ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ನಕ್ಷೆ ಆ್ಯಪ್‌ನಲ್ಲಿ ಸ್ಥಳಗಳಿಗೆ ರೇಟಿಂಗ್ ನೀಡುವುದು ಮತ್ತು ಫೋಟೋಗಳನ್ನು ಸೇರಿಸುವುದು

ನಕ್ಷೆಯ ಇತರ ಬಳಕೆದಾರರಿಗೆ ಸಹಾಯ ಮಾಡಲು ನೀವು ಭೇಟಿ ನೀಡುವ ಸ್ಥಳಗಳ ರೇಟಿಂಗ್‌ಗಳು ಮತ್ತು ಫೋಟೋಗಳನ್ನು ಒದಗಿಸಬಹುದು.

ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿರುವ ಎಲ್ಲೆಡೆ ನಿಮ್ಮ ರೇಟಿಂಗ್‌ಗಳು ಮತ್ತು ಫೋಟೋಗಳು ಕಾಣಿಸಿಕೊಳ್ಳುತ್ತವೆ.

ಸ್ಥಳವೊಂದರ ಒಟ್ಟಾರೆ ರೇಟಿಂಗ್, ಫೋಟೋಗಳು ಮತ್ತು ಆ ಸ್ಥಳಕ್ಕೆ ರೇಟಿಂಗ್ ನೀಡಲು ಬಳಸುವ ಬಟನ್ ಅನ್ನು ಹೊಂದಿರುವ ಸ್ಥಳ ಕಾರ್ಡ್.

ಗಮನಿಸಿ: Apple ರೇಟಿಂಗ್‌ಗಳು ಮತ್ತು ಫೋಟೋಗಳು ಫೀಚರ್ ಆಯ್ದ ಪ್ರದೇಶಗಳಲ್ಲಿ ಲಭ್ಯವಿದೆ. ದೇಶ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಫೀಚರ್‌ಗಳಲ್ಲಿ ವ್ಯತ್ಯಾಸವಾಗುತ್ತದೆ.

ಸ್ಥಳಒಂದಕ್ಕೆ ರೇಟಿಂಗ್ ನೀಡುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿನ ಸ್ಥಳವೊಂದನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫಲಿತಾಂಶವನ್ನು ಟ್ಯಾಪ್ ಮಾಡಿ.

  3. ಸ್ಥಳವನ್ನು ಅವಲಂಬಿಸಿ, ಸ್ಥಳದ ಕಾರ್ಡ್ ಅನ್ನು ಕೆಳಕ್ಕೆ ಸ್ಕ್ರೋಲ್ ಮಾಡಿ ಅಥವಾ ರೇಟಿಂಗ್ ನೀಡಿ ಎಂಬುದನ್ನು ಟ್ಯಾಪ್ ಮಾಡಿ (ಸ್ಥಳದ ಕಾರ್ಡ್‌ನ ಮೇಲ್ಭಾಗದಲ್ಲಿ).

    ಗಮನಿಸಿ: ನಿಮಗೆ ರೇಟಿಂಗ್‌ಗಳ ವರ್ಗಗಳು ಅಥವಾ ರೇಟಿಂಗ್ ನೀಡಿ ಎಂಬ ಬಟನ್ ಕಾಣಿಸದಿದ್ದರೆ, ಸ್ಥಳಕ್ಕೆ ರೇಟಿಂಗ್ ನೀಡಲು ನಿಮಗೆ ಸಾಧ್ಯವಾಗುವುದಿಲ್ಲ.

  4. ಲಭ್ಯವಿರುವ ವರ್ಗಗಳಿಗಾಗಿ ಲೈಕ್ ಬಟನ್ ಅಥವಾ ಡಿಸ್‌ಲೈಕ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಮನಸ್ಸನ್ನು ನೀವು ಬದಲಾಯಿಸಿದರೆ ನೀವು ನಂತರದ ಸಮಯದಲ್ಲಿ ನಿಮ್ಮ ರೇಟಿಂಗ್‌ಗಳನ್ನು ಎಡಿಟ್ ಮಾಡಬಹುದು.

ಸ್ಥಳವೊಂದಕ್ಕೆ ಫೋಟೋಗಳನ್ನು ಸೇರಿಸುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿನ ಸ್ಥಳವೊಂದನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫಲಿತಾಂಶವನ್ನು ಟ್ಯಾಪ್ ಮಾಡಿ.

  3. ನೀವು ಕೊಡುಗೆ ನೀಡಿದ ಫೋಟೋಗಳಿಗೆ ನಿಮಗೆ ಕ್ರೆಡಿಟ್ ಕೊಟ್ಟುಕೊಳ್ಳಲು, ಫೋಟೋ ಕ್ರೆಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕ್ರೆಡಿಟ್ ತೋರಿಸಿ ಎಂಬುದನ್ನು ಆನ್ ಮಾಡಿ.

    ನೀವು ಆರಿಸುವ ಫೋಟೋ ಕ್ರೆಡಿಟ್ ಆಯ್ಕೆಯು ನೀವು ಈ ಹಿಂದೆ ಸಲ್ಲಿಸಿರುವ ಎಲ್ಲಾ ಫೋಟೋಗಳಿಗೆ ಅನ್ವಯವಾಗುತ್ತದೆ ಮತ್ತು ಸಲ್ಲಿಸುವುದನ್ನು ಮುಂದುವರಿಸುತ್ತದೆ.

  4. ನಿಮ್ಮ ಫೋಟೋಗಳನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    Appleಗೆ ನಿಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಲು, ನೀವು Apple ಖಾತೆಯನ್ನು ಹೊಂದಿರಬೇಕು.

    ಗಮನಿಸಿ: ನಿಮಗೆ ರೇಟಿಂಗ್‌ಗಳ ವರ್ಗಗಳು ಅಥವಾ ರೇಟಿಂಗ್ ನೀಡಿ ಎಂಬ ಬಟನ್ ಕಾಣಿಸದಿದ್ದರೆ, ನಿಮಗೆ ಫೋಟೋವನ್ನು ಸೇರಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು

ನೀವು ನಕ್ಷೆ ಆ್ಯಪ್‌ಗೆ ಸೇರಿಸುವ ಫೋಟೋಗಳನ್ನು ತಮ್ಮ ಸ್ವಂತ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಬಳಸಲು ನೀವು ಕಂಪನಿಗಳಿಗೆ ಅನುಮತಿಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಪ್‌ಗಳು > ನಕ್ಷೆ ಆ್ಯಪ್‌ಗೆ ಹೋಗಿ.

  2. ನಿಮ್ಮ ಫೋಟೋಗಳನ್ನು ಬಳಸಲು ಫೋಟೋ ಪೂರೈಕೆದಾರರಿಗೆ ಅನುಮತಿಸಿ ಎಂಬುದನ್ನು ಆನ್ ಮಾಡಿ.

ನೀವು ಹಂಚಿಕೊಳ್ಳುವ ಫೋಟೋಗಳು ಸ್ಥಳ ಡೇಟವನ್ನು ಒಳಗೊಂಡಿರುತ್ತವೆಯೇ ಹೊರತು ನಿಮ್ಮ ಗುರುತನ್ನಲ್ಲ. ನೀವು ಈ ಸೆಟ್ಟಿಂಗ್ ಅನ್ನು ಆಫ್ ಮಾಡಿದರೆ, ಫೋಟೋ ಪೂರೈಕೆದಾರರಿಗೆ ನಿಮ್ಮ ಫೋಟೋಗಳನ್ನು ಬಳಸಲು ಸಾಧ್ಯವಾಗದಿರಬಹುದು. (ಇದು ಅನ್ವಯಿಸಲು ಕೆಲವು ದಿನಗಳು ಬೇಕಾಗಬಹುದು.)

ಸ್ಥಳವೊಂದರ ನಿಮ್ಮ ಫೋಟೋಗಳನ್ನು ಎಡಿಟ್ ಮಾಡುವುದು

ನೀವು ಫೋಟೋಗಳನ್ನು ಸೇರಿಸಬಹುದು ಮತ್ತು ತೆಗೆದುಹಾಕಬಹುದು, ನಿಮ್ಮ ಫೋಟೋ ಕ್ರೆಡಿಟ್ ಅನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು ಮತ್ತು ನಿಮ್ಮ ಫೋಟೋ ಕ್ರೆಡಿಟ್‌ಗೆ ಅಡ್ಡಹೆಸರನ್ನು ಒದಗಿಸಬಹುದು.

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯ ಕೆಳಗೆ, ಸ್ಥಳಗಳು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಥಳಗಳನ್ನು ಟ್ಯಾಪ್ ಮಾಡಿ.

  3. ನೀವು ಯಾವ ಸ್ಥಳದ ಫೋಟೋಗಳನ್ನು ಎಡಿಟ್ ಮಾಡಲು ಬಯಸುತ್ತಿರೋ ಆದನ್ನು ಟ್ಯಾಪ್ ಮಾಡಿ.

  4. ನೀವು ರೇಟಿಂಗ್ ನೀಡಿದ ಸ್ಥಳಗಳಲ್ಲಿ ಒಂದನ್ನು ಆಯ್ಕೆಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಮತ್ತೊಂದು ಫೋಟೋ ಸಲ್ಲಿಸಿ: ನಿಮ್ಮ ಫೋಟೋಗಳನ್ನು ಟ್ಯಾಪ್ ಮಾಡಿ, ನಂತರ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಫೋಟೋ ತೆಗೆದುಹಾಕಿ: ನಿಮ್ಮ ಫೋಟೋಗಳು ಎಂಬುದನ್ನು ಟ್ಯಾಪ್ ಮಾಡಿ, ಫೋಟೋವನ್ನು ಆಯ್ಕೆಮಾಡಿ, ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಫೋಟೋ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ನಿಮ್ಮ ಫೋಟೋ ಕ್ರೆಡಿಟ್ ಅನ್ನು ಬದಲಾಯಿಸಿ: ನಿಮ್ಮ ಫೋಟೋಗಳನ್ನು ಟ್ಯಾಪ್ ಮಾಡಿ, ಫೋಟೋವನ್ನು ಆಯ್ಕೆಮಾಡಿ, ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫೋಟೋ ಕ್ರೆಡಿಟ್ ಬದಲಾಯಿಸಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಆರಿಸುವ ಫೋಟೋ ಕ್ರೆಡಿಟ್ ಆಯ್ಕೆಯು ನೀವು ಈ ಹಿಂದೆ ಸಲ್ಲಿಸಿರುವ ಎಲ್ಲಾ ಫೋಟೋಗಳಿಗೆ ಅನ್ವಯವಾಗುತ್ತದೆ ಮತ್ತು ಸಲ್ಲಿಸುವುದನ್ನು ಮುಂದುವರಿಸುತ್ತದೆ.

ರೇಟಿಂಗ್‌ಗಳು ಮತ್ತು ಫೋಟೋಗಳ ಸಲಹೆಗಳನ್ನು ಪಡೆಯುವುದನ್ನು ನಿಲ್ಲಿಸುವುದು

ನೀವು ಇತ್ತೀಚೆಗೆ ಆಸಕ್ತಿಯ ಸ್ಥಳವೊಂದಕ್ಕೆ ಭೇಟಿ ನೀಡಿದ್ದರೆ ಅಥವಾ ಅದರ ಫೋಟೋ ತೆಗೆದುಕೊಂಡಿದ್ದರೆ, ಅದರ ರೇಟಿಂಗ್ ಅಥವಾ ಫೋಟೋವನ್ನು ಸಲ್ಲಿಸುವಂತೆ ನೀವು ನಕ್ಷೆ ಆ್ಯಪ್‌ನಲ್ಲಿ ಸಲಹೆಗಳನ್ನು ಸ್ವೀಕರಿಸಬಹುದು. ಈ ಸಲಹೆಗಳು ಸಾಧನದಲ್ಲಿನ ಪ್ರಕ್ರಿಯೆಗೊಳಿಸುವಿಕೆಯನ್ನು ಬಳಸುತ್ತವೆ ಮತ್ತು ಅವುಗಳನ್ನು ಓದಲು Appleಗೆ ಸಾಧ್ಯವಾಗುವುದಿಲ್ಲ. ನೀವು ಈ ಸಲಹೆಗಳನ್ನು ಸ್ವೀಕರಿಸಲು ಬಯಸದಿದ್ದರೆ, ನೀವು ಅವುಗಳನ್ನು ಆಫ್ ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಪ್‌ಗಳು > ನಕ್ಷೆ ಆ್ಯಪ್‌ಗೆ ಹೋಗಿ.

  2. ರೇಟಿಂಗ್‌ಗಳು ಮತ್ತು ಫೋಟೋಗಳ ಸಲಹೆಗಳನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.