ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಇತ್ತೀಚಿನ ಜನರೇಷನ್ ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸಿ

ನಿಮ್ಮ iPhone ಕ್ಯಾಮರಾದಿಂದ ಫೋಟೋಗಳನ್ನು ಹೇಗೆ ಸೆರೆಹಿಡಿಯಬೇಕು ಎಂಬುದನ್ನು ನಿರ್ದಿಷ್ಟಪಡಿಸಲು ನೀವು iPhone 16, iPhone 16 Plus, iPhone 16 Pro, ಮತ್ತು iPhone 16 Pro Max ಮಾಡಲ್‌ಗಳಲ್ಲಿ ಇತ್ತೀಚಿನ ಜನರೇಷನ್ ಫೋಟೋಗ್ರಾಫಿಕ್ ಶೈಲಿಯನ್ನು ಬಳಸಬಹುದು. ಫೋಟೋಗ್ರಾಫಿಕ್ ಶೈಲಿಗಳು, ನಿಮಗೆ ಬೇಕಾದ ನಿಖರವಾದ ನೋಟವನ್ನು ರಚಿಸಲು ನಿಮ್ಮ ಫೋಟೋಗಳ ಕೆಲವು ಭಾಗಗಳಲ್ಲಿ ನಿರ್ದಿಷ್ಟ ಬಣ್ಣಗಳನ್ನು ಸರಿಹೊಂದಿಸುತ್ತವೆ. ನೀವು ತೆಗೆದುಕೊಳ್ಳುವ ಎಲ್ಲಾ ಫೋಟೋಗಳಲ್ಲಿ ನಿಮ್ಮ ಫೋಟೋಗ್ರಾಫಿಕ್ ಶೈಲಿಯನ್ನು ಸೇವ್ ಮಾಡಲಾಗುತ್ತದೆ ಮತ್ತು ತೋರಿಸಲಾಗುತ್ತದೆ. ನೀವು ಫೋಟೋಗ್ರಾಫಿಕ್ ಶೈಲಿಯನ್ನು ಆಯ್ಕೆ ಮಾಡಿದ ನಂತರ, ನೀವು ಕ್ಯಾಮರಾದಲ್ಲಿ ಹೊಂದಾಣಿಕೆಗಳನ್ನು ಮಾಡಬಹುದು ಅಥವಾ ಫೋಟೋಸ್ ಆ್ಯಪ್‌ನಲ್ಲಿ ಎಡಿಟ್ ಮಾಡಬಹುದು.

ಗಮನಿಸಿ: ಫೋಟೋಸ್‌ ಆ್ಯಪ್‌ನಲ್ಲಿ ಫೋಟೊಗ್ರಾಫಿಕ್ ಶೈಲಿಗಳನ್ನು ಎಡಿಟ್ ಮಾಡಲು, ಕ್ಯಾಮರಾವು ಅಧಿಕ ಎಫಿಸಿಯೆನ್ಸಿಯ ಚಿತ್ರದ ಕ್ಯಾಪ್ಚರ್ ಮೂಲಕ ಫೋಟೋಗಳನ್ನು ಕ್ಯಾಪ್ಚರ್ ಮಾಡಬೇಕಾಗುತ್ತದೆ. ಅಧಿಕ ಎಫಿಸಿಯೆನ್ಸಿಯನ್ನು ಆನ್ ಮಾಡಲು, ಸೆಟ್ಟಿಂಗ್ಸ್ > ಕ್ಯಾಮರಾ > ಫಾರ್ಮ್ಯಾಟ್‌ಗಳು ಎಂಬಲ್ಲಿಗೆ ಹೋಗಿ, ನಂತರ ಅಧಿಕ ಎಫಿಸಿಯೆನ್ಸಿ ಎಂಬುದನ್ನು ಟ್ಯಾಪ್ ಮಾಡಿ.

iPhone 16, iPhone 16 Plus, iPhone 16 Pro, ಅಥವಾ iPhone 16 Pro Max ಅನ್ನು ಹೊರತುಪಡಿಸಿ ಬೆಂಬಲಿತ ಮಾಡಲ್‌ಗಳಲ್ಲಿ ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸಲು ನಿಮ್ಮ iPhone ಕ್ಯಾಮರಾದೊಂದಿಗೆ ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸಿ ಅನ್ನು ನೋಡಿ.

ನಿಮ್ಮ ಡಿಫಾಲ್ಟ್ ಫೋಟೋಗ್ರಾಫಿಕ್ ಶೈಲಿಯನ್ನು ಆರಿಸಿ

ಪ್ರಾರಂಭಿಸಲು, ನಿಮ್ಮ iPhone ಕ್ಯಾಮರಾವು ಯಾವ ಡಿಫಾಲ್ಟ್ ಫೋಟೋಗ್ರಾಫಿಕ್ ಶೈಲಿಯನ್ನು ಬಳಸಬೇಕೆಂದು ನೀವು ಬಯಸುತ್ತೀರೋ ಅದನ್ನು ಆಯ್ಕೆಮಾಡಿ. ನೀವು ಆಯ್ಕೆ ಮಾಡುವ ಫೋಟೋಗ್ರಾಫಿಕ್ ಶೈಲಿಯು ನಿಮ್ಮ ಕ್ಯಾಮರಾ ಕ್ಯಾಪ್ಚರ್ ಮಾಡುವ ಚರ್ಮದ ಅಂಡರ್‌ಟೋನ್‌ಗಳಿಗೆ ನಿರ್ದಿಷ್ಟವಾಗಿರುತ್ತದೆ. ನೀವು ಡಿಫಾಲ್ಟ್ ಶೈಲಿಯನ್ನು ಆಯ್ಕೆ ಮಾಡಿದ ನಂತರ, ನೀವು ಫೋಟೋ ತೆಗೆದುಕೊಳ್ಳುವ ಮುನ್ನ ಯಾವಾಗ ಬೇಕಾದರೂ ಕ್ಯಾಮರಾದಲ್ಲಿ ವಿಭಿನ್ನ ಶೈಲಿಯನ್ನು ಸರಿಹೊಂದಿಸಬಹುದು ಅಥವಾ ಆಯ್ಕೆಮಾಡಬಹುದು (ಕೆಳಗೆ ಬೇರೆ ಫೋಟೋಗ್ರಾಫಿಕ್ ಶೈಲಿಯನ್ನು ಬಳಸಿ, ಅನ್ನು ನೋಡಿ).

  1. ಸೆಟ್ಟಿಂಗ್ಸ್ ಆ್ಯಪ್‌ > ಕ್ಯಾಮರಾ > ಫೋಟೋಗ್ರಾಫಿಕ್ ಶೈಲಿಗಳು ಎಂಬಲ್ಲಿಗೆ ಹೋಗಿ.

  2. ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    ಗಮನಿಸಿ: ಫೋಟೋಗ್ರಾಫಿಕ್ ಶೈಲಿಯನ್ನು ಆಯ್ಕೆಮಾಡುವ ಮೊದಲು, ನಿಮ್ಮ iPhone ಕ್ಯಾಮರಾದ ಮೂಲಕ ನೀವು ಕನಿಷ್ಠ ನಾಲ್ಕು ಫೋಟೋಗಳನ್ನು ತೆಗೆದುಕೊಂಡಿರಬೇಕು.

ನಿಮ್ಮ ಫೋಟೋಗ್ರಾಫಿಕ್ ಶೈಲಿಯನ್ನು ಸರಿಹೊಂದಿಸಿ

ನಿಮ್ಮ iPhone 16, iPhone 16 Plus, iPhone 16 Pro ಅಥವಾ iPhone 16 Pro Maxನಲ್ಲಿ ಡಿಫಾಲ್ಟ್ ಫೋಟೋಗ್ರಾಫಿಕ್ ಶೈಲಿಯನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಕ್ಯಾಮರಾ ಆ್ಯಪ್‌ನಲ್ಲಿ ಫೋಟೋ ತೆಗೆದುಕೊಳ್ಳುವ ಮೊದಲು ಅದರ ಟೋನ್, ಬಣ್ಣ ಮತ್ತು ತೀವ್ರತೆಯನ್ನು ಇನ್ನಷ್ಟು ಅನುಗೊಳಿಸಬಹುದು.

  1. ನಿಮ್ಮ iPhoneನಲ್ಲಿ ಕ್ಯಾಮರಾ ಆ್ಯಪ್ ಅನ್ನು ತೆರೆಯಿರಿ.

  2. ಸ್ಕ್ರೀನ್‌ನ ಮೇಲಿನ ಬಲಭಾಗದಲ್ಲಿರುವ ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ.

  3. ಟೋನ್ ಮತ್ತು ಬಣ್ಣವನ್ನು ಏಕಕಾಲದಲ್ಲಿ ಸರಿಹೊಂದಿಸಲು ನಿಮ್ಮ ಬೆರಳನ್ನು ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಮೇಲೆ ಡ್ರ್ಯಾಗ್ ಮಾಡಿ.

  4. ತೀವ್ರತೆಯ ಮಟ್ಟವನ್ನು ಸರಿಹೊಂದಿಸಲು ನಿಮ್ಮ ಬೆರಳನ್ನು ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಕೆಳಗಿರುವ ಸ್ಲೈಡರ್ ಮೇಲೆ ಡ್ರ್ಯಾಗ್ ಮಾಡಿ.

    ನೀವು ಹೊಂದಾಣಿಕೆಗಳನ್ನು ಮಾಡುವಾಗ, ಟೋನ್, ಬಣ್ಣ ಮತ್ತು ತೀವ್ರತೆಯ ಮೌಲ್ಯಗಳನ್ನು ಸ್ಕ್ರೀನ್‌ನ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ. ಈ ಮೌಲ್ಯಗಳನ್ನು ರೀಸೆಟ್ ಮಾಡಲು ದುಂಡಾದ ಬಾಣದ ಗುರುತಿನ ಮೇಲೆ ಟ್ಯಾಪ್ ಮಾಡಿ.

  5. ನೀವು ಪೂರ್ಣಗೊಳಿಸಿದಾಗ ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ.

ನೀವು ಫೋಟೋ ತೆಗೆದುಕೊಂಡ ನಂತರ, ಫೋಟೋಸ್ ಆ್ಯಪ್‌ನಲ್ಲಿ ಫೋಟೋಗ್ರಾಫಿಕ್ ಶೈಲಿ ಮೌಲ್ಯಗಳನ್ನು ಮತ್ತಷ್ಟು ಸರಿಹೊಂದಿಸಬಹುದು. ಫೋಟೋದ ಫೋಟೋಗ್ರಾಫಿಕ್ ಶೈಲಿಯನ್ನು ಎಡಿಟ್ ಮಾಡುವುದು ಅನ್ನು ನೋಡಿ.

ಬೇರೆ ಫೋಟೋಗ್ರಾಫಿಕ್ ಶೈಲಿಯನ್ನು ಬಳಸಿ

ಕ್ಯಾಮರಾದಲ್ಲಿ, ನೀವು ಫೋಟೋ ತೆಗೆದುಕೊಳ್ಳುವ ಮೊದಲು ಒಟ್ಟಾರೆ ಮೂಡ್ ಅನ್ನು ಬದಲಾಯಿಸಲು ವಿಭಿನ್ನ ಫೋಟೋಗ್ರಾಫಿಕ್ ಶೈಲಿಯನ್ನು ಆಯ್ಕೆ ಮಾಡಬಹುದು.

  1. ನಿಮ್ಮ iPhoneನಲ್ಲಿ ಕ್ಯಾಮರಾ ಆ್ಯಪ್ ಅನ್ನು ತೆರೆಯಿರಿ.

  2. ಸ್ಕ್ರೀನ್‌ನ ಮೇಲಿನ ಬಲಭಾಗದಲ್ಲಿರುವ ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ.

  3. ಅಂಬರ್, ರೋಸ್ ಗೋಲ್ಡ್, ಕ್ವೈಟ್ ಅಥವಾ ಎಥೆರಿಯಲ್‌ನಂತಹ ಹೊಸ ಶೈಲಿಯನ್ನು ಆಯ್ಕೆ ಮಾಡಲು ಕ್ಯಾಮರಾ ಫ್ರೇಮ್‌ನಲ್ಲಿ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

  4. ನೀವು ಪೂರ್ಣಗೊಳಿಸಿದಾಗ ಕ್ಯಾಮರಾ ಕಂಟ್ರೋಲ್ ಸ್ಟೇಟಸ್ ಅನ್ನು ಟ್ಯಾಪ್ ಮಾಡಿ.

ಫೋಟೋಗ್ರಾಫಿಕ್ ಶೈಲಿಯನ್ನು ತೆಗೆದುಹಾಕಿ ಅಥವಾ ರೀಸೆಟ್ ಮಾಡಿ

ನೀವು ನಿಮ್ಮ ಡಿಫಾಲ್ಟ್ ಫೋಟೋಗ್ರಾಫಿಕ್ ಶೈಲಿಯನ್ನು ತೆಗೆದುಹಾಕಬಹುದು ಅಥವಾ ಹೊಸದನ್ನು ಸೆಟ್ ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌ > ಕ್ಯಾಮರಾ > ಫೋಟೋಗ್ರಾಫಿಕ್ ಶೈಲಿಗಳು ಎಂಬಲ್ಲಿಗೆ ಹೋಗಿ.

  2. ಪ್ರಸ್ತುತ ಇರುವ ಫೋಟೋಗ್ರಾಫಿಕ್ ಶೈಲಿಯನ್ನು ತೆಗೆದುಹಾಕಲು ಸ್ಟ್ಯಾಂಡರ್ಡ್‌ಗೆ ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ; ಪ್ರಸ್ತುತ ಇರುವ ಫೋಟೋಗ್ರಾಫಿಕ್ ಶೈಲಿಯನ್ನು ತೆಗೆದುಹಾಕಲು ಮತ್ತು ಹೊಸದನ್ನು ಆರಿಸಲು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.