ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಫೋಟೋ ಮತ್ತು ವೀಡಿಯೊ ಮಾಹಿತಿಯನ್ನು ನೋಡಿ

ನೀವು ಫೋಟೋ ಅಥವಾ ವೀಡಿಯೊದ ಬಗ್ಗೆ ಸೇವ್ ಮಾಡಿರುವ ಮೆಟಡೇಟದ ಮಾಹಿತಿಯನ್ನು ಫೋಟೋಸ್ ಆ್ಯಪ್‌ನಲ್ಲಿ ನೋಡಬಹುದು. ಐಟಂನ ಮೆಟಾಡೇಟ ಮಾಹಿತಿಯಲ್ಲಿ ಸಂಗ್ರಹಿಸಲಾದ ದಿನಾಂಕ, ಸಮಯ ಮತ್ತು ಸ್ಥಳವನ್ನು ಸಹ ನೀವು ಬದಲಾಯಿಸಬಹುದು.

ಫೋಟೋ ಮತ್ತು ವೀಡಿಯೊ ಮೆಟಾಡೇಟವನ್ನು ನೋಡಿ

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ನೀವು ಯಾವುದರ ಮೆಟಾಡೇಟವನ್ನು ನೋಡಲು ಬಯಸುವಿರೋ ಆ ಫೋಟೋ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಿ, ನಂತರ ಮೇಲಕ್ಕೆ ಸ್ವೈಪ್ ಮಾಡಿ ಅಥವಾ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

    ಫೋಟೋ ಅಥವಾ ವೀಡಿಯೊದ ಅನುಸಾರ, ನೀವು ಈ ಕೆಳಗಿನ ವಿವರಗಳನ್ನು ನೋಡುತ್ತೀರಿ:

    • ಫೋಟೋದಲ್ಲಿ ಗುರುತಿಸಲಾದ ಜನರು

    • ಫೋಟೋ ಅಥವಾ ವೀಡಿಯೊವನ್ನು ವಿವರಿಸಲು ಮತ್ತು ಹುಡುಕಾಟದ ಫೀಲ್ಡ್‌ನಲ್ಲಿ ಹುಡುಕುವುದನ್ನು ಸುಲಭಗೊಳಿಸಲು ಇರುವ ಕ್ಯಾಪ್ಷನ್ ಫೀಲ್ಡ್

    • ದೃಶ್ಯರೂಪದ ಲುಕ್ ಅಪ್ ಮೂಲಕ ಪತ್ತೆಹಚ್ಚಲಾದ ಐಟಂಗಳು

    • ಯಾವ ಸಾಧನದಿಂದ ಫೋಟೋ ಅಥವಾ ವೀಡಿಯೊವನ್ನು ಕ್ಯಾಪ್ಚರ್ ಮಾಡಲಾಗಿದೆ

    • ಫೋಟೋ ಅಥವಾ ವೀಡಿಯೊವನ್ನು ತೆಗೆದುಕೊಂಡಿರುವ ದಿನಾಂಕ ಮತ್ತು ಸಮಯ (ದಿನಾಂಕ ಮತ್ತು ಸಮಯವನ್ನು ಎಡಿಟ್ ಮಾಡಲು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ)

    • ಲೆನ್ಸ್, ಶಟರ್ ಸ್ಪೀಡ್, ಫೈಲ್ ಗಾತ್ರ ಮುಂತಾದ ಕ್ಯಾಮರಾ ಮೆಟಾಡೇಟ

    • ಫೋಟೋ ಅಥವಾ ವೀಡಿಯೊವನ್ನು ತೆಗೆದುಕೊಂಡಿರುವ ಸ್ಥಳ (ನಕ್ಷೆಯಲ್ಲಿ ಸ್ಥಳವನ್ನು ನೋಡಲು ಲಿಂಕ್ ಅನ್ನು ಟ್ಯಾಪ್ ಮಾಡಿ; ಸ್ಥಳವನ್ನು ಎಡಿಟ್ ಮಾಡಲು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ)

    • ಫೋಟೋ ಅಥವಾ ವೀಡಿಯೊವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರೆ, ಅದನ್ನು ಯಾರು ಹಂಚಿಕೊಂಡಿದ್ದಾರೆ ಎಂಬುದು

    • ಈ ಫೋಟೋ ಯಾವ ಆಲ್ಬಮ್‌ಗಳಲ್ಲಿದೆ

    ಫೋಟೋಸ್ ಆ್ಯಪ್‌ನಲ್ಲಿ ಒಂದು ಫೋಟೋ ತೆರೆದಿದೆ. ಸ್ಕ್ರೀನ್‌ನ ಕೆಳಭಾಗವು, ಮೇಲಿನಿಂದ ಕೆಳಕ್ಕೆ, ದಿನಾಂಕ ಮತ್ತು ಸಮಯ, ಫೈಲ್ ಹೆಸರು, iPhone ಮಾಡಲ್‌ ಮತ್ತು ಕ್ಯಾಮರಾ ಸೆಟ್ಟಿಂಗ್ಸ್ ಮತ್ತು ಫೋಟೋ ತೆಗೆದ ಸ್ಥಳದ ನಕ್ಷೆ ಸೇರಿದಂತೆ ಫೋಟೋ ಕುರಿತು ಇತರ ಮಾಹಿತಿಗಳನ್ನು ತೋರಿಸುತ್ತದೆ.

ದಿನಾಂಕ, ಸಮಯ ಅಥವಾ ಸ್ಥಳವನ್ನು ಬದಲಾಯಿಸಿ

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಫೋಟೋ ಅಥವಾ ವೀಡಿಯೊವನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  3. ದಿನಾಂಕ ಮತ್ತು ಸಮಯವನ್ನು ಸರಿಹೊಂದಿಸಿ ಅಥವಾ ಸ್ಥಳವನ್ನು ಸರಿಹೊಂದಿಸಿ ಎಂಬುದರ ಮೇಲೆ ಟ್ಯಾಪ್ ಮಾಡಿ.

ಫೋಟೋಗಳ ಬ್ಯಾಚ್‌ನ ದಿನಾಂಕ, ಸಮಯ ಅಥವಾ ಸ್ಥಳವನ್ನು ಬದಲಾಯಿಸಲು, ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಬದಲಾಯಿಸಲು ಬಯಸುವ ಥಂಬ್‌ನೇಲ್‌ಗಳನ್ನು ಟ್ಯಾಪ್ ಮಾಡಿ, ನಂತರ ಮೇಲಿನ ಹಂತಗಳನ್ನು ಅನುಸರಿಸಿ.

ಫೋಟೋ ಅಥವಾ ವೀಡಿಯೊವನ್ನು ಅದರ ಮೂಲ ದಿನಾಂಕ, ಸಮಯ, ಅಥವಾ ಸ್ಥಳಕ್ಕೆ ರಿವರ್ಟ್ ಮಾಡಲು, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ದಿನಾಂಕ ಮತ್ತು ಸಮಯವನ್ನು ಸರಿಹೊಂದಿಸಿ ಅಥವಾ ಸ್ಥಳವನ್ನು ಸರಿಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ‘ರಿವರ್ಟ್ ಮಾಡಿ’ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.