ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ನೀವು ಹಂಚಿಕೊಳ್ಳುವ ಸ್ಥಳ ಮಾಹಿತಿಯನ್ನು ನಿಯಂತ್ರಿಸಿ

iPhone ಮತ್ತು ಆ್ಯಪ್‌ಗಳು ನಿಮ್ಮ ಸ್ಥಳವನ್ನು ಕುರಿತ ಮಾಹಿತಿಯನ್ನು ಹೊಂದಿರಬೇಕೇ ಬೇಡವೇ ಎಂಬುದನ್ನು ನೀವು ನಿಯಂತ್ರಿಸುತ್ತೀರಿ.

ನಿರ್ದೇಶನಗಳನ್ನು ಪಡೆಯುವಾಗ, ಮೀಟಿಂಗ್‌ಗಳನ್ನು ಸೆಟಪ್ ಮಾಡುವಾಗ ಮತ್ತು ಇನ್ನಿತರ ಸಂದರ್ಭಗಳಲ್ಲಿ ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು, ಸ್ಥಳ ಸೇವೆಗಳು GPS ನೆಟ್‌ವರ್ಕ್‌ಗಳಿಂದ, ನಿಮ್ಮ Bluetooth® ಕನೆಕ್ಷನ್‌ಗಳಿಂದ, ನಿಮ್ಮ ಸ್ಥಳೀಯ Wi-Fi ನೆಟ್‌ವರ್ಕ್‌ಗಳಿಂದ ಮತ್ತು ನಿಮ್ಮ ಮೊಬೈಲ್ ನೆಟ್‌ವರ್ಕ್‌ನಿಂದ ಮಾಹಿತಿಯನ್ನು (ಲಭ್ಯವಿದ್ದಾಗ) ಬಳಸಿಕೊಳ್ಳುತ್ತವೆ. ಆ್ಯಪ್ ಸ್ಥಳ ಸೇವೆಗಳನ್ನು ಬಳಸುತ್ತಿರುವಾಗ, ಸ್ಟೇಟಸ್ ಬಾರ್‌ನಲ್ಲಿ ಸ್ಥಳ ಸೇವೆಗಳ ಐಕಾನ್ ಕಾಣಿಸಿಕೊಳ್ಳುತ್ತದೆ.

ನೀವು iPhone ಅನ್ನು ಸೆಟಪ್ ಮಾಡಿದಾಗ, ನೀವು ಸ್ಥಳ ಸೇವೆಗಳನ್ನು ಆನ್ ಮಾಡಲು ಬಯಸುತ್ತೀರಾ ಎಂದು ನಿಮ್ಮನ್ನು ಕೇಳಲಾಗುತ್ತದೆ. ನಂತರ, ನೀವು ಯಾವುದೇ ಸಮಯದಲ್ಲಿ ಸ್ಥಳ ಸೇವೆಗಳನ್ನು ಆನ್ ಅಥವಾ ಆಫ್ ಮಾಡಬಹುದು.

ಮೊದಲ ಬಾರಿಗೆ ಆ್ಯಪ್ ನಿಮ್ಮ iPhoneನಿಂದ ಸ್ಥಳ ಡೇಟವನ್ನು ಬಯಸಿದಾಗ, ನೀವು ವಿವರಣೆಯೊಂದಿಗೆ ವಿನಂತಿಯನ್ನು ಸ್ವೀಕರಿಸುತ್ತೀರಿ. ಕೆಲವು ಆ್ಯಪ್‌ಗಳು ನಿಮ್ಮ ಸ್ಥಳಕ್ಕಾಗಿ ಒಮ್ಮೆ ಮಾತ್ರ ವಿನಂತಿಸಬಹುದು. ಇತರ ಆ್ಯಪ್‌ಗಳು ಈಗ ಮತ್ತು ಭವಿಷ್ಯದಲ್ಲಿ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಬಹುದು. ನಿಮ್ಮ ಸ್ಥಳಕ್ಕೆ ನೀವು ಚಾಲ್ತಿಯಲ್ಲಿರುವ ಆ್ಯಕ್ಸೆಸ್ ಅನ್ನು ಮಂಜೂರು ಮಾಡಿರಲಿ ಅಥವಾ ನಿರಾಕರಿಸಿರಲಿ, ನಂತರದ ಸಮಯದಲ್ಲಿ ನೀವು ಆ್ಯಪ್‌ನ ಆ್ಯಕ್ಸೆಸ್ ಅನ್ನು ಬದಲಾಯಿಸಬಹುದು.

ಸ್ಥಳ ಸೇವೆಗಳನ್ನು ಆನ್ ಮಾಡಿ

ನೀವು ಮೊದಲು iPhone ಅನ್ನು ಸೆಟಪ್ ಮಾಡಿದಾಗ ಸ್ಥಳ ಸೇವೆಗಳನ್ನು ಆನ್ ಮಾಡಿರದಿದ್ದರೆ, ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು ಎಂಬಲ್ಲಿಗೆ ಹೋಗಿ, ನಂತರ ಸ್ಥಳ ಸೇವೆಗಳನ್ನು ಆನ್ ಮಾಡಿ.

ಪ್ರಮುಖ ಸೂಚನೆ: ನೀವು ಸ್ಥಳ ಸೇವೆಗಳನ್ನು ಆಫ್ ಮಾಡಿದರೆ, ಹಲವು ಪ್ರಮುಖ iPhone ಫೀಚರ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ.

ನಿಮ್ಮ ಸ್ಥಳ ಮಾಹಿತಿಯನ್ನು ಬಳಸುತ್ತಿರುವ ಆ್ಯಪ್‌ಗಳನ್ನು ನೋಡುವುದು

  1. ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು ಎಂಬಲ್ಲಿಗೆ ಹೋಗಿ.

  2. ಆ್ಯಪ್‌ನ ಆ್ಯಕ್ಸೆಸ್ ಸೆಟ್ಟಿಂಗ್ಸ್ ಅನ್ನು ಪರಿಶೀಲಿಸಲು ಅಥವಾ ಬದಲಾಯಿಸಲು ಅಥವಾ ಸ್ಥಳ ಸೇವೆಗಳನ್ನು ವಿನಂತಿಸಲು ಅದು ನೀಡುವ ವಿವರಣೆಯನ್ನು ನೋಡಲು ಆ್ಯಪ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ನಿರ್ದಿಷ್ಟ ಸ್ಥಳವನ್ನು ಬಳಸುವುದಕ್ಕೆ ಆ್ಯಪ್‌ಗೆ ಅನುಮತಿಸಲು, “ನಿಖರವಾದ ಸ್ಥಳ”ವನ್ನು ಆನ್ ಮಾಡಿ. ಒಂದು ಆ್ಯಪ್‌ಗೆ ನಿಮ್ಮ ಅಂದಾಜು ಸ್ಥಳ ಮಾತ್ರ ಸಾಕಾಗುವಂತಿದ್ದು ನಿಮ್ಮ ನಿಖರ ಸ್ಥಳದ ಅಗತ್ಯವಿಲ್ಲವೆಂದರೆ ನಿಮ್ಮ ಅಂದಾಜು ಸ್ಥಳವನ್ನು ಮಾತ್ರ ಅದರ ಜೊತೆ ಹಂಚಿಕೊಳ್ಳಲು ನಿಖರ ಸ್ಥಳವನ್ನು ಆಫ್ ಮಾಡಿ.

ಗಮನಿಸಿ: ‘ಮುಂದಿನ ಬಾರಿ ಕೇಳಿ’ ಎಂಬುದಕ್ಕೆ ನೀವು ಒಂದು ಆ್ಯಪ್‌ಗೆ ಆ್ಯಕ್ಸೆಸ್ ಅನ್ನು ಸೆಟ್ ಮಾಡಿದರೆ, ಮುಂದಿನ ಬಾರಿ ಅದನ್ನು ಬಳಸಲು ಆ್ಯಪ್ ಪ್ರಯತ್ನಿಸಿದಾಗ ಮತ್ತೊಮ್ಮೆ ಸ್ಥಳ ಸೇವೆಗಳನ್ನು ಆನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.

ಥರ್ಡ್ ಪಾರ್ಟಿ ಆ್ಯಪ್ ತಾನು ವಿನಂತಿಸುತ್ತಿರುವ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಅದರ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಪರಿಶೀಲಿಸಿ. ಗೌಪ್ಯತೆ ಮತ್ತು ಸ್ಥಳ ಸೇವೆಗಳನ್ನು ಕುರಿತು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಸ್ಥಳ ಸೇವೆಗಳ ಅಲರ್ಟ್‌ಗಳಲ್ಲಿ ನಕ್ಷೆಯನ್ನು ಮರೆಮಾಡಿ

ನಿಮ್ಮ ಸ್ಥಳವನ್ನು ಯಾವಾಗಲೂ ಹಿನ್ನೆಲೆಯಲ್ಲಿ ಬಳಸಲು ನೀವು ಒಂದು ಆ್ಯಪ್‌ಗೆ ಅನುಮತಿಸಿದಾಗ, ಆ್ಯಪ್ ಆ ಮಾಹಿತಿಯನ್ನು ಬಳಸುವುದರ ಕುರಿತು ನೀವು ಅಲರ್ಟ್‌ಗಳನ್ನು ಸ್ವೀಕರಿಸಬಹುದು. (ನೀವು ಬಯಸಿದರೆ, ನಿಮ್ಮ ಅನುಮತಿಯನ್ನು ಬದಲಾಯಿಸಲು ಈ ಅಲರ್ಟ್‌ಗಳು ನಿಮಗೆ ಅವಕಾಶ ನೀಡುತ್ತವೆ.) ಅಲರ್ಟ್‌ಗಳಲ್ಲಿ, ನಕ್ಷೆಯು ಆ್ಯಪ್‌ನಿಂದ ಇತ್ತೀಚೆಗೆ ಆ್ಯಕ್ಸೆಸ್ ಮಾಡಲಾದ ಸ್ಥಳಗಳನ್ನು ತೋರಿಸುತ್ತದೆ.

ನಕ್ಷೆಯನ್ನು ಮರೆಮಾಡಲು, ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸ್ಥಳದ ಅಲರ್ಟ್‌ಗಳು ಎಂಬಲ್ಲಿಗೆ ಹೋಗಿ, ನಂತರ ಸ್ಥಳದ ಅಲರ್ಟ್‌ಗಳಲ್ಲಿ ನಕ್ಷೆಯನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.

ಸೆಟ್ಟಿಂಗ್ ಆಫ್ ಆಗಿರುವಾಗ ನೀವು ಸ್ಥಳ ಅಲರ್ಟ್‌ಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೀರಿ, ಆದರೆ ನಕ್ಷೆಯನ್ನು ತೋರಿಸಲಾಗುವುದಿಲ್ಲ.

ಸಿಸ್ಟಂ ಸೇವೆಗಳಿಗಾಗಿ ಸ್ಥಳ ಸೇವೆಗಳ ಸೆಟ್ಟಿಂಗ್ಸ್ ಅನ್ನು ಪರಿಶೀಲಿಸಿ ಅಥವಾ ಬದಲಾಯಿಸಿ

ಸ್ಥಳ ಆಧಾರಿತ ಸಲಹೆಗಳು ಮತ್ತು ಸ್ಥಳ ಆಧಾರಿತ ಜಾಹೀರಾತುಗಳ ರೀತಿಯ ಹಲವಾರು ಸಿಸ್ಟಂ ಸೇವೆಗಳು ಸ್ಥಳ ಸೇವೆಗಳನ್ನು ಬಳಸುತ್ತವೆ.

ಪ್ರತಿಯೊಂದು ಸೇವೆಯ ಸ್ಟೇಟಸ್ ಅನ್ನು ನೋಡಲು, ಪ್ರತಿಯೊಂದು ಸೇವೆಗೆ ಸ್ಥಳ ಸೇವೆಗಳನ್ನು ಆನ್ ಅಥವಾ ಆಫ್ ಮಾಡಲು ಅಥವಾ ನಿಮ್ಮ ಸ್ಥಳವನ್ನು ಬಳಸುವಂತೆ ಸಿಸ್ಟಂ ಸೇವೆಗಳನ್ನು ಸಕ್ರಿಯಗೊಳಿಸಿದಾಗ ಸ್ಟೇಟಸ್ ಬಾರ್‌ನಲ್ಲಿ ಸ್ಥಳ ಸೇವೆಗಳ ಐಕಾನ್ ಅನ್ನು ತೋರಿಸಲು, ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು > ಸಿಸ್ಟಂ ಸೇವೆಗಳು ಎಂಬಲ್ಲಿಗೆ ಹೋಗಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.