ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ Apple ನಿಮಗೆ ಜಾಹೀರಾತುಗಳನ್ನು ಹೇಗೆ ತಲುಪಿಸುತ್ತದೆ ಎಂಬುದನ್ನು ನಿಯಂತ್ರಿಸಿ

Apple ಜಾಹೀರಾತುಗಳನ್ನು ಹೇಗೆ ವಿತರಿಸುತ್ತದೆ ಎಂಬುದನ್ನು ನೀವು ನಿಯಂತ್ರಿಸುತ್ತೀರಿ.

Apple ನೀಡುವ ಜಾಹೀರಾತುಗಳು App Store, Apple News ಮತ್ತು ಸ್ಟಾಕ್ಸ್‌ನಲ್ಲಿ ಕಂಡುಬರಬಹುದು. ಈ ಜಾಹೀರಾತುಗಳು ಯಾವುದೇ ಇತರ ಆ್ಯಪ್‌ಗಳಿಂದ ಡೇಟವನ್ನು ಆ್ಯಕ್ಸೆಸ್ ಮಾಡುವುದಿಲ್ಲ. App Store ಮತ್ತು Apple Newsನಲ್ಲಿ, ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ಪೂರೈಸಲು ನಿಮ್ಮ ಹುಡುಕಾಟ ಮತ್ತು ಡೌನ್‌ಲೋಡ್ ಇತಿಹಾಸವನ್ನು ಬಳಸಬಹುದು. Apple News ಮತ್ತು ಸ್ಟಾಕ್ಸ್‌ನಲ್ಲಿ, ನೀವು ಏನನ್ನು ಓದುತ್ತೀರಿ ಅಥವಾ ಫಾಲೋ ಮಾಡುತ್ತೀರಿ ಎಂಬ ಆಧಾರದ ಮೇಲೆ ಭಾಗಶಃ ಜಾಹೀರಾತುಗಳನ್ನು ನೀಡಲಾಗುತ್ತದೆ. ಇದರಲ್ಲಿ ನೀವು ನೋಟಿಫಿಕೇಷನ್‌ಗಳನ್ನು ಸಕ್ರಿಯಗೊಳಿಸಿದ ಪ್ರಕಾಶಕರು ಮತ್ತು ನೀವು ಹೊಂದಿರುವ ಪಬ್ಲಿಷಿಂಗ್ ಸಬ್‌ಸ್ಕ್ರಿಪ್ಶನ್ ಪ್ರಕಾರವೂ ಸೇರಿದೆ. ನೀವು ಓದುವ ಲೇಖನಗಳನ್ನು ಈ ಆ್ಯಪ್‌ಗಳಿಂದ ಹೊರಗೆ ನಿಮಗೆ ಟಾರ್ಗೆಟ್ ಮಾಡಿದ ಆ್ಯಡ್‌ಗಳನ್ನು ಪೂರೈಸಲು ಬಳಸಲಾಗುವುದಿಲ್ಲ ಮತ್ತು ನೀವು ಏನನ್ನು ಓದಿದ್ದೀರಿ ಎಂಬುದರ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮ Apple ಖಾತೆಗೆ ಲಿಂಕ್ ಮಾಡದೆ ರ್‍ಯಾಂಡಮ್ ಐಡೆಂಟಿಫೈಯರ್‌ಗೆ ಲಿಂಕ್ ಮಾಡಲಾಗಿರುತ್ತದೆ.

ಜಾಹೀರಾತುಗಳನ್ನು ತಲುಪಿಸಲು Apple ಬಳಸುವ ಮಾಹಿತಿಯನ್ನು ಪರಿಶೀಲಿಸಿ

ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತು > ಜಾಹೀರಾತು ಗುರಿಮಾಡುವಿಕೆ ಮಾಹಿತಿಯನ್ನು ವೀಕ್ಷಿಸಿ ಎಂಬಲ್ಲಿಗೆ ಹೋಗಿ.

App Store, Apple News ಮತ್ತು ಸ್ಟಾಕ್ಸ್‌ನಲ್ಲಿ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ತಲುಪಿಸಲು Apple ಮಾಹಿತಿಯನ್ನು ಬಳಸುತ್ತದೆ. ನಿಮ್ಮ ವೈಯಕ್ತಿಕ ಡೇಟವನ್ನು ಇತರ ಪಾರ್ಟಿಗಳಿಗೆ ಒದಗಿಸಲಾಗುವುದಿಲ್ಲ.

ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಆನ್ ಅಥವಾ ಆಫ್ ಮಾಡಿ

ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತು ಎಂಬಲ್ಲಿಗೆ ಹೋಗಿ, ನಂತರ ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆನ್ ಅಥವಾ ಆಫ್ ಮಾಡಿ.

ಗಮನಿಸಿ: ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಆಫ್ ಮಾಡುವುದರಿಂದ ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ತಲುಪಿಸುವ Appleನ ಸಾಮರ್ಥ್ಯವನ್ನು ಮಿತಿಗೊಳಿಸಬಹುದು. ಇದು ನೀವು ಸ್ವೀಕರಿಸುವ ಜಾಹೀರಾತುಗಳ ಸಂಖ್ಯೆಯನ್ನು ಕಡಿಮೆ ಮಾಡದಿರಬಹುದು.

ಗೌಪ್ಯತೆ ಮತ್ತು Appleನ ಜಾಹೀರಾತು ಪ್ಲ್ಯಾಟ್‌ಫಾರ್ಮ್ ಕುರಿತು ಇನ್ನಷ್ಟು ತಿಳಿಯಿರಿ

ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > Apple ಜಾಹೀರಾತು > ಜಾಹೀರಾತು ಮತ್ತು ಗೌಪ್ಯತೆಯ ಕುರಿತು ಎಂಬಲ್ಲಿಗೆ ಹೋಗಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.