ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸುರಕ್ಷತೆ ಪರಿಶೀಲನೆಯ ಮೂಲಕ ಮಾಹಿತಿ ಹಂಚಿಕೆಯನ್ನು ನಿರ್ವಹಿಸಿ

ಜನರು, ಆ್ಯಪ್‌ಗಳು ಮತ್ತು ಸಾಧನಗಳೊಂದಿಗೆ ನೀವು ಹಂಚಿಕೊಳ್ಳುವ ಮಾಹಿತಿಯನ್ನು ಆಗಿಂದಾಗ್ಗೆ ಪರಿಶೀಲಿಸಲು ಮತ್ತು ಅಪ್‌ಡೇಟ್ ಮಾಡಲು ಸುರಕ್ಷತಾ ಪರಿಶೀಲನೆಯನ್ನು ಬಳಸಿ. ಸುರಕ್ಷತೆ ಪರಿಶೀಲನೆಯಿಂದ, ನೀವು ಹುಡುಕಿ ಆ್ಯಪ್‌ನಲ್ಲಿ ಇತತರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬಹುದು, ಫೋಟೋಗಳು, ಟಿಪ್ಪಣಿಗಳು ಮತ್ತು ಕ್ಯಾಲೆಂಡರ್ ರೀತಿಯ ಹಂಚಿಕೊಂಡ ಕಂಟೆಂಟ್‌ಗೆ ಇತರರ ಆ್ಯಕ್ಸೆಸ್ ಅನ್ನು ತೆಗೆದುಹಾಕಬಹುದು, ಆ್ಯಪ್‌ಗಳಿಗೆ ಸಿಸ್ಟಂ ಗೌಪ್ಯತೆ ಅನುಮತಿಗಳನ್ನು ರೀಸೆಟ್ ಮಾಡಬಹುದು, ಸಂದೇಶ ಆ್ಯಪ್ ಮತ್ತು FaceTime ಅನ್ನು ನಿಮ್ಮ ಬಳಿಯಿರುವ ಸಾಧನಕ್ಕೆ ನಿರ್ಬಂಧಿಸಬಹುದು ಹಾಗೂ ಇನ್ನೂ ಹೆಚ್ಚಿನದನ್ನು ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಗೌಪ್ಯತೆ ಮತ್ತು ಭದ್ರತೆ > ಸುರಕ್ಷತಾ ಪರಿಶೀಲನೆ ಎಂಬಲ್ಲಿಗೆ ಹೋಗಿ.

  2. ಹಂಚಿಕೆ ಮತ್ತು ಆ್ಯಕ್ಸೆಸ್ ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ, ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಸುರಕ್ಷತಾ ಪರಿಶೀಲನೆಯಿಂದ ಪರಿಶೀಲಿಸಲಾಗದ ಅಥವಾ ಬದಲಾಯಿಸಲಾಗದ ಮಾಹಿತಿಯನ್ನು ಸಹ ನೀವು ಹಂಚಿಕೊಳ್ಳುತ್ತಿರಬಹುದು. ಉದಾಹರಣೆಗೆ, ಖಾತೆಗಳು ಮತ್ತು ಪಾಸ್‌ವರ್ಡ್‌ಗಳು, ಸಾಮಾಜಿಕ ಮಾಧ್ಯಮದ ಹಂಚಿಕೆ ಮತ್ತು ಬೇರೆ ಸಾಧನದಿಂದ ಹಂಚಿಕೊಳ್ಳಲಾದ ಮಾಹಿತಿ. ನೀವು ಹಂಚಿಕೊಳ್ಳುವ ಮಾಹಿತಿಯನ್ನು ಕಡಿಮೆ ಮಾಡುವ ಕುರಿತು ಇನ್ನಷ್ಟು ತಿಳಿಯಲು, ಬಳಕೆದಾರರ ವೈಯಕ್ತಿಕ ಸುರಕ್ಷತೆಯ ಮಾರ್ಗದರ್ಶಿಯಲ್ಲಿನ ಸುರಕ್ಷತೆ ಪರಿಶೀಲನೆಯನ್ನು ಬಳಸುವಾಗ ಹೆಚ್ಚುವರಿ ಪರಿಗಣನೆಗಳು ಎಂಬುದನ್ನು ನೋಡಿ.

ಪ್ರಮುಖ ಸೂಚನೆ: ತುರ್ತು ಪರಿಸ್ಥಿತಿಯಲ್ಲಿ, ನಿಮ್ಮ ಸಾಧನ ಮತ್ತು ವೈಯಕ್ತಿಕ ಮಾಹಿತಿಯ ಆ್ಯಕ್ಸೆಸ್ ಅನ್ನು ತ್ವರಿತವಾಗಿ ರೀಸೆಟ್ ಮಾಡಲು ನೀವು ಸುರಕ್ಷತಾ ಪರಿಶೀಲನೆಯನ್ನು ಸಹ ಬಳಸಬಹುದು. ಸೆಟ್ಟಿಂಗ್ಸ್ ಆ್ಯಪ್‌ > ಗೌಪ್ಯತೆ ಮತ್ತು ಭದ್ರತೆ > ಸುರಕ್ಷತೆ ಪರಿಶೀಲನೆ ಎಂಬಲ್ಲಿಗೆ ಹೋಗಿ, ತುರ್ತು ರೀಸೆಟ್ ಎಂಬುದನ್ನು ಟ್ಯಾಪ್ ಮಾಡಿ, ತುರ್ತು ರೀಸೆಟ್ ಅನ್ನು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಸುರಕ್ಷತಾ ಪರಿಶೀಲನೆಯ ಕುರಿತು ಇನ್ನಷ್ಟು ತಿಳಿಯಲು, ಬಳಕೆದಾರರ ವೈಯಕ್ತಿಯ ಸುರಕ್ಷತೆಯ ಮಾರ್ಗದರ್ಶಿಯಲ್ಲಿನ iPhoneನಲ್ಲಿನ ಸುರಕ್ಷತಾ ಪರಿಶೀಲನೆಯು ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸುತ್ತದೆ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.