ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಫೋಟೋಸ್ ಆ್ಯಪ್‌ನಲ್ಲಿ Apple Intelligence ಅನ್ನು ಬಳಸಿ

Apple Intelligence ಮೂಲಕ* ನೀವು ಕ್ಯಾಪ್ಚರ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಏನನ್ನಾದರೂ ಹುಡುಕಬಹುದು, ನೀವು ನೋಡಲು ಬಯಸುವ ಸ್ಟೋರಿಗಳ ನೆನಪಿನ ಚಲನಚಿತ್ರಗಳನ್ನು ರಚಿಸಬಹುದು ಮತ್ತು ಅಡಚಣೆಯುಂಟುಮಾಡುವ ವಸ್ತುಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಫೋಟೋಗಳ ಅತ್ಯಂತ ಪ್ರಮುಖ ಭಾಗಗಳ ಮೇಲೆ ಫೋಕಸ್ ಮಾಡಬಹುದು.

ಗಮನಿಸಿ: Apple Intelligence ಎಲ್ಲಾ iPhone ಮಾಡಲ್‌ಗಳು ಅಥವಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ** ತೀರಾ ಇತ್ತೀಚಿನ ಲಭ್ಯವಿರುವ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು, ನೀವು iOSನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದೀರಿ ಮತ್ತು ನಿಮ್ಮ ಸಾಧನದಲ್ಲಿ Apple Intelligence ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Apple Intelligence ಮೂಲಕ ನಿರ್ದಿಷ್ಟ ಫೋಟೋಗಳು ಮತ್ತು ವೀಡಿಯೊಗಳನ್ನು ಹುಡುಕುವುದು

ಫೋಟೋಸ್ ಆ್ಯಪ್‌ನಲ್ಲಿ ಫೋಟೋಗಳನ್ನು ತೋರಿಸುತ್ತಿರುವ iPhone. ವಿವರಣೆಯನ್ನು ಹೊಂದಿರುವ ಹುಡುಕಾಟ ಬಾರ್, ಸ್ಕ್ರೀನ್‌ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

Apple Intelligence ವೀಡಿಯೊದಲ್ಲಿ ನಿರ್ದಿಷ್ಟ ಫೋಟೋ ಅಥವಾ ಪ್ರಮುಖ ಕ್ಷಣವನ್ನು ಹುಡುಕುವುದನ್ನು ಇನ್ನಷ್ಟು ಸುಲಭವಾಗಿಸುತ್ತದೆ—ನೀವು ಹುಡುಕಲು ಬಯಸುವುದನ್ನು ವಿವರಿಸಿದರೆ ಸಾಕು.

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಹುಡುಕಾಟವನ್ನು ಟ್ಯಾಪ್ ಮಾಡಿ, ನಂತರ ಸಹಜ ಭಾಷೆಯಲ್ಲಿ ವಿವರಣೆಯನ್ನು ನಮೂದಿಸಿ—ಉದಾಹರಣೆಗೆ “ಮಾಯಾ ಟೈ-ಡೈ ಶರ್ಟ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ ಮಾಡುತ್ತಿರುವುದು” ಅಥವಾ “ಸ್ಯಾಡೀ ಹುಲ್ಲುಗಾವಲಿನಲ್ಲಿ ಕಾರ್ಟ್‌ವೀಲಿಂಗ್ ಮಾಡುತ್ತಿರುವುದು”.

    ಗಮನಿಸಿ: ಫೋಟೋಗಳಲ್ಲಿ ಜನರು ಮತ್ತು ಸಾಕುಪ್ರಾಣಿಗಳನ್ನು ಹೆಸರಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ಫೋಟೋಸ್ ಆ್ಯಪ್‌ನಲ್ಲಿ ಜನರು ಮತ್ತು ಸಾಕುಪ್ರಾಣಿಗಳನ್ನು ಹುಡುಕಿ ಮತ್ತು ಹೆಸರಿಸಿ ಎಂಬುದನ್ನು ನೋಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಎಲ್ಲಾ ಹುಡುಕಾಟ ಫಲಿತಾಂಶಗಳನ್ನು ನೋಡಿ: ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ.

    • ನಿರ್ದಿಷ್ಟ ಹುಡುಕಾಟ ಫಲಿತಾಂಶಗಳನ್ನು ಆಯ್ಕೆಮಾಡಿ: ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಹಂಚಿಕೊಳ್ಳಲು ಅಥವಾ ಆಲ್ಬಮ್‌ಗೆ ಸೇರಿಸಲು ಬಯಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ.

    • ಹುಡುಕಾಟ ಫಲಿತಾಂಶಗಳನ್ನು ವಿರುದ್ಧ ಕಾಲಾನುಕ್ರಮದಲ್ಲಿ ವಿಂಗಡಿಸಿ: ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ.

  4. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನೆನಪಿನ ಚಲನಚಿತ್ರವನ್ನು ರಚಿಸಿ

ನೀವು ನೋಡಲು ಬಯಸುವ ಸ್ಟೋರಿಯ ಕಸ್ಟಮ್ ನೆನಪಿನ ಚಲನಚಿತ್ರವನ್ನು ನೀವು ಫೋಟೋಗಳಲ್ಲಿಯೇ ರಚಿಸಬಹುದು. ಕೇವಲ ವಿವರಣೆಯನ್ನು ಟೈಪ್ ಮಾಡಿದರೆ ಸಾಕು. Apple Intelligence ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ಕಂಡುಕೊಳ್ಳುತ್ತದೆ, ಅನನ್ಯ ಅಧ್ಯಾಯಗಳು ಮತ್ತು ನಿರೂಪಣೆಯುಳ್ಳ ಕಥಾಹಂದರವನ್ನು ರಚಿಸುತ್ತದೆ ಮತ್ತು ಅದನ್ನು ಸಂಗೀತಕ್ಕೆ ಸೆಟ್ ಮಾಡುತ್ತದೆ.

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ’ನೆನಪುಗಳು’ ಎಂಬಲ್ಲಿಗೆ ಸ್ಕ್ರೋಲ್ ಮಾಡಿ, ನಂತರ ರಚಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಲೈಬ್ರರಿಯಿಂದ ನೀವು ರಚಿಸಲು ಬಯಸುವ ಚಲನಚಿತ್ರದ ವಿವರಣೆಯನ್ನು ಟೈಪ್ ಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಫೋಟೋಗಳಿಂದ ಅಡಚಣೆಗಳನ್ನು ತೆಗೆದುಹಾಕುವುದು

ಫೋಟೋಸ್ ಆ್ಯಪ್‌ನಲ್ಲಿ ಎಡಿಟ್ ಮಾಡಲಾದ ಫೋಟೋವೊಂದನ್ನು ತೋರಿಸುತ್ತಿರುವ iPhone. ಫೋಟೋದ ಹಿನ್ನೆಲೆಯಲ್ಲಿರುವ ಆಕೃತಿಯ ಸುತ್ತ ವೃತ್ತವನ್ನು ಹಾಕಿ ಅದನ್ನು ಹೈಲೈಟ್ ಮಾಡಲಾಗಿದೆ.

ಫೋಟೋದ ಹಿನ್ನೆಲೆಯಲ್ಲಿರುವ, ಗಮನವನ್ನು ಬೇರೆಡೆಗೆ ಸೆಳೆಯುವ ವಸ್ತುಗಳನ್ನು ತೆಗೆದುಹಾಕಲು ನೀವು ಕ್ಲೀನ್ ಅಪ್ ಟೂಲ್ ಅನ್ನು ಬಳಸಬಹುದು.

ಗಮನಿಸಿ: ಕ್ಲೀನ್ ಅಪ್ ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ, ಫೋಟೋಸ್ ಆ್ಯಪ್‌ನಲ್ಲಿ ಕ್ಲೀನ್ ಅಪ್ ಬಳಸಲು ಬೇಕಾದ ಅವಶ್ಯಕತೆಗಳು ಎಂಬ Apple ಬೆಂಬಲ ಲೇಖನವನ್ನು ನೋಡಿ.

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಫೋಟೋವನ್ನು ತೆರೆಯಿರಿ, ಎಡಿಟ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕ್ಲೀನ್ ಅಪ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ನೀವು ಕ್ಲೀನ್ ಅಪ್ ಅನ್ನು ಟ್ಯಾಪ್ ಮಾಡಿದ ನಂತರ, ಕೆಲವು ಐಟಮ್‌ಗಳನ್ನು ಸ್ವಯಂಚಾಲಿತವಾಗಿ ಹೈಲೈಟ್ ಮಾಡಬಹುದು, ಹಾಗಾಗಿ ನೀವು ಅವುಗಳನ್ನು ತೆಗೆದುಹಾಕಲು ತ್ವರಿತವಾಗಿ ಟ್ಯಾಪ್ ಮಾಡಬಹುದು.

  3. ನೀವು ತೆಗೆದುಹಾಕಲು ಬಯಸುವುದನ್ನು ಟ್ಯಾಪ್ ಮಾಡಿ, ಬ್ರಶ್ ಮಾಡಿ ಅಥವಾ ಅದಕ್ಕೆ ವೃತ್ತ ಹಾಕಿ.

    ಚಿತ್ರವನ್ನು ಝೂಮ್ ಮಾಡಲು ಅಥವಾ ಪ್ಯಾನ್ ಮಾಡಲು ಎರಡು ಬೆರಳುಗಳನ್ನು ಬಳಸಿ.

    ಗಮನಿಸಿ: ನೀವು ವ್ಯಕ್ತಿಯ ಮುಖದ ಮೇಲೆ ಬ್ರಷ್ ಮಾಡಿದರೆ, ಪಿಕ್ಸೆಲೇಟೆಡ್ ಎಫೆಕ್ಟ್‌ನಿಂದ ಮುಖವು ಬ್ಲರ್ ಆಗಬಹುದು.

  4. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

*Apple Intelligence ಜನರೇಟಿವ್ ಮಾಡಲ್‌ಗಳನ್ನು ಬಳಸುತ್ತದೆ ಮತ್ತು ಔಟ್‌ಪುಟ್‌ಗಳಲ್ಲಿ ವ್ಯತ್ಯಾಸವಾಗಬಹುದು. ನಿಖರತೆಗಾಗಿ ಮುಖ್ಯ ಮಾಹಿತಿಯನ್ನು ಪರಿಶೀಲಿಸಿ.
**Siriಯನ್ನು ಹೊಂದಿರುವ ಮತ್ತು ಸಾಧನದ ಭಾಷೆಯನ್ನು ಚೈನೀಸ್ (ಸರಳೀಕೃತ), ಇಂಗ್ಲಿಷ್ (ಆಸ್ಟ್ರೇಲಿಯಾ, ಕೆನಡಾ, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಸಿಂಗಪೂರ್, ದಕ್ಷಿಣ ಆಫ್ರಿಕಾ, ಯುಕೆ ಅಥವಾ ಯು. ಎಸ್), ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್ (ಬ್ರೆಜಿಲ್) ಅಥವಾ ಸ್ಪ್ಯಾನಿಷ್‌ಗೆ ಸೆಟ್ ಮಾಡಲಾಗಿರುವ ಎಲ್ಲಾ iPhone 16 ಮಾಡಲ್‌ಗಳು, iPhone 15 Pro ಮತ್ತು iPhone 15 Pro Maxನಲ್ಲಿ Apple Intelligence ಬೀಟಾದಲ್ಲಿ ಲಭ್ಯವಿದೆ. ಕೆಲವು ಫೀಚರ್‌ಗಳು ಎಲ್ಲಾ ಪ್ರದೇಶಗಳು ಅಥವಾ ಭಾಷೆಗಳಲ್ಲಿ ಲಭ್ಯವಿಲ್ಲದಿರಬಹುದು. ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.