ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಸ್ಕ್ರೀನ್ ಮೇಲೆ ಇರುವುದನ್ನು ನೋಡಲು ಸುಲಭವಾಗುವಂತೆ iPhoneನಲ್ಲಿ ಡಿಸ್‌ಪ್ಲೇ ಬಣ್ಣಗಳನ್ನು ಬದಲಾಯಿಸಿ

ನಿಮ್ಮ iPhone ಸ್ಕ್ರೀನ್ ಮೇಲೆ ಇರುವುದನ್ನು ನೋಡುವುದಕ್ಕೆ ಸುಲಭವಾಗಿಸಲು, ನೀವು ಡಿಸ್‌ಪ್ಲೇ ಬಣ್ಣಗಳನ್ನು ಇನ್ವರ್ಟ್ ಮಾಡಬಹುದು, ಪಾರದರ್ಶಕ ಐಟಂಗಳನ್ನು ಅಪಾರದರ್ಶಕವಾಗಿಸಬಹುದು ಮತ್ತು ಬಣ್ಣದ ಫಿಲ್ಟರ್‌ಗಳನ್ನು ಬಳಸಿ ಬಣ್ಣಗಳು ಹೇಗೆ ಕಾಣಿಸುತ್ತವೆ ಎಂಬುದನ್ನು ಮಾರ್ಪಡಿಸಬಹುದು.

ಸಲಹೆ: ಕಂಟ್ರೋಲ್ ಸೆಂಟರ್‌ನಲ್ಲಿನ ಸ್ಲೈಡರ್ ಮೂಲಕ ಬ್ರೈಟ್‌ನೆಸ್ ಅನ್ನು ತ್ವರಿತವಾಗಿ ಸೆಟ್ ಮಾಡಿ.

ಬಣ್ಣಗಳನ್ನು ಇನ್ವರ್ಟ್ ಮಾಡಿ

ಪಠ್ಯ ಮತ್ತು ಕಂಟೆಂಟ್ ಎದ್ದು ಕಾಣುವಂತೆ ಹಿನ್ನೆಲೆಯನ್ನು ಗಾಢವಾಗಿಸಿ. ಇದು ವಿಶೇಷವಾಗಿ ಡಾರ್ಕ್ ಮೋಡ್ ಅನ್ನು ಬೆಂಬಲಿಸದಿರುವ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಉಪಯುಕ್ತವಾಗಿದೆ.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬಲ್ಲಿಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಆನ್ ಮಾಡಿ:

    • ಸ್ಮಾರ್ಟ್ ಇನ್ವರ್ಟ್: ಚಿತ್ರಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬಣ್ಣಗಳನ್ನು ರಿವರ್ಸ್ ಮಾಡಿ.

    • ಕ್ಲಾಸಿಕ್ ಇನ್ವರ್ಟ್: ಸ್ಕ್ರೀನ್ ಮೇಲಿನ ಎಲ್ಲಾ ಬಣ್ಣಗಳನ್ನು ರಿವರ್ಸ್ ಮಾಡಿ.

ಬಣ್ಣಗಳ ನಡುವಿನ ಭಿನ್ನತೆಯನ್ನು ಹೆಚ್ಚಿಸಿ ಅಥವಾ ಟೋನ್ ಡೌನ್ ಮಾಡಿ

ಸಂಪೂರ್ಣ ಸ್ಕ್ರೀನ್ ಅನ್ನು ಗ್ರೇಸ್ಕೇಲ್‌ನಲ್ಲಿ ವೀಕ್ಷಿಸಲು, ಬಣ್ಣಗುರುಡಿನಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಬಣ್ಣಗಳನ್ನು ಸರಿಹೊಂದಿಸಲು ಅಥವಾ ಸ್ಕ್ರೀನ್‌ಗೆ ನಿಮ್ಮ ಆಯ್ಕೆಯ ಬಣ್ಣವನ್ನು ನೀಡಲು ನೀವು ಫಿಲ್ಟರ್ ಅನ್ನು ಅನ್ವಯಿಸಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬಲ್ಲಿಗೆ ಹೋಗಿ.

  2. ಬಣ್ಣದ ಫಿಲ್ಟರ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ಬಣ್ಣದ ಫಿಲ್ಟರ್‌ಗಳನ್ನು ಆನ್ ಮಾಡಿ, ನಂತರ ಬಣ್ಣದ ಫಿಲ್ಟರ್ ಒಂದನ್ನು ಅನ್ವಯಿಸಲು ಅದನ್ನು ಟ್ಯಾಪ್ ಮಾಡಿ.

    ತೀವ್ರತೆ ಅಥವಾ ಹ್ಯೂ ಅನ್ನು ಸರಿಹೊಂದಿಸಲು, ಗೋಚರಿಸುವ ಯಾವುದೇ ಸ್ಲೈಡರ್ ಅನ್ನು ನೀವು ಡ್ರ್ಯಾಗ್ ಮಾಡಬಹುದು. ವ್ಯಾಪಕ ಬಗೆಯ ಬಣ್ಣಗಳ ಮೇಲೆ ಫಿಲ್ಟರ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪೆನ್ಸಿಲ್‌ಗಳು ತೋರಿಸುತ್ತವೆ.

    ಗಮನಿಸಿ: ಬಣ್ಣದ ಫಿಲ್ಟರ್‌ಗಳು ಚಿತ್ರಗಳು ಮತ್ತು ವೀಡಿಯೊಗಳ ರೂಪವನ್ನು ಬದಲಾಯಿಸಬಹುದು.

ಪ್ರಕಾಶಮಾನ ಬಣ್ಣಗಳ ತೀವ್ರತೆಯನ್ನು ಕಡಿಮೆ ಮಾಡಲು’ವೈಟ್ ಪಾಯಿಂಟ್ ಕಡಿಮೆ ಮಾಡಿ’ ಎಂಬುದನ್ನು ಆನ್ ಮಾಡಿ.

ಕತ್ತಲಾದಂತೆ ಸ್ಕ್ರೀನ್ ಬಣ್ಣಗಳು ವಾರ್ಮ್ ಆಗಿ ಬದಲಾಗುವಂತೆ ಮಾಡಲು, Night Shift ಅನ್ನು ಬಳಸಿ. ಇನ್ವರ್ಟ್ ಮಾಡಲಾದ ಬಣ್ಣಗಳು ಮತ್ತು ಬಣ್ಣದ ಫಿಲ್ಟರ್ ಎಫೆಕ್ಟ್‌ಗಳನ್ನು (ಗ್ರೇಸ್ಕೇಲ್ ಹೊರತುಪಡಿಸಿ) Night Shift ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ.

ಸಮೀಪದ ಪಠ್ಯ ಅಥವಾ ವಸ್ತುಗಳ ಚಿತ್ರವನ್ನು ಕ್ಯಾಪ್ಚರ್ ಮಾಡಲು ಮತ್ತು ಅದಕ್ಕೆ ಬಣ್ಣದ ಫಿಲ್ಟರ್ ಅನ್ನು ಅನ್ವಯಿಸಲು ನೀವು ಮ್ಯಾಗ್ನಿಫೈಯರ್ ಆ್ಯಪ್ ಅನ್ನು ಸಹ ಬಳಸಬಹುದು. ಮ್ಯಾಗ್ನಿಫೈಯರ್‌ನಲ್ಲಿ ಕಂಟ್ರೋಲ್‌ಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ನೋಡಿ.

ಪಾರದರ್ಶಕ ಐಟಂಗಳನ್ನು ಅಪಾರದರ್ಶಕವಾಗಿಸಿ

ಕೆಲವು ಹಿನ್ನೆಲೆಗಳು ಪಾರದರ್ಶಕವಾಗಿ ಕಾಣಿಸುತ್ತವೆ ಅಥವಾ ಡಿಫಾಲ್ಟ್ ಆಗಿ ಮಸುಕಾಗಿರುತ್ತವೆ. ನೀವು ಈ ಪಾರದರ್ಶಕ ಹಿನ್ನೆಲೆಗಳಿಗೆ ಸಾಲಿಡ್ ಬಣ್ಣವೊಂದನ್ನು ನೀಡುವ ಮೂಲಕ ಅವುಗಳನ್ನು ಅಪಾರದರ್ಶಕವಾಗಿಸಬಹುದು. ಈ ರೀತಿಯಲ್ಲಿ ನಿಮ್ಮ ಸ್ಕ್ರೀನ್‌ನ ಆ ಭಾಗಗಳನ್ನು ನೀವು ಸರಳಗೊಳಿಸುತ್ತೀರಿ ಮತ್ತು ಅವುಗಳನ್ನು ನೋಡಲು ಸುಲಭವಾಗಿಸುತ್ತೀರಿ.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬಲ್ಲಿಗೆ ಹೋಗಿ.

  2. ಪಾರದರ್ಶಕತೆಯನ್ನು ಕಡಿಮೆ ಮಾಡಿ ಎಂಬುದನ್ನು ಆನ್ ಮಾಡಿ.

ಬಣ್ಣವಿಲ್ಲದೆಯೇ ವ್ಯತ್ಯಾಸ ತೋರಿಸಿ

ಮಾಹಿತಿಯನ್ನು ತಿಳಿಸಲು ಕೆಲವು ಸ್ಕ್ರೀನ್ ಐಟಂಗಳು ಬಣ್ಣವನ್ನು ಅವಲಂಬಿಸಿವೆ. ಅವುಗಳ ನಡುವಿನ ಭಿನ್ನತೆಯನ್ನು ಹೆಚ್ಚಿಸಲು ನೀವು ಆಕಾರಗಳು ಅಥವಾ ಪಠ್ಯದಂತಹ ಪರ್ಯಾಯ ವಿಧಾನಗಳಿಂದ ಅವುಗಳನ್ನು ಬದಲಾಯಿಸಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬಲ್ಲಿಗೆ ಹೋಗಿ.

  2. ಬಣ್ಣವಿಲ್ಲದೆಯೇ ವ್ಯತ್ಯಾಸ ತೋರಿಸಿ ಎಂಬುದನ್ನು ಆನ್ ಮಾಡಿ.

ಆನ್/ಆಫ್ ಸ್ವಿಚ್‌ಗಳಿಗೆ ಸಂಕೇತಗಳನ್ನು ಬಳಸಿ

ಸ್ವಿಚ್‌ಗಳು ಆನ್ ಆಗಿರುವಾಗ ಅವು ಹಸಿರು ಬಣ್ಣಕ್ಕೆ ತಿರುಗುತ್ತವೆ. ಸ್ವಿಚ್‌ಗಳು ಯಾವಾಗ ಆನ್ ಆಗಿವೆ ಎಂಬುದನ್ನು ಸೂಚಿಸಲು ಲಂಬ ರೇಖೆಯನ್ನು ಮತ್ತು ಯಾವಾಗ ಆಫ್ ಆಗಿವೆ ಎಂಬುದನ್ನು ಸೂಚಿಸಲು ವೃತ್ತವನ್ನು ಸಹ ನೀವು ಬಳಸಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬಲ್ಲಿಗೆ ಹೋಗಿ.

  2. ಆನ್/ಆಫ್ ಲೇಬಲ್‌ಗಳನ್ನು ಆನ್ ಮಾಡಿ.

ಝೂಮ್ ವಿಂಡೋದ ಕಂಟೆಂಟ್‌ಗಳಿಗೆ ಮಾತ್ರ ಈ ಸೆಟ್ಟಿಂಗ್ಸ್ ಅನ್ನು ಅನ್ವಯಿಸಲು, iPhone ಸ್ಕ್ರೀನ್ ಮೇಲೆ ಝೂಮ್ ಇನ್ ಮಾಡಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.