ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ Apple News+ ನಲ್ಲಿ ಪಝಲ್‌ಗಳನ್ನು ಹುಡುಕುವುದು

ನೀವು Apple News+ಗೆ ಸಬ್‌ಸ್ಕ್ರೈಬ್ ಮಾಡಿದರೆ, ನೀವು ದೈನಂದಿನ ಮತ್ತು ಆರ್ಕೈವ್ ಮಾಡಲಾದ ಕ್ರಾಸ್‌ವರ್ಡ್, ಕ್ರಾಸ್‌ವರ್ಡ್ ಮಿನಿ, ಕ್ವಾರ್ಟೈಲ್ಸ್, ಎಮೋಜಿ ಗೇಮ್, ಮತ್ತು ಸುಡೊಕು ಪಝಲ್‌ಗಳನ್ನು ಆ್ಯಕ್ಸೆಸ್ ಮಾಡಬಹುದು. ಕೆಲವು ಪಝಲ್‌ಗಳು ಸಬ್‌ಸ್ಕ್ರಿಪ್ಷನ್ ಇಲ್ಲದೆಯೇ ಲಭ್ಯವಿರಬಹುದು.

ಗಮನಿಸಿ: Apple News, Apple News+, ಮತ್ತು ಪಝಲ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ಪಝಲ್ ಫೀಡ್ ಅನ್ನು ನೋಡುವುದು

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಫಾಲೋ ಮಾಡುತ್ತಿರುವುದು ಎಂಬುದನ್ನು ಟ್ಯಾಪ್ ಮಾಡಿ, ನಂತರ ಪಝಲ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

    • ಇಂದು ಎಂಬುದನ್ನು ಟ್ಯಾಪ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಪಝಲ್‌ಗಳ ಗುಂಪನ್ನು ಟ್ಯಾಪ್ ಮಾಡಿ.

ಪಝಲ್‌ಗಳ ಪ್ರಕಾರಕ್ಕಾಗಿ ಫೀಡ್ ಅನ್ನು ಫಾಲೋ ಮಾಡುವುದು

ನಿರ್ದಿಷ್ಟ ಪ್ರಕಾರದ ಪಝಲ್‌ಗಳಿಗೆ (ಕ್ರಾಸ್‌ವರ್ಡ್, ಕ್ರಾಸ್‌ವರ್ಡ್ ಮಿನಿ, ಕ್ವಾರ್ಟೈಲ್ಸ್, ಎಮೋಜಿ ಗೇಮ್ ಅಥವಾ ಸುಡೊಕು) ತ್ವರಿತ ಆ್ಯಕ್ಸೆಸ್ ಅನ್ನು ನೀವು ಬಯಸಿದರೆ, ನೀವು ಆ ಪ್ರಕಾರವನ್ನು ಫಾಲೋ ಮಾಡಬಹುದು.

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಪಝಲ್ ಫೀಡ್ ಅನ್ನು ತೆರೆಯಿರಿ.

  3. ಕ್ರಾಸ್‌ವರ್ಡ್, ಮಿನಿ, ಕ್ವಾರ್ಟೈಲ್ಸ್, ಎಮೋಜಿ ಗೇಮ್ ಅಥವಾ ಸುಡೊಕು ಎಂಬುದನ್ನು ಟ್ಯಾಪ್ ಮಾಡಿ.

  4. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫಾಲೋ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಫಾಲೋ ಮಾಡುತ್ತಿರುವುದು ಎಂಬುದರಲ್ಲಿ ಪಝಲ್‌ಗಳ ವರ್ಗವು ಕಾಣಿಸಿಕೊಳ್ಳುತ್ತದೆ, ಮತ್ತು ಕೆಳಗೆ ಪಝಲ್‌ಗಳ ಪ್ರಕಾರಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಮೆಚ್ಚಿನವುಗಳನ್ನಾಗಿ ಮಾಡಲು ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ಪಝಲ್ ಪ್ರಕಾರವೊಂದರ ಪಕ್ಕದಲ್ಲಿರುವ ಮೆಚ್ಚಿನದಾಗಿ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನೀವು Apple News+ಗೆ ಸಬ್‌ಸ್ಕ್ರೈಬ್ ಮಾಡಿದರೆ, ಆಫ್‌ಲೈನ್ ಮೋಡ್‌‌ನಲ್ಲಿ ಆಡಲು ನೀವು ಪಝಲ್‌ಗಳ ಫೀಡ್ ಮತ್ತು ಪಝಲ್ ಪ್ರಕಾರದ ಫೀಡ್‌ಗಳಲ್ಲಿನ ಪಝಲ್‌ಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಬಹುದು.

ಪಝಲ್ ಅನ್ನು ಆರಿಸುವುದು

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಪಝಲ್ ಅನ್ನು ಕಂಡುಹಿಡಿಯಲು ಈ ಕೆಳಗಿನ ವಿಭಾಗಗಳಲ್ಲಿ ಒಂದಕ್ಕೆ ಹೋಗಿ:

    • ಇಂದು ಫೀಡ್

    • ಪಝಲ್‌ಗಳು ಫೀಡ್

    • ಪಝಲ್ ಪ್ರಕಾರಕ್ಕೆ ಸಂಬಂಧಿಸಿದ ಫೀಡ್ (ಕ್ರಾಸ್‌ವರ್ಡ್, ಕ್ರಾಸ್‌ವರ್ಡ್ ಮಿನಿ, ಕ್ವಾರ್ಟೈಲ್ಸ್, ಎಮೋಜಿ ಗೇಮ್ ಅಥವಾ ಸುಡೊಕು)

  3. ಪಝಲ್ ಅನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ.

ಕ್ರಾಸ್‌ವರ್ಡ್ ಮತ್ತು ಸುಡೊಕು ಪಝಲ್‌ಗಳು ಸುಲಭ, ಮಧ್ಯಮ ಅಥವಾ ಕಠಿಣ ಎಂಬ ಕ್ಲಿಷ್ಟತೆಯ ರೇಟಿಂಗ್‌ಗಳನ್ನು ಹೊಂದಿರುತ್ತವೆ.

ಪಝಲ್‌ಗಳ ಸಂಪೂರ್ಣ ಆರ್ಕೈವ್‌ನಲ್ಲಿ ನೀವು ಈ ಹಿಂದಿನ ಇನ್ನಷ್ಟು ಪಝಲ್‌ಗಳನ್ನು ನೋಡಬಹುದು. ಆರ್ಕೈವ್‌ನ ಪಕ್ಕದಲ್ಲಿರುವ ರೈಟ್ ಆ್ಯರೋ ಬಟನ್ ಅನ್ನು ಟ್ಯಾಪ್ ಮಾಡಿ.

ಸಲಹೆ: ಪಝಲ್ ಆರ್ಕೈವ್ ಅನ್ನು ವಿಂಗಡಿಸಲು ಅಥವಾ ಫಿಲ್ಟರ್ ಮಾಡಲು, ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ.

ಪಝಲ್ ಅಂಕಿಅಂಶಗಳು ಮತ್ತು ಸ್ಟ್ರೀಕ್‌ಗಳನ್ನು ನೋಡುವುದು

ಪ್ರತಿ ಪಝಲ್ ಫೀಡ್‌ನಲ್ಲಿ ನೀವು ಸ್ಕೋರ್‌ಬೋರ್ಡ್ ಅನ್ನು ಕಾಣಬಹುದು. ಅದು ಇವುಗಳನ್ನು ಒಳಗೊಂಡಿರುತ್ತದೆ:

  • ಪ್ರತಿಯೊಂದು ಪಝಲ್ ಪ್ರಕಾರದ ಅಂಕಿಅಂಶಗಳು—ಉದಾಹರಣೆಗೆ, ಪರಿಹರಿಸಿದ ಪಝಲ್‌ಗಳ ಸಂಖ್ಯೆ

  • ನಿಮ್ಮ ಪ್ರಸ್ತುತ ಸ್ಟ್ರೀಕ್—ನೀವು ದೈನಂದಿನ ಪಝಲ್ ಅನ್ನು ಪರಿಹರಿಸಿದ ಸತತ ದಿನಗಳ ಸಂಖ್ಯೆ

  • ನಿಮ್ಮ ಅತಿ ದೀರ್ಘವಾದ ಸ್ಟ್ರೀಕ್

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಪಝಲ್ ಪ್ರಕಾರಕ್ಕೆ ಫೀಡ್ ಅನ್ನು ಆರಿಸಿ, ನಂತರ ಮೇಲಕ್ಕೆ ಸ್ವೈಪ್ ಮಾಡಿ.

ಅಂಕಿಅಂಶಗಳ ಮೇಲೆ ಪ್ರಭಾವ ಬೀರುವ ಸಂದರ್ಭಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

  • ಪಝಲ್‌ನ ಎಲ್ಲಾ ಅಥವಾ ಒಂದು ಭಾಗವನ್ನು ತೋರಿಸಲು ನೀವು ಬಹಿರಂಗಪಡಿಸಿ ಕಮಾಂಡ್ ಅನ್ನು ಬಳಸಿದರೆ, ಪಝಲ್ ಅನ್ನು ನಿಮ್ಮ ಅಂಕಿಅಂಶಗಳಿಗೆ ಪರಿಗಣಿಸಲಾಗುವುದಿಲ್ಲ ಮತ್ತು ಆ ಪಝಲ್ ಅನ್ನು ಪೂರ್ಣಗೊಳಿಸುವುದರಿಂದ ಸ್ಟ್ರೀಕ್ ಪ್ರಾರಂಭವಾಗುವುದಿಲ್ಲ ಅಥವಾ ಮುಂದುವರಿಯುವುದಿಲ್ಲ.

  • iOS 17.5, iPadOS 17.5, macOS 14.5, ಅಥವಾ ನಂತರದ ಆವೃತ್ತಿಗಳನ್ನು ಹೊಂದಿರುವ ಸಾಧನಗಳಲ್ಲಿ ಪೂರ್ಣಗೊಳಿಸಿರುವ ಪಝಲ್‌ಗಳನ್ನು ನಿಮ್ಮ ಅಂಕಿಅಂಶಗಳಿಗಾಗಿ ಪರಿಗಣಿಸಲಾಗುತ್ತದೆ. ಹಿಂದಿನ OS ಆವೃತ್ತಿಗಳಲ್ಲಿ ನೀವು ಪೂರ್ಣಗೊಳಿಸಿದ ಯಾವುದೇ ಪಝಲ್‌ಗಳನ್ನು ನಿಮ್ಮ ಅಂಕಿಅಂಶಗಳಿಗೆ ಪರಿಗಣಿಸಲಾಗುವುದಿಲ್ಲ.

  • iOS 17.5, iPadOS 17.5, macOS 14.5 ಅಥವಾ ನಂತರದ ಆವೃತ್ತಿಗಳ ಸಾಧನದಲ್ಲಿ ನೀವು News ಆ್ಯಪ್ ಅನ್ನು ತೆರೆದ ನಂತರ, OSನ ಹಿಂದಿನ ಆವೃತ್ತಿಯನ್ನು ಹೊಂದಿರುವ ಸಾಧನದಲ್ಲಿ ನೀವು ಪೂರ್ಣಗೊಳಿಸಿದ ಎಲ್ಲಾ ದೈನಂದಿನ ಪಝಲ್‌ಗಳನ್ನು ನಿಮ್ಮ ಸ್ಟ್ರೀಕ್‌ಗೆ ಸೇರಿಸಲಾಗುತ್ತದೆ. ಉದಾಹರಣೆಗೆ, ನೀವು iOS 17.5 ಆವೃತ್ತಿಯಿರುವ ನಿಮ್ಮ iPhoneನಲ್ಲಿ ಸೋಮವಾರದ ಕ್ರಾಸ್‌ವರ್ಡ್ ಮತ್ತು ಮಂಗಳವಾರದ ಕ್ರಾಸ್‌ವರ್ಡ್ ಅನ್ನು ಪೂರ್ಣಗೊಳಿಸಿದರೆ, ನಂತರ iPadOS 17.4 ಆವೃತ್ತಿಯ iPadನಲ್ಲಿ ಬುಧವಾರದ ಕ್ರಾಸ್‌ವರ್ಡ್ ಅನ್ನು ಪೂರ್ಣಗೊಳಿಸಿದರೆ, ನಿಮ್ಮ ಸ್ಟ್ರೀಕ್ ಅನ್ನು ವಿಸ್ತರಿಸಲಾಗುತ್ತದೆ.

  • ಕಾಂಟಿನೆಂಟಲ್ U.S. ಮತ್ತು ಕೆನಡಾದಲ್ಲಿನ ಬಳಕೆದಾರರು ಪಝಲ್ ಪ್ರಕಟವಾದ 24 ಗಂಟೆಗಳ ಒಳಗೆ ಅದನ್ನು ಪೂರ್ಣಗೊಳಿಸಿದರೆ ಮಾತ್ರ ಅದನ್ನು ಸ್ಟ್ರೀಕ್‌ಗೆ ಪರಿಗಣಿಸಲಾಗುತ್ತದೆ. ಅಲಾಸ್ಕಾ ಮತ್ತು ಹವಾಯಿಯಲ್ಲಿನ ಬಳಕೆದಾರರಿಗೆ ಒಂದು ಅಥವಾ ಎರಡು ಗಂಟೆಗಳ ಹೆಚ್ಚುವರಿ ಸಮಯಾವಕಾಶವಿರುತ್ತದೆ; ಅವರು ಸ್ಥಳೀಯ ಸಮಯದ ಪ್ರಕಾರವಾಗಿ ಮಧ್ಯರಾತ್ರಿಯ ಮೊದಲು ಆ ದಿನದ ಪಝಲ್ ಅನ್ನು ಪೂರ್ಣಗೊಳಿಸಬೇಕು.

  • ಸುಡೊಕು ಸ್ಟ್ರೀಕ್ ಅನ್ನು ಪ್ರಾರಂಭಿಸಲು ಮತ್ತು ಕಾಪಾಡಿಕೊಳ್ಳಲು, ಪ್ರಸ್ತುತ ದಿನದ ಸುಡೊಕು ಪಝಲ್‌ಗಳಲ್ಲಿ ಯಾವುದೇ ಕ್ಲಿಷ್ಟತೆಯ ಮಟ್ಟದ ಕನಿಷ್ಠ ಒಂದು ಪಝಲ್‌ ಅನ್ನು ಉತ್ತರಗಳನ್ನು ಬಹಿರಂಗಪಡಿಸದೆ ಪರಿಹರಿಸಿ.

ನೀವು ಒಂದೇ Apple ಖಾತೆಗೆ ಸೈನ್ ಇನ್ ಆಗಿರುವ ನಿಮ್ಮ ಎಲ್ಲಾ Apple ಸಾಧನಗಳಲ್ಲಿ ನಿಮ್ಮ ಅಂಕಿಅಂಶಗಳು ಮತ್ತು ಸ್ಟ್ರೀಕ್‌ಗಳು ಅಪ್ ಟು ಡೇಟ್ ಆಗಿರುತ್ತವೆ. ಸೆಟ್ಟಿಂಗ್ಸ್  > [ನಿಮ್ಮ ಹೆಸರು] > iCloud > ಎಲ್ಲವನ್ನೂ ನೋಡಿ ಎಂಬಲ್ಲಿಗೆ ಹೋಗಿ (iCloudನಲ್ಲಿ ಸೇವ್ ಮಾಡಿರುವುದು ಎಂಬ ವಿಭಾಗದಲ್ಲಿ), ನಂತರ News ಅನ್ನು ಆನ್ ಮಾಡಿ.

ಇತರರೊಂದಿಗೆ ಸ್ಪರ್ಧಿಸುವುದು

Game Centerನಲ್ಲಿ ಸ್ನೇಹಿತರು ಮತ್ತು ಇತರ ಪಝಲ್ ಪರಿಹರಿಸುವವರೊಂದಿಗೆ ಸ್ಪರ್ಧಿಸಲು, ನೀವು News ಆ್ಯಪ್‌ನಲ್ಲಿ Game Center ಅನ್ನು ಆನ್ ಮಾಡಬೇಕು.

  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಪ್‌ಗಳು > News ಎಂಬಲ್ಲಿಗೆ ಹೋಗಿ.

  2. Game Center ಅನ್ನು ಆನ್ ಮಾಡಿ.

Game Centerನಲ್ಲಿ ಪ್ರತಿಯೊಂದು ಪಝಲ್ ಪ್ರಕಾರಕ್ಕೂ ನಿಮ್ಮ ಅಂಕಗಳು ಲೀಡರ್‌ಬೋರ್ಡ್‌ನಲ್ಲಿ ಗೋಚರಿಸುತ್ತವೆ. ಸುಡೊಕು, ಪ್ರತಿಯೊಂದು ಕ್ಲಿಷ್ಟತೆಯ ಮಟ್ಟಕ್ಕೂ ಲೀಡರ್‌ಬೋರ್ಡ್ ಅನ್ನು ಹೊಂದಿದೆ.

ಸ್ನೇಹಿತರೊಂದಿಗೆ ಆಟವಾಡಲು ಗೇಮ್ ಸೆಂಟರ್ ಅನ್ನು ಬಳಸಿ ಎಂಬುದನ್ನು ನೋಡಿ.

ಪಝಲ್ ಅನ್ನು ಹಂಚಿಕೊಳ್ಳುವುದು

ನೀವು ಇನ್ನೊಬ್ಬ Apple News+ ಸಬ್‌ಸ್ಕ್ರೈಬರ್‌ಗೆ ಲಿಂಕ್ ಕಳುಹಿಸಬಹುದು ಇದರಿಂದ ಅವರು ಸಹ ಪಝಲ್ ಅನ್ನು ಪರಿಹರಿಸಬಹುದು.

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಪಝಲ್ ತೆರೆಯಿರಿ.

  3. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂದೇಶ ಆ್ಯಪ್, Mail ಅಥವಾ ಬೇರೊಂದು ಹಂಚಿಕೆ ಆಯ್ಕೆಯನ್ನು ಆರಿಸಿ.

ನಿಮ್ಮ ಉತ್ತರಗಳನ್ನು ತೋರಿಸಲಾಗುವುದಿಲ್ಲ ಮತ್ತು ಪೂರ್ಣಗೊಂಡ ಪಝಲ್‌ಗಳಿಗಾಗಿ ಈ ಕೆಳಗಿನ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ:

  • ಕ್ರಾಸ್‌ವರ್ಡ್, ಕ್ರಾಸ್‌ವರ್ಡ್ ಮಿನಿ ಮತ್ತು ಸುಡೊಕು: ಪಝಲ್ ಅನ್ನು ಪರಿಹರಿಸಲು ನೀವು ತೆಗೆದುಕೊಂಡ ಸಮಯ

  • ಕ್ವಾರ್ಟೈಲ್ಸ್: ನಿಮ್ಮ ರ್‍ಯಾಂಕ್

  • ಎಮೋಜಿ ಗೇಮ್: ಪಝಲ್ ಅನ್ನು ಪರಿಹರಿಸಲು ನೀವು ಬಳಸಿದ ಮೂವ್‌ಗಳ ಸಂಖ್ಯೆ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.