ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ

ಮೊಬೈಲ್ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲು ನಿಮ್ಮ iPhoneಗೆ ಭೌತಿಕ ಸಿಮ್ ಅಥವಾ eSIM ಅಗತ್ಯವಿದೆ. (ಎಲ್ಲಾ ಮಾಡಲ್‌ಗಳಲ್ಲಿ ಅಥವಾ ಎಲ್ಲಾ ದೇಶಗಳು ಮತ್ತು ಪ್ರದೇಶಗಳಲ್ಲಿ ಎಲ್ಲಾ ಆಯ್ಕೆಗಳು ಲಭ್ಯವಿಲ್ಲ. U.Sನಲ್ಲಿ ಖರೀದಿಸಿದ iPhone 14 ಮತ್ತು ನಂತರದ ಮಾಡಲ್‌ಗಳಲ್ಲಿ, ನೀವು eSIM ಅನ್ನು ಮಾತ್ರ ಬಳಸಬಹುದು.) ಸಿಮ್ ಅನ್ನು ಪಡೆಯಲು ಮತ್ತು ಮೊಬೈಲ್ ಸೇವೆಯನ್ನು ಸೆಟಪ್ ಮಾಡಲು ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ.

eSIM ಅನ್ನು ಸೆಟಪ್ ಮಾಡಿ

ಬೆಂಬಲಿತ iPhone ಮಾಡಲ್‌ಗಳು ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ eSIM ಅನ್ನು ಡಿಜಿಟಲ್ ಆಗಿ ಸಂಗ್ರಹಿಸಿಟ್ಟುಕೊಳ್ಳಬಲ್ಲವು. ನಿಮ್ಮ ನೆಟ್‌ವರ್ಕ್ ಪೂರೈಕೆದಾರರು, eSIM ನೆಟ್‌ವರ್ಕ್‌ಪೂರೈಕೆದಾರರ ಸಕ್ರಿಯಗೊಳಿಸುವಿಕೆ ಅಥವಾ eSIMನ ತ್ವರಿತ ವರ್ಗಾವಣೆಯನ್ನು ಬೆಂಬಲಿಸುತ್ತಾರೆ ಎಂದಾದರೆ, ಸೆಟಪ್ ಸಮಯದಲ್ಲಿ ನಿಮ್ಮ eSIM ಅನ್ನು ಸಕ್ರಿಯಗೊಳಿಸಲು ನಿಮ್ಮ iPhone ಅನ್ನು ನೀವು ಆನ್ ಮಾಡಬಹುದು ಮತ್ತು ಸೂಚನೆಗಳನ್ನು ಅನುಸರಿಸಬಹುದು.

ನೀವು ಈಗಾಗಲೇ ಸೆಟಪ್ ಅನ್ನು ಪೂರ್ಣಗೊಳಿಸಿದ್ದರೆ, ಈ ಕೆಳಗಿನವುಗಳನ್ನು ಮಾಡಿ:

  1. ನಿಮ್ಮ iPhone ಲಭ್ಯವಿರುವ Wi-Fi ಅಥವಾ ಮೊಬೈಲ್ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. eSIM ಸೆಟಪ್‌ಗೆ ಇಂಟರ್ನೆಟ್ ಕನೆಕ್ಷನ್ ಅಗತ್ಯವಿರುತ್ತದೆ.

  2. ಈ ಕೆಳಗಿನ ವಿಧಾನಗಳಲ್ಲಿ ಒಂದನ್ನು ಬಳಸಿಕೊಂಡು eSIM ಅನ್ನು ಸೇರಿಸಿ:

    • eSIM ನೆಟ್‌ವರ್ಕ್ ಪೂರೈಕೆದಾರರ ಸಕ್ರಿಯಗೊಳಿಸುವಿಕೆ: ಕೆಲವು ನೆಟ್‌ವರ್ಕ್ ಪೂರೈಕೆದಾರರು ಹೊಸ eSIM ಅನ್ನು ನೇರವಾಗಿ ನಿಮ್ಮ iPhoneಗೆ ನಿಯೋಜಿಸಬಹುದು; ಈ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ. ನೀವು “ಮೊಬೈಲ್ ಸೇವೆಯ ಸೆಟಪ್ ಅನ್ನು ಪೂರ್ಣಗೊಳಿಸಿ” ನೋಟಿಫಿಕೇಷನ್ ಅನ್ನು ಸ್ವೀಕರಿಸಿದಾಗ, ಅದನ್ನು ಟ್ಯಾಪ್ ಮಾಡಿ. ಅಥವಾ ಸೆಟ್ಟಿಂಗ್ಸ್ ಆ್ಯಪ್‌  > ಮೊಬೈಲ್ ಸೇವೆ ಎಂಬಲ್ಲಿಗೆ ಹೋಗಿ, ನಂತರ ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಅಥವಾ eSIM ಅನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • eSIM ತ್ವರಿತ ವರ್ಗಾವಣೆ: ಕೆಲವು ನೆಟ್‌ವರ್ಕ್ ಪೂರೈಕೆದಾರರು ತಮ್ಮನ್ನು ಸಂಪರ್ಕಿಸುವ ಅಗತ್ಯವಿಲ್ಲದೆಯೇ, ಫೋನ್ ಸಂಖ್ಯೆಯೊಂದನ್ನು ನಿಮ್ಮ ಹಿಂದಿನ iPhoneನಿಂದ ನಿಮ್ಮ ಹೊಸ iPhoneಗೆ ವರ್ಗಾಯಿಸುವುದನ್ನು ಬೆಂಬಲಿಸುತ್ತಾರೆ (ಎರಡೂ ಸಾಧನಗಳಲ್ಲಿ iOS 16 ಅಥವಾ ನಂತರದ ಆವೃತ್ತಿಗಳ ಅಗತ್ಯವಿರುತ್ತದೆ).

      ನಿಮ್ಮ ಹೊಸ iPhoneನಲ್ಲಿ, ಸೆಟ್ಟಿಂಗ್ಸ್ ಆ್ಯಪ್‌ > ಮೊಬೈಲ್ ಸೇವೆ ಎಂಬಲ್ಲಿಗೆ ಹೋಗಿ, ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಅಥವಾ eSIM ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ “ಸಮೀಪದ iPhoneನಿಂದ ವರ್ಗಾಯಿಸಿ” ಎಂಬುದನ್ನು ಟ್ಯಾಪ್ ಮಾಡಿ ಅಥವಾ ಫೋನ್ ಸಂಖ್ಯೆಯೊಂದನ್ನು ಆರಿಸಿ. ನಿಮ್ಮ ಹಿಂದಿನ iPhoneನಲ್ಲಿ, ವರ್ಗಾವಣೆಯನ್ನು ದೃಢೀಕರಿಸಲು ಸೂಚನೆಗಳನ್ನು ಅನುಸರಿಸಿ.

      ಗಮನಿಸಿ: ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಹೊಸ iPhoneಗೆ ವರ್ಗಾಯಿಸಿದ ನಂತರ, ಅದು ನಿಮ್ಮ ಹಿಂದಿನ iPhoneನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

    • ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ: ಸೆಟ್ಟಿಂಗ್ಸ್ ಆ್ಯಪ್‌ > ಮೊಬೈಲ್ ಸೇವೆ ಎಂಬಲ್ಲಿಗೆ ಹೋಗಿ, ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಅಥವಾ eSIM ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ QR ಕೋಡ್ ಬಳಸಿ ಎಂಬುದನ್ನು ಟ್ಯಾಪ್ ಮಾಡಿ. (ನೀವು ಮೊದಲು ಇತರ ಆಯ್ಕೆಗಳನ್ನು ಟ್ಯಾಪ್ ಮಾಡಬೇಕಾಗಬಹುದು.) QR ಕೋಡ್ ಫ್ರೇಮ್‌ನಲ್ಲಿ ಕಾಣಿಸುವಂತೆ iPhone ಅನ್ನು ಇರಿಸಿ ಅಥವಾ ವಿವರಗಳನ್ನು ಹಸ್ತಚಾಲಿತವಾಗಿ ನಮೂದಿಸಿ. ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿರುವ ದೃಢೀಕರಣ ಕೋಡ್ ಅನ್ನು ನಮೂದಿಸುವಂತೆ ನಿಮಗೆ ಹೇಳಬಹುದು.

    • ಬೇರೊಂದು ಸ್ಮಾರ್ಟ್‌ಫೋನ್‌ನಿಂದ ವರ್ಗಾಯಿಸಿ: ನಿಮ್ಮ ಹಿಂದಿನ ಫೋನ್ Apple iPhone ಆಗಿರದಿದ್ದರೆ, ಫೋನ್ ಸಂಖ್ಯೆಯನ್ನು ವರ್ಗಾಯಿಸಲು ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ.

    • ಸಹಭಾಗಿ ನೆಟ್‌ವರ್ಕ್ ಪೂರೈಕೆದಾರರ ಆ್ಯಪ್‌ನ ಮೂಲಕ ಸೇವೆಯನ್ನು ಸಕ್ರಿಯಗೊಳಿಸಿ: App Storeಗೆ ಹೋಗಿ, ನೆಟ್‌ವರ್ಕ್ ಪೂರೈಕೆದಾರರ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ, ನಂತರ ಮೊಬೈಲ್ ಸೇವೆಯನ್ನು ಸಕ್ರಿಯಗೊಳಿಸಲು ಆ್ಯಪ್ ಬಳಸಿ.

  3. eSIM ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು, ಸೆಟ್ಟಿಂಗ್ಸ್ > ಮೊಬೈಲ್ ಆ್ಯಪ್‌ಗೆ ಹೋಗಿ, ನಂತರ ಹೊಸ ಲೈನ್ (eSIMಗಳ ಕೆಳಗೆ) ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

ಟ್ರಬಲ್‌ಶೂಟಿಂಗ್‌ ಹಂತಗಳಿಗಾಗಿ, ನಿಮ್ಮ iPhoneನಲ್ಲಿ eSIM ಅನ್ನು ಸೆಟಪ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಭೌತಿಕ SIM ಅನ್ನು ಇನ್‌ಸ್ಟಾಲ್ ಮಾಡಿ

ನೀವು ನೆಟ್‌ವರ್ಕ್ ಪೂರೈಕೆದಾರರಿಂದ ನ್ಯಾನೋ ಸಿಮ್ ಕಾರ್ಡ್ ಅನ್ನು ಪಡೆಯಬಹುದು ಅಥವಾ ನಿಮ್ಮ ಹಿಂದಿನ iPhoneನಿಂದ ಅದನ್ನು ಮೂವ್ ಮಾಡಬಹುದು.

ಗಮನಿಸಿ: iPhone 14 ಮತ್ತು U.Sನಲ್ಲಿ ಖರೀದಿಸಲಾದ ನಂತರದ ಆವೃತ್ತಿಯ ಮಾಡಲ್‌ಗಳು ಭೌತಿಕ ಸಿಮ್ ಅನ್ನು ಬೆಂಬಲಿಸುವುದಿಲ್ಲ.

  1. SIM ಟ್ರೇನ ಸಣ್ಣ ರಂಧ್ರದಲ್ಲಿ ಪೇಪರ್ ಕ್ಲಿಪ್ ಅಥವಾ ಸಿಮ್ ಎಜೆಕ್ಟ್ ಟೂಲ್ ಅನ್ನು ಹಾಕಿ, ನಂತರ ಟ್ರೇಯನ್ನು ಎಜೆಕ್ಟ್ ಮಾಡಲು iPhone ಕಡೆಗೆ ಒಳಕ್ಕೆ ತಳ್ಳಿ.

    ಟ್ರೇಯನ್ನು ಎಜೆಕ್ಟ್ ಮಾಡಲು ಮತ್ತು ತೆಗೆದುಹಾಕಲು ಪೇಪರ್ ಕ್ಲಿಪ್ ಅಥವಾ SIM ಎಜೆಕ್ಟ್ ಟೂಲ್ ಅನ್ನು iPhoneನ ಎಡಭಾಗದಲ್ಲಿರುವ ಟ್ರೇನ ಸಣ್ಣ ರಂಧ್ರದೊಳಕ್ಕೆ ತೂರಿಸಲಾಗುತ್ತದೆ.

    ಗಮನಿಸಿ: SIM ಟ್ರೇ ಆಕಾರ ಮತ್ತು ಓರಿಯಂಟೇಶನ್, iPhone ಮಾಡಲ್ ಮತ್ತು ನಿಮ್ಮ ದೇಶ ಅಥವಾ ಪ್ರದೇಶವನ್ನು ಅವಲಂಬಿಸಿರುತ್ತದೆ.

  2. iPhoneನಿಂದ ಟ್ರೇಯನ್ನು ತೆಗೆದುಹಾಕಿ.

  3. SIM ಅನ್ನು ಟ್ರೇಯಲ್ಲಿ ಇರಿಸಿ. ಕೋನೀಯ ಮೂಲೆಯು ಸರಿಯಾದ ಓರಿಯಂಟೇಶನ್ ಅನ್ನು ನಿರ್ಧರಿಸುತ್ತದೆ.

    iPhoneನ ಟ್ರೇನೊಳಗೆ ಸೇರಿಸಲಾಗುತ್ತಿರುವ ಸಿಮ್; ಕೋನೀಯ ಮೂಲೆಯು ಮೇಲಿನ ಎಡಭಾಗದಲ್ಲಿದೆ.
  4. iPhoneಗೆ ಟ್ರೇಯನ್ನು ಮರಳಿ ಇನ್ಸರ್ಟ್ ಮಾಡಿ.

  5. ನೀವು ಈ ಹಿಂದೆ ಸಿಮ್ ಒಂದರಲ್ಲಿ ಪಿನ್ ಅನ್ನು ಸೆಟಪ್ ಮಾಡಿದ್ದರೆ, ಪ್ರಾಂಪ್ಟ್ ಮಾಡಿದಾಗ ಎಚ್ಚರಿಕೆಯಿಂದ ಪಿನ್ ಅನ್ನು ನಮೂದಿಸಿ.

    ಎಚ್ಚರಿಕೆ: ಎಂದಿಗೂ ಸಿಮ್‌ನ ಪಿನ್ ಅನ್ನು ಊಹಿಸಲು ಪ್ರಯತ್ನಿಸಬೇಡಿ. ತಪ್ಪಾದ ಊಹೆಯಿಂದಾಗಿ ನಿಮ್ಮ ಸಿಮ್ ಶಾಶ್ವತವಾಗಿ ಲಾಕ್ ಆಗಬಹುದು ಮತ್ತು ನೀವು ಹೊಸ ಸಿಮ್ ಅನ್ನು ಪಡೆಯುವವರೆಗೆ ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ಮೂಲಕ ಫೋನ್ ಕರೆಗಳನ್ನು ಮಾಡಲು ಅಥವಾ ಮೊಬೈಲ್ ಡೇಟವನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ iPhone ಅಥವಾ iPadಗಾಗಿ ಸಿಮ್ ಪಿನ್ ಅನ್ನು ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಭೌತಿಕ SIM ಅನ್ನು eSIMಗೆ ಪರಿವರ್ತಿಸಿ

ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಇದನ್ನು ಬೆಂಬಲಿಸುತ್ತಾರೆ ಎಂದಾದರೆ, ನೀವು ಬೆಂಬಲಿತ iPhone ಮಾಡಲ್‌ನಲ್ಲಿ ಭೌತಿಕ ಸಿಮ್ ಅನ್ನು eSIMಗೆ ಪರಿವರ್ತಿಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಮೊಬೈಲ್ ಸೇವೆ ಎಂಬಲ್ಲಿಗೆ ಹೋಗಿ, ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಅಥವಾ eSIM ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಭೌತಿಕ ಸಿಮ್ ಹೊಂದಿರುವ ಫೋನ್ ಸಂಖ್ಯೆಯನ್ನು ಆಯ್ಕೆಮಾಡಿ.

  2. eSIMಗೆ ಪರಿವರ್ತಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಪ್ರಮುಖ ಸೂಚನೆ: ಮೊಬೈಲ್ ಸೇವಾ ಸಾಮರ್ಥ್ಯಗಳ ಲಭ್ಯತೆಯು ವೈರ್‌ಲೆಸ್ ನೆಟ್‌ವರ್ಕ್, ನಿಮ್ಮ iPhone ಮಾಡಲ್ ಮತ್ತು ನಿಮ್ಮ ಸ್ಥಳವನ್ನು ಆಧರಿಸಿರುತ್ತದೆ.

ನಿಮ್ಮ ಮೊಬೈಲ್ ಪ್ಲ್ಯಾನ್‌ಗಳನ್ನು ನಿರ್ವಹಿಸುವಾಗ, ವಿಶೇಷವಾಗಿ ನೀವು iPhoneನೊಂದಿಗೆ ಪ್ರಯಾಣಿಸುವಾಗ, ಅನ್ವಯವಾಗುವ ಡೇಟ, ವಾಯ್ಸ್ ಮತ್ತು ರೋಮಿಂಗ್ ಶುಲ್ಕಗಳನ್ನು ತಿಳಿದುಕೊಂಡಿರಿ. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ವೀಕ್ಷಿಸಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

ಕೆಲವು ನೆಟ್‌ವರ್ಕ್ ಪೂರೈಕೆದಾರರು ಇತರ ನೆಟ್‌ವರ್ಕ್ ಪೂರೈಕೆದಾರರೊಂದಿಗೆ ಬಳಸಲು ಸಾಧ್ಯವಾಗುವಂತೆ iPhone ಅನ್ನು ಅನ್‌ಲಾಕ್ ಮಾಡಲು ನಿಮಗೆ ಅವಕಾಶ ನೀಡುತ್ತಾರೆ (ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು). ದೃಢೀಕರಣ ಮತ್ತು ಸೆಟಪ್ ಮಾಹಿತಿಗಾಗಿ ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ. ಬೇರೆ ನೆಟ್‌ವರ್ಕ್ ಪೂರೈಕೆದಾರರೊಂದಿಗೆ ಬಳಸುವುದಕ್ಕಾಗಿ ನಿಮ್ಮ iPhone ಅನ್ನು ಅನ್‌ಲಾಕ್ ಮಾಡುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.