ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸಂಪರ್ಕ ಮಾಹಿತಿಯನ್ನು ಸೇರಿಸಿ ಮತ್ತು ಬಳಸಿ

ಸಂಪರ್ಕಗಳನ್ನು ರಚಿಸಲು, ಹುಡುಕಲು, ಹಂಚಿಕೊಳ್ಳಲು ಮತ್ತು ಡಿಲೀಟ್ ಮಾಡಲು ನೀವು ಸಂಪರ್ಕ ಆ್ಯಪ್ ಅನ್ನು ಬಳಸಬಹುದು.

Siri: ಈ ರೀತಿ ಏನಾದರೂ ಹೇಳಿ:

  • “What’s my brother’s work address?”

  • “Sarah Milos is my sister”

  • “Send a message to my sister”

Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ

ಸಂಪರ್ಕವನ್ನು ರಚಿಸಿ

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

Mail ಆ್ಯಪ್‌ನಲ್ಲಿ ನೀವು ಸ್ವೀಕರಿಸುವ ಈಮೇಲ್ ಮತ್ತು ಕ್ಯಾಲೆಂಡರ್ ಆ್ಯಪ್‌ನಲ್ಲಿ ನೀವು ಸ್ವೀಕರಿಸುವ ಆಹ್ವಾನಗಳಂತಹ ಇತರ ಆ್ಯಪ್‌ಗಳ ನಿಮ್ಮ ಬಳಕೆಯನ್ನು ಆಧರಿಸಿ, Siriಯು ಹೊಸ ಸಂಪರ್ಕಗಳನ್ನು ಸಹ ಸೂಚಿಸುತ್ತದೆ. (ಈ ಫೀಚರ್ ಅನ್ನು ಆಫ್ ಮಾಡಲು, ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂಪರ್ಕ > Siri ಎಂಬಲ್ಲಿಗೆ ಹೋಗಿ, ನಂತರ ಸಂಪರ್ಕದ ಸಲಹೆಗಳನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.)

ನೀವು ಸಂಪರ್ಕ ಆ್ಯಪ್ ಅನ್ನು ಬಳಸುವ ವಿಧಾನವನ್ನು ಆಧರಿಸಿ, Siri ಇತರ ಆ್ಯಪ್‌ಗಳಲ್ಲಿ ಸಂಪರ್ಕ ಮಾಹಿತಿಯ ಸಲಹೆಗಳನ್ನು ಸಹ ಒದಗಿಸುತ್ತದೆ. (ಈ ಫೀಚರ್ ಅನ್ನು ಆಫ್ ಮಾಡಲು, ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂಪರ್ಕ > Siri ಎಂಬಲ್ಲಿಗೆ ಹೋಗಿ, ನಂತರ "ಈ ಆ್ಯಪ್‌ನಿಂದ ಕಲಿಯಿರಿ" ಎಂಬುದನ್ನು ಆಫ್ ಮಾಡಿ.) Siri ಸಲಹೆಗಳನ್ನು ನೋಡಿ.

ಸಂಪರ್ಕವನ್ನು ಹುಡುಕಿ

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸಂಪರ್ಕಗಳ ಪಟ್ಟಿಯ ಮೇಲ್ಭಾಗದಲ್ಲಿರುವ ಹುಡುಕಾಟ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಹೆಸರು, ವಿಳಾಸ, ಫೋನ್ ಸಂಖ್ಯೆ ಅಥವಾ ಇತರ ಸಂಪರ್ಕದ ಮಾಹಿತಿಯನ್ನು ನಮೂದಿಸಿ.

ನೀವು ಹುಡುಕಾಟವನ್ನು ಬಳಸಿಕೊಂಡು ಕೂಡ ನಿಮ್ಮ ಸಂಪರ್ಕಗಳನ್ನು ಹುಡುಕಬಹುದು (Spotlightನೊಂದಿಗೆ ಹುಡುಕಿ ಎಂಬುದನ್ನು ನೋಡಿ).

ಸಂಪರ್ಕವೊಂದನ್ನು ಹಂಚಿಕೊಳ್ಳಿ

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸಂಪರ್ಕವೊಂದನ್ನು ಟ್ಯಾಪ್ ಮಾಡಿ, ಸಂಪರ್ಕವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹಂಚಿಕೊಳ್ಳುವ ವಿಧಾನವನ್ನು ಆರಿಸಿ.

ಸಂಪರ್ಕವನ್ನು ಹಂಚಿಕೊಳ್ಳುವುದರಿಂದ ಸಂಪರ್ಕದ ಕಾರ್ಡ್‌ನಲ್ಲಿನ ಎಲ್ಲಾ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಸಂಪರ್ಕವೊಂದನ್ನು ತ್ವರಿತವಾಗಿ ತಲುಪಿರಿ

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸಂದೇಶವೊಂದನ್ನು ಪ್ರಾರಂಭಿಸಲು, ಫೋನ್ ಕರೆ ಅಥವಾ FaceTime ಕರೆಯನ್ನು ಮಾಡಲು, ಈಮೇಲ್ ಅನ್ನು ರಚಿಸಲು ಅಥವಾ Apple Pay ಮೂಲಕ ಹಣವನ್ನು ಕಳುಹಿಸಲು ಸಂಪರ್ಕದ ಹೆಸರಿನ ಕೆಳಗಿನ ಬಟನ್ ಅನ್ನು ಟ್ಯಾಪ್ ಮಾಡಿ.

ಒಂದು ಸಂಪರ್ಕ ವಿಧಾನಕ್ಕೆ ಸಂಬಂಧಿಸಿದ ಡಿಫಾಲ್ಟ್ ಫೋನ್ ಸಂಖ್ಯೆ ಅಥವಾ ಈಮೇಲ್ ವಿಳಾಸವನ್ನು ಬದಲಾಯಿಸಲು, ಸಂಪರ್ಕದ ಹೆಸರಿನ ಕೆಳಗೆ ಆ ವಿಧಾನಕ್ಕೆ ಸಂಬಂಧಪಟ್ಟ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಪಟ್ಟಿಯಲ್ಲಿನ ಆಯ್ಕೆಯನ್ನು ಟ್ಯಾಪ್ ಮಾಡಿ.

ಸಂಪರ್ಕವನ್ನು ಡಿಲೀಟ್ ಮಾಡಿ

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸಂಪರ್ಕದ ಕಾರ್ಡ್‌ಗೆ ಹೋಗಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  3. ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಸಂಪರ್ಕವನ್ನು ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.