ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿರುವ ಆ್ಯಪ್ ಲೈಬ್ರರಿಯಲ್ಲಿ ನಿಮ್ಮ ಆ್ಯಪ್‌ಗಳನ್ನು ಹುಡುಕುವುದು ಮತ್ತು ಬಳಸುವುದು

ಸಾಮಾಜಿಕ, ಮನರಂಜನೆ ಮತ್ತು ಉತ್ಪಾದಕತೆ ಹಾಗೂ ಹಣಕಾಸಿನಂತಹ ವರ್ಗಗಳಾಗಿ ವ್ಯವಸ್ಥಿತಗೊಳಿಸಲಾಗಿರುವ ನಿಮ್ಮ ಆ್ಯಪ್‌ಗಳನ್ನು ಆ್ಯಪ್ ಲೈಬ್ರರಿ ತೋರಿಸುತ್ತದೆ. ನೀವು ಹೆಚ್ಚು ಬಳಸುವ ಆ್ಯಪ್‌ಗಳು ಸ್ಕ್ರೀನ್‌ನ ಮೇಲ್ಭಾಗದಲ್ಲಿರುತ್ತವೆ ಮತ್ತು ಅವುಗಳ ವರ್ಗಗಳ ಮೇಲ್ಭಾಗದಲ್ಲಿರುತ್ತವೆ, ಇದರಿಂದ ನೀವು ಅವುಗಳನ್ನು ಸುಲಭವಾಗಿ ಹುಡುಕಬಹುದು ಮತ್ತು ತೆರೆಯಬಹುದು.

ವರ್ಗದ ಪ್ರಕಾರ ವ್ಯವಸ್ಥಿತಗೊಳಿಸಲಾದ ಆ್ಯಪ್‌ಗಳನ್ನು ತೋರಿಸುವ (ಪರಿಕರ, ಸಾಮಾಜಿಕ, ಮನರಂಜನೆ ಇತ್ಯಾದಿ) iPhoneನಲ್ಲಿನ ಆ್ಯಪ್ ಲೈಬ್ರರಿ.

ಗಮನಿಸಿ: ನಿಮ್ಮ ಆ್ಯಪ್‌ಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿ ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್‌ಗಳನ್ನು ಬುದ್ಧಿವಂತಿಕೆಯಿಂದ ವರ್ಗಗಳಲ್ಲಿ ವ್ಯವಸ್ಥಿತಗೊಳಿಸಲಾಗುತ್ತದೆ. ನೀವು ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್‌ಗೆ ಸೇರಿಸಬಹುದು. ಆದರೆ ಅವುಗಳನ್ನು ಆ್ಯಪ್ ಲೈಬ್ರರಿಯಲ್ಲಿರುವ ಮತ್ತೊಂದು ವರ್ಗಕ್ಕೆ ಮೂವ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಆ್ಯಪ್ ಲೈಬ್ರರಿಯಲ್ಲಿನ ಆ್ಯಪ್ ಒಂದನ್ನು ಹುಡುಕಿ ಮತ್ತು ತೆರೆಯಿರಿ

  1. ಹೋಮ್ ಸ್ಕ್ರೀನ್‌ಗೆ ಹೋಗಿ, ನಂತರ ಆ್ಯಪ್ ಲೈಬ್ರರಿಗೆ ಹೋಗಲು ನಿಮ್ಮ ಎಲ್ಲಾ ಹೋಮ್ ಸ್ಕ್ರೀನ್ ಪುಟಗಳನ್ನು ಎಡಕ್ಕೆ ಸ್ವೈಪ್ ಮಾಡಿ.

  2. ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಹುಡುಕುತ್ತಿರುವ ಆ್ಯಪ್‌ನ ಹೆಸರನ್ನು ನಮೂದಿಸಿ. ಅಥವಾ ವರ್ಣಾನುಕ್ರಮದ ಪಟ್ಟಿಯನ್ನು ಬ್ರೌಸ್ ಮಾಡಲು ಮೇಲಕ್ಕೆ ಮತ್ತು ಕೆಳಕ್ಕೆ ಸ್ಕ್ರೋಲ್ ಮಾಡಿ.

  3. ಆ್ಯಪ್ ಒಂದನ್ನು ತೆರೆಯಲು, ಅದನ್ನು ಟ್ಯಾಪ್ ಮಾಡಿ.

ಒಂದು ವರ್ಗವು ಕೆಲವು ಚಿಕ್ಕ ಆ್ಯಪ್ ಐಕಾನ್‌ಗಳನ್ನು ಹೊಂದಿದ್ದರೆ, ವರ್ಗವನ್ನು ವಿಸ್ತರಿಸಲು ಮತ್ತು ಅದರಲ್ಲಿರುವ ಎಲ್ಲಾ ಆ್ಯಪ್‌ಗಳನ್ನು ನೋಡಲು ನೀವು ಅವುಗಳನ್ನು ಟ್ಯಾಪ್ ಮಾಡಬಹುದು.

ಹೋಮ್ ಸ್ಕ್ರೀನ್ ಪುಟಗಳನ್ನು ಮರೆಮಾಡುವುದು ಮತ್ತು ತೋರಿಸುವುದು

ಆ್ಯಪ್ ಲೈಬ್ರರಿಯಲ್ಲಿ ನಿಮ್ಮ ಎಲ್ಲಾ ಆ್ಯಪ್‌ಗಳು ನಿಮಗೆ ಸಿಗುವ ಕಾರಣ, ಆ್ಯಪ್‌ಗಳಿಗಾಗಿ ಹೆಚ್ಚಿನ ಹೋಮ್ ಸ್ಕ್ರೀನ್ ಪುಟಗಳು ನಿಮಗೆ ಬೇಕಾಗದಿರಬಹುದು. ನೀವು ಕೆಲವು ಹೋಮ್ ಸ್ಕ್ರೀನ್ ಪುಟಗಳನ್ನು ಮರೆಮಾಡಬಹುದು, ಇದರಿಂದ ಆ್ಯಪ್ ಲೈಬ್ರರಿಯನ್ನು ನಿಮ್ಮ ಮೊದಲನೇ ಹೋಮ್ ಸ್ಕ್ರೀನ್ ಪುಟದ ಹತ್ತಿರಕ್ಕೆ ತರಲಾಗುತ್ತದೆ. (ನೀವು ಮರೆಮಾಡಲಾದ ಪುಟಗಳನ್ನು ಪುನಃ ನೋಡಲು ಬಯಸಿದರೆ, ಅವುಗಳನ್ನು ತೋರಿಸುವಂತೆ ನೀವು ಮಾಡಬಹುದು.)

  1. ಹೋಮ್ ಸ್ಕ್ರೀನ್‌ಗೆ ಹೋಗಿ, ನಂತರ ಆ್ಯಪ್ ಐಕಾನ್‌ಗಳು ಜಿಗಲ್ ಮಾಡಲು ಪ್ರಾರಂಭವಾಗುವವರೆಗೆ ಹೋಮ್ ಸ್ಕ್ರೀನ್ ವಾಲ್‌ಪೇಪರ್ ಅನ್ನು ಒತ್ತಿ ಹಿಡಿದುಕೊಳ್ಳಿ.

  2. ಸ್ಕ್ರೀನ್‌ನ ಕೆಳಗಿರುವ ಡಾಟ್‌ಗಳನ್ನು ಟ್ಯಾಪ್ ಮಾಡಿ.

    ನಿಮ್ಮ ಹೋಮ್ ಸ್ಕ್ರೀನ್ ಪುಟಗಳ ಥಂಬ್‌ನೇಲ್ ಚಿತ್ರಗಳು ತಮ್ಮ ಕೆಳಗೆ ಚೆಕ್‌ಮಾರ್ಕ್‌ಗಳೊಂದಿಗೆ ಕಾಣಿಸಿಕೊಳ್ಳುತ್ತವೆ.

  3. ಪುಟಗಳನ್ನು ಮರೆಮಾಡಲು, ಚೆಕ್‌ಮಾರ್ಕ್‌ಗಳನ್ನು ತೆಗೆದುಹಾಕಲು ಟ್ಯಾಪ್ ಮಾಡಿ.

    ಮರೆಮಾಡಲಾಗಿರುವ ಪುಟಗಳನ್ನು ತೋರಿಸಲು, ಚೆಕ್‌ಮಾರ್ಕ್‌ಗಳನ್ನು ಸೇರಿಸಲು ಟ್ಯಾಪ್ ಮಾಡಿ.

  4. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ (Face ID ಹೊಂದಿರುವ iPhoneನಲ್ಲಿ) ಅಥವಾ ಹೋಮ್ ಬಟನ್ ಒತ್ತಿರಿ (ಇತರ iPhone ಮಾಡಲ್‌ಗಳಲ್ಲಿ).

ಹೆಚ್ಚುವರಿ ಹೋಮ್ ಸ್ಕ್ರೀನ್ ಪುಟಗಳನ್ನು ಮರೆಮಾಡಿದಾಗ, ನೀವು ಕೇವಲ ಒಂದು ಅಥವಾ ಎರಡು ಸ್ವೈಪ್‌ಗಳ ಮೂಲಕ ಹೋಮ್ ಸ್ಕ್ರೀನ್‌ನ ಮೊದಲ ಪುಟದಿಂದ ಆ್ಯಪ್ ಲೈಬ್ರರಿಗೆ (ಮತ್ತು ಹಿಂದಕ್ಕೆ) ಹೋಗಬಹುದು.

ಗಮನಿಸಿ: ಹೋಮ್ ಸ್ಕ್ರೀನ್ ಪುಟಗಳನ್ನು ಮರೆಮಾಡಿರುವಾಗ, ನೀವು App Storeನಿಂದ ಡೌನ್ಲೋಡ್ ಮಾಡುವ ಹೊಸ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್ ಬದಲಿಗೆ ಆ್ಯಪ್ ಲೈಬ್ರರಿಗೆ ಸೇರಿಸಬಹುದು.

ಹೋಮ್ ಸ್ಕ್ರೀನ್ ಪುಟಗಳನ್ನು ಮರುಕ್ರಮಗೊಳಿಸುವುದು

ನೀವು ಒಂದಕ್ಕಿಂತ ಹೆಚ್ಚು ಹೋಮ್ ಸ್ಕ್ರೀನ್ ಪುಟಗಳನ್ನು ಹೊಂದಿದ್ದರೆ, ನೀವು ಅವುಗಳ ಕ್ರಮವನ್ನು ಬದಲಾಯಿಸುತ್ತೀರಿ. ಉದಾಹರಣೆಗೆ, ನೀವು ನಿಮ್ಮ ಮೆಚ್ಚಿನ ಆ್ಯಪ್‌ಗಳನ್ನು ಒಂದು ಹೋಮ್ ಸ್ಕ್ರೀನ್ ಪುಟದಲ್ಲಿ ಒಟ್ಟುಗೂಡಿಸಿ, ನಂತರ ಅದನ್ನು ನಿಮ್ಮ ಮೊದಲ ಹೋಮ್ ಸ್ಕ್ರೀನ್ ಪುಟವನ್ನಾಗಿ ಮಾಡಬಹುದು.

  1. ಹೋಮ್ ಸ್ಕ್ರೀನ್‌ಗೆ ಹೋಗಿ, ನಂತರ ಆ್ಯಪ್ ಐಕಾನ್‌ಗಳು ಜಿಗಲ್ ಮಾಡಲು ಪ್ರಾರಂಭವಾಗುವವರೆಗೆ ಹೋಮ್ ಸ್ಕ್ರೀನ್ ವಾಲ್‌ಪೇಪರ್ ಅನ್ನು ಒತ್ತಿ ಹಿಡಿದುಕೊಳ್ಳಿ.

  2. ಸ್ಕ್ರೀನ್‌ನ ಕೆಳಗಿರುವ ಡಾಟ್‌ಗಳನ್ನು ಟ್ಯಾಪ್ ಮಾಡಿ.

    ನಿಮ್ಮ ಹೋಮ್ ಸ್ಕ್ರೀನ್ ಪುಟಗಳ ಥಂಬ್‌ನೇಲ್ ಚಿತ್ರಗಳು ತಮ್ಮ ಕೆಳಗೆ ಚೆಕ್‌ಮಾರ್ಕ್‌ಗಳೊಂದಿಗೆ ಕಾಣಿಸಿಕೊಳ್ಳುತ್ತವೆ.

  3. ಪ್ರತಿಯೊಂದು ಹೋಮ್ ಸ್ಕ್ರೀನ್ ಪುಟವನ್ನು ಮೂವ್ ಮಾಡಲು, ಅದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಹೊಸ ಸ್ಥಾನಕ್ಕೆ ಡ್ರ್ಯಾಗ್ ಮಾಡಿ.

  4. ಎರಡು ಬಾರಿ ‘ಮುಗಿದಿದೆ’ ಎಂಬುದನ್ನು ಟ್ಯಾಪ್ ಮಾಡಿ (Face ID ಹೊಂದಿರುವ iPhoneನಲ್ಲಿ) ಅಥವಾ ಹೋಮ್ ಬಟನ್ ಅನ್ನು ಎರಡು ಬಾರಿ ಒತ್ತಿ (ಇತರ iPhone ಮಾಡಲ್‌ಗಳಲ್ಲಿ).

ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಸ್ಥಳವನ್ನು ಬದಲಾಯಿಸಿ

ನೀವು App Storeನಿಂದ ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದಾಗ, ನೀವು ಅವುಗಳನ್ನು ಹೋಮ್ ಸ್ಕ್ರೀನ್ ಮತ್ತು ಆ್ಯಪ್ ಲೈಬ್ರರಿಗೆ ಅಥವಾ ಕೇವಲ ಆ್ಯಪ್ ಲೈಬ್ರರಿಗೆ ಸೇರಿಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಹೋಮ್ ಸ್ಕ್ರೀನ್ ಮತ್ತು ಆ್ಯಪ್ ಲೈಬ್ರರಿ ಎಂಬಲ್ಲಿಗೆ ಹೋಗಿ.

  2. ಹೋಮ್ ಸ್ಕ್ರೀನ್ ಅಥವಾ ಆ್ಯಪ್ ಲೈಬ್ರರಿಗೆ ಮಾತ್ರ ಸೇರಿಸಿ ಎಂಬುದನ್ನು ಆಯ್ಕೆ ಮಾಡಿ.

ಗಮನಿಸಿ: ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್‌ಗಳ ಮೇಲೆ ಕಾಣಿಸಿಕೊಳ್ಳುವಂತೆ ನೋಟಿಫಿಕೇಷನ್ ಬ್ಯಾಡ್ಜ್‌ಗಳಿಗೆ ಅನುಮತಿಸಲು, ಆ್ಯಪ್ ಲೈಬ್ರರಿಯಲ್ಲಿ ತೋರಿಸಿ ಎಂಬುದನ್ನು ಆನ್ ಮಾಡಿ.

ಆ್ಯಪ್ ಒಂದನ್ನು ಆ್ಯಪ್ ಲೈಬ್ರರಿಯಿಂದ ಹೋಮ್ ಸ್ಕ್ರೀನ್‌ಗೆ ಮೂವ್ ಮಾಡುವುದು

ನೀವು ಆ್ಯಪ್ ಒಂದನ್ನು ಹೋಮ್ ಸ್ಕ್ರೀನ್‌ನಿಂದ ಆ್ಯಪ್ ಲೈಬ್ರರಿಗೆ ಮೂವ್ ಮಾಡಿದ್ದರೆ, ನೀವು ಅದನ್ನು ಸುಲಭವಾಗಿ ಮರಳಿ ಹೋಮ್ ಸ್ಕ್ರೀನ್‌ಗೆ ಮೂವ್ ಮಾಡಬಹುದು.

  1. ಆ್ಯಪ್ ಲೈಬ್ರರಿಗೆ ಹೋಗಿ .

  2. ಆ್ಯಪ್ ಐಕಾನ್‌ಗಳು ಜಿಗಲ್ ಮಾಡಲು ಪ್ರಾರಂಭವಾಗುವವರೆಗೆ ಮತ್ತು ಆ್ಯಪ್ ಹೋಮ್ ಸ್ಕ್ರೀನ್‌ಗೆ ಮೂವ್ ಆಗುವವರೆಗೆ, ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನಿಮ್ಮ ಬೆರಳನ್ನು ಮೇಲೆತ್ತಿರಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.