ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಪಾಸ್‌ಕೋಡ್ ಅನ್ನು ಸೆಟ್ ಮಾಡಿ

ಉತ್ತಮ ಭದ್ರತೆಗಾಗಿ, iPhone ಅನ್ನು ಆನ್ ಮಾಡಿದಾಗ ಅಥವಾ ಎಚ್ಚರಿಸಿದಾಗ ಅದನ್ನು ಅನ್‌ಲಾಕ್ ಮಾಡಲು ನಮೂದಿಸಬೇಕಾದ ಪಾಸ್‌ಕೋಡ್ ಅನ್ನು ಸೆಟ್ ಮಾಡಿ. ಪಾಸ್‌ಕೋಡ್ ಅನ್ನು ಸೆಟ್ ಮಾಡುವುದರಿಂದ ಡೇಟ ರಕ್ಷಣೆಯು ಸಹ ಆನ್ ಆಗುತ್ತದೆ ಮತ್ತು ಅದು 256-ಬಿಟ್ AES ಎನ್‌ಕ್ರಿಪ್ಶನ್ ಮೂಲಕ ನಿಮ್ಮ iPhone ಡೇಟವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. (ಕೆಲವು ಆ್ಯಪ್‌ಗಳು ಡೇಟ ರಕ್ಷಣೆಯನ್ನು ಬಳಸುವುದರಿಂದ ಹೊರಗುಳಿಯಬಹುದು.)

ಪಾಸ್‌ಕೋಡ್ ಅನ್ನು ಸೆಟ್ ಮಾಡಿ ಅಥವಾ ಬದಲಾಯಿಸಿ

  1. ಸೆಟ್ಟಿಂಗ್ಸ್ ಗೆ ಹೋಗಿ, ನಂತರ ನಿಮ್ಮ ಮಾಡಲ್ ಅನ್ನು ಅವಲಂಬಿಸಿ, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • Face ID ಹೊಂದಿರುವ iPhoneನಲ್ಲಿ: Face ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

    • ಹೋಮ್ ಬಟನ್ ಹೊಂದಿರುವ iPhoneನಲ್ಲಿ: Touch ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

  2. ಪಾಸ್‌ಕೋಡ್ ಅನ್ನು ಆನ್ ಮಾಡಿ ಅಥವಾ ಪಾಸ್‌ಕೋಡ್ ಅನ್ನು ಬದಲಾಯಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಪಾಸ್‌ಕೋಡ್ ಅನ್ನು ರಚಿಸಲು ಇರುವ ಆಯ್ಕೆಗಳನ್ನು ನೋಡಲು, ಪಾಸ್‌ಕೋಡ್ ಆಯ್ಕೆಗಳನ್ನು ಟ್ಯಾಪ್ ಮಾಡಿ. ಅತ್ಯಂತ ಸುರಕ್ಷಿತ ಆಯ್ಕೆಗಳೆಂದರೆ ಕಸ್ಟಮ್ ಆಲ್ಫಾನ್ಯೂಮರಿಕ್ ಕೋಡ್ ಮತ್ತು ಕಸ್ಟಮ್ ನ್ಯೂಮರಿಕ್ ಕೋಡ್.

ನೀವು ಪಾಸ್‌ಕೋಡ್ ಅನ್ನು ಸೆಟ್ ಮಾಡಿದ ನಂತರ, ಬೆಂಬಲಿತ ಮಾಡಲ್‌ಗಳಲ್ಲಿ ನೀವು iPhone (ನಿಮ್ಮ ಮಾಡಲ್ ಅನ್ನು ಅವಲಂಬಿಸಿ) ಅನ್ನು ಅನ್‌ಲಾಕ್ ಮಾಡಲು Face ID ಅಥವಾ Touch IDಯನ್ನು ಬಳಸಬಹುದು. ಹಾಗಿದ್ದರೂ ಹೆಚ್ಚುವರಿ ಭದ್ರತೆಗಾಗಿ, ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮ iPhone ಅನ್ನು ಅನ್‌ಲಾಕ್ ಮಾಡಲು ನೀವು ಯಾವಾಗಲೂ ನಿಮ್ಮ ಪಾಸ್‌ಕೋಡ್ ಅನ್ನು ನಮೂದಿಸಬೇಕು:

  • ನಿಮ್ಮ iPhone ಅನ್ನು ನೀವು ಆನ್ ಮಾಡಿದ್ದಲ್ಲಿ ಅಥವಾ ಮರುಪ್ರಾರಂಭಿಸಿದ್ದಲ್ಲಿ.

  • ನಿಮ್ಮ iPhone ಅನ್ನು 48 ಗಂಟೆಗಳಿಗಿಂತ ಹೆಚ್ಚು ಕಾಲ ನೀವು ಅನ್‌ಲಾಕ್ ಮಾಡಿಲ್ಲ ಎಂದಾದಲ್ಲಿ.

  • ಕಳೆದ 6.5 ದಿನಗಳಲ್ಲಿ ನಿಮ್ಮ iPhone ಅನ್ನು ಪಾಸ್‌ಕೋಡ್ ಮೂಲಕ ನೀವು ಅನ್‌ಲಾಕ್ ಮಾಡಿಲ್ಲ ಮತ್ತು ಕಳೆದ 4 ಗಂಟೆಗಳಲ್ಲಿ Face ID ಅಥವಾ Touch ID ಮೂಲಕ ನೀವು ಅದನ್ನು ಅನ್‌ಲಾಕ್ ಮಾಡಿಲ್ಲ ಎಂದಾದಲ್ಲಿ.

  • ನಿಮ್ಮ iPhone ರಿಮೋಟ್ ಲಾಕ್ ಕಮಾಂಡ್ ಅನ್ನು ಸ್ವೀಕರಿಸಿದ್ದಲ್ಲಿ.

  • Face ID ಅಥವಾ Touch ID ಮೂಲಕ ನಿಮ್ಮ iPhone ಅನ್ನು ಅನ್‌ಲಾಕ್ ಮಾಡಲು ಐದು ವಿಫಲ ಪ್ರಯತ್ನಗಳು ಆಗಿದ್ದಲ್ಲಿ.

  • ತುರ್ತು SOS ಬಳಸುವ ಪ್ರಯತ್ನವನ್ನು ಪ್ರಾರಂಭಿಸಲಾಗಿದೆ ( ತುರ್ತು SOS ಅನ್ನು ಬಳಸಿ ಎಂಬುದನ್ನು ನೋಡಿ).

  • ನಿಮ್ಮ ಮೆಡಿಕಲ್ IDಯನ್ನು ನೋಡುವ ಪ್ರಯತ್ನವನ್ನು ಪ್ರಾರಂಭಿಸಲಾಗಿದೆ (ನಿಮ್ಮ ಮೆಡಿಕಲ್ IDಯನ್ನು ಸೆಟಪ್ ಮಾಡಿ ಮತ್ತು ನೋಡಿ ನೋಡಿ).

iPhone ಯಾವಾಗ ಸ್ವಯಂಚಾಲಿತವಾಗಿ ಲಾಕ್ ಆಗಬೇಕು ಎಂಬುದನ್ನು ಬದಲಾಯಿಸಿ

ಸೆಟ್ಟಿಂಗ್ಸ್  > ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್ > ಸ್ವಯಂ-ಲಾಕ್ ಎಂಬಲ್ಲಿಗೆ ಹೋಗಿ, ನಂತರ ಸಮಯಾವಧಿಯನ್ನು ಸೆಟ್ ಮಾಡಿ.

ಗಮನಿಸಿ: ನಿಮ್ಮ iPhone ಅನ್ನು ನೀವು ಹೋಮ್ ಸ್ಕ್ರೀನ್‌ನಲ್ಲಿ ಇರಿಸಿದರೆ ಮತ್ತು ಯಾವುದೇ ಕ್ರಿಯೆಯನ್ನು ನಡೆಸದಿದ್ದರೆ, ನಿಮ್ಮ ಸ್ವಯಂ-ಲಾಕ್ ಸಮಯವು ಅರ್ಧದಷ್ಟು ಕಡಿಮೆಯಾಗುತ್ತದೆ.

10 ವಿಫಲ ಪಾಸ್‌ಕೋಡ್‌ಗಳ ನಂತರ ಡೇಟವನ್ನು ಅಳಿಸಿ

ಸತತ 10 ವಿಫಲ ಪಾಸ್‌ಕೋಡ್ ಪ್ರಯತ್ನಗಳ ನಂತರ ಎಲ್ಲಾ ಮಾಹಿತಿ, ಮೀಡಿಯಾ ಮತ್ತು ವೈಯಕ್ತಿಕ ಸೆಟ್ಟಿಂಗ್ಸ್ ಅನ್ನು ಅಳಿಸುವಂತೆ iPhone ಅನ್ನು ಸೆಟ್ ಮಾಡಿ.

  1. ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ, ನಂತರ ಇವುಗಳಲ್ಲಿ ಒಂದನ್ನು ಮಾಡಿ:

    • Face ID ಹೊಂದಿರುವ iPhoneನಲ್ಲಿ: Face ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

    • ಹೋಮ್ ಬಟನ್ ಹೊಂದಿರುವ iPhoneನಲ್ಲಿ: Touch ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

  2. ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಡೇಟವನ್ನು ಅಳಿಸಿ ಎಂಬುದನ್ನು ಆನ್ ಮಾಡಿ.

ಎಲ್ಲಾ ಡೇಟವನ್ನು ಅಳಿಸಿದ ನಂತರ, ನೀವು ಬ್ಯಾಕಪ್‌ನಿಂದ ನಿಮ್ಮ ಸಾಧನವನ್ನು ರಿಸ್ಟೋರ್ ಮಾಡಬೇಕು. ನಿಮ್ಮ iPhone ಅನ್ನು ನೀವು ಬ್ಯಾಕಪ್ ಮಾಡಿರದಿದ್ದರೆ, ನೀವು ಅದನ್ನು ಪುನಃ ಹೊಸದು ಎಂಬಂತೆ ಸೆಟಪ್ ಮಾಡಬೇಕು.

ಪಾಸ್‌ಕೋಡ್ ಅನ್ನು ಆಫ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ, ನಂತರ ಇವುಗಳಲ್ಲಿ ಒಂದನ್ನು ಮಾಡಿ:

    • Face ID ಹೊಂದಿರುವ iPhoneನಲ್ಲಿ: Face ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

    • ಹೋಮ್ ಬಟನ್ ಹೊಂದಿರುವ iPhoneನಲ್ಲಿ: Touch ID ಮತ್ತು ಪಾಸ್‌ಕೋಡ್ ಎಂಬುದನ್ನು ಟ್ಯಾಪ್ ಮಾಡಿ.

  2. ಪಾಸ್‌ಕೋಡ್ ಅನ್ನು ಆಫ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಪಾಸ್‌ಕೋಡ್ ಅನ್ನು ರೀಸೆಟ್ ಮಾಡಿ

ನೀವು ಸತತವಾಗಿ ನಾಲ್ಕು ಬಾರಿ ತಪ್ಪಾದ ಪಾಸ್‌ಕೋಡ್ ಅನ್ನು ನಮೂದಿಸಿದರೆ, ನಿಮ್ಮ ಸಾಧನವು ಲಾಕ್ ಆಗುತ್ತದೆ ಮತ್ತು iPhone ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ. ನಿಮ್ಮ ಪಾಸ್‌ಕೋಡ್ ಅನ್ನು ನೆನಪಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ಕಂಪ್ಯೂಟರ್ ಅಥವಾ ರಿಕವರಿ ಮೋಡ್ ಮೂಲಕ ನಿಮ್ಮ iPhone ಅನ್ನು ಅಳಿಸಬಹುದು, ನಂತರ ಹೊಸ ಪಾಸ್‌ಕೋಡ್ ಸೆಟ್ ಮಾಡಬಹುದು. ನಿಮ್ಮ iPhone ಪಾಸ್‌ಕೋಡ್ ಅನ್ನು ನೀವು ಮರೆತಿದ್ದರೆ, ಅದನ್ನು ರೀಸೆಟ್ ಮಾಡಲು ನಿಮ್ಮ Mac ಅಥವಾ PCಯನ್ನು ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಗಮನಿಸಿ: ನಿಮ್ಮ ಪಾಸ್‌ಕೋಡ್ ಅನ್ನು ಮರೆಯುವ ಮೊದಲು ನೀವು iCloud ಅಥವಾ ಕಂಪ್ಯೂಟರ್ ಬ್ಯಾಕಪ್ ಅನ್ನು ಮಾಡಿದ್ದರೆ, ಆ ಬ್ಯಾಕಪ್‌ನಿಂದ ನಿಮ್ಮ ಡೇಟ ಮತ್ತು ಸೆಟ್ಟಿಂಗ್ಸ್ ಅನ್ನು ನೀವು ರಿಸ್ಟೋರ್ ಮಾಡಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.