ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ನಿಮ್ಮ ವಾಯ್ಸ್‌ಮೇಲ್ ಗ್ರೀಟಿಂಗ್ ಮತ್ತು ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ

ನಿಮ್ಮ ವಾಯ್ಸ್‌ಮೇಲ್ ಗ್ರೀಟಿಂಗ್, ಪಾಸ್‌ವರ್ಡ್ ಮತ್ತು ಅಲರ್ಟ್ ಸೌಂಡ್‌ಗಳನ್ನು ನೀವು ಬದಲಾಯಿಸಬಹುದು.

  1. ನಿಮ್ಮ iPhoneನಲ್ಲಿ ಫೋನ್ ಆ್ಯಪ್‌ಗೆ ಹೋಗಿ.

  2. ನಿಮ್ಮ ವಾಯ್ಸ್‌ಮೇಲ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಲು ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ನಿಮ್ಮ ಗ್ರೀಟಿಂಗ್ ಅನ್ನು ಬದಲಾಯಿಸಿ: ವಾಯ್ಸ್‌ಮೇಲ್ ಅನ್ನು ಟ್ಯಾಪ್ ಮಾಡಿ, ಗ್ರೀಟಿಂಗ್ ಅನ್ನು ಟ್ಯಾಪ್ ಮಾಡಿ, ಕಸ್ಟಮ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ರೆಕಾರ್ಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ (ಎಲ್ಲಾ ನೆಟ್‌ವರ್ಕ್ ಪೂರೈಕೆದಾರರು ಅಥವಾ ಎಲ್ಲಾ ದೇಶಗಳು ಮತ್ತು ಪ್ರದೇಶಗಳಲ್ಲಿ ಬೆಂಬಲಿತವಾಗಿರುವುದಿಲ್ಲ).

    • ನಿಮ್ಮ ವಾಯ್ಸ್‌ಮೇಲ್ ಪಾಸ್‌ವರ್ಡ್ ಅನ್ನು ಬದಲಾಯಿಸಿ: ಸೆಟ್ಟಿಂಗ್ಸ್ ಆ್ಯಪ್  > ಆ್ಯಪ್‌ಗಳು  ಫೋನ್ ಆ್ಯಪ್ > ವಾಯ್ಸ್‌ಮೇಲ್ ಪಾಸ್‌ವರ್ಡ್ ಬದಲಾಯಿಸಿ ಎಂಬಲ್ಲಿಗೆ ಹೋಗಿ, ನಂತರ ಹೊಸ ಪಾಸ್‌ವರ್ಡ್ ಅನ್ನು ನಮೂದಿಸಿ.

      ನಿಮ್ಮ ವಾಯ್ಸ್‌ಮೇಲ್ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರೆ, ನಿಮ್ಮ ವೈರ್‌ಲೆಸ್ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ.

    • ಹೊಸ ವಾಯ್ಸ್‌ಮೇಲ್‌ಗಾಗಿ ಅಲರ್ಟ್ ಅನ್ನು ಬದಲಾಯಿಸಿ: ಸೆಟ್ಟಿಂಗ್ಸ್ ಆ್ಯಪ್‌ > ಸೌಂಡ್ಸ್ ಮತ್ತು ಹ್ಯಾಪ್ಟಿಕ್ಸ್ ಎಂಬಲ್ಲಿಗೆ ಹೋಗಿ, ನಂತರ ಹೊಸ ವಾಯ್ಸ್‌ಮೇಲ್ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನಿಮ್ಮ ಸಂಪರ್ಕದ ಫೋಟೋ ಮತ್ತು ಪೋಸ್ಟರ್ ಅನ್ನು ಬದಲಾಯಿಸಲು, ನಿಮ್ಮ ಫೋಟೋ ಮತ್ತು ಪೋಸ್ಟರ್ ಅನ್ನು ಸೇರಿಸಿ ಅಥವಾ ಎಡಿಟ್ ಮಾಡಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.