ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ Apple Intelligence ಮೂಲಕ ಆಡಿಯೊ ರೆಕಾರ್ಡಿಂಗ್‌ನ ಸಾರಾಂಶವನ್ನು ಪಡೆಯಿರಿ

ಟಿಪ್ಪಣಿ ಆ್ಯಪ್‌ನಲ್ಲಿ, ನೀವು ತರಗತಿಯ ಉಪನ್ಯಾಸದಂತಹ ಆಡಿಯೊವನ್ನು ರೆಕಾರ್ಡ್ ಮಾಡಬಹುದು, ನಂತರ ಅದರ ಸಾರಾಂಶವನ್ನು ಜನರೇಟ್ ಮಾಡಲು Apple Intelligence* ಅನ್ನು ಬಳಸಬಹುದು, ಇದರಿಂದಾಗಿ ನೀವು ಅತ್ಯಂತ ಮುಖ್ಯವಾದ ಮಾಹಿತಿಯನ್ನು ಒಂದು ನೋಟದಲ್ಲಿ ಪಡೆಯಬಹುದು. ಫೋನ್ ಆ್ಯಪ್‌ನಲ್ಲಿ ನೀವು ರೆಕಾರ್ಡ್ ಮಾಡುವ ಫೋನ್ ಕರೆಯ ಸಾರಾಂಶವನ್ನು ಜನರೇಟ್ ಮಾಡಲು ನೀವು Apple Intelligence ಅನ್ನು ಸಹ ಬಳಸಬಹುದು.

ಗಮನಿಸಿ: Apple Intelligence ಎಲ್ಲಾ iPhone ಮಾಡಲ್‌ಗಳು ಅಥವಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ** ತೀರಾ ಇತ್ತೀಚಿನ ಲಭ್ಯವಿರುವ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು, ನೀವು iOSನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದೀರಿ ಮತ್ತು ನಿಮ್ಮ ಸಾಧನದಲ್ಲಿ Apple Intelligence ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಫೋನ್ ಕರೆಯ ಸಾರಾಂಶವನ್ನು ನೋಡುವುದು

  1. ನಿಮ್ಮ iPhoneನಲ್ಲಿ ಫೋನ್ ಆ್ಯಪ್‌ಗೆ ಹೋಗಿ.

  2. ಕರೆಯನ್ನು ರೆಕಾರ್ಡ್ ಮಾಡಿ.

    ನಿಮ್ಮ ರೆಕಾರ್ಡಿಂಗ್ ಅನ್ನು ಟಿಪ್ಪಣಿ ಆ್ಯಪ್‌ನಲ್ಲಿ ಸೇವ್ ಮಾಡಲಾಗಿದೆ.

  3. ನಿಮ್ಮ iPhoneನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  4. ನಿಮ್ಮ ಕರೆಯ ರೆಕಾರ್ಡಿಂಗ್ ಅನ್ನು ತೆರೆಯಿರಿ (ಕರೆ ರೆಕಾರ್ಡಿಂಗ್‌ಗಳ ಫೋಲ್ಡರ್‌ನಲ್ಲಿ).

  5. ರೆಕಾರ್ಡಿಂಗ್ ಅನ್ನು ಟ್ಯಾಪ್ ಮಾಡಿ, ನಂತರ ಸಾರಾಂಶವನ್ನು ಟ್ಯಾಪ್ ಮಾಡಿ.

ಸಾರಾಂಶವನ್ನು ಕಾಪಿ ಮಾಡಲು, ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಾರಾಂಶವನ್ನು ಕಾಪಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ಸಾರಾಂಶವನ್ನು ಹಂಚಿಕೊಳ್ಳಲು, ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಾರಾಂಶವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ಟಿಪ್ಪಣಿ ಆ್ಯಪ್‌‌ನಲ್ಲಿ ಆಡಿಯೊ ರೆಕಾರ್ಡಿಂಗ್‌ನ ಸಾರಾಂಶವನ್ನು ನೋಡುವುದು

ನೀವು ಟಿಪ್ಪಣಿ ಆ್ಯಪ್‌ನಲ್ಲಿ ಆಡಿಯೊ ಟಿಪ್ಪಣಿಯನ್ನು ರೆಕಾರ್ಡ್ ಮಾಡಿದ ನಂತರ, ರೆಕಾರ್ಡಿಂಗ್‌ನ ಸಾರಾಂಶವನ್ನು ನೀವು ನೋಡಬಹುದು.

  1. ನಿಮ್ಮ iPhoneನಲ್ಲಿರುವ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ರೆಕಾರ್ಡಿಂಗ್ ಹೊಂದಿರುವ ಟಿಪ್ಪಣಿಯನ್ನು ತೆರೆಯಿರಿ.

  3. ರೆಕಾರ್ಡಿಂಗ್ ಅನ್ನು ಟ್ಯಾಪ್ ಮಾಡಿ, ನಂತರ ಸಾರಾಂಶವನ್ನು ಟ್ಯಾಪ್ ಮಾಡಿ.

ಸಾರಾಂಶವನ್ನು ಕಾಪಿ ಮಾಡಲು ಅಥವಾ ಹಂಚಿಕೊಳ್ಳಲು, ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಾರಾಂಶವನ್ನು ಕಾಪಿ ಮಾಡಿ ಅಥವಾ ಸಾರಾಂಶವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ಸಲಹೆ: ಬರವಣಿಗೆಯ ಟೂಲ್‌ಗಳನ್ನು ಬಳಸಿಕೊಂಡು ನೀವು ಆಡಿಯೊ ರೆಕಾರ್ಡಿಂಗ್ ಅನ್ನು ವಾಯ್ಸ್ ಮೆಮೊಸ್ ಆ್ಯಪ್‌ನಲ್ಲಿ ಸಹ ಸಾರಾಂಶಗೊಳಿಸಬಹುದು. ರೆಕಾರ್ಡಿಂಗ್ ಅನ್ನು ಟ್ಯಾಪ್ ಮಾಡಿ, ಇನ್ನಷ್ಟು ಆ್ಯಕ್ಷನ್‌ಗಳು ಬಟನ್ ಅನ್ನು ಟ್ಯಾಪ್ ಮಾಡಿ, ಟ್ರಾನ್ಸ್‌ಕ್ರಿಪ್ಟ್ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪಠ್ಯವನ್ನು ಸಾರಾಂಶಗೊಳಿಸಲು ಮತ್ತು ವ್ಯವಸ್ಥಿತಗೊಳಿಸಲು ಹಂತಗಳನ್ನು ಅನುಸರಿಸಿ

*Apple Intelligence ಜನರೇಟಿವ್ ಮಾಡಲ್‌ಗಳನ್ನು ಬಳಸುತ್ತದೆ ಮತ್ತು ಔಟ್‌ಪುಟ್‌ಗಳಲ್ಲಿ ವ್ಯತ್ಯಾಸವಾಗಬಹುದು. ನಿಖರತೆಗಾಗಿ ಮುಖ್ಯ ಮಾಹಿತಿಯನ್ನು ಪರಿಶೀಲಿಸಿ.
**Siriಯನ್ನು ಹೊಂದಿರುವ ಮತ್ತು ಸಾಧನದ ಭಾಷೆಯನ್ನು ಚೈನೀಸ್ (ಸರಳೀಕೃತ), ಇಂಗ್ಲಿಷ್ (ಆಸ್ಟ್ರೇಲಿಯಾ, ಕೆನಡಾ, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಸಿಂಗಪೂರ್, ದಕ್ಷಿಣ ಆಫ್ರಿಕಾ, ಯುಕೆ ಅಥವಾ ಯು. ಎಸ್), ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್ (ಬ್ರೆಜಿಲ್) ಅಥವಾ ಸ್ಪ್ಯಾನಿಷ್‌ಗೆ ಸೆಟ್ ಮಾಡಲಾಗಿರುವ ಎಲ್ಲಾ iPhone 16 ಮಾಡಲ್‌ಗಳು, iPhone 15 Pro ಮತ್ತು iPhone 15 Pro Maxನಲ್ಲಿ Apple Intelligence ಬೀಟಾದಲ್ಲಿ ಲಭ್ಯವಿದೆ. ಕೆಲವು ಫೀಚರ್‌ಗಳು ಎಲ್ಲಾ ಪ್ರದೇಶಗಳು ಅಥವಾ ಭಾಷೆಗಳಲ್ಲಿ ಲಭ್ಯವಿಲ್ಲದಿರಬಹುದು. ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.