ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ನಕ್ಷೆ ಆ್ಯಪ್‌ನಲ್ಲಿ ನಿಮ್ಮ ಮಾರ್ಗಕ್ಕೆ ನಿಲುಗಡೆಗಳನ್ನು ಸೇರಿಸಿ ಅಥವಾ ಬದಲಾಯಿಸುವುದು

ಡ್ರೈವಿಂಗ್ ಅಥವಾ ಸೈಕ್ಲಿಂಗ್ ನಿರ್ದೇಶನಗಳನ್ನು ಫಾಲೋ ಮಾಡುವಾಗ, ನಿಮ್ಮ ಮಾರ್ಗದಲ್ಲಿ ನಿಲ್ಲಿಸುವುದಕ್ಕಾಗಿ ನೀವು ಸ್ಥಳಗಳನ್ನು ಸೇರಿಸಬಹುದು.

ಗಮನಿಸಿ: ಆಯ್ದ ದೇಶಗಳು ಮತ್ತು ಪ್ರದೇಶಗಳಲ್ಲಿ ಅನೇಕ ನಿಲುಗಡೆಗಳಿಗಾಗಿ ಮಾರ್ಗ ನಿರ್ದೇಶನಗಳು ಲಭ್ಯವಿವೆ.

ಆರಂಭದ ಬಿಂದು ಅಥವಾ ತಲುಪಬೇಕಾದ ಸ್ಥಳವನ್ನು ಬದಲಾಯಿಸಿ

ನನ್ನ ಸ್ಥಳ ಮತ್ತು ತಲುಪಬೇಕಾದ ಸ್ಥಳದ ನಡುವಿನ ಹಲವಾರು ಮಾರ್ಗಗಳು ಮತ್ತು ಡ್ರೈವಿಂಗ್ ನಿರ್ದೇಶನಗಳನ್ನು ಹೊಂದಿರುವ ನಕ್ಷೆ.
  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಮಾರ್ಗ ನಿರ್ದೇಶನಗಳನ್ನು ಪಡೆಯಿರಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಆರಂಭದ ಬಿಂದು ಮತ್ತು ಗಮ್ಯಸ್ಥಾನವನ್ನು ಸ್ವಿಚ್ ಮಾಡಿ: ಆರಂಭಿಕ ಸ್ಥಳಕ್ಕಾಗಿ ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ತಲುಪಬೇಕಾದ ಸ್ಥಳದ ಕೆಳಕ್ಕೆ ಡ್ರ್ಯಾಗ್ ಮಾಡಿ.

    • ಬೇರೊಂದು ಆರಂಭದ ಸ್ಥಳ ಅಥವಾ ತಲುಪಬೇಕಾದ ಸ್ಥಳವನ್ನು ಆರಿಸಿ: ಆರಂಭಿಕ ಸ್ಥಳ ಅಥವಾ ತಲುಪಬೇಕಾದ ಸ್ಥಳವನ್ನು ಟ್ಯಾಪ್ ಮಾಡಿ, ನಂತರ ಬೇರೊಂದು ಸ್ಥಳವನ್ನು ಹುಡುಕಿ ಆಯ್ಕೆಮಾಡಲು ಹುಡುಕಾಟದ ಫೀಲ್ಡ್ ಅನ್ನು ಬಳಸಿ ಅಥವಾ ಇತ್ತೀಚಿನ ಹುಡುಕಾಟ ಫಲಿತಾಂಶವನ್ನು ಬಳಸಿ.

ಒಂದಕ್ಕಿಂತ ಹೆಚ್ಚು ನಿಲುಗಡೆಗಳಿರುವ ಡ್ರೈವಿಂಗ್ ಮಾರ್ಗವೊಂದನ್ನು ರಚಿಸುವುದು

ನಿಮ್ಮ ಮಾರ್ಗದುದ್ದಕ್ಕೂ ನೀವು ಗರಿಷ್ಠ 14 ನಿಲುಗಡೆಗಳನ್ನು ಸೇರಿಸಬಹುದು.

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯಿರಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಲುಗಡೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ಸ್ಥಳದಲ್ಲಿ ನಿಲ್ಲಲು ಬಯಸುತ್ತೀರೋ ಅದನ್ನು ಹುಡುಕಿ.

    • ಝೂಮ್ ಇನ್ ಮಾಡಿ ಮತ್ತು ನಕ್ಷೆಯನ್ನು ಮೂವ್ ಮಾಡಿ, ಸ್ಥಳವೊಂದನ್ನು ಟ್ಯಾಪ್ ಮಾಡಿ (ಉದಾಹರಣೆಗೆ, ಒಂದು ಲ್ಯಾಂಡ್‌ಮಾರ್ಕ್ ಅಥವಾ ವ್ಯಾಪಾರ ಸ್ಥಳ), ನಂತರ ಸ್ಥಳದ ಕಾರ್ಡ್‌ನಲ್ಲಿನ ನಿಲುಗಡೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ನಿಲುಗಡೆಗಳನ್ನು ಮರುಕ್ರಮಗೊಳಿಸಲು, ನಿಲುಗಡೆಗಾಗಿ ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಪಟ್ಟಿಯಲ್ಲಿನ ಹೊಸ ಸ್ಥಾನಕ್ಕೆ ಡ್ರ್ಯಾಗ್ ಮಾಡಿ.

ನೀವು ಇನ್ನೂ ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿರದಿದ್ದರೆ, ನಿಮ್ಮ ಆಯ್ಕೆಮಾಡಿದ ನಿಲುಗಡೆಯು ನಿಮ್ಮ ಮಾರ್ಗ ನಿರ್ದೇಶನಗಳಲ್ಲಿ ತಲುಪಬೇಕಾದ ಕೊನೆಯ ಸ್ಥಳವಾಗಿ ಕಾಣಿಸಿಕೊಳ್ಳುತ್ತದೆ.

ಡ್ರೈವಿಂಗ್ ಅಥವಾ ಸೈಕ್ಲಿಂಗ್ ನಿರ್ದೇಶನಗಳನ್ನು ಅನುಸರಿಸುವಾಗ ನಿಲುಗಡೆಯನ್ನು ಸೇರಿಸುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಡ್ರೈವಿಂಗ್ ಅಥವಾ ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯಿರಿ, ನಂತರ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮಾರ್ಗದ ಕಾರ್ಡ್ ಅನ್ನು ಟ್ಯಾಪ್ ಮಾಡಿ.

  3. ನಿಲುಗಡೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ವರ್ಗವೊಂದನ್ನು ಟ್ಯಾಪ್ ಮಾಡಿ (ಅಥವಾ ಡ್ರೈವ್ ಮಾಡುತ್ತಿದ್ದರೆ, ನೀವು ಯಾವ ಸ್ಥಳದಲ್ಲಿ ನಿಲ್ಲಲು ಬಯಸುತ್ತೀರೋ ಅದನ್ನು ಹುಡುಕಿ).

  4. ನಿಲ್ಲಬೇಕಿರುವ ಸ್ಥಳವನ್ನು ಆಯ್ಕೆಮಾಡಿ, ನಂತರ ಸೇರಿಸಿ ಅಥವಾ ನಿಲುಗಡೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ ಮಾರ್ಗವನ್ನು ಅಪ್‌ಡೇಟ್ ಮಾಡಲಾಗಿದೆ ಮತ್ತು ಆಯ್ಕೆಮಾಡಿಕೊಂಡ ತಲುಪಬೇಕಾದ ಸ್ಥಳವು ಮುಂದಿನ ನಿಲುಗಡೆಯಾಗಿದೆ.

    ನೀವು ಸೈಕ್ಲಿಂಗ್ ಮಾಡುತ್ತಿದ್ದರೆ ಮತ್ತು ಸುತ್ತುಹಾದಿ ಬಳಸಬಾರದೆಂದು ನಿರ್ಧರಿಸಿದರೆ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಮಾರ್ಗವನ್ನು ಪುನರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ಪ್ರಾರಂಭಿಸಿ ಎಂಬುದನ್ನು ಇನ್ನೂ ಟ್ಯಾಪ್ ಮಾಡಿರದಿದ್ದರೆ, ನಿಮ್ಮ ಆಯ್ಕೆಮಾಡಿದ ನಿಲುಗಡೆಯು ನಿಮ್ಮ ಮಾರ್ಗ ನಿರ್ದೇಶನಗಳಲ್ಲಿ ತಲುಪಬೇಕಾದ ಕೊನೆಯ ಸ್ಥಳವಾಗಿ ಕಾಣಿಸಿಕೊಳ್ಳುತ್ತದೆ. ನಿಲುಗಡೆಗಾಗಿ ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ನೀವು ತಲುಪಬೇಕಾದ ಸ್ಥಳದ ಮುಂದೆ ಡ್ರ್ಯಾಗ್ ಮಾಡಿ.

ನಿಮ್ಮ ಡ್ರೈವಿಂಗ್ ನಿರ್ದೇಶನಗಳಿಂದ ನಿಲುಗಡೆಯೊಂದನ್ನು ಡಿಲೀಟ್ ಮಾಡುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಒಂದಕ್ಕಿಂತ ಹೆಚ್ಚು ನಿಲುಗಡೆಗಳಿರುವ ಡ್ರೈವಿಂಗ್ ಮಾರ್ಗವೊಂದನ್ನು ರಚಿಸಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನೀವು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡುವ ಮೊದಲು: ನೀವು ಡಿಲೀಟ್ ಮಾಡಲು ಬಯಸುವ ಯಾವುದೇ ನಿಲುಗಡೆಗಳ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ನೀವು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿದ ನಂತರ: ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮಾರ್ಗದ ಕಾರ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನಿಲುಗಡೆಯ ಪಕ್ಕದಲ್ಲಿರುವ ಡಿಲೀಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

ನೀವು ತಲುಪುವ ಮುನ್ನವೇ ಮಾರ್ಗ ನಿರ್ದೇಶನಗಳನ್ನು ಕೊನೆಗೊಳಿಸುವುದು

Siri: ಈ ರೀತಿ ಏನಾದರೂ ಹೇಳಿ: “Stop navigating.” Siriಯನ್ನು ಬಳಸುವುದು ಹೇಗೆ ಎಂದು ತಿಳಿಯಿರಿ.

ಅಥವಾ Siriಯನ್ನು ಬಳಸದೆಯೇ:

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಕಾರ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಮಾರ್ಗವನ್ನು ಕೊನೆಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಆಯ್ದ ದೇಶಗಳು ಮತ್ತು ಪ್ರದೇಶಗಳಲ್ಲಿ ಅನೇಕ ನಿಲುಗಡೆಗಳಿಗಾಗಿ ಮಾರ್ಗ ನಿರ್ದೇಶನಗಳು ಲಭ್ಯವಿವೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.