ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಡ್ಯೂಪ್ಲಿಕೇಟ್ ಸಂಪರ್ಕಗಳನ್ನು ತೆಗೆದುಹಾಕಿ

ನೀವು ಅನೇಕ ಮೂಲಗಳಿಂದ ಪಡೆದ ಸಂಪರ್ಕಗಳನ್ನು ಹೊಂದಿರುವಾಗ, ನೀವು ಒಬ್ಬರೇ ವ್ಯಕ್ತಿಗೆ ಅನೇಕ ನಮೂದುಗಳನ್ನು ಹೊಂದಿರಬಹುದು. ಸಂಪರ್ಕ ಆ್ಯಪ್‌ನಲ್ಲಿ, ಒಂದೇ ವ್ಯಕ್ತಿಯ ಸಂಪರ್ಕ ಕಾರ್ಡ್‌ಗರ್ಳನ್ನು ಬೇರೆಬೇರೆ ಖಾತೆಗಳಲ್ಲಿ ಲಿಂಕ್ ಮಾಡಿ. ಇದರಿಂದಾಗಿ ಅವುಗಳು ನಿಮ್ಮ ‘ಎಲ್ಲಾ ಸಂಪರ್ಕಗಳು’ ಎಂಬ ಪಟ್ಟಿಯಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ. ಲಿಂಕ್ ಮಾಡಲಾದ ಸಂಪರ್ಕ ಕಾರ್ಡ್‌ಗಳನ್ನು ಒಂದೇ ಏಕೀಕೃತ ಸಂಪರ್ಕವಾಗಿ ಪ್ರದರ್ಶಿಸಲಾಗುತ್ತದೆ.

ಡ್ಯೂಪ್ಲಿಕೇಟ್ ಸಂಪರ್ಕಗಳನ್ನು ಸರಿಪಡಿಸಿ

ಒಂದಕ್ಕಿಂತ ಹೆಚ್ಚಿನ ಸಂಪರ್ಕ ಕಾರ್ಡ್‌ಗಳಲ್ಲಿನ ಮೊದಲನೇ ಮತ್ತು ಕೊನೆಯ ಹೆಸರುಗಳು ಒಂದೇ ಆಗಿದ್ದಲ್ಲಿ, ನೀವು ಡ್ಯೂಪ್ಲಿಕೇಟ್ ಸಂಪರ್ಕಗಳನ್ನು ವಿಲೀನಗೊಳಿಸಬಹುದು.

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ‘ನನ್ನ ಕಾರ್ಡ್’ ಎಂಬುದರ ಕೆಳಗೆ, ಡ್ಯೂಪ್ಲಿಕೇಟ್‌ಗಳನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಸಂಪರ್ಕಗಳನ್ನು ಪರಿಶೀಲಿಸಿ ವಿಲೀನಗೊಳಿಸಲು ಅವುಗಳನ್ನು ಒಂದೊಂದಾಗಿ ಟ್ಯಾಪ್ ಮಾಡಿ ಅಥವಾ ಎಲ್ಲಾ ಡ್ಯೂಪ್ಲಿಕೇಟ್ ಸಂಪರ್ಕಗಳನ್ನು ವಿಲೀನಗೊಳಿಸಲು ‘ಎಲ್ಲವನ್ನೂ ವಿಲೀನಗೊಳಿಸಿ’ ಎಂಬುದನ್ನು ಟ್ಯಾಪ್ ಮಾಡಿ.

ಸಂಪರ್ಕಗಳನ್ನು ಹಸ್ತಚಾಲಿತವಾಗಿ ಲಿಂಕ್ ಮಾಡಿ

ಒಂದೇ ವ್ಯಕ್ತಿಯ ಎರಡು ನಮೂದುಗಳನ್ನು ಸ್ವಯಂಚಾಲಿತವಾಗಿ ಲಿಂಕ್ ಮಾಡಿರದಿದ್ದರೆ, ನೀವು ಅವುಗಳನ್ನು ಹಸ್ತಚಾಲಿತವಾಗಿ ಏಕೀಕರಿಸಬಹುದು.

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಸಂಪರ್ಕಗಳಲ್ಲಿ ಒಂದನ್ನು ಟ್ಯಾಪ್ ಮಾಡಿ, ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಂಪರ್ಕಗಳನ್ನು ಲಿಂಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಲಿಂಕ್ ಮಾಡಬೇಕಾದ ಇತರ ಸಂಪರ್ಕದ ನಮೂದನ್ನು ಆರಿಸಿ, ನಂತರ ಲಿಂಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ಭಿನ್ನವಾದ ಮೊದಲ ಅಥವಾ ಕೊನೆಯ ಹೆಸರುಗಳನ್ನು ಹೊಂದಿರುವ ಸಂಪರ್ಕಗಳನ್ನು ಲಿಂಕ್ ಮಾಡಿದಾಗ, ಪ್ರತ್ಯೇಕ ಕಾರ್ಡ್‌ಗಳಲ್ಲಿರುವ ಹೆಸರುಗಳು ಬದಲಾಗುವುದಿಲ್ಲ, ಆದರೆ ಏಕೀಕೃತ ಕಾರ್ಡ್‌ನಲ್ಲಿ ಒಂದೇ ಹೆಸರು ಕಾಣಿಸಿಕೊಳ್ಳುತ್ತದೆ. ಏಕೀಕೃತ ಕಾರ್ಡ್‌ನಲ್ಲಿ ಯಾವ ಹೆಸರು ಕಾಣಿಸಿಕೊಳ್ಳಬೇಕು ಎಂಬುದನ್ನು ಆಯ್ಕೆಮಾಡಲು, ಲಿಂಕ್ ಮಾಡಲಾದ ಕಾರ್ಡ್‌ಗಳಲ್ಲಿ ಒಂದನ್ನು ಟ್ಯಾಪ್ ಮಾಡಿ, ಆ ಕಾರ್ಡ್‌ನಲ್ಲಿರುವ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿ, ನಂತರ ಏಕೀಕೃತ ಕಾರ್ಡ್‌ಗಾಗಿ ಈ ಹೆಸರನ್ನು ಬಳಸಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನೀವು ಸಂಪರ್ಕಗಳನ್ನು ಲಿಂಕ್ ಮಾಡಿದಾಗ, ಆ ಸಂಪರ್ಕಗಳನ್ನು ವಿಲೀನಗೊಳಿಸಲಾಗುವುದಿಲ್ಲ. ನೀವು ಏಕೀಕೃತ ಸಂಪರ್ಕದಲ್ಲಿನ ಮಾಹಿತಿಯನ್ನು ಬದಲಾಯಿಸಿದರೆ ಅಥವಾ ಅದಕ್ಕೆ ಮಾಹಿತಿಯನ್ನು ಸೇರಿಸಿದರೆ, ಆ ಮಾಹಿತಿಯನ್ನು ಈಗಾಗಲೇ ಹೊಂದಿರುವ ಪ್ರತಿಯೊಂದು ಮೂಲ ಖಾತೆಗೆ ಬದಲಾವಣೆಗಳನ್ನು ಕಾಪಿ ಮಾಡಲಾಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.