ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಆ್ಯಪ್‌ಗಳಲ್ಲಿ VoiceOver ಅನ್ನು ಬಳಸುವುದು

ನಿಮ್ಮ iPhone ಜೊತೆಗೆ ಬರುವ ಎಲ್ಲಾ ಬಿಲ್ಟ್-ಇನ್ ಆ್ಯಪ್‌ಗಳಲ್ಲಿ ನೀವು VoiceOver ಅನ್ನು ಬಳಸಬಹುದು—ಉದಾಹರಣೆಗೆ Safari, ನಕ್ಷೆ ಮತ್ತು ಇತ್ಯಾದಿ. VoiceOver ಗುರುತಿಸುವಿಕೆ ಮೂಲಕ, ವೆಬ್‌ಪುಟಗಳು ಮತ್ತು ಆ್ಯಪ್‌ಗಳಲ್ಲಿನ ಚಿತ್ರಗಳು ಮತ್ತು ಸ್ಕ್ರೀನ್ ಎಲಿಮೆಂಟ್‌ಗಳು ಆ್ಯಕ್ಸೆಸಬಿಲಿಟಿ ಮಾಹಿತಿಯನ್ನು ಒದಗಿಸದಿದ್ದರೂ ಸಹ ನೀವು ಅವುಗಳ ವಿವರಣೆಗಳನ್ನು ಪಡೆಯಬಹುದು.

Safariಯಲ್ಲಿ ವೆಬ್ ಅನ್ನು ಬ್ರೌಸ್ ಮಾಡುವುದು

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ವೆಬ್‌ನಲ್ಲಿ ಹುಡುಕಿ: ವಿಳಾಸದ ಫೀಲ್ಡ್ ಅನ್ನು ಆಯ್ಕೆಮಾಡಿ, ಕೀಬೋರ್ಡ್ ಕಾಣುವಂತೆ ಮಾಡಲು ಡಬಲ್-ಟ್ಯಾಪ್ ಮಾಡಿ, ನಂತರ ಹುಡುಕಾಟ ಪದ, ಫ್ರೇಸ್ ಅಥವಾ URL ಅನ್ನು ನಮೂದಿಸಿ. ಹೋಗಿ ಎಂಬುದನ್ನು ಡಬಲ್-ಟ್ಯಾಪ್ ಮಾಡಿ ಅಥವಾ ಹುಡುಕಾಟ ಸಲಹೆಯೊಂದನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

    • ವೆಬ್‌ಪುಟದಲ್ಲಿರುವ ಮುಂದಿನ ಎಲಿಮೆಂಟ್‌ಗೆ ಸ್ಕಿಪ್ ಮಾಡಿ: ಶೀರ್ಷಿಕೆಗಳು, ಲಿಂಕ್‌ಗಳು ಮತ್ತು ಫಾರ್ಮ್ ಕಂಟ್ರೋಲ್‌ಗಳ ರೀತಿಯ ಎಲಿಮೆಂಟ್ ಪ್ರಕಾರಕ್ಕೆ ರೋಟರ್ ಅನ್ನು ಸೆಟ್ ಮಾಡಿ—ನಂತರ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

    • ವೆಬ್ ಬ್ರೌಸಿಂಗ್‌ಗಾಗಿ ರೋಟರ್ ಸೆಟ್ಟಿಂಗ್ಸ್ ಅನ್ನು ಸೆಟ್ ಮಾಡಿ: ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > VoiceOver > ರೋಟರ್ ಎಂಬುದಕ್ಕೆ ಹೋಗಿ. ಐಟಮ್‌ಗಳನ್ನು ಆಯ್ಕೆಮಾಡಿ ಅಥವಾ ಆಯ್ಕೆಯನ್ನು ರದ್ದುಮಾಡಿ, ಅಥವಾ ಐಟಮ್‌ನ ಸ್ಥಾನವನ್ನು ಬದಲಾಯಿಸಲು ಮರುಕ್ರಮಗೊಳಿಸಿ ಬಟನ್ ಅನ್ನು ಮೇಲಕ್ಕೆ ಅಥವಾ ಕೆಳಕ್ಕೆ ಡ್ರ್ಯಾಗ್ ಮಾಡಿ.

    • ನ್ಯಾವಿಗೇಟ್ ಮಾಡುವಾಗ ಚಿತ್ರಗಳನ್ನು ಸ್ಕಿಪ್ ಮಾಡಿ: ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > VoiceOver > ಚಿತ್ರಗಳನ್ನು ನ್ಯಾವಿಗೇಟ್ ಮಾಡಿ ಎಂಬುದಕ್ಕೆ ಹೋಗಿ. ನೀವು ಎಲ್ಲಾ ಚಿತ್ರಗಳನ್ನು ಅಥವಾ ವಿವರಣೆಗಳಿಲ್ಲದ ಚಿತ್ರಗಳನ್ನು ಮಾತ್ರ ಸ್ಕಿಪ್ ಮಾಡಲು ಆಯ್ಕೆ ಮಾಡಬಹುದು.

    • ಸುಲಭವಾಗಿ ಓದಲು ಮತ್ತು ನ್ಯಾವಿಗೇಷನ್ ಮಾಡಲು ಪುಟದ ಕ್ಲಟರ್ ಅನ್ನು ಕಡಿಮೆ ಮಾಡಿ: Safari ವಿಳಾಸ ಫೀಲ್ಡ್‌ನಲ್ಲಿ ಫಾರ್ಮ್ಯಾಟ್ ಆಯ್ಕೆಗಳು ಎಂಬ ಬಟನ್ ಅನ್ನು ಆಯ್ಕೆಮಾಡಿ, ಡಬಲ್-ಟ್ಯಾಪ್ ಮಾಡಿ, ’ರೀಡರ್ ವ್ಯೂ ತೋರಿಸಿ’ (ಎಲ್ಲಾ ವೆಬ್ ಪುಟಗಳಿಗೆ ಲಭ್ಯವಿರುವುದಿಲ್ಲ) ಎಂಬುದನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

ನಕ್ಷೆ ಆ್ಯಪ್‌ನಲ್ಲಿ ನ್ಯಾವಿಗೇಟ್ ಮಾಡುವುದು

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿನ ನಕ್ಷೆ ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನಕ್ಷೆಯು ನಿಮ್ಮ ಪ್ರಸ್ತುತ ಸ್ಥಳವನ್ನು ಹೇಗೆ ಟ್ರ್ಯಾಕ್ ಮಾಡುತ್ತದೆ ಎಂಬುದನ್ನು ನಿಯಂತ್ರಿಸಿ: ಟ್ರ್ಯಾಕಿಂಗ್ ಬಟನ್ ಅನ್ನು ಆಯ್ಕೆಮಾಡಿ, ನಂತರ ನಿಮಗೆ ಬೇಕಾದ ಟ್ರ್ಯಾಕಿಂಗ್ ಆಯ್ಕೆಯನ್ನು ಕೇಳಿಸಿಕೊಳ್ಳುವವರೆಗೆ ಡಬಲ್ ಟ್ಯಾಪ್ ಮಾಡಿ.

      • ಟ್ರ್ಯಾಕಿಂಗ್ ಆನ್: ನಕ್ಷೆಯು ನಿಮ್ಮ ಪ್ರಸ್ತುತ ಸ್ಥಳದ ಮೇಲೆ ಸ್ವಯಂಚಾಲಿತವಾಗಿ ಕೇಂದ್ರೀಕರಿಸುತ್ತದೆ.

      • ದಿಕ್ಕಿನ ಜೊತೆ ಟ್ರ್ಯಾಕಿಂಗ್ ಆನ್: ನಕ್ಷೆಯು ಸ್ವಯಂಚಾಲಿತವಾಗಿ ನಿಮ್ಮ ಪ್ರಸ್ತುತ ಸ್ಥಳದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ತಿರುಗುತ್ತದೆ, ಅದರಿಂದ ನೀವು ಯಾವ ದಿಕ್ಕಿಗೆ ಮುಖಮಾಡುವಿರೋ ಅದು ಸ್ಕ್ರೀನ್‌ನ ಮೇಲ್ಭಾಗದಲ್ಲಿರುತ್ತದೆ. ಈ ಮೋಡ್‌ನಲ್ಲಿ, ನೀವು ಬೀದಿ ಮತ್ತು ಆಸಕ್ತಿಯ ಸ್ಥಳಗಳನ್ನು ಸಮೀಪಿಸುತ್ತಿರುವಾಗ iPhone ಅವುಗಳ ಹೆಸರುಗಳನ್ನು ಮಾತಿನಲ್ಲಿ ಹೇಳುತ್ತದೆ.

      • ಟ್ರ್ಯಾಕಿಂಗ್ ಆಫ್: ನಕ್ಷೆಯು ನಿಮ್ಮ ಪ್ರಸ್ತುತ ಸ್ಥಳದ ಮೇಲೆ ಸ್ವಯಂಚಾಲಿತವಾಗಿ ಕೇಂದ್ರೀಕರಿಸುವುದಿಲ್ಲ.

    • ನಕ್ಷೆಯನ್ನು ಎಕ್ಸ್‌ಪ್ಲೋರ್ ಮಾಡಿ: ನಿಮ್ಮ ಬೆರಳನ್ನು ಸ್ಕ್ರೀನ್ ಸುತ್ತಲೂ ಡ್ರ್ಯಾಗ್ ಮಾಡಿ ಅಥವಾ ಇನ್ನೊಂದು ಐಟಮ್‌ಗೆ ಮೂವ್ ಆಗಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

    • ಝೂಮ್ ಇನ್ ಅಥವಾ ಝೂಮ್ ಔಟ್: ನಕ್ಷೆಯನ್ನು ಆಯ್ಕೆಮಾಡಿ, ರೋಟರ್ ಅನ್ನು ಝೂಮ್ ಎಂಬುದಕ್ಕೆ ಸೆಟ್ ಮಾಡಿ, ನಂತರ ಒಂದು ಬೆರಳಿನಿಂದ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

    • ನಕ್ಷೆಯನ್ನು ಪ್ಯಾನ್ ಮಾಡಿ: ನಕ್ಷೆಯನ್ನು ಆಯ್ಕೆಮಾಡಿ, ನಂತರ ಮೂರು ಬೆರಳುಗಳಿಂದ ಸ್ವೈಪ್ ಮಾಡಿ.

    • ನಕ್ಷೆಯಲ್ಲಿ ಸ್ಥಳಗಳು ಮತ್ತು ಪಿನ್‌ಗಳನ್ನು ಬ್ರೌಸ್ ಮಾಡಿ: ನಕ್ಷೆಯನ್ನು ಆಯ್ಕೆಮಾಡಿ, ರೋಟರ್ ಅನ್ನು ಆಸಕ್ತಿಯ ಸ್ಥಳಗಳು ಎಂಬುದಕ್ಕೆ ಸೆಟ್ ಮಾಡಿ, ನಂತರ ಒಂದು ಬೆರಳಿನಿಂದ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

    • ರಸ್ತೆಯನ್ನು ಅನುಸರಿಸಿ: ನಿಮ್ಮ ಬೆರಳನ್ನು ರಸ್ತೆಯ ಮೇಲೆ ಹಿಡಿದುಕೊಳ್ಳಿ, “ಅನುಸರಿಸಲು ನಿಲ್ಲಿ” ಎಂಬುದನ್ನು ಕೇಳಿಸಿಕೊಳ್ಳುವವರೆಗೆ ನಿರೀಕ್ಷಿಸಿ, ನಂತರ ನಿಮ್ಮ ಬೆರಳನ್ನು ರಸ್ತೆಯ ಉದ್ದಕ್ಕೂ ಮೂವ್ ಮಾಡಿ.

    • ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆಯಿರಿ: ಸ್ಥಳವನ್ನು ಆಯ್ಕೆಮಾಡಿ (ಉದಾಹರಣೆಗೆ ವ್ಯವಹಾರ, ಲ್ಯಾಂಡ್‌ಮಾರ್ಕ್ ಅಥವಾ ಪಿನ್), ನಂತರ ಮಾಹಿತಿ ಕಾರ್ಡ್ ಅನ್ನು ತೆರೆಯಲು ಡಬಲ್ ಟ್ಯಾಪ್ ಮಾಡಿ. ಮಾರ್ಗದ ನಿರ್ದೇಶನಗಳು, ಬೀದಿ ವಿಳಾಸ, ಫೋನ್ ಸಂಖ್ಯೆ, ವ್ಯವಹಾರದ ಸಮಯ ಮತ್ತು ಗ್ರಾಹಕರ ವಿಮರ್ಶೆಗಳಂತಹ ಮಾಹಿತಿಯನ್ನು ಕೇಳಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

    • ಆರಂಭಿಸುವ ಸ್ಥಳಕ್ಕೆ ಮಾರ್ಗದರ್ಶನ ಪಡೆಯಿರಿ: ನೀವು ನಕ್ಷೆಯು ತೋರಿಸುವ ದಿಕ್ಕಿನಲ್ಲಿ ನಡೆಯಲು ಪ್ರಾರಂಭಿಸಿದಾಗ, ಸೌಂಡ್ ಮತ್ತು ಹ್ಯಾಪ್ಟಿಕ್ ಫೀಡ್‌ಬ್ಯಾಕ್ ಬಳಸಿಕೊಂಡು iPhone ಆರಂಭಿಕ ಸ್ಥಳದ ದಿಕ್ಕಿಗೆ ಹೋಗಲು ನಿಮಗೆ ಮಾರ್ಗದರ್ಶನ ನೀಡುತ್ತದೆ.

PDFಗಳನ್ನು ಓದಿ

ಪುಸ್ತಕ ಮತ್ತು ಫೈಲ್ಸ್ ಆ್ಯಪ್‌ಗಳಲ್ಲಿ, ನೀವು PDFಗಳನ್ನು ಓದಲು VoiceOver ಅನ್ನು ಬಳಸಬಹುದು. VoiceOver ವಿವರವಾದ ಮಾಹಿತಿಯನ್ನು ಸಹ ವಿವರಿಸುತ್ತದೆ—ಉದಾಹರಣೆಗೆ ಫಾರ್ಮ್‌ಗಳು, ಟೇಬಲ್‌ಗಳು ಮತ್ತು ಪಟ್ಟಿಗಳು.

ಫೋನ್ ಕರೆಗಳನ್ನು ಮಾಡುವುದು ಮತ್ತು ಸ್ವೀಕರಿಸುವುದು

ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ನೀವು VoiceOver ಅನ್ನು ಬಳಸಬಹುದು.

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿರುವ ಫೋನ್ ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಕರೆಗೆ ಉತ್ತರಿಸಿ ಅಥವಾ ಕೊನೆಗೊಳಿಸಿ: ಎರಡು ಬೆರಳುಗಳಿಂದ ಸ್ಕ್ರೀನ್ ಅನ್ನು ಡಬಲ್ ಟ್ಯಾಪ್ ಮಾಡಿ.

      VoiceOver ಆನ್ ಆಗಿರುವಾಗ ಫೋನ್ ಕರೆ ಕನೆಕ್ಟ್ ಆದರೆ, ಸ್ಕ್ರೀನ್ ಕರೆ ಆಯ್ಕೆಗಳನ್ನು ತೋರಿಸುವ ಬದಲು ಡಿಫಾಲ್ಟ್ ಆಗಿ ನ್ಯೂಮರಿಕ್ ಕೀಪ್ಯಾಡ್ ಅನ್ನು ಪ್ರದರ್ಶಿಸುತ್ತದೆ.

    • ಕರೆ ಆಯ್ಕೆಗಳನ್ನು ಪ್ರದರ್ಶಿಸಿ: ಕೆಳಗಿನ ಬಲ ಮೂಲೆಯಲ್ಲಿರುವ 'ಮರೆಮಾಡಿ' ಎಂಬ ಬಟನ್ ಅನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

    • ನ್ಯೂಮರಿಕ್ ಕೀಪ್ಯಾಡ್ ಅನ್ನು ಮತ್ತೆ ತೋರಿಸಿ: ಸ್ಕ್ರೀನ್ ಮಧ್ಯಭಾಗದಲ್ಲಿರುವ ಕೀಪ್ಯಾಡ್ ಬಟನ್ ಅನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವುದು

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿರುವ ಕ್ಯಾಮರಾ ಆ್ಯಪ್‌ಗೆ ಹೋಗಿ. ವ್ಯೂಫೈಂಡರ್‌ನಲ್ಲಿರುವ ವಸ್ತುಗಳನ್ನು VoiceOver ವಿವರಿಸುತ್ತದೆ.

  2. ಕ್ಯಾಮರಾ ಮೋಡ್ ಅನ್ನು ಆಯ್ಕೆಮಾಡಿ, ನಂತರ ಫೋಟೋ ಅಥವಾ ವೀಡಿಯೊ ರೀತಿಯ ಮೋಡ್‌ಗಳ ನಡುವೆ ಬದಲಾಯಿಸಲು ಒಂದು ಬೆರಳಿನಿಂದ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

  3. ಫೋಟೋ ತೆಗೆದುಕೊಳ್ಳಲು ಅಥವಾ ವೀಡಿಯೊ ರೆಕಾರ್ಡ್ ಮಾಡುವುದನ್ನು ಪ್ರಾರಂಭಿಸಲು ಅಥವಾ ನಿಲ್ಲಿಸಲು, ಎರಡು ಬೆರಳುಗಳಿಂದ ಸ್ಕ್ರೀನ್ ಮೇಲೆ ಡಬಲ್ ಟ್ಯಾಪ್ ಮಾಡಿ.

ವಾಯ್ಸ್ ಮೆಮೊ ರೆಕಾರ್ಡಿಂಗ್‌ಗಳನ್ನು ಟ್ರಿಮ್ ಮಾಡುವುದು

ನೀವು ವಾಯ್ಸ್ ಮೆಮೊಸ್ ಆ್ಯಪ್‌ನಲ್ಲಿ ರೆಕಾರ್ಡಿಂಗ್‌ಗಳನ್ನು ಎಡಿಟ್ ಮಾಡಲು VoiceOver ಅನ್ನು ಬಳಸಬಹುದು.

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿನ ವಾಯ್ಸ್ ಮೆಮೊಸ್ ಆ್ಯಪ್‌ಗೆ ಹೋಗಿ.

  2. ನೀವು ಟ್ರಿಮ್ ಮಾಡಲು ಬಯಸುವ ರೆಕಾರ್ಡಿಂಗ್ ಅನ್ನು ಆಯ್ಕೆಮಾಡಿ, ನಂತರ ಡಬಲ್ ಟ್ಯಾಪ್ ಮಾಡಿ.

  3. ಇನ್ನಷ್ಟು ಆ್ಯಕ್ಷನ್‌ಗಳು ಬಟನ್ ಅನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

  4. ‘ರೆಕಾರ್ಡಿಂಗ್ ಅನ್ನು ಎಡಿಟ್ ಮಾಡಿ’ ಎಂಬುದನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

  5. ಟ್ರಿಮ್ ಬಟನ್ ಅನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

  6. ವೇವ್‌ಫಾರ್ಮ್ ಓವರ್‌ವ್ಯೂನಲ್ಲಿ, ಪ್ರಾರಂಭವನ್ನು ಟ್ರಿಮ್ ಮಾಡಿ ಅಥವಾ ಮುಕ್ತಾಯವನ್ನು ಟ್ರಿಮ್ ಎಂಬುದನ್ನು ಆಯ್ಕೆಮಾಡಿ, ಡಬಲ್ ಟ್ಯಾಪ್ ಮಾಡಿ ಹಿಡಿದುಕೊಳ್ಳಿ, ನಂತರ ಪ್ರಾರಂಭ ಅಥವಾ ಮುಕ್ತಾಯದ ಸಮಯವನ್ನು ಸರಿಹೊಂದಿಸಲು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.

  7. ಟ್ರಿಮ್ ಅನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

  8. ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

  9. ಮುಗಿದಿದೆ ಎಂಬುದನ್ನು ಆಯ್ಕೆಮಾಡಿ, ನಂತರ ಡಬಲ್-ಟ್ಯಾಪ್ ಮಾಡಿ.

ವಿಷುವಲ್ ಹವಾಮಾನದ ಡೇಟವನ್ನು ಒಂದು ಸೌಂಡ್ ಆಗಿ ಕೇಳಿಸಿಕೊಳ್ಳುವುದು

ಬದಲಾಗುತ್ತಿರುವ ಟೋನ್ ಅಥವಾ ಪಿಚ್ ಆಗಿ ಡೇಟವನ್ನು ಕೇಳಿಸಿಕೊಳ್ಳಲು ನಿಮಗೆ ಅನುವುಮಾಡಿಕೊಡಲು ಹವಾಮಾನ ಆ್ಯಪ್‌ನಲ್ಲಿನ ಕೆಲವು ನಕ್ಷೆಗಳನ್ನು ಎನ್‌ಕೋಡ್ ಮಾಡಲಾಗಿದೆ. ಉದಾಹರಣೆಗೆ, ಹವಾಮಾನದ ತೀವ್ರತೆಯು ಸ್ಕ್ರೀನ್ ಮೇಲಿನ ವಿಷುಯಲ್ ಆ್ಯನಿಮೇಷನ್‌ನಲ್ಲಿ ಬದಲಾದಾಗ, ಸೌಂಡ್‌ನಲ್ಲಿನ ಏರಿಳಿತಗಳನ್ನು ಬಳಸಿಕೊಂಡು ನೀವು ಇವುಗಳನ್ನು ವಿವರಿಸುವಂತೆ ಮಾಡಿಕೊಳ್ಳಬಹುದು.

  1. VoiceOver ಆನ್ ಆಗಿರುವಾಗ, ನಿಮ್ಮ iPhoneನಲ್ಲಿರುವ ಹವಾಮಾನ ಆ್ಯಪ್‌ಗೆ ಹೋಗಿ.

  2. ಮಳೆ, ಗಾಳಿ ಅಥವಾ ಗಾಳಿಯ ಗುಣಮಟ್ಟದ ನಕ್ಷೆಯನ್ನು ಹೊಂದಿರುವ ಸ್ಥಳದ ಪುಟವನ್ನು ತೆರೆಯಿರಿ.

  3. ನೀವು ಒಂದು ಟೋನ್ ಅಥವಾ “ಹವಾಮಾನ ನಕ್ಷೆ ಸ್ನ್ಯಾಪ್‌ಶಾಟ್” ಎಂಬ ಪದಗಳನ್ನು ಕೇಳುವವರೆಗೆ ನಕ್ಷೆಯನ್ನು ಡಬಲ್ ಟ್ಯಾಪ್ ಮಾಡಿ ಹಿಡಿದುಕೊಳ್ಳಿ. ನೀವು ಮಾತಿನಲ್ಲಿ ಹೇಳಿದ ಸೂಚನೆಗಳನ್ನು ಕೇಳಿಸಿಕೊಂಡರೆ, ಅವುಗಳನ್ನು ಅನುಸರಿಸಿ.

    ನೀವು ನಿಮ್ಮ ಬೆರಳು ಅಥವಾ ಪಾಯಿಂಟರ್ ಅನ್ನು ಸಾನಿಫೈಡ್ ನಕ್ಷೆಯ ಮೇಲೆ ಮೂವ್ ಮಾಡುವಾಗ, ಬದಲಾಗುತ್ತಿರುವ ಮೌಲ್ಯಗಳನ್ನು ತೋರಿಸಲು ಪಿಚ್ ಬದಲಾಗುತ್ತದೆ.

ಗಣಿತದ ಸಮೀಕರಣಗಳನ್ನು ಓದುವುದು

ವೆಬ್‌ನಲ್ಲಿ (MathML ಬಳಸಿ ಎನ್‌ಕೋಡ್ ಮಾಡಿರುವುದು) ಮತ್ತು Apple ಬೆಂಬಲಿತ ಆ್ಯಪ್‌ಗಳಾದ Numbers ಮತ್ತು Keynoteನಲ್ಲಿ VoiceOver ಗಣಿತದ ಸಮೀಕರಣಗಳನ್ನು ಓದಬಹುದು.

  • ಸಮೀಕರಣವನ್ನು ಕೇಳಿಸಿಕೊಳ್ಳಿ: ಎಂದಿನಂತೆ ಪಠ್ಯವನ್ನು VoiceOver ಓದುವಂತೆ ಮಾಡಿ. VoiceOver ಸಮೀಕರಣವನ್ನು ಓದುವುದಕ್ಕೆ ಪ್ರಾರಂಭಿಸುವ ಮೊದಲು “ಗಣಿತ” ಎಂದು ಹೇಳುತ್ತದೆ.

  • ಸಮೀಕರಣವನ್ನು ಎಕ್ಸ್‌ಪ್ಲೋರ್ ಮಾಡಿ: ಆಯ್ಕೆಮಾಡಿದ ಸಮೀಕರಣವನ್ನು ಫುಲ್ ಸ್ಕ್ರೀನ್‌ನಲ್ಲಿ ಕಾಣುವಂತೆ ಮಾಡಲು ಡಬಲ್ ಟ್ಯಾಪ್ ಮಾಡಿ ಮತ್ತು ಅದರಲ್ಲಿನ ಎಲಿಮೆಂಟ್‌ಗಳನ್ನು ಒಂದು ಬಾರಿಗೆ ಒಂದರಂತೆ ನ್ಯಾವಿಗೇಟ್ ಮಾಡಿ. ಸಮೀಕರಣದ ಎಲಿಮೆಂಟ್‌ಗಳನ್ನು ಓದಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ. ಚಿಹ್ನೆಗಳು, ಸಣ್ಣ ಗಣಿತೋಕ್ತಿಗಳು, ಮಧ್ಯಮ ಗಣಿತೋಕ್ತಿಗಳು ಅಥವಾ ದೊಡ್ಡ ಗಣಿತೋಕ್ತಿಗಳನ್ನು ಆಯ್ಕೆ ಮಾಡಲು ರೋಟರ್ ಅನ್ನು ಬಳಸಿ, ನಂತರ ಆ ಗಾತ್ರದ ಮುಂದಿನ ಎಲೆಮೆಂಟ್ ಅನ್ನು ಕೇಳಿಸಿಕೊಳ್ಳಲು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ. ಆಯ್ಕೆಮಾಡಿದ ಎಲಿಮೆಂಟ್ ಅನ್ನು ನಿರ್ದಿಷ್ಟಗೊಳಿಸಲು, ಅದನ್ನು ಡಬಲ್ ಟ್ಯಾಪ್ ಮಾಡಿ, ನಂತರ ಒಂದು ಸಮಯದಲ್ಲಿ ಎಲಿಮೆಂಟ್‌ನ ಒಂದು ಭಾಗವನ್ನು ಓದಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

VoiceOver ಮಾತಿನಲ್ಲಿ ಹೇಳುವ ಸಮೀಕರಣಗಳನ್ನು ಬ್ರೇಲ್ ಸಾಧನಕ್ಕೆ ಔಟ್‌ಪುಟ್ ಮಾಡಲು ನೇಮೆತ್ ಕೋಡ್ ಬಳಸಬಹುದು ಹಾಗೆಯೇ ಯುನಿಫೈಡ್ ಇಂಗ್ಲಿಷ್ ಬ್ರೇಲ್, ಬ್ರಿಟಿಷ್ ಇಂಗ್ಲಿಷ್, ಫ್ರೆಂಚ್ ಮತ್ತು ಗ್ರೀಕ್ ಬಳಸುವ ಕೋಡ್‌ಗಳಿಂದ ಸಹ ಔಟ್‌ಪುಟ್ ಮಾಡಬಹುದು. VoiceOver ಮೂಲಕ ಬ್ರೇಲ್ ಡಿಸ್‌ಪ್ಲೇಯನ್ನು ಬಳಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.