ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸಂದೇಶ ಆ್ಯಪ್ ಅನ್ನು ಸೆಟಪ್ ಮಾಡಿ

ಸಂದೇಶ ಆ್ಯಪ್ ನಲ್ಲಿ ನೀವು ಹಲವಾರು ವಿಭಿನ್ನ ರೀತಿಯಲ್ಲಿ ಪಠ್ಯ ಸಂದೇಶಗಳನ್ನು ಕಳುಹಿಸಬಹುದು:

  • iMessage ಅನ್ನು ಬಳಸುವ ಇತರರೊಂದಿಗೆ iMessage ಅನ್ನು ಬಳಸಿಕೊಂಡು Wi-Fi ಅಥವಾ ಮೊಬೈಲ್ ಸೇವೆಯ ಮೂಲಕ. ನಿಮ್ಮ iMessage ಪಠ್ಯಗಳು ನೀಲಿ ಬಣ್ಣದ ಬಬಲ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆ.

  • ಮೊಬೈಲ್ ಸೇವೆಯ ಮೂಲಕ ಕಳುಹಿಸಲಾದ SMS, MMS ಅಥವಾ RCS ಸಂದೇಶಗಳು ಹಸಿರು ಬಣ್ಣದ ಬಬಲ್‌ಗಳಲ್ಲಿ ಕಾಣುತ್ತವೆ. ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ. (RCS ಸಂದೇಶಗಳು ಎಲ್ಲಾ ನೆಟ್‌ವರ್ಕ್ ಪೂರೈಕೆದಾರರಿಂದ ಅಥವಾ ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಬೆಂಬಲಿತವಾಗಿರುವುದಿಲ್ಲ.)

  • ನೀವು ಮೊಬೈಲ್ ಸೇವೆ ಮತ್ತು Wi-Fi ಕವರೇಜ್‌ನಿಂದ ಹೊರಗಿದ್ದಾಗ, ಬೆಂಬಲಿತ iPhone ಮಾಡಲ್‌ಗಳು ಮತ್ತು ನಿರ್ದಿಷ್ಟ ನೆಟ್‌ವರ್ಕ್ ಪೂರೈಕೆದಾರರ ಸೇವೆಗಳಲ್ಲಿ iMessage ಅಥವಾ SMS ಬಳಸಿಕೊಂಡು (US, ಕೆನಡಾ ಮತ್ತು ಮೆಕ್ಸಿಕೊದಲ್ಲಿ ಮಾತ್ರ) ಸ್ಯಾಟಲೈಟ್ ಮೂಲಕ ಸಂದೇಶ ಕಳುಹಿಸಬಹುದು. ಸ್ಯಾಟಲೈಟ್ ಮೂಲಕ ಪಠ್ಯ ಸಂದೇಶವನ್ನು ಕಳುಹಿಸಿ ಎಂಬುದನ್ನು ನೋಡಿ.

ಹೆಚ್ಚಿನ ಮಾಹಿತಿಗಾಗಿ, iMessage RCS ಮತ್ತು SMS/MMS ನಡುವಿನ ವ್ಯತ್ಯಾಸವೇನು?, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ವೈರ್‌ಲೆಸ್ ನೆಟ್‌ವರ್ಕ್ ಪೂರೈಕೆದಾರರ ಬೆಂಬಲ ಮತ್ತು ಫೀಚರ್‌ಗಳು ವೆಬ್‌ಸೈಟ್ ಮತ್ತು iOS ಮತ್ತು iPadOS ಫೀಚರ್ ಲಭ್ಯತೆ ವೆಬ್‌ಸೈಟ್ ಎಂಬ Apple ಬೆಂಬಲ ಲೇಖನವನ್ನು ನೋಡಿ.

iMessage ಅನ್ನು ಆನ್ ಮಾಡಿ

  1. ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂದೇಶ ಆ್ಯಪ್ ಎಂಬಲ್ಲಿಗೆ ಹೋಗಿ.

  2. iMessage ಅನ್ನು ಆನ್ ಮಾಡಿ.

  3. ನೀವು iMessageನೊಂದಿಗೆ ನಿಮ್ಮ ಯಾವ ಫೋನ್ ಸಂಖ್ಯೆಗಳು ಮತ್ತು ಈಮೇಲ್‌ ವಿಳಾಸಗಳನ್ನು ಬಳಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ ಎಂಬಲ್ಲಿಗೆ ಹೋಗಿ, ಕಳುಹಿಸಿ ಮತ್ತು ಸ್ವೀಕರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕೆಳಗೆ ಲಭ್ಯವಿರುವ ಆಯ್ಕೆಗಳಲ್ಲಿ “ನೀವು ಇವುಗಳಲ್ಲಿ iMessages ಅನ್ನು ಸ್ವೀಕರಿಸಬಹುದು ಮತ್ತು ಇವುಗಳಿಂದ ಪ್ರತ್ಯುತ್ತರವನ್ನು ಪಡೆಯಬಹದು” ಎಂಬುದನ್ನು ಆರಿಸಿ.

iMessage ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಎಲ್ಲಾ Apple ಸಾಧನಗಳಲ್ಲಿ ಸಂದೇಶಗಳನ್ನು ಸಿಂಕ್ ಮಾಡುವುದು

ನೀವು ‘iCloudನಲ್ಲಿ ಸಂದೇಶ ಆ್ಯಪ್’ ಅನ್ನು ಆನ್ ಮಾಡಿದಾಗ, ನಿಮ್ಮ iPhoneನಲ್ಲಿ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಸಂದೇಶಗಳನ್ನು iCloudನಲ್ಲಿ ಸೇವ್ ಮಾಡಲಾಗುತ್ತದೆ. ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿದಾಗ ಮತ್ತು ಬೇರೊಂದು ಸಾಧನದಲ್ಲಿ iCloudನಲ್ಲಿ ಸಂದೇಶ ಆ್ಯಪ್ ಅನ್ನು ಆನ್ ಮಾಡಿದಾಗ, ನಿಮ್ಮ ಸಂಭಾಷಣೆಗಳು ಅಲ್ಲಿ ಸಹ ಕಾಣಿಸಿಕೊಳ್ಳುತ್ತವೆ ಮತ್ತು ಸಿಂಕ್ ಆಗುತ್ತವೆ.

  1. ಸೆಟ್ಟಿಂಗ್ಸ್  > [ ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ, ನಂತರ ‘iCloudನಲ್ಲಿ ಸೇವ್ ಮಾಡಿರುವುದು’ ಎಂಬುದರ ಪಕ್ಕದಲ್ಲಿನ ‘ಎಲ್ಲವನ್ನೂ ನೋಡಿ’ ಎಂಬುದನ್ನು ಟ್ಯಾಪ್ ಮಾಡಿ.

  2. ಸಂದೇಶ ಆ್ಯಪ್ ಅನ್ನು ಆನ್ ಮಾಡಿ (ಅದು ಈಗಾಗಲೇ ಆನ್ ಆಗಿರದಿದ್ದರೆ).

  3. ನಿಮ್ಮ iPhoneನಲ್ಲಿ ನೀವು ಪಡೆಯುವ ಯಾವುದೇ SMS, MMS ಅಥವಾ RCS ಪಠ್ಯ ಸಂದೇಶಗಳನ್ನು ಯಾವ ಇತರ ಸಾಧನಗಳು ಸ್ವೀಕರಿಸುತ್ತವೆ ಎಂಬುದನ್ನು ದೃಢೀಕರಿಸಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ ಎಂಬಲ್ಲಿಗೆ ಹೋಗಿ, ನಂತರ ಪಠ್ಯ ಸಂದೇಶ ಫಾರ್ವರ್ಡ್ ಮಾಡುವಿಕೆ ಎಂಬುದನ್ನು ಟ್ಯಾಪ್ ಮಾಡಿ.

ನೀವು iCloudನಲ್ಲಿ ಸಂದೇಶ ಆ್ಯಪ್‌ ಅನ್ನು ಆನ್ ಮಾಡಿದ ನಂತರ, ನೀವು iPhoneನಿಂದ ಡಿಲೀಟ್ ಮಾಡುವ ಯಾವುದೇ ಸಂದೇಶಗಳು ಅಥವಾ ಅಟ್ಯಾಚ್‌ಮೆಂಟ್‌ಗಳನ್ನು iCloudನಲ್ಲಿ ಸಂದೇಶ ಆ್ಯಪ್ ಅನ್ನು ಆನ್ ಮಾಡಿರುವ ನಿಮ್ಮ ಇತರ Apple ಸಾಧನಗಳಿಂದಲೂ ( iOS 11.4, iPadOS 13, macOS 10.13.5, watchOS 1, visionOS 1 ಅಥವಾ ನಂತರದ ಆವೃತ್ತಿಗಳು) ಡಿಲೀಟ್ ಮಾಡಲಾಗುತ್ತದೆ. iCloud ಬಳಕೆದಾರರ ಮಾರ್ಗದರ್ಶಿಯಲ್ಲಿರುವ ನಿಮ್ಮ ಎಲ್ಲಾ ಸಾಧನಗಳಲ್ಲಿ ಸಂದೇಶ ಆ್ಯಪ್‌ಗಾಗಿ iCloud ಅನ್ನು ಸೆಟಪ್ ಮಾಡುವುದು ಎಂಬುದನ್ನು ನೋಡಿ.

ಗಮನಿಸಿ: iCloudನಲ್ಲಿನ ಸಂದೇಶ ಆ್ಯಪ್ iCloud ಸಂಗ್ರಹವನ್ನು ಬಳಸುತ್ತದೆ. iCloud ಅನ್ನು ಬಳಸಿ ಎಂಬುದನ್ನು ನೋಡಿ.

SMS, MMS ಅಥವಾ RCS ಸಂದೇಶ ಕಳುಹಿಸಲು ಇತರ ಸಾಧನಗಳನ್ನು ಆರಿಸಿ

ನೀವು iCloudನಲ್ಲಿ ಸಂದೇಶ ಆ್ಯಪ್ ಆನ್ ಮಾಡಿಕೊಂಡಿರದಿದ್ದರೆ, ನೀವು SMS, MMS ಅಥವಾ RCS ಸಂದೇಶವನ್ನು ಕಳುಹಿಸಿದಾಗ ಅಥವಾ ಸ್ವೀಕರಿಸಿದಾಗ, ಅದು ನಿಮ್ಮ ಇತರ Apple ಸಾಧನಗಳಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲಿ ನಿಮ್ಮ iPhone ಅನ್ನು ನೀವು ಸೆಟಪ್ ಮಾಡಬಹುದು.

ಗಮನಿಸಿ: ಪ್ರದೇಶ ಮತ್ತು ನೆಟ್‌ವರ್ಕ್ ಪೂರೈಕೆದಾರರನ್ನು ಆಧರಿಸಿ ಲಭ್ಯತೆಯಲ್ಲಿ ವ್ಯತ್ಯಾಸವಾಗುತ್ತದೆ.

  1. ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ ಆ್ಯಪ್ ಎಂಬಲ್ಲಿಗೆ ಹೋಗಿ.

  2. ಪಠ್ಯ ಸಂದೇಶ ಫಾರ್ವರ್ಡ್ ಮಾಡುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಸೇರಿಸಲು ಬಯಸುವ ಯಾವುದೇ ಸಾಧನಗಳನ್ನು ಆನ್ ಮಾಡಿ.

ಗಮನಿಸಿ: ನೀವು ಎರಡು-ಅಂಶದ ದೃಢೀಕರಣವನ್ನು ಬಳಸುತ್ತಿಲ್ಲವೆಂದರೆ, ನೀವು ಇತರ ಸಾಧನದಲ್ಲಿ ಕಾಣಿಸಿಕೊಳ್ಳುವ ಆರು-ಅಂಕಿಯ ಸಕ್ರಿಯಗೊಳಿಸುವ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

ನಿಮ್ಮ ಹೆಸರು ಮತ್ತು ಫೋಟೋವನ್ನು ಹಂಚಿಕೊಳ್ಳಿ

ಸಂದೇಶ ಆ್ಯಪ್‌ನಲ್ಲಿ, ನಿಮ್ಮ ಹೆಸರು ಮತ್ತು ಫೋಟೋವನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬಹುದು. ನೀವು ಯಾವುದೇ ಸಂದರ್ಭದಲ್ಲಿ ಹೊಸ ವ್ಯಕ್ತಿಗೆ ಸಂದೇಶವನ್ನು ಕಳುಹಿಸಿದಾಗ ಅಥವಾ ಅವರಿಂದ ಸಂದೇಶ ಸ್ವೀಕರಿಸಿದಾಗ ಅದನ್ನು ಹಂಚಿಕೊಳ್ಳಬೇಕೇ ಬೇಡವೇ ಎಂಬುದನ್ನು ನೀವೇ ನಿರ್ಧರಿಸುತ್ತೀರಿ.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂದೇಶ ಆ್ಯಪ್‌ನ ಸಂಭಾಷಣೆಯ ಪಟ್ಟಿಯಲ್ಲಿ, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಮೇಲಿನ ಎಡ ಮೂಲೆಯಲ್ಲಿರುವ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

    • ಮೇಲಿನ ಬಲ ಮೂಲೆಯಲ್ಲಿರುವ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  3. ಹೆಸರು ಮತ್ತು ಫೋಟೋವನ್ನು ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಹೆಸರು ಮತ್ತು ಫೋಟೋ ಹಂಚಿಕೊಳ್ಳುವಿಕೆಯನ್ನು ಆನ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಬದಲಾಯಿಸಿ:

    • ನಿಮ್ಮ ಚಿತ್ರ: ವೃತ್ತದ ಕೆಳಗಿರುವ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ. ನಿಮ್ಮ ಫೋಟೋ Memoji, ಎಮೋಜಿ ಅಥವಾ ಕಸ್ಟಮ್ ಚಿತ್ರವಾಗಿರಬಹುದು.

    • ನಿಮ್ಮ ಹೆಸರು: ಹೆಸರನ್ನು ಟ್ಯಾಪ್ ಮಾಡಿ.

    • ನಿಮ್ಮ ಹೆಸರು ಮತ್ತು ಪಿಕ್ಚರ್ ಅನ್ನು ಯಾರು ನೋಡಬಹುದು: ಸ್ವಯಂಚಾಲಿತವಾಗಿ ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

ನಿಮ್ಮ ಹೆಸರು, ಚಿತ್ರವನ್ನು ಬದಲಾಯಿಸಲು ಅಥವಾ ನೀವು ಅವುಗಳನ್ನು ಸೆಟಪ್ ಮಾಡಿದ ನಂತರ ಅವುಗಳನ್ನು ಯಾರು ನೋಡಬಹುದು ಎಂಬುದನ್ನು ಬದಲಾಯಿಸಲು, ಎಡಿಟ್ ಎಂಬುದನ್ನು ಅಥವಾ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹೆಸರು ಮತ್ತು ಫೋಟೋವನ್ನು ಟ್ಯಾಪ್ ಮಾಡಿ. ಅಥವಾ ಸೆಟ್ಟಿಂಗ್ಸ್ > ಆ್ಯಪ್‌ಗಳು > ಸಂದೇಶ ಎಂಬಲ್ಲಿಗೆ ಹೋಗಿ, ನಂತರ ಹೆಸರು ಮತ್ತು ಫೋಟೋವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನೀವು Apple ಅಲ್ಲದ ಸಾಧನಗಳನ್ನು ಬಳಸುವ ಸ್ವೀಕೃತದಾರರಿಗೆ ಸಂದೇಶಗಳನ್ನು ಕಳುಹಿಸಿದಾಗ ನಿಮ್ಮ ಹೆಸರು ಮತ್ತು ಫೋಟೋ ನಿರೀಕ್ಷಿಸಿದಂತೆ ಕಾಣಿಸದೇ ಇರಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.