ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಬ್ಯಾಟರಿಯನ್ನು ಚಾರ್ಜ್ ಮಾಡಿ

iPhone ಆಂತರಿಕ, ರೀಚಾರ್ಜ್ ಮಾಡಬಹುದಾದ ಲೀಥಿಯಂ-ಅಯಾನ್ ಬ್ಯಾಟರಿಯನ್ನು ಹೊಂದಿದ್ದುವ, ಪ್ರಸ್ತುತ ನಿಮ್ಮ ಸಾಧನಕ್ಕೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಬ್ಯಾಟರಿ ತಂತ್ರಜ್ಞಾನಕ್ಕೆ ಹೋಲಿಸಿದರೆ, ಲೀಥಿಯಂ-ಅಯಾನ್ ಬ್ಯಾಟರಿಗಳು ಹಗುರವಾಗಿರುತ್ತವೆ, ವೇಗವಾಗಿ ಚಾರ್ಜ್ ಆಗುತ್ತವೆ, ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆಗೆ ಹೆಚ್ಚಿನ ವಿದ್ಯುತ್ ಸಾಂದ್ರತೆಯನ್ನು ಹೊಂದಿರುತ್ತವೆ.

ನಿಮ್ಮ ಬ್ಯಾಟರಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಅದರ ಹೆಚ್ಚಿನ ಲಾಭವನ್ನು ಪಡೆಯಲು, Apple ಲೀಥಿಯಂ-ಅಯಾನ್ ಬ್ಯಾಟರಿಗಳ ವೆಬ್‌ಸೈಟ್ ಅನ್ನು ನೋಡಿ.

ಬ್ಯಾಟರಿ ಚಾರ್ಜ್ ಮಾಡುವ ಬಗ್ಗೆ

ಲೈಟ್‌ನಿಂಗ್ ಬೋಲ್ಟ್ ಇರುವ ಬ್ಯಾಟರಿ ಐಕಾನ್ ಬ್ಯಾಟರಿ ಚಾರ್ಜ್ ಆಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಮೇಲಿನ ಬಲ ಮೂಲೆಯಲ್ಲಿರುವ ಬ್ಯಾಟರಿ ಐಕಾನ್ ಬ್ಯಾಟರಿ ಮಟ್ಟ ಅಥವಾ ಚಾರ್ಜಿಂಗ್ ಸ್ಥಿತಿಯನ್ನು ತೋರಿಸುತ್ತದೆ. ನೀವು iPhone ಅನ್ನು ಸಿಂಕ್ ಮಾಡುವಾಗ ಅಥವಾ ಬಳಸುವಾಗ, ಬ್ಯಾಟರಿಯನ್ನು ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

iPhoneನಲ್ಲಿ ಪವರ್ ತುಂಬಾ ಕಡಿಮೆಯಿದ್ದರೆ, ಅದು ಬಹುತೇಕ ಖಾಲಿಯಾಗಿರುವ ಬ್ಯಾಟರಿಯ ಚಿತ್ರವನ್ನು ತೋರಿಸಬಹುದು, ಆ ಮೂಲಕ ನೀವು ಅದನ್ನು ಬಳಸುವ ಮುನ್ನ 10 ನಿಮಿಷಗಳವರೆಗೆ ಚಾರ್ಜ್ ಮಾಡಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ನೀವು ಚಾರ್ಜ್ ಮಾಡಲು ಪ್ರಾರಂಭಿಸಿದಾಗ iPhoneನಲ್ಲಿ ಪವರ್ ತುಂಬಾ ಕಡಿಮೆ ಇದ್ದರೆ, ಕಡಿಮೆ ಬ್ಯಾಟರಿ ಎಂದು ಸೂಚಿಸುವ ಚಿತ್ರ ಕಾಣಿಸಿಕೊಳ್ಳುವ ಮೊದಲು 2 ನಿಮಿಷಗಳವರೆಗೆ ಡಿಸ್‌ಪ್ಲೇಯಲ್ಲಿ ಏನೂ ಕಾಣಿಸದಿರಬಹುದು. ನಿಮ್ಮ iPhone ಚಾರ್ಜ್ ಆಗದಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಬ್ಯಾಟರಿಯನ್ನು ಚಾರ್ಜ್ ಮಾಡಿ

iPhone ಅನ್ನು ಚಾರ್ಜ್ ಮಾಡಲು, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  • ಚಾರ್ಜಿಂಗ್ ಕೇಬಲ್ (iPhone ಜೊತೆಯಲ್ಲೇ ಬರುವ) ಮತ್ತು Apple USB ಪವರ್ ಅಡಾಪ್ಟರ್ ಅಥವಾ ಇತರ ಹೊಂದಾಣಿಕೆಯಾಗುವ ಪವರ್ ಅಡಾಪ್ಟರ್ (ಪ್ರತ್ಯೇಕವಾಗಿ ಮಾರಲಾಗುವ) ಬಳಸಿ iPhone ಅನ್ನು ಪವರ್ ಔಟ್‌ಲೆಟ್‌ಗೆ ಕನೆಕ್ಟ್ ಮಾಡಿ. ಪವರ್ ಅಡಾಪ್ಟರುಗಳು ಎಂಬುದನ್ನು ನೋಡಿ.

    iPhone ಅನ್ನು ಪವರ್ ಔಟ್‌ಲೆಟ್‌ನಲ್ಲಿ ಪ್ಲಗ್ ಮಾಡಲಾದ ಪವರ್ ಅಡಾಪ್ಟರ್‌ಗೆ ಕನೆಕ್ಟ್ ಮಾಡಲಾಗಿದೆ.
  • iPhone ಅನ್ನು MagSafe ಚಾರ್ಜರ್‌ನಲ್ಲಿ ಅಥವಾ MagSafe ಡ್ಯುಯೊ ಚಾರ್ಜರ್‌ನಲ್ಲಿ (Apple 20W USB-C ಪವರ್ ಅಡಾಪ್ಟರ್ ಅಥವಾ ಇತರ ಹೊಂದಾಣಿಕೆಯಾಗುವ ಪವರ್ ಅಡಾಪ್ಟರ್‌ಗೆ ಕನೆಕ್ಟ್ ಮಾಡಿರುವುದು) ಅಥವಾ Qi-ಪ್ರಮಾಣಿತ ಚಾರ್ಜರ್‌ನಲ್ಲಿ ಮೇಲ್ಮುಖವಾಗಿ ಇರಿಸಿ. (MagSafe ಚಾರ್ಜರ್, MagSafe ಡ್ಯುಯೊ ಚಾರ್ಜರ್, ಪವರ್ ಅಡಾಪ್ಟರ್‌ಗಳು ಮತ್ತು Qi-ಪ್ರಮಾಣಿತ ಚಾರ್ಜರ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.) MagSafe ಚಾರ್ಜರ್‌ಗಳು ಮತ್ತು ಬ್ಯಾಟರಿ ಪ್ಯಾಕ್‌ಗಳು ಮತ್ತು Qi-ಪ್ರಮಾಣಿತ ವೈರ್‌ಲೆಸ್ ಚಾರ್ಜರ್‌ಗಳು ಎಂಬುದನ್ನು ನೋಡಿ.

    ಗಮನಿಸಿ: ಅನ್ವಯವಾಗುವ ದೇಶದ ನಿಯಮಗಳು ಹಾಗೂ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಥರ್ಡ್ ಪಾರ್ಟಿ ಪವರ್ ಅಡಾಪ್ಟರ್‌ಗಳು ಮತ್ತು Qi-ಪ್ರಮಾಣಿತ ಚಾರ್ಜರ್‌ಗಳನ್ನು ಸಹ ನೀವು ಬಳಸಬಹುದು. iPhoneಗಾಗಿ ಪ್ರಮುಖ ಸುರಕ್ಷತಾ ಮಾಹಿತಿ ಎಂಬುದರಲ್ಲಿ “ಚಾರ್ಜ್ ಮಾಡುವುದು” ಅನ್ನು ನೋಡಿ.

  • iPhone ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಿ.

    ನಿಮ್ಮ ಕಂಪ್ಯೂಟರ್ ಅನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ—iPhone ಅನ್ನು ಸ್ವಿಚ್ ಆಫ್ ಆಗಿರುವ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿದ್ದರೆ, ಚಾರ್ಜ್ ಆಗುವ ಬದಲು ಅದರ ಬ್ಯಾಟರಿ ಖಾಲಿಯಾಗಬಹುದು. ನಿಮ್ಮ iPhone ಚಾರ್ಜ್ ಆಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಬ್ಯಾಟರಿ ಐಕಾನ್‌ನಲ್ಲಿ ಚಾರ್ಜಿಂಗ್ ಐಕಾನ್ ಕಾಣುತ್ತಿದೆಯೇ ಎಂದು ನೋಡಿ.

    ಗಮನಿಸಿ: ನಿಮ್ಮ ಕೀಬೋರ್ಡ್ ಹೆಚ್ಚಿನ ವಿದ್ಯುಚ್ಛಕ್ತಿ ಪೂರೈಸುವ USB ಪೋರ್ಟ್ ಅನ್ನು ಹೊಂದಿರದಿದ್ದರೆ, ನಿಮ್ಮ iPhone ಅನ್ನು ನಿಮ್ಮ ಕೀಬೋರ್ಡ್‌ಗೆ ಕನೆಕ್ಟ್ ಮಾಡುವ ಮೂಲಕ ಚಾರ್ಜ್ ಮಾಡಲು ಪ್ರಯತ್ನಿಸಬೇಡಿ.

iPhone ಅನ್ನು ಪವರ್ ಔಟ್‌ಲೆಟ್‌ಗೆ ಕನೆಕ್ಟ್ ಮಾಡುವುದರಿಂದ ಅಥವಾ ಅದನ್ನು ವೈರ್‌ಲೆಸ್ ಚಾರ್ಜರ್‌ನಲ್ಲಿ ಇರಿಸುವುದರಿಂದ iCloud ಬ್ಯಾಕಪ್ ಪ್ರಾರಂಭವಾಗಬಹುದು. iPhone ಅನ್ನು ಬ್ಯಾಕಪ್ ಮಾಡಿ ಅನ್ನು ನೋಡಿ.

ಎಚ್ಚರಿಕೆ: iPhoneನ ಚಾರ್ಜಿಂಗ್ ಪೋರ್ಟ್‌ನಲ್ಲಿ ದ್ರವ ಇರಬಹುದು ಎಂದು ನಿಮಗೆ ಅನುಮಾನವಿದ್ದರೆ, ಅದರಲ್ಲಿ ಚಾರ್ಜಿಂಗ್ ಕೇಬಲ್ ಅನ್ನು ಪ್ಲಗ್ ಮಾಡಬೇಡಿ. ದ್ರವಕ್ಕೆ ಒಡ್ಡಿಕೊಳ್ಳುವಿಕೆ ಹಾಗೂ ಬ್ಯಾಟರಿ ಮತ್ತು iPhone ಚಾರ್ಜ್ ಮಾಡುವಿಕೆಯ ಬಗೆಗಿನ ಇತರ ಪ್ರಮುಖ ಸುರಕ್ಷತಾ ಮಾಹಿತಿಗಾಗಿ, iPhoneಗಾಗಿ ಪ್ರಮುಖ ಸುರಕ್ಷತಾ ಮಾಹಿತಿ ನೋಡಿ.

iPhone ಬ್ಯಾಟರಿ ಚಾರ್ಜಿಂಗ್ ಅನ್ನು ಆಪ್ಟಿಮೈಸ್ ಮಾಡಿ

iPhone ಒಂದು ಸೆಟ್ಟಿಂಗ್ ಅನ್ನು ಹೊಂದಿದ್ದು, ಇದು ನಿಮ್ಮ ಬ್ಯಾಟರಿಯು ಪೂರ್ಣವಾಗಿ ಚಾರ್ಜ್ ಆದ ನಂತರ ಕಳೆಯುವ ಸಮಯವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಬ್ಯಾಟರಿಯು ಹಳೆಯದಾಗುವ ವೇಗವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಈ ಸೆಟ್ಟಿಂಗ್ ನಿಮ್ಮ ದೈನಂದಿನ ಚಾರ್ಜಿಂಗ್ ಅಭ್ಯಾಸವನ್ನು ಅರ್ಥಮಾಡಿಕೊಳ್ಳಲು ಮಷಿನ್ ಲರ್ನಿಂಗ್ ಅನ್ನು ಬಳಸುತ್ತದೆ, ನಂತರ ನಿಮಗೆ ಎಲ್ಲಿಯವರೆಗೆ ಅದನ್ನು ಬಳಸುವ ಅವಶ್ಯಕತೆ ಇರುವುದಿಲ್ಲವೋ ಅಲ್ಲಿಯವರೆಗೆ ಶೇಕಡಾ 80ರ ನಂತರದ ಚಾರ್ಜಿಂಗ್ ಅನ್ನು ಮುಗಿಸಲು ಕಾಯುತ್ತದೆ.

  1. ಸೆಟ್ಟಿಂಗ್ಸ್  > ಬ್ಯಾಟರಿ > ಬ್ಯಾಟರಿ ಸುಸ್ಥಿತಿ ಮತ್ತು ಚಾರ್ಜಿಂಗ್ ಎಂಬಲ್ಲಿಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • iPhone 14 ಮತ್ತು ಅದಕ್ಕೂ ಹಿಂದಿನ ಮಾಡಲ್‌ಗಳಲ್ಲಿ: ಆಪ್ಟಿಮೈಸ್ಡ್ ಬ್ಯಾಟರಿ ಚಾರ್ಜಿಂಗ್ ಅನ್ನು ಆನ್ ಮಾಡಿ.

    • iPhone 15 ಮತ್ತು ನಂತರದ ಆವೃತ್ತಿಯ ಮಾಡಲ್‌ಗಳಲ್ಲಿ: ಚಾರ್ಜಿಂಗ್ ಆಪ್ಟಿಮೈಸೇಶನ್ ಅನ್ನು ಟ್ಯಾಪ್ ಮಾಡಿ, ನಂತರ ಆಪ್ಟಿಮೈಸ್ಡ್ ಬ್ಯಾಟರಿ ಚಾರ್ಜಿಂಗ್ ಅನ್ನು ಆಯ್ಕೆಮಾಡಿ.

ನಿರೀಕ್ಷಿಸಿದಂತೆ ಆಪ್ಟಿಮೈಸ್ಡ್ ಚಾರ್ಜಿಂಗ್ ಪ್ರಾರಂಭವಾಗದಿದ್ದರೆ, ನಿಮ್ಮ iPhoneನಲ್ಲಿನ ಆಪ್ಟಿಮೈಸ್ಡ್ ಬ್ಯಾಟರಿ ಚಾರ್ಜಿಂಗ್ ಕುರಿತು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಬಳಕೆ ಮತ್ತು ಸೆಟ್ಟಿಂಗ್ಸ್‌ಗೆ ಅನುಗುಣವಾಗಿ ಬ್ಯಾಟರಿ ಬಾಳಿಕೆ ಮತ್ತು ಚಾರ್ಜ್ ಸೈಕಲ್‌ಗಳು ಬದಲಾಗುತ್ತವೆ. ನಿಮ್ಮ ಬ್ಯಾಟರಿಯ ಕಾರ್ಯಕ್ಷಮತೆ ಮತ್ತು ಜೀವಿತಾವಧಿಯನ್ನು ಗರಿಷ್ಠಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು, iPhone ಬ್ಯಾಟರಿ ಮತ್ತು ಕಾರ್ಯಕ್ಷಮತೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

iPhone ಬ್ಯಾಟರಿಯನ್ನು Apple ಅಥವಾ Appleನ ಅಧಿಕೃತ ಸೇವಾ ಪೂರೈಕೆದಾರರು ಸರ್ವೀಸ್ ಮಾಡಬೇಕು ಅಥವಾ ಮರುಬಳಕೆ ಮಾಡಬೇಕು. ಬ್ಯಾಟರಿ ಸರ್ವೀಸ್ ಮತ್ತು ಮರುಬಳಕೆ ವೆಬ್‌ಸೈಟ್ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.