ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ನಿಮ್ಮೊಂದಿಗೆ ಹಂಚಿಕೊಂಡ ಸಂಗೀತವನ್ನು ಹುಡುಕಿ

ಸ್ನೇಹಿತರೊಬ್ಬರು ಸಂದೇಶ ಆ್ಯಪ್‌ನಲ್ಲಿ ನಿಮ್ಮೊಂದಿಗೆ ಸಂಗೀತವನ್ನು ಹಂಚಿಕೊಂಡಾಗ, ನೀವು ಅದನ್ನು ಸಂಗೀತ ಆ್ಯಪ್‌ನಲ್ಲಿ ನಿಮ್ಮೊಂದಿಗೆ ಹಂಚಿಕೊಂಡ ಸಂಗೀತದಲ್ಲಿ ಸುಲಭವಾಗಿ ಕಾಣಬಹುದು.

ಗಮನಿಸಿ: ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ > ನಿಮ್ಮೊಂದಿಗೆ ಹಂಚಿಕೊಂಡಿರುವುದು ಎಂಬಲ್ಲಿಗೆ ಹೋಗಿ ‘ಸಂಗೀತ’ ಎಂಬುದನ್ನು ಆನ್ ಮಾಡಿರಬೇಕು ಮತ್ತು ನಿಮ್ಮ ಸ್ನೇಹಿತರು ಸಂಪರ್ಕ ಆ್ಯಪ್‌ನಲ್ಲಿ ನಿಮ್ಮ ಸಂಪರ್ಕಗಳ ಪಟ್ಟಿಯಲ್ಲಿರಬೇಕು.

  1. ನಿಮ್ಮ iPhoneನಲ್ಲಿ ಸಂಗೀತ ಆ್ಯಪ್‌ಗೆ ಹೋಗಿ.

  2. ಹೋಮ್ ಅನ್ನು ಟ್ಯಾಪ್ ಮಾಡಿ, ನಿಮ್ಮೊಂದಿಗೆ ಹಂಚಿಕೊಂಡಿರುವುದು ಎಂಬುದನ್ನು ಸ್ವೈಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಹಾಡನ್ನು ಕೇಳಲು ಅದನ್ನು ಟ್ಯಾಪ್ ಮಾಡಿ.

    • ಸಂದೇಶ ಆ್ಯಪ್ ಅನ್ನು ಬಳಸಿಕೊಂಡು ಅವರಿಗೆ ಪ್ರತ್ಯುತ್ತರಿಸಲು ಹಾಡನ್ನು ಹಂಚಿಕೊಂಡ ವ್ಯಕ್ತಿ, ಜನರು ಅಥವಾ ಗುಂಪಿನ ಹೆಸರನ್ನು ಟ್ಯಾಪ್ ಮಾಡಿ.

    • ಇತರ ಕ್ರಮಗಳನ್ನು ಕೈಗೊಳ್ಳಲು ಹಾಡನ್ನು ಒತ್ತಿ ಹಿಡಿದುಕೊಳ್ಳಿ—ಉದಾಹರಣೆಗೆ, ಅದನ್ನು ನಿಮ್ಮ ಲೈಬ್ರರಿಗೆ ಸೇರಿಸಿ, ಸ್ಟೇಷನ್ ಅನ್ನು ರಚಿಸಿ, ಕಳುಹಿಸುವವರಿಗೆ ಪ್ರತ್ಯುತ್ತರಿಸಿ ಅಥವಾ ಅದನ್ನು ತೆಗೆದುಹಾಕಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.