ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಿಂದ ಆ್ಯಪ್‌ಗಳನ್ನು ತೆಗೆದುಹಾಕಿ ಅಥವಾ ಡಿಲೀಟ್ ಮಾಡಿ

ನಿಮ್ಮ iPhone ಜೊತೆಗೆ ಬರುವ ಕೆಲವು ಬಿಲ್ಟ್‌-ಇನ್ ಆ್ಯಪ್‌ಗಳನ್ನು ನೀವು ತೆಗೆದುಹಾಕಬಹುದು ಅಥವಾ ಡಿಲೀಟ್ ಮಾಡಬಹುದು.

ಗಮನಿಸಿ: ನಿಮ್ಮ iPhoneನಿಂದ ನೀವು ಬಿಲ್ಟ್-ಇನ್ ಆ್ಯಪ್ ಅನ್ನು ತೆಗೆದುಹಾಕಿದಾಗ, ಯಾವುದೇ ಸಂಬಂಧಿತ ಬಳಕೆದಾರರ ಡೇಟ ಮತ್ತು ಕಾನ್ಫಿಗರೇಷನ್ ಫೈಲ್‌ಗಳಿದ್ದಲ್ಲಿ ಅವುಗಳನ್ನು ಸಹ ನೀವು ತೆಗೆದುಹಾಕುತ್ತೀರಿ. ನಿಮ್ಮ iPhoneನಿಂದ ಬಿಲ್ಟ್-ಇನ್ ಆ್ಯಪ್‌ಗಳನ್ನು ತೆಗೆದುಹಾಕುವುದರಿಂದ ಇತರ ಸಿಸ್ಟಂ ಕಾರ್ಯಕಾರಿತ್ವದ ಮೇಲೂ ಪರಿಣಾಮ ಬೀರಬಹುದು.

ಆ್ಯಪ್‌ಗಳನ್ನು ಡಿಲೀಟ್ ಮಾಡಿದ ನಂತರ ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ, ನೀವು ಅವುಗಳನ್ನು ನಂತರ ಮತ್ತೊಮ್ಮೆ ಡೌನ್‌ಲೋಡ್ ಮಾಡಬಹುದು (ಅವುಗಳು ಇನ್ನೂ App Storeನಲ್ಲಿ ಲಭ್ಯವಿದ್ದರೆ).

ಆ್ಯಪ್‌ಗಳನ್ನು ಡಿಲೀಟ್ ಮಾಡಿ

ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  • ಹೋಮ್ ಸ್ಕ್ರೀನ್‌ನಿಂದ ಆ್ಯಪ್ ಅನ್ನು ತೆಗೆದುಹಾಕಿ: ಹೋಮ್ ಸ್ಕ್ರೀನ್‌ನಲ್ಲಿನ ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ, ಆ್ಯಪ್ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ, ಅದನ್ನು ಆ್ಯಪ್ ಲೈಬ್ರರಿಯಲ್ಲಿ ಇಟ್ಟುಕೊಳ್ಳಲು ‘ಹೋಮ್ ಸ್ಕ್ರೀನ್‌ನಿಂದ ತೆಗೆದುಹಾಕಿ’ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಅದನ್ನು iPhoneನಿಂದ ಡಿಲೀಟ್ ಮಾಡಲು ‘ಆ್ಯಪ್ ಡಿಲೀಟ್ ಮಾಡಿ’ ಎಂಬುದನ್ನು ಟ್ಯಾಪ್ ಮಾಡಿ.

  • ಆ್ಯಪ್ ಲೈಬ್ರರಿ ಮತ್ತು ಹೋಮ್ ಸ್ಕ್ರೀನ್‌ನಿಂದ ಆ್ಯಪ್ ಡಿಲೀಟ್ ಮಾಡಿ: ಆ್ಯಪ್ ಲೈಬ್ರರಿಯಲ್ಲಿ ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ, ಆ್ಯಪ್ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. (ಆ್ಯಪ್ ಲೈಬ್ರರಿಯಲ್ಲಿ ನಿಮ್ಮ ಆ್ಯಪ್‌ಗಳನ್ನು ಹುಡುಕಿ ಎಂಬುದನ್ನು ನೋಡಿ.)

ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ, ನೀವು ತೆಗೆದುಹಾಕುವ ಆ್ಯಪ್‌ಗಳನ್ನು ಮತ್ತೆ ಡೌನ್‌ಲೋಡ್ ಮಾಡಬಹುದು.

ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ತೆಗೆದುಹಾಕುವುದರ ಜೊತೆಗೆ, ನಿಮ್ಮ iPhoneನೊಂದಿಗೆ ಬಂದ ಈ ಕೆಳಗಿನ ಬಿಲ್ಟ್-ಇನ್ Apple ಆ್ಯಪ್‌ಗಳನ್ನು ನೀವು ತೆಗೆದುಹಾಕಬಹುದು:

ಗಮನಿಸಿ: ಯುರೋಪಿಯನ್ ಒಕ್ಕೂಟದಲ್ಲಿ, ನೀವು ಡಿಲೀಟ್ ಮಾಡಬಹುದಾದ ಇತರ ಬಿಲ್ಟ್-ಇನ್ ಆ್ಯಪ್‌ಗಳು ಇರಬಹುದು. ಹೆಚ್ಚಿನ ಮಾಹಿತಿಗಾಗಿ, ಯೂರೋಪಿಯನ್ ಒಕ್ಕೂಟದಲ್ಲಿನ ನಿಮ್ಮ iPhone ಅಥವಾ iPhoneನಿಂದ ಕೆಲವು ಬಿಲ್ಟ್-ಇನ್ ಆ್ಯಪ್‌ಗಳನ್ನು ಡಿಲೀಟ್ ಮಾಡಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.