ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಹುಡುಕಿ ಆ್ಯಪ್‌ನಿಂದ AirTag ಅಥವಾ ಇತರ ಐಟಮ್ ಅನ್ನು ತೆಗೆದುಹಾಕಿ

ನಿಮ್ಮ Apple ಖಾತೆಯಿಂದ AirTag ಅಥವಾ ಥರ್ಡ್-ಪಾರ್ಟಿ ಐಟಮ್ ಅನ್ನು ತೆಗೆದುಹಾಕಲು ನೀವು ಹುಡುಕಿ ಆ್ಯಪ್ ಅನ್ನು ಬಳಸಬಹುದು, ಇದರಿಂದ ಬೇರೆಯವರು ಅದನ್ನು ನೋಂದಾಯಿಸಬಹುದು.

AirTag ಅಥವಾ ಥರ್ಡ್ ಪಾರ್ಟಿ ಐಟಮ್ ಅನ್ನು ನೋಂದಾಯಿಸುವುದು ಹೇಗೆಂದು ತಿಳಿಯಿರಿ.

  1. ನಿಮ್ಮ iPhoneನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಐಟಮ್‌ಗಳನ್ನು ಟ್ಯಾಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ ಐಟಮ್ ಅನ್ನು ಟ್ಯಾಪ್ ಮಾಡಿ.

  3. ಐಟಮ್ ಅನ್ನು ನಿಮ್ಮ iPhoneನ ಹತ್ತಿರಕ್ಕೆ ತನ್ನಿ.

    ಐಟಮ್ ನಿಮ್ಮ ಸಾಧನದ ಹತ್ತಿರದಲ್ಲಿ ಇಲ್ಲದಿದ್ದರೆ, ನೀವು ಈಗಲೂ ಅದನ್ನು ನಿಮ್ಮ ಖಾತೆಯಿಂದ ತೆಗೆದುಹಾಕಬಹುದು. ಆದಾಗ್ಯೂ, ಯಾರಾದರೂ ಐಟಮ್ ಒಂದನ್ನು ತಮ್ಮ Apple ಖಾತೆಗೆ ನೋಂದಾಯಿಸುವ ಮೊದಲು ಅದನ್ನು ರೀಸೆಟ್ ಮಾಡಬೇಕು.

  4. ಐಟಮ್ ಅನ್ನು ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಗಮನಿಸಿ: ಐಟಮ್ ಅನ್ನು ರೀಸೆಟ್ ಮಾಡಲು ತಯಾರಕರ ಸೂಚನೆಗಳನ್ನು ಅನುಸರಿಸಿ. AirTagಗಾಗಿ, ನಿಮ್ಮ AirTag ಅನ್ನು ರೀಸೆಟ್ ಮಾಡುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.