ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ Safariಯಲ್ಲಿ ಟ್ಯಾಬ್ ಗುಂಪುಗಳೊಂದಿಗೆ ನಿಮ್ಮ ಟ್ಯಾಬ್‌ಗಳನ್ನು ವ್ಯವಸ್ಥಿತಗೊಳಿಸುವುದು

ಟ್ಯಾಬ್‌ಗಳನ್ನು ವ್ಯವಸ್ಥಿತವಾಗಿ ಇರಿಸಲು ಮತ್ತು ನಂತರದಲ್ಲಿ ಅವುಗಳನ್ನು ಸುಲಭವಾಗಿ ಕಂಡುಕೊಳ್ಳಲು ನೀವು ಟ್ಯಾಬ್ ಗುಂಪುಗಳನ್ನು ರಚಿಸಬಹುದು.

ಮನೆಕೆಲಸ ಎಂಬ ಟ್ಯಾಬ್ ಗುಂಪಿನಲ್ಲಿ ತೆರೆದಿರುವ ಮೂರು ಟ್ಯಾಬ್‌ಗಳ ಪ್ರಿವ್ಯೂಗಳು ಸ್ಕ್ರೀನ್‌ನಲ್ಲಿ ಗೋಚರಿಸುತ್ತವೆ.

ಹೊಸ ಟ್ಯಾಬ್ ಗುಂಪನ್ನು ರಚಿಸುವುದು

  1. ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ನಿಮ್ಮ ತೆರೆದ ಟ್ಯಾಬ್‌ಗಳನ್ನು ವೀಕ್ಷಿಸಲು ಟ್ಯಾಬ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.

  3. ಟ್ಯಾಬ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಟ್ಯಾಬ್ ಗುಂಪಿಗೆ ಮೂವ್ ಮಾಡಿ ಎಂಬುದನ್ನು ಆರಿಸಿ.

  4. ಹೊಸ ಟ್ಯಾಬ್ ಗುಂಪನ್ನು ಟ್ಯಾಪ್ ಮಾಡಿ, ಹೆಸರನ್ನು ನಮೂದಿಸಿ, ನಂತರ ಮೂವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಸಲಹೆ: ನಿಮ್ಮ ಟ್ಯಾಬ್ ಗುಂಪುಗಳ ನಡುವೆ ಮೂವ್ ಮಾಡಲು, ಸ್ಕ್ರೀನ್‌ನ ಕೆಳಭಾಗದ ಮಧ್ಯದಲ್ಲಿರುವ ಟ್ಯಾಬ್ ಗುಂಪುಗಳು ಬಟನ್ ಅನ್ನು ಟ್ಯಾಪ್ ಮಾಡಿ.

ಒಂದು ಟ್ಯಾಬ್ ಗುಂಪಿನಲ್ಲಿರುವ ಟ್ಯಾಬ್‌ಗಳನ್ನು ಮರುಕ್ರಮಗೊಳಿಸುವುದು

  1. ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ಆ ಟ್ಯಾಬ್ ಗುಂಪಿನಲ್ಲಿ ತೆರೆದಿರುವ ಟ್ಯಾಬ್‌ಗಳನ್ನು ವೀಕ್ಷಿಸಲು ಟ್ಯಾಬ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.

  3. ಟ್ಯಾಬ್ ಗುಂಪಿನಲ್ಲಿರುವ ಟ್ಯಾಬ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. ಕಾಣಿಸಿಕೊಳ್ಳುವ ಮೆನುವಿನಲ್ಲಿ ಈ ಪ್ರಕಾರ ಟ್ಯಾಬ್‌ಗಳನ್ನು ಹೊಂದಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

    ಅಥವಾ ಟ್ಯಾಬ್ ಅನ್ನು ನಿಮಗೆ ಬೇಕಾದಲ್ಲಿಗೆ ಡ್ರ್ಯಾಗ್ ಮಾಡಿದರೂ ಸಾಕು.

ಟ್ಯಾಬ್ ಗುಂಪನ್ನು ಮರುಹೆಸರಿಸಿ

  1. ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ಟ್ಯಾಬ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಟ್ಯಾಬ್ ಗುಂಪುಗಳು ಬಟನ್ ಅನ್ನು ಟ್ಯಾಪ್ ಮಾಡಿ.

  3. ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  4. ಮರುಹೆಸರಿಸಿ ಎಂಬುದನ್ನು ಟ್ಯಾಪ್ ಮಾಡಿ, ಹೆಸರನ್ನು ನಮೂದಿಸಿ, ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಟ್ಯಾಬ್ ಗುಂಪಿನ ಮೇಲ್ಭಾಗದಲ್ಲಿ ಟ್ಯಾಬ್ ಒಂದನ್ನು ಪಿನ್ ಮಾಡಿ

ಪ್ರತಿ ಗುಂಪಿನಲ್ಲಿ ಪಿನ್ ಮಾಡಿದ ಟ್ಯಾಬ್‌ಗಳೊಂದಿಗೆ ನಿಮ್ಮ ಟ್ಯಾಬ್ ಗುಂಪುಗಳನ್ನು ನೀವು ಕಸ್ಟಮೈಸ್ ಮಾಡಬಹುದು. ಟ್ಯಾಬ್ ಗುಂಪಿನ ಮೇಲ್ಭಾಗದಲ್ಲಿ ಪಿನ್ ಮಾಡಿದ ಟ್ಯಾಬ್ ಇರುತ್ತದೆ.

  1. ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ಆ ಟ್ಯಾಬ್ ಗುಂಪಿನಲ್ಲಿ ತೆರೆದಿರುವ ಟ್ಯಾಬ್‌ಗಳನ್ನು ವೀಕ್ಷಿಸಲು ಟ್ಯಾಬ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.

  3. ನೀವು ಪಿನ್ ಮಾಡಲು ಬಯಸುವ ಟ್ಯಾಬ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. ಕಾಣಿಸಿಕೊಳ್ಳುವ ಮೆನುವಿನಲ್ಲಿ, ಟ್ಯಾಬ್ ಅನ್ನು ಪಿನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಮತ್ತೊಂದು ಟ್ಯಾಬ್ ಗುಂಪಿಗೆ ಟ್ಯಾಬ್ ಅನ್ನು ಮೂವ್ ಮಾಡಿ

  1. ನಿಮ್ಮ iPhoneನಲ್ಲಿನ Safari ಆ್ಯಪ್‌ಗೆ ಹೋಗಿ.

  2. ಟ್ಯಾಬ್‌ಗಳ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಟ್ಯಾಬ್ ಗುಂಪಿಗೆ ಮೂವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಈ ಹಿಂದೆ ರಚಿಸಿದ ಟ್ಯಾಬ್ ಗುಂಪುಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ಹೊಸ ಗುಂಪನ್ನು ರಚಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.