ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಒಂದು ಕೈಯಿಂದ iPhone ಸ್ಕ್ರೀನ್‌ನ ಮೇಲ್ಭಾಗವನ್ನು ತಲುಪುವುದು

ನೀವು ಪೋಟ್ರೇಟ್ ಓರಿಯೆಂಟೇಶನ್‌ನಲ್ಲಿ ಒಂದು ಕೈಯಿಂದ iPhone ಅನ್ನು ಬಳಸುವಾಗ, ಸ್ಕ್ರೀನ್ ಮೇಲಿನ ಅರ್ಧಭಾಗವನ್ನು ಕೆಳಕ್ಕೆ ತರಲು ನೀವು ತಲುಪುವಿಕೆಯನ್ನು ಬಳಸಬಹುದು.

ತಲುಪುವಿಕೆಯನ್ನು ಸಕ್ರಿಯಗೊಳಿಸಿರುವ iPhone ಸ್ಕ್ರೀನ್. ಸ್ಕ್ರೀನ್‌ನ ಮೇಲ್ಭಾಗವು ನಿಮ್ಮ ಹೆಬ್ಬೆರಳಿಗೆ ಸುಲಭವಾಗಿ ತಲುಪುವಂತೆ ಅದನ್ನು ಕೆಳಕ್ಕೆ ಮೂವ್ ಮಾಡಲಾಗಿದೆ.
  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಟಚ್ ಎಂಬಲ್ಲಿಗೆ ಹೋಗಿ, ನಂತರ ತಲುಪುವಿಕೆಯನ್ನು ಆನ್ ಮಾಡಿ.

  2. ಸ್ಕ್ರೀನ್‌ನ ಮೇಲಿನ ಅರ್ಧಭಾಗವನ್ನು ಕೆಳಕ್ಕೆ ತರಲು ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • Face ID ಹೊಂದಿರುವ iPhoneನಲ್ಲಿ: ಸ್ಕ್ರೀನ್‌ನ ಕೆಳ ಅಂಚಿನಿಂದ ಮೇಲಕ್ಕೆ ಸ್ವೈಪ್ ಮಾಡಿ.

    • ಹೋಮ್ ಬಟನ್ ಹೊಂದಿರುವ iPhoneನಲ್ಲಿ: ಹೋಮ್ ಬಟನ್ ಅನ್ನು ಹಗುರವಾಗಿ ಡಬಲ್ ಟ್ಯಾಪ್ ಮಾಡಿ.

    • VoiceOver ಆನ್ ಆಗಿರುವಾಗ: ಸ್ಕ್ರೀನ್‌ನ ಕೆಳಗಿನಿಂದ ಒಂದು ಬೆರಳು ಬಳಸಿ ಮೇಲಕ್ಕೆ ಸ್ವೈಪ್ ಮಾಡಿ, ನಂತರ, ನಿಮ್ಮ ಬೆರಳನ್ನು ಎತ್ತದೆಯೇ ಕೆಳಕ್ಕೆ ಸ್ವೈಪ್ ಮಾಡಿ.

  3. ಪೂರ್ಣ ಸ್ಕ್ರೀನ್‌ಗೆ ಮರಳಲು, ಸ್ಕ್ರೀನ್‌ನ ಮೇಲಿನ ಅರ್ಧಭಾಗವನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.