ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಹಾರ್ಡ್‌ವೇರ್ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸಿ

ಆ್ಯಪ್‌ಗಳು ನಿಮ್ಮ iPhoneನಲ್ಲಿ ಕ್ಯಾಮರಾ ಅಥವಾ ಮೈಕ್ರೋಫೋನ್‌ ಬಳಸುವ ಮೊದಲು ಅವುಗಳು ನಿಮ್ಮ ಅನುಮತಿಯನ್ನು ಕೋರಬೇಕು ಮತ್ತು ಅವುಗಳು ಅನುಮತಿಯನ್ನು ಏಕೆ ಕೇಳುತ್ತಿವೆ ಎಂಬುದನ್ನು ವಿವರಿಸಬೇಕು. ಉದಾಹರಣೆಗೆ, ಒಂದು ಸಾಮಾಜಿಕ ನೆಟ್‌ವರ್ಕಿಂಗ್ ಆ್ಯಪ್‌ಗೆ ನೀವು ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ಅಪ್‌ಲೋಡ್ ಮಾಡಲು ನಿಮಗೆ ಅನುವಾಗುವಂತೆ ನಿಮ್ಮ ಕ್ಯಾಮರಾವನ್ನು ಬಳಸಲು ಆ ಆ್ಯಪ್ ಕೇಳಬಹುದು. Bluetooth® ಕನೆಕ್ಟಿವಿಟಿ, ಮೋಷನ್ ಮತ್ತು ಫಿಟ್‌ನೆಸ್ ಸೆನ್ಸರ್‌ಗಳು ಮತ್ತು ನಿಮ್ಮ ಸ್ಥಳೀಯ ನೆಟ್‌ವರ್ಕ್‌ನಲ್ಲಿನ ಸಾಧನಗಳು ಸೇರಿದಂತೆ, ಹಲವಾರು ಇತರ ಹಾರ್ಡ್‌ವೇರ್ ಫೀಚರ್‌ಗಳನ್ನು ಬಳಸುವುದಕ್ಕೆ ಆ್ಯಪ್‌ಗಳು ಅದೇ ರೀತಿಯಲ್ಲಿ ನಿಮ್ಮ ಅನುಮತಿಯನ್ನು ಕೇಳಬೇಕು.

ಈ ಹಾರ್ಡ್‌ವೇರ್ ಫೀಚರ್‌ಗಳಿಗೆ ಯಾವ ಆ್ಯಪ್‌ಗಳು ಆ್ಯಕ್ಸೆಸ್ ಅನ್ನು ವಿನಂತಿಸಿವೆ ಎಂಬುದನ್ನು ನೀವು ಪರಿಶೀಲಿಸಬಹುದು ಮತ್ತು ನಿಮ್ಮ ಇಷ್ಟದಂತೆ ನೀವು ಅವುಗಳ ಆ್ಯಕ್ಸೆಸ್ ಅನ್ನು ಬದಲಾಯಿಸಬಹುದು.

ಕ್ಯಾಮರಾ, ಮೈಕ್ರೋಫೋನ್‌ ಮತ್ತು ಇತರ ಹಾರ್ಡ್‌ವೇರ್ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಪರಿಶೀಲಿಸಿ ಅಥವಾ ಬದಲಾಯಿಸಿ

  1. ಸೆಟ್ಟಿಂಗ್ಸ್ ಆ್ಯಪ್  > ಗೌಪ್ಯತೆ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ.

  2. ಕ್ಯಾಮರಾ, Bluetooth, ಸ್ಥಳೀಯ ನೆಟ್‌ವರ್ಕ್ ಅಥವಾ ಮೈಕ್ರೋಫೋನ್‌ ರೀತಿಯ ಹಾರ್ಡ್‌ವೇರ್ ಫೀಚರ್ ಅನ್ನು ಟ್ಯಾಪ್ ಮಾಡಿ.

ಈ ಪಟ್ಟಿಯು ಆ್ಯಕ್ಸೆಸ್ ಅನ್ನು ವಿನಂತಿಸಿದ ಆ್ಯಪ್‌ಗಳನ್ನು ತೋರಿಸುತ್ತದೆ. ನೀವು ಪಟ್ಟಿಯಲ್ಲಿರುವ ಯಾವುದೇ ಆ್ಯಪ್‌ನ ಆ್ಯಕ್ಸೆಸ್ ಅನ್ನು ಆನ್ ಅಥವಾ ಆಫ್ ಮಾಡಬಹುದು.

ಗಮನಿಸಿ: ಆ್ಯಪ್, ಕ್ಯಾಮರಾವನ್ನು ಬಳಸುವ ಪ್ರತಿಬಾರಿ (ಕ್ಯಾಮರಾ ಮತ್ತು ಮೈಕ್ರೋಫೋನ್‌ ಅನ್ನು ಒಟ್ಟಿಗೆ ಬಳಸುವ ಸಂದರ್ಭವನ್ನು ಸೇರಿದಂತೆ), ಹಸಿರು ಬಣ್ಣದ ಇಂಡಿಕೇಟರ್ ಕಾಣಿಸಿಕೊಳ್ಳುತ್ತದೆ. ಆ್ಯಪ್, ಕ್ಯಾಮರಾ ಇಲ್ಲದೆ ಕೇವಲ ಮೈಕ್ರೋಫೋನ್‌ ಅನ್ನು ಬಳಸುವಾಗ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಿತ್ತಳೆ ಬಣ್ಣದ ಇಂಡಿಕೇಟರ್ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಯಾವುದೇ ಆ್ಯಪ್ ಇತ್ತೀಚೆಗೆ ಅವೆರಡರಲ್ಲಿ ಒಂದನ್ನು ಬಳಸಿದಾಗ ನಿಮಗೆ ತಿಳಿಸಲು ಕಂಟ್ರೋಲ್ ಸೆಂಟರ್‌ನ ಮೇಲ್ಭಾಗದಲ್ಲಿ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.