iPhoneನಲ್ಲಿನ FaceTimeನಲ್ಲಿ Live Photoವನ್ನು ತೆಗೆದುಕೊಳ್ಳಿ

ನೀವು FaceTime ಆ್ಯಪ್‌ನಲ್ಲಿ ವೀಡಿಯೊ ಕರೆಯಲ್ಲಿರುವಾಗ, ನಿಮ್ಮ ಸಂಭಾಷಣೆಯ ಕ್ಷಣವನ್ನು ಕ್ಯಾಪ್ಚರ್ ಮಾಡಲು ನೀವು FaceTime Live Photoವನ್ನು ತೆಗೆದುಕೊಳ್ಳಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ). ನೀವು ಫೋಟೋ ತೆಗೆಯುವುದಕ್ಕೆ ಸ್ವಲ್ಪ ಮೊದಲು ಮತ್ತು ನಂತರ ನಡೆಯುವುದನ್ನು ಕ್ಯಾಮರಾ ಸೆರೆಹಿಡಿಯುತ್ತದೆ ಮತ್ತು ಅದರಲ್ಲಿ ಆಡಿಯೊ ಕೂಡ ಸೇರಿರುತ್ತದೆ. ಹಾಗಾಗಿ ಅದು ಸಂಭವಿಸಿದ ರೀತಿಯಲ್ಲಿಯೇ ನೀವು ಅದನ್ನು ನಂತರದ ಸಮಯದಲ್ಲಿ ನೋಡಬಹುದು ಮತ್ತು ಕೇಳಬಹುದು.

FaceTime Live Photo ತೆಗೆದುಕೊಳ್ಳಲು, ಮೊದಲು ಸೆಟ್ಟಿಂಗ್ಸ್  > ಆ್ಯಪ್‌ಗಳು > FaceTime ಎಂಬಲ್ಲಿ FaceTime Live Photos ಅನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

  • ಇನ್ನೊಬ್ಬ ವ್ಯಕ್ತಿಯೊಂದಿಗೆ ಕರೆಯಲ್ಲಿದ್ದಾಗ: Live Photo ತೆಗೆದುಕೊಳ್ಳಿ ಬಟನ್ ಟ್ಯಾಪ್ ಮಾಡಿ.

  • ಗುಂಪು FaceTime ಕರೆಯ ಸಮಯದಲ್ಲಿ: ನೀವು ಯಾವ ವ್ಯಕ್ತಿಯ ಪಿಕ್ಚರ್ ಅನ್ನು ತೆಗೆದುಕೊಳ್ಳಲು ಬಯಸುತ್ತೀರೊ ಅವರ ಟೈಲ್ ಅನ್ನು ಟ್ಯಾಪ್ ಮಾಡಿ, ನಂತರ Live Photo ತೆಗೆದುಕೊಳ್ಳಿ ಬಟನ್ ಟ್ಯಾಪ್ ಮಾಡಿ.

ನಿಮ್ಮಿಬ್ಬರಿಗೂ ಫೋಟೋವನ್ನು ತೆಗೆದುಕೊಂಡಿರುವ ಕುರಿತು ನೋಟಿಫಿಕೇಷನ್ ದೊರೆಯುತ್ತದೆ ಮತ್ತು Live Photo ನಿಮ್ಮ ಫೋಟೋಸ್ ಆ್ಯಪ್‌ನಲ್ಲಿ ಸೇವ್ ಆಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.