ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಒಂದು ಸ್ವಿಚ್ ಬಳಸಿ ಹಲವಾರು ಸಾಧನಗಳನ್ನು ನಿಯಂತ್ರಿಸುವುದು

ಯಾವುದೇ ಸ್ವಿಚ್ ಕನೆಕ್ಷನ್‌ಗಳನ್ನು ಸರಿಹೊಂದಿಸದೇ ನಿಮ್ಮ ಇತರ Apple ಸಾಧನಗಳನ್ನು ನೀವು ದೂರದಿಂದಲೇ ನಿಯಂತ್ರಿಸಬಹುದು. ಪ್ಲ್ಯಾಟ್‌ಫಾರ್ಮ್ ಸ್ವಿಚಿಂಗ್ ಮೂಲಕ, ನಿಮ್ಮ iPhone ಅನ್ನು ನಿಯಂತ್ರಿಸಲು ನೀವು ಬಳಸುವ ಸ್ವಿಚ್ ಅನ್ನೇ ಬಳಸಿಕೊಂಡು ನಿಮ್ಮ iPad, Mac ಅಥವಾ Apple TVಯನ್ನು ನ್ಯಾವಿಗೇಟ್ ಮಾಡಬಹುದು.

  1. ನಿಮ್ಮ ಸಾಧನಗಳನ್ನು ಒಂದೇ Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿ.

  2. ನಿಮ್ಮ ಎಲ್ಲಾ ಸಾಧನಗಳಲ್ಲಿ ಒಂದೇ Apple ಖಾತೆಯ ಮೂಲಕ ಸೈನ್ ಇನ್ ಮಾಡಿ.

  3. iPhoneನಲ್ಲಿ ಸ್ವಿಚ್ ಕಂಟ್ರೋಲ್ ಅನ್ನು ಸೆಟಪ್ ಮಾಡಿ ಮತ್ತು ಆನ್ ಮಾಡಿ, ನಂತರ ಇತರ ಸಾಧನಗಳಿಗೆ ಸ್ವಿಚ್ ಕಂಟ್ರೋಲ್ ಅನ್ನು ಆನ್ ಮಾಡಿ: iPad, Mac ಅಥವಾ Apple TV.

  4. ಸ್ಕ್ಯಾನರ್ ಮೆನುವನ್ನು ತೆರೆಯಲು ಸ್ವಿಚ್ ಬಳಸಿ.

  5. ಸಾಧನ ಎಂಬುದನ್ನು ಆಯ್ಕೆಮಾಡಿ, ಇತರ ಸಾಧನವನ್ನು ಬಳಸಿ ಎಂಬುದನ್ನು ಆಯ್ಕೆಮಾಡಿ, ನಂತರ ಕನೆಕ್ಟ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ನಿಮ್ಮ iPhoneನಿಂದ ಕಂಟ್ರೋಲ್ ಅನ್ನು ತೆಗೆದುಹಾಕಲು, ಕನೆಕ್ಟ್ ಮಾಡಲಾದ ಸಾಧನದಲ್ಲಿ ‘ಸಾಧನಗಳು’ ಎಂಬುದನ್ನು ಆಯ್ಕೆಮಾಡಿ, ನಂತರ ‘ಡಿಸ್‌ಕನೆಕ್ಟ್ ಮಾಡಿ’ ಎಂಬುದನ್ನು ಆಯ್ಕೆಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.