ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನ iTunes Storeನಲ್ಲಿ ರಿಂಗ್‌ಟೋನ್‌ಗಳು, ಪಠ್ಯ ಟೋನ್‌ಗಳು ಮತ್ತು ಅಲರ್ಟ್ ಟೋನ್‌ಗಳನ್ನು ಪಡೆಯಿರಿ

ನೀವು iTunes Store ಆ್ಯಪ್‌ನಲ್ಲಿ ಗಡಿಯಾರದ ಅಲಾರಂಗಳು ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ರಿಂಗ್‌ಟೋನ್‌ಗಳು, ಪಠ್ಯ ಟೋನ್‌ಗಳು ಮತ್ತು ಇತರ ಅಲರ್ಟ್ ಟೋನ್‌ಗಳನ್ನು ಖರೀದಿಸಬಹುದು.

ಹೊಸ ಟೋನ್‌ಗಳನ್ನು ಖರೀದಿಸಿ

  1. ನಿಮ್ಮ iPhoneನಲ್ಲಿನ iTunes Store ಆ್ಯಪ್‌ಗೆ ಹೋಗಿ.

  2. ಇನ್ನಷ್ಟು ಎಂಬುದನ್ನು ಟ್ಯಾಪ್ ಮಾಡಿ, ನಂತರ ಟೋನ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನಿರ್ದಿಷ್ಟ ಹಾಡು ಅಥವಾ ಕಲಾವಿದರನ್ನು ಹುಡುಕಲು ವರ್ಗದ ಪ್ರಕಾರ ಬ್ರೌಸ್ ಮಾಡಿ ಅಥವಾ ಹುಡುಕಿ ಎಂಬುದನ್ನು ಟ್ಯಾಪ್ ಮಾಡಿ.

  4. ಟೋನ್ ಒಂದನ್ನು ಟ್ಯಾಪ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ನೋಡಬಹುದು ಅಥವಾ ಅಥವಾ ಪ್ರಿವ್ಯೂ ಪ್ಲೇ ಮಾಡಬಹುದು.

  5. ಒಂದು ಟೋನ್ ಅನ್ನು ಖರೀದಿಸಲು, ಬೆಲೆಯನ್ನು ಟ್ಯಾಪ್ ಮಾಡಿ.

ನಿಮ್ಮ Apple ಖಾತೆ ಮೂಲಕ ಖರೀದಿಸಿದ ಟೋನ್‌ಗಳನ್ನು ಮತ್ತೆ ಡೌನ್‌ಲೋಡ್ ಮಾಡಿ

ನೀವು ಬೇರೆ ಸಾಧನದಲ್ಲಿ ಟೋನ್‌ಗಳನ್ನು ಖರೀದಿಸಿದ್ದರೆ, ನೀವು ಅವುಗಳನ್ನು ಮತ್ತೆ ಡೌನ್‌ಲೋಡ್ ಮಾಡಬಹುದು.

  1. ಸೆಟ್ಟಿಂಗ್ಸ್  > ಸೌಂಡ್ಸ್ & ಹ್ಯಾಪ್ಟಿಕ್ಸ್ (ಬೆಂಬಲಿತ ಮಾಡಲ್‌ಗಳಲ್ಲಿ) ಅಥವಾ ಸೌಂಡ್‌ಗಳು (ಇತರ iPhone ಮಾಡಲ್‌ಗಳಲ್ಲಿ) ಎಂಬಲ್ಲಿಗೆ ಹೋಗಿ .

  2. ರಿಂಗ್‌ಟೋನ್ ಹಾಗೂ ಅಲರ್ಟ್‌ಗಳು ಎಂಬುದರ ಕೆಳಗೆ, ಯಾವುದೇ ಐಟಮ್ ಅನ್ನು ಟ್ಯಾಪ್ ಮಾಡಿ.

  3. ಖರೀದಿಸಿದ ಎಲ್ಲಾ ಟೋನ್‌ಗಳನ್ನು ಡೌನ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಖರೀದಿಸಿದ ಎಲ್ಲಾ ಟೋನ್‌ಗಳನ್ನು ನೀವು ಈಗಾಗಲೇ ಡೌನ್‌ಲೋಡ್ ಮಾಡಿದ್ದರೆ ಅಥವಾ ನೀವು ಯಾವುದೇ ಟೋನ್‌ಗಳನ್ನು ಖರೀದಿ ಮಾಡಿರದೇ ಇದ್ದರೆ, ಈ ಆಯ್ಕೆಯನ್ನು ನೀವು ನೋಡದಿರಬಹುದು.

ನೀವು Appleನಿಂದ ಚಲನಚಿತ್ರಗಳು, ಟಿವಿ ಶೋಗಳು, ಸಂಗೀತ, ಸಂಗೀತದ ವೀಡಿಯೊಗಳು, ಇಬುಕ್‌ಗಳು, ಆಡಿಯೊಬುಕ್‌ಗಳು ಅಥವಾ ರಿಂಗ್‌ಟೋನ್‌ಗಳಿಗೆ ಆ್ಯಕ್ಸೆಸ್ ಅನ್ನು ಖರೀದಿಸಿದಾಗ, ನೀವು ಈ ಐಟಮ್‌ಗಳನ್ನು ಹೊಂದಾಣಿಕೆಯಾಗುವ iPhone, iPad, Mac ಅಥವಾ PCಗೆ ಶಾಶ್ವತವಾಗಿ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಸಹ ಹೊಂದಿರುತ್ತೀರಿ. ನಿಮ್ಮ ಡೌನ್‌ಲೋಡ್ ಮಾಡಿದ ಕಂಟೆಂಟ್ ಅನ್ನು ಹಿಂಪಡೆಯಲು Appleಗೆ ಸಾಧ್ಯವಿಲ್ಲ ಮತ್ತು ಇಂಟರ್ನೆಟ್ ಕನೆಕ್ಷನ್ ಇಲ್ಲದೆ ನೀವು ಯಾವುದೇ ಸಮಯದಲ್ಲಿ ನಿಮ್ಮ ಡೌನ್‌ಲೋಡ್ ಮಾಡಿದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.