ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

AirPlay ಮೂಲಕ ನಿಮ್ಮ iPhoneನಿಂದ ವೀಡಿಯೊ ಮತ್ತು ಆಡಿಯೊ ಸ್ಟ್ರೀಮ್ ಮಾಡಿ

AirPlay ಮೂಲಕ, ನಿಮ್ಮ iPhoneನಿಂದ ಸಮೀಪದ Mac ಅಥವಾ ಟಿವಿಗೆ ವೀಡಿಯೊ ಮತ್ತು ಆಡಿಯೊವನ್ನು ನೀವು ಸ್ಟ್ರೀಮ್ ಮಾಡಬಹುದು. ನಿಮ್ಮ iPhone ಸ್ಕ್ರೀನ್‌ನಲ್ಲಿ ಕಾಣುತ್ತಿರುವುದನ್ನು ಸಹ ನೀವು ಮಿರರ್ ಮಾಡಬಹುದು.

ನಿಮ್ಮ iPhone ಮತ್ತು Mac, Apple TV ಅಥವಾ ಬೇರೊಂದು ಟಿವಿಯ ಜೊತೆಗೆ ನೀವು AirPlayಯನ್ನು ಬಳಸಬಹುದು.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

  • ಎರಡೂ ಸಾಧನಗಳಲ್ಲಿ Wi-Fi ಆನ್ ಆಗಿದೆ ಮತ್ತು ಅವುಗಳು ಒಂದೇ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿವೆ.

  • ನಿಮ್ಮ Apple ಸಾಧನಗಳ ನಡುವೆ ನೀವು ಸ್ಟ್ರೀಮ್ ಮಾಡುತ್ತಿದ್ದರೆ, ಒಂದೇ Apple ಖಾತೆಗೆ ಸೈನ್ ಇನ್ ಮಾಡುವುದು ಉಪಯುಕ್ತವಾಗಿರುತ್ತದೆ.

  • ಕಂಟೆಂಟ್ ಅನ್ನು Macಗೆ ಸ್ಟ್ರೀಮ್ ಮಾಡಲು AirPlay ಬಳಸುವುದಕ್ಕೆ, ಎರಡೂ ಸಾಧನಗಳು ಕನಿಷ್ಠ ಸಿಸ್ಟಂ ಅವಶ್ಯಕತೆಗಳನ್ನು ಪೂರೈಸಬೇಕು.

  • ಕಂಟೆಂಟ್ ಅನ್ನು ಟಿವಿಯೊಂದಕ್ಕೆ ಸ್ಟ್ರೀಮ್ ಮಾಡುವುದಕ್ಕಾಗಿ AirPlayಯನ್ನು ಬಳಸಲು, ನೀವು Apple TVಯನ್ನು ಅಥವಾ AirPlay 2-ಸಕ್ರಿಯಗೊಳಿಸಿದ ಸ್ಮಾರ್ಟ್ ಟಿವಿಯೊಂದನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

ನಿಮ್ಮ iPhoneನಿಂದ ಸ್ಟ್ರೀಮಿಂಗ್ ಅನ್ನು ಅನುಮತಿಸಲು Mac ಅನ್ನು ಸೆಟಪ್ ಮಾಡಿ

  1. Mac ನಲ್ಲಿ, Apple ಮೆನು  > ಸಿಸ್ಟಂ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ, ಸೈಡ್ ಬಾರ್‌ನಲ್ಲಿ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, ನಂತರ AirDrop ಮತ್ತು Handoff ಅನ್ನು ಕ್ಲಿಕ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)

    ಗಮನಿಸಿ: ನೀವು macOS 12.5 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಯನ್ನು ಹೊಂದಿರುವ Mac ಅನ್ನು ಬಳಸುತ್ತಿದ್ದರೆ, Apple ಮೆನು  > ಸಿಸ್ಟಂ ಆದ್ಯತೆಗಳು ಎಂಬುದನ್ನು ಆಯ್ಕೆಮಾಡಿ, ನಂತರ ಹಂಚಿಕೆ ಎಂಬುದನ್ನು ಕ್ಲಿಕ್ ಮಾಡಿ.

  2. AirPlay ರಿಸೀವರ್ ಅನ್ನು ಆನ್ ಮಾಡಿ.

  3. “ಇದಕ್ಕಾಗಿ AirPlayಯನ್ನು ಅನುಮತಿಸಿ” ಎಂಬುದರ ಮುಂದಿರುವ ಪಾಪ್-ಅಪ್ ಮೆನುವನ್ನು ಕ್ಲಿಕ್ ಮಾಡಿ ಮತ್ತು ಈ Macಗೆ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು AirPlayಯನ್ನು ಬಳಸಬಹುದಾದ ಸಾಧನಗಳನ್ನು ಆಯ್ಕೆಮಾಡಿ.

    • ನಿಮ್ಮ ಸಾಧನಗಳನ್ನು ಮಾತ್ರ ಅನುಮತಿಸಿ: ನೀವು ಅದೇ Apple ಖಾತೆಗೆ ಸೈನ್ ಇನ್ ಮಾಡಿರುವ ಸಾಧನಗಳಿಂದ ಮಾತ್ರ AirPlayಯನ್ನು ಅನುಮತಿಸಲು ಬಯಸಿದರೆ, “ಪ್ರಸ್ತುತ ಬಳಕೆದಾರರು” ಎಂಬುದನ್ನು ಆಯ್ಕೆಮಾಡಿ.

    • ಯಾವುದೇ ಸಾಧನವನ್ನು ಅನುಮತಿಸಿ: “ಅದೇ ನೆಟ್‌ವರ್ಕ್‌ನಲ್ಲಿರುವ ಯಾರಾದರೂ” ಅಥವಾ ಎಲ್ಲರೂ ಎಂಬುದನ್ನು ಆಯ್ಕೆಮಾಡಿ.

  4. Mac ಜೊತೆಗೆ AirPlayಯನ್ನು ಬಳಸಲು ಪಾಸ್‌ವರ್ಡ್ ಅಗತ್ಯವಾಗುವಂತೆ ಮಾಡಲು, ಆಯ್ಕೆಯನ್ನು ಆರಿಸಿ, ನಂತರ ಪಾಸ್‌ವರ್ಡ್ ನಮೂದಿಸಿ.

ನಿಮ್ಮ iPhoneನಿಂದ ನಿಮ್ಮ Mac ಅಥವಾ ಟಿವಿಗೆ ಫೋಟೋಗಳು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡಿ

ನಿಮ್ಮ iPhoneನಿಂದ ನೀವು ಫೋಟೋಗಳು ಮತ್ತು ವೀಡಿಯೊಗಳನ್ನು Mac, Apple TV ಅಥವಾ AirPlay 2-ಸಕ್ರಿಯಗೊಳಿಸಿದ ಸ್ಮಾರ್ಟ್ ಟಿವಿಗೆ ನೀವು ಸ್ಟ್ರೀಮ್ ಮಾಡಬಹುದು.

  1. ನಿಮ್ಮ iPhoneನಲ್ಲಿ, ನೀವು ಸ್ಟ್ರೀಮ್ ಮಾಡಲು ಬಯಸುವ ಫೋಟೋ ಅಥವಾ ವೀಡಿಯೊವನ್ನು ಹುಡುಕಿ.

  2. AirPlay ಬಟನ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ಕೆಲವು ಆ್ಯಪ್‌ಗಳಲ್ಲಿ, ನೀವು ಮೊದಲು ಬೇರೆ ಬಟನ್ ಅನ್ನು ಟ್ಯಾಪ್ ಮಾಡಬೇಕಾಗಬಹುದು.

    iPhone ಸ್ಕ್ರೀನ್‌ನಲ್ಲಿ ಪ್ಲೇ ಆಗುತ್ತಿರುವ ಚಲನಚಿತ್ರ. ಸ್ಕ್ರೀನ್‌ನ ಮಧ್ಯಭಾಗದಲ್ಲಿ ಪ್ಲೇಬ್ಯಾಕ್ ಕಂಟ್ರೋಲ್‌ಗಳಿವೆ. AirPlay ಬಟನ್ ಮೇಲಿನ ಎಡಭಾಗದ ಹತ್ತಿರದಲ್ಲಿದೆ.
  3. ಪಟ್ಟಿಯಿಂದ ನಿಮ್ಮ Mac ಅಥವಾ ಟಿವಿಯನ್ನು ಆಯ್ಕೆಮಾಡಿ.

  4. Macನಲ್ಲಿ ಪ್ಲೇಬ್ಯಾಕ್ ಕಂಟ್ರೋಲ್‌ಗಳನ್ನು ತೋರಿಸಲು, Mac ಸ್ಕ್ರೀನ್‌ನಲ್ಲಿ ಪ್ಲೇ ಆಗುತ್ತಿರುವ ವೀಡಿಯೊ ಮೇಲೆ ಪಾಯಿಂಟರ್ ಅನ್ನು ಮೂವ್ ಮಾಡಿ.

  5. ಸ್ಟ್ರೀಮಿಂಗ್ ಅನ್ನು ನಿಲ್ಲಿಸಲು, ನಿಮ್ಮ iPhoneನಲ್ಲಿ, ಯಾವ ಆ್ಯಪ್‌ನಿಂದ ನೀವು ಸ್ಟ್ರೀಮ್ ಮಾಡುತ್ತಿರುವಿರೋ ಅದರಲ್ಲಿ AirPlay ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಲ್ಲಿನ ನಿಮ್ಮ iPhone ಅನ್ನು ಟ್ಯಾಪ್ ಮಾಡಿ.

    ಸಲಹೆ: AirPlay ಜೊತೆಗೆ ನೀವು ನಿಯಮಿತವಾಗಿ ಬಳಸುವ ಆ್ಯಪ್‌ಗಳಿಂದ ನೀವು ಕಂಟೆಂಟ್ ಅನ್ನು ಪ್ಲೇ ಮಾಡಿದಾಗ ನೀವು ಆಗಾಗ ಬಳಸುವ ಯಾವುದೇ Apple TV ಅಥವಾ ಸ್ಮಾರ್ಟ್ TVಯನ್ನು ಅನ್ವೇಷಿಸಲು ಮತ್ತು ಅವುಗಳಿಗೆ ಸ್ವಯಂಚಾಲಿತವಾಗಿ ಕನೆಕ್ಟ್ ಮಾಡಲು ನಿಮ್ಮ iPhone ಅನ್ನು ನೀವು ಸೆಟಪ್ ಮಾಡಬಹುದು. ನಿಮ್ಮ iPhoneನಲ್ಲಿ ಈ ಫೀಚರ್ ಅನ್ನು ಆನ್ ಅಥವಾ ಆಫ್ ಮಾಡಲು, ಸೆಟ್ಟಿಂಗ್ಸ್ > ಸಾಮಾನ್ಯ > AirPlay ಮತ್ತು ಕಂಟಿನ್ಯುಯಿಟಿ ಎಂಬಲ್ಲಿಗೆ ಹೋಗಿ, ನಂತರ ಸ್ವಯಂಚಾಲಿತ, ಎಂದಿಗೂ ಬೇಡ ಅಥವಾ ಕೇಳಿ ಎಂಬುದನ್ನು ಆಯ್ಕೆಮಾಡಿ.

ನಿಮ್ಮ iPhone ಅನ್ನು Mac ಅಥವಾ TVಯಲ್ಲಿ ಮಿರರ್ ಮಾಡುವುದು

  1. ನಿಮ್ಮ iPhoneನಲ್ಲಿ ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ.

  2. ಸ್ಕ್ರೀನ್ ಮಿರರಿಂಗ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಪ್ಲೇಬ್ಯಾಕ್ ಡೆಸ್ಟಿನೇಷನ್ ಆಗಿ ನಿಮ್ಮ Mac ಅಥವಾ ಟಿವಿಯನ್ನು ಆಯ್ಕೆಮಾಡಿ.

ಹಿಂದಿರುಗಲು, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ಸ್ಕ್ರೀನ್ ಮಿರರಿಂಗ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮಿರರಿಂಗ್ ಅನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

Mac ಅಥವಾ TVಯಲ್ಲಿ ನಿಮ್ಮ iPhoneನ ಆಡಿಯೊ ಪ್ಲೇ ಮಾಡಿ

ನಿಮ್ಮ iPhoneನ ಆಡಿಯೊವನ್ನು Mac ಅಥವಾ ಟಿವಿಗೆ ಸ್ಟ್ರೀಮ್ ಮಾಡಲು ನೀವು AirPlayಯನ್ನು ಬಳಸಬಹುದು. ನಿಮ್ಮ Macಗೆ ನೀವು ಸ್ಟ್ರೀಮ್ ಮಾಡುತ್ತಿದ್ದರೆ, ಬೇರೊಂದು ಸಾಧನದಿಂದ ಸ್ಟ್ರೀಮ್ ಮಾಡುವುದನ್ನು ಅನುಮತಿಸಲು ನೀವು Mac ಅನ್ನು ಸೆಟಪ್ ಮಾಡಿದ್ದೀರಿ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಬೇರೊಂದು ಸಾಧನದಿಂದ ಸ್ಟ್ರೀಮಿಂಗ್ ಅನ್ನು ಅನುಮತಿಸಿ ಎಂಬುದನ್ನು ನೋಡಿ.

  1. ನಿಮ್ಮ iPhoneನಲ್ಲಿ ಆಡಿಯೊ ಆ್ಯಪ್ ಒಂದನ್ನು ತೆರೆಯಿರಿ (ಉದಾಹರಣೆಗೆ, ಪಾಡ್‌ಕಾಸ್ಟ್ಸ್ ಅಥವಾ ಸಂಗೀತ), ನಂತರ ಪ್ಲೇ ಮಾಡಲು ಐಟಮ್ ಒಂದನ್ನು ಆಯ್ಕೆಮಾಡಿ.

  2. ಪ್ಲೇಬ್ಯಾಕ್ ಡೆಸ್ಟಿನೇಷನ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಪ್ಲೇಬ್ಯಾಕ್ ಡೆಸ್ಟಿನೇಷನ್ ಅನ್ನು ಆರಿಸಿ.

    ಸ್ಕ್ರೀನ್‌ನ ಕೆಳಭಾಗದಲ್ಲಿರುವ ಹಾಡಿನ ಪ್ಲೇಬ್ಯಾಕ್ ಡೆಸ್ಟಿನೇಷನ್ ಬಟನ್ ಸೇರಿದಂತೆ ಇತರ ಪ್ಲೇಬ್ಯಾಕ್ ಕಂಟ್ರೋಲ್‌ಗಳು.

ನಿಮ್ಮ iPhoneನಿಂದ HomePodಗೆ ಆಡಿಯೊ ಸ್ಟ್ರೀಮ್ ಮಾಡಲು ಸಹ ನೀವು AirPlayಯನ್ನು ಬಳಸಬಹುದು. ಇನ್ನಷ್ಟು ತಿಳಿಯಲು, iOS ಅಥವಾ iPadOS ಸಾಧನವನ್ನು ಬಳಸಿಕೊಂಡು HomePodನಲ್ಲಿ ಆಡಿಯೊವನ್ನು ಪ್ಲೇ ಮಾಡಿ ಎಂಬುದನ್ನು ನೋಡಿ.

ನಿಮ್ಮ ಹೋಟೆಲ್ ರೂಮ್‌ನಲ್ಲಿನ AirPlayಯನ್ನು ಬಳಸಿ

ನೀವು AirPlayಯನ್ನು ಬೆಂಬಲಿಸುವ ಟಿವಿ ಇರುವ ಹೋಟೆಲ್ ರೂಮ್‌ನಲ್ಲಿ ತಂಗಿದರೆ, ನೀವು ಅದನ್ನು ನಿಮ್ಮ iPhoneನಿಂದ ಚಲನಚಿತ್ರಗಳು, ಟಿವಿ ಶೋಗಳು, ಸಂಗೀತ ಮತ್ತು ಇತ್ಯಾದಿಯನ್ನು ಪ್ಲೇ ಮಾಡಲು ಬಳಸಬಹುದು.

  1. ನಿಮ್ಮ iPhoneನಲ್ಲಿ ಕ್ಯಾಮರಾವನ್ನು ತೆರೆಯಿರಿ.

  2. ರೂಮ್‌ನ ಟಿವಿ ಈಗಾಗಲೇ ಆನ್ ಆಗಿರದಿದ್ದರೆ ಅದನ್ನು ಆನ್ ಮಾಡಿ ಮತ್ತು AirPlay QR ಕೋಡ್ ಅನ್ನು ಪತ್ತೆಹಚ್ಚಿ.

  3. ನಿಮ್ಮ ಹೋಟೆಲ್ Wi-Fiಗೆ ಕನೆಕ್ಟ್ ಮಾಡಲು (ನೀವು ಈಗಾಗಲೇ ಕನೆಕ್ಟ್ ಮಾಡಿರದಿದ್ದರೆ) ಮತ್ತು ರೂಮ್‌ನ ಟಿವಿಗೆ ಕನೆಕ್ಟ್ ಮಾಡಲು ನಿಮ್ಮ iPhone ಕ್ಯಾಮರಾ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

  4. ಫೋಟೋಗಳು ಅಥವಾ ವೀಡಿಯೊಗಳನ್ನು ಸ್ಟ್ರೀಮ್ ಮಾಡುವ ಮೂಲಕ, ನಿಮ್ಮ ಸ್ಕ್ರೀನ್ ಅನ್ನು ಮಿರರಿಂಗ್ ಮಾಡುವ ಮೂಲಕ ಅಥವಾ ಆಡಿಯೊ ಪ್ಲೇ ಮಾಡುವ ಮೂಲಕ ಟಿವಿ ಸ್ಕ್ರೀನ್‌ನಲ್ಲಿ ಕಂಟೆಂಟ್ ಅನ್ನು ಪ್ರದರ್ಶಿಸಲು ನಿಮ್ಮ iPhone ಅನ್ನು ಬಳಸಿ. ನಿಮ್ಮ ಹೋಟೆಲ್ ಟಿವಿಯನ್ನು ಪ್ಲೇಬ್ಯಾಕ್ ಡೆಸ್ಟಿನೇಷನ್ ಆಗಿ ಆಯ್ಕೆಮಾಡಿ.

  5. ಸ್ಟ್ರೀಮಿಂಗ್ ಅಥವಾ ಮಿರರಿಂಗ್ ಅನ್ನು ನಿಲ್ಲಿಸಲು, ನಿಮ್ಮ iPhoneನಲ್ಲಿ AirPlay ಅಥವಾ ಸ್ಕ್ರೀನ್ ಮಿರರಿಂಗ್ ಬಟನ್ (AirPlay ಬಟನ್ ಅಥವಾ ಸ್ಕ್ರೀನ್ ಮಿರರಿಂಗ್ ಬಟನ್) ಅನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಲ್ಲಿರುವ ನಿಮ್ಮ iPhone ಅನ್ನು ಟ್ಯಾಪ್ ಮಾಡಿ ಅಥವಾ ಮಿರರಿಂಗ್ ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಹೊಟೇಲ್‌ಗಳಲ್ಲಿ AirPlay ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ.

AirPlay ಕಾರ್ಯನಿರ್ವಹಿಸದಿದ್ದರೆ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.