ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಫೈಲ್ಸ್ ಬೇಸಿಕ್ಸ್

ಫೈಲ್ಸ್ ಆ್ಯಪ್‌ನಲ್ಲಿ, ನಿಮ್ಮ ಫೈಲ್‌ಗಳನ್ನು ನೀವು ಪತ್ತೆಹಚ್ಚಬಹುದು ಮತ್ತು ನೋಡಬಹುದು, ಅವುಗಳನ್ನು ಫೋಲ್ಡರ್‌ಗಳಲ್ಲಿ ವ್ಯವಸ್ಥಿತಗೊಳಿಸಬಹುದು ಮತ್ತು ಮರುಕ್ರಮಗೊಳಿಸಬಹುದು, ಕಂಪ್ರೆಸ್ ಮಾಡಬಹುದು, ಮರುಹೆಸರಿಸಬಹುದು ಮತ್ತು ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು, ಅವುಗಳನ್ನು iCloud Drive ಮತ್ತು ಇತರ ಸಾಧನಗಳಿಗೆ ಮತ್ತು ಅಲ್ಲಿಂದ ಬೇರೆ ಕಡೆ ವರ್ಗಾಯಿಸಬಹುದು ಮತ್ತು ಇನ್ನಷ್ಟು ಚಟುವಟಿಕೆಗಳನ್ನು ನಿರ್ವಹಿಸಬಹುದು. ಈ ಮೂಲಭೂತ ಕಾರ್ಯಗಳನ್ನು ಕೆಳಗೆ ಸಾರಾಂಶಗೊಳಿಸಲಾಗಿದೆ.

  1. ನಿಮ್ಮ iPhoneನಲ್ಲಿ ಫೈಲ್ಸ್ ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಈಮೇಲ್ ಅಥವಾ ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಫೈಲ್‌ಗಳನ್ನು ನೋಡಿ: ಸ್ಕ್ರೀನ್‌ನ ಕೆಳಭಾಗದಲ್ಲಿರುವ ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೈಡ್‌ಬಾರ್‌ನಲ್ಲಿರುವ ಡೌನ್‌ಲೋಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ. ಡೌನ್‌ಲೋಡ್ ಮಾಡಲಾದ ಫೈಲ್‌ಗಳನ್ನು ಹುಡುಕಿ ಅನ್ನು ನೋಡಿ.

    • ನಿಮ್ಮ ಫೈಲ್‌ಗಳನ್ನು ಬ್ರೌಸ್ ಮಾಡಿ: : ಸ್ಕ್ರೀನ್‌ ಕೆಳಭಾಗದಲ್ಲಿರುವ ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ iCloud Drive ಅನ್ನು ಟ್ಯಾಪ್ ಮಾಡಿ. ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಬ್ರೌಸ್ ಮಾಡಿ ಅನ್ನು ನೋಡಿ.

    • ನೀವು ಇತ್ತೀಚೆಗೆ ತೆರೆದ ಫೈಲ್‌ಗಳನ್ನು ನೋಡಿ: ಸ್ಕ್ರೀನ್‌ನ ಕೆಳಗಿರುವ ಇತ್ತೀಚಿನವುಗಳು ಎಂಬುದನ್ನು ಟ್ಯಾಪ್ ಮಾಡಿ.

    • ಹಂಚಿಕೊಂಡ ಫೈಲ್‌ಗಳನ್ನು ನೋಡಿ: ಸ್ಕ್ರೀನ್‌ನ ಕೆಳಭಾಗದಲ್ಲಿರುವ ಹಂಚಿಕೊಂಡಿರುವುದು ಎಂಬುದನ್ನು ಟ್ಯಾಪ್ ಮಾಡಿ.

    • ಫೈಲ್ ಅಥವಾ ಫೋಲ್ಡರ್ ಅನ್ನು ಕಾಪಿ ಮಾಡಿ, ಮೂವ್ ಮಾಡಿ, ಹಂಚಿಕೊಳ್ಳಿ ಅಥವಾ ಡಿಲೀಟ್ ಮಾಡಿ: ಫೈಲ್ ಅಥವಾ ಫೋಲ್ಡರ್ ಅನ್ನು ಪತ್ತೆ ಮಾಡಿ, ಅದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಕಾಪಿ ಮಾಡಿ, ಮೂವ್ ಮಾಡಿ, ಹಂಚಿಕೊಳ್ಳಿ ಅಥವಾ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ಫೈಲ್ಸ್ ಆ್ಯಪ್‌ನಲ್ಲಿ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮಾರ್ಪಡಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.