲಿರುವ ದುಂಡಾಕಾರದ ಆ್ಯರೋಗಳನ್ನು ಟ್ಯಾಪ್ ಮಾಡಿ ಅಥವಾ ಒತ್ತಿ ಹಿಡಿದುಕೊಳ್ಳಿ. ಅಥವಾ ಹೆಡ್‌ಫೋನ್‌ಗಳು ಅಥವಾ ಕಾರ್ ನಿಯಂತ್ರಣಗಳಂತಹ ಬಾಹ್ಯ ಕಂಟ್ರೋಲ್‌ಗಳನ್ನು ಬಳಸಿ.

      ಗಮನಿಸಿ: ಮುಂದಕ್ಕೆ ಅಥವಾ ಹಿಂದಕ್ಕೆ ಸ್ಕಿಪ್ ಮಾಡಲು ಸೆಕೆಂಡ್‌ಗಳ ಸಂಖ್ಯೆಯನ್ನು ಬದಲಾಯಿಸಲು, ಸೆಟ್ಟಿಂಗ್ಸ್  > ಆ್ಯಪ್‌ಗಳು > ಪುಸ್ತಕ ಎಂಬಲ್ಲಿಗೆ ಹೋಗಿ. ಆಡಿಯೊಬುಕ್‌ಗಳ ಕೆಳಗೆ, ಮುಂದಕ್ಕೆ ಸ್ಕಿಪ್ ಮಾಡಿ ಅಥವಾ ಹಿಂದಕ್ಕೆ ಸ್ಕಿಪ್ ಮಾಡಿ ಎನ್ನುವುದನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯನ್ನು ಟ್ಯಾಪ್ ಮಾಡಿ.

    • ನಿರ್ದಿಷ್ಟ ಸಮಯಕ್ಕೆ ಹೋಗಿ: ಆಡಿಯೊಬುಕ್ ಕವರ್ ಕೆಳಗೆ ಇರುವ ಸ್ಲೈಡರ್ ಅನ್ನು ಎಡಕ್ಕೆ ಅಥವಾ ಬಲಕ್ಕೆ ಡ್ರ್ಯಾಗ್ ಮಾಡಿ.

    • ವಾಲ್ಯೂಮ್ ಅನ್ನು ಸರಿಹೊಂದಿಸಿ: ವಿರಾಮ ಬಟನ್‌ನ ಕೆಳಗೆ ಸ್ಲೈಡರ್ ಅನ್ನು ಎಡಕ್ಕೆ ಅಥವಾ ಬಲಕ್ಕೆ ಡ್ರ್ಯಾಗ್ ಮಾಡಿ.

    • ಇದನ್ನು ವೇಗಗೊಳಿಸಿ ಅಥವಾ ನಿಧಾನಗೊಳಿಸಿ: ಕೆಳಗಿನ ಎಡ ಮೂಲೆಯಲ್ಲಿ 1x ಅನ್ನು ಟ್ಯಾಪ್ ಮಾಡಿ, ನಂತರ ನಿರೂಪಣೆಯ ವೇಗವನ್ನು ಸರಿಹೊಂದಿಸಲು ಡಯಲ್ ಅನ್ನು ಮೇಲಕ್ಕೆ ಅಥವಾ ಕೆಳಕ್ಕೆ ಡ್ರ್ಯಾಗ್ ಮಾಡಿ. ನಿರೂಪಣೆಯ ವೇಗವನ್ನು 1xಗೆ ರೀಸೆಟ್ ಮಾಡಲು, ಅದನ್ನು ಒತ್ತಿ ಹಿಡಿದುಕೊಳ್ಳಿ.

    • ಸ್ಲೀಪ್ ಟೈಮರ್ ಅನ್ನು ಸೆಟ್ ಮಾಡಿ: ಸ್ಲೀಪ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅವಧಿಯನ್ನು ಆಯ್ಕೆಮಾಡಿ.

    • ಬೇರೊಂದು ಸಾಧನದಲ್ಲಿ ಪ್ಲೇ ಮಾಡಿ: AirPlay ಬಟನ್ ಅನ್ನು ಟ್ಯಾಪ್ ಮಾಡಿ, ನಂತರ HomePod, Apple TV ಅಥವಾ Bluetooth® ಸ್ಪೀಕರ್‌ಗಳಂತಹ ಲಭ್ಯವಿರುವ ಸಾಧನವನ್ನು ಆಯ್ಕೆಮಾಡಿ.

    • ಅಧ್ಯಾಯಕ್ಕೆ ಹೋಗಿ: ಪರಿವಿಡಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅಧ್ಯಾಯವನ್ನು ಟ್ಯಾಪ್ ಮಾಡಿ.

      ಗಮನಿಸಿ: ಕೆಲವು ಆಡಿಯೊಬುಕ್‌ಗಳು ಅಧ್ಯಾಯಗಳನ್ನು ಟ್ರ್ಯಾಕ್‌ಗಳಾಗಿ ಉಲ್ಲೇಖಿಸುತ್ತವೆ ಅಥವಾ ಅಧ್ಯಾಯಗಳನ್ನು ವ್ಯಾಖ್ಯಾನಿಸುವುದಿಲ್ಲ.

    • ಆಡಿಯೊಬುಕ್ ಮಿನಿ-ಪ್ಲೇಯರ್‌ಗೆ ಬದಲಾಯಿಸಿ: ಸ್ಕ್ರೀನ್‌ನ ಮೇಲೆ ಎಲ್ಲಿಂದಲಾದರೂ ಕೆಳಕ್ಕೆ ಸ್ವೈಪ್ ಮಾಡಿ ಅಥವಾ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ. ಫುಲ್ ಸ್ಕ್ರೀನ್‌ಗೆ ಹಿಂತಿರುಗಲು ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮಿನಿ-ಪ್ಲೇಯರ್ ಅನ್ನು ಟ್ಯಾಪ್ ಮಾಡಿ.

    • ಆಡಿಯೊಬುಕ್ ಪ್ಲೇಯರ್ ಅನ್ನು ಮುಚ್ಚಿ: ಸ್ಕ್ರೀನ್‌ನ ಮೇಲೆ ಎಲ್ಲಿಂದಲಾದರೂ ಕೆಳಕ್ಕೆ ಸ್ವೈಪ್ ಮಾಡಿ ಅಥವಾ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ. ಮಿನಿ ಪ್ಲೇಯರ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಆಡಿಯೊ ಪ್ಲೇಯರ್ ಮುಚ್ಚಿ ಎನ್ನುವುದನ್ನು ಟ್ಯಾಪ್ ಮಾಡಿ.

ಇಂಟರ್ನೆಟ್‌ಗೆ Wi-Fi ಕನೆಕ್ಷನ್ ಲಭ್ಯವಿಲ್ಲದಿದ್ದರೆ, ಆಡಿಯೊಬುಕ್‌ಗಳು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ಮೊಬೈಲ್ ಸೇವೆಯ ನೆಟ್‌ವರ್ಕ್ ಮೂಲಕ ಪ್ಲೇ ಆಗುತ್ತವೆ, ಇದಕ್ಕಾಗಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸಬಹುದು. ಮೊಬೈಲ್ ಡೇಟ ಬಳಕೆಯನ್ನು ನಿರ್ವಹಿಸಲು, ಮೊಬೈಲ್ ಡೇಟ ಸೆಟ್ಟಿಂಗ್ಸ್ ವೀಕ್ಷಿಸಿ ಅಥವಾ ಬದಲಾಯಿಸಿ ಎನ್ನುವುದನ್ನು ನೋಡಿ.

ಪೂರಕ PDFಗಳನ್ನು ಹುಡುಕಿ

ಕೆಲವು ಆಡಿಯೊಬುಕ್‌ಗಳು ಪೂರಕ PDFಗಳ ಜೊತೆಗೆ ಬರುತ್ತವೆ.

  1. ನಿಮ್ಮ iPhoneನಲ್ಲಿ ಪುಸ್ತಕ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯನ್ನು ಟ್ಯಾಪ್ ಮಾಡಿ, ನಂತರ ಆಡಿಯೊಬುಕ್ ಕವರ್ ಕೆಳಗೆ ಇರುವ ಹೆಚ್ಚಿನ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

  3. PDF ಕಂಟೆಂಟ್ ಅನ್ನು ವೀಕ್ಷಿಸಿ ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.