ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಬೇಸಿಕ್ಸ್ ಸೆಟಪ್ ಮಾಡಿ

ನಿಮ್ಮ ಸಾಧನವನ್ನು ನೀವು ಮೊದಲ ಬಾರಿ ಆನ್ ಮಾಡಿದಾಗ, ಮುಂದುವರಿಸಲು ನಿಮಗೆ ಸಹಾಯ ಮಾಡಲು ಸುಲಭವಾದ ಸೆಟಪ್ ಪ್ರಕ್ರಿಯೆಯನ್ನು iPhone ಹೊಂದಿದೆ. ನೀವು ಈಗಷ್ಟೇ ಪ್ರಾರಂಭಿಸುತ್ತಿದ್ದೀರಾ ಅಥವಾ ನೀವು ಮೂಲಭೂತ ಅಂಶಗಳನ್ನು ಸೆಟಪ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೀರಾ, ಹಾಗಿದ್ದರೆ ನೀವು ಸರಿಯಾದ ಸ್ಥಳದಲ್ಲಿಯೇ ಇದ್ದೀರಿ.

ನಿಮ್ಮ iPhone ಅನ್ನು ಬೇರೆ iPhone ಅಥವಾ iPadಗೆ ಹತ್ತಿರ ತರುವ ಮೂಲಕ ಅಥವಾ ಬೇರೆ ಸಾಧನಗಳಿಲ್ಲದೆ ಸೆಟಪ್ ಮಾಡುವ ಮೂಲಕ ಸೆಟಪ್ ಮಾಡಲು ಇರುವ ಆಯ್ಕೆಗಳೊಂದಿಗಿನ ತ್ವರಿತ ಆರಂಭದ ಸ್ಕ್ರೀನ್.

ನಿಮ್ಮ ಹೊಸ iPhoneಗೆ ನಿಮ್ಮ ಆ್ಯಪ್‌ಗಳು ಮತ್ತು ಮಾಹಿತಿಯನ್ನು ವರ್ಗಾಯಿಸಿ

ನಿಮ್ಮ iPhone ಅನ್ನು ನೀವು ಮೊದಲು ಆನ್ ಮಾಡಿದಾಗ ಮತ್ತು ಸೆಟಪ್ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ, ನಿಮ್ಮ ಈ ಮೊದಲಿನ iPhoneನಿಂದ ನಿಮ್ಮ ಹಲವು ಆ್ಯಪ್‌ಗಳು, ಸೆಟ್ಟಿಂಗ್ಸ್ ಮತ್ತು ಕಂಟೆಂಟ್ ಅನ್ನು ನೀವು ನೇರವಾಗಿ ನಿಮ್ಮ ಹೊಸ iPhoneಗೆ ವೈರ್‌ಲೆಸ್ ಆಗಿ ವರ್ಗಾಯಿಸಬಹುದು, ಹಾಗೆ ಮಾಡಲು—ಎರಡೂ ಸಾಧನಗಳನ್ನು ಒಟ್ಟಿಗೆ ತನ್ನಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ Wi-Fi ಆಯ್ಕೆಗಳ ಸ್ಕ್ರೀನ್. Wi-Fi ಆನ್ ಆಗಿದೆ ಮತ್ತು ನೆಟ್‌ವರ್ಕ್ ಅನ್ನು ಆಯ್ಕೆಮಾಡಲಾಗಿದೆ.

ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ ಮತ್ತು Wi-Fiಗೆ ಕನೆಕ್ಟ್ ಮಾಡಿ

ನಿಮ್ಮ ಮಾಡಲ್‌ಗೆ ಅನುಗುಣವಾಗಿ, ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ eSIM ಅನ್ನು ಬಳಸಿ ಅಥವಾ ನಿಮ್ಮ ಮೊಬೈಲ್ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲು ಭೌತಿಕ ಸಿಮ್ ಕಾರ್ಡ್ ಅನ್ನು ಇನ್‌ಸ್ಟಾಲ್ ಮಾಡಿ. ನಿಮ್ಮ iPhone ನಿಮ್ಮ ಮೊಬೈಲ್ ಸೇವೆಯ ಪ್ಲ್ಯಾನ್‌ಗೆ ಕನೆಕ್ಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಲು, ಸೆಟ್ಟಿಂಗ್ಸ್ ಆ್ಯಪ್ > > ಮೊಬೈಲ್ ಸೇವೆ ಎಂಬಲ್ಲಿಗೆ ಹೋಗಿ.

ನಿಮ್ಮ iPhone ಅನ್ನು ನಿಮ್ಮ ಮನೆಯ Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲು, ಸೆಟ್ಟಿಂಗ್ಸ್ ಆ್ಯಪ್   Wi-Fi ಎಂಬಲ್ಲಿಗೆ ಹೋಗಿ, Wi-Fi ಅನ್ನು ಆನ್ ಮಾಡಿ, ನಂತರ ನಿಮ್ಮ ನೆಟ್‌ವರ್ಕ್ ಅನ್ನು ಆಯ್ಕೆಮಾಡಿ. ನೀವು ಮನೆಯಲ್ಲಿರುವಾಗಲೆಲ್ಲಾ iPhone ಸ್ವಯಂಚಾಲಿತವಾಗಿ ನಿಮ್ಮ Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಆಗುತ್ತದೆ.

Apple ಖಾತೆಯ ಸೈನ್-ಇನ್ ಸ್ಕ್ರೀನ್.

ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ

Apple ಸೇವೆಗಳಾದ App Store, iTunes Store, Apple Books, Apple Music, FaceTime, iCloud, iMessage ಮತ್ತು ಇತ್ಯಾದಿಗಳನ್ನು ಆ್ಯಕ್ಸೆಸ್ ಮಾಡಲು ನಿಮ್ಮ Apple ಖಾತೆಯನ್ನು ನೀವು ಬಳಸುತ್ತೀರಿ.

ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಲು, ಸೆಟ್ಟಿಂಗ್ಸ್ ಆ್ಯಪ್  > Apple ಖಾತೆ ಎಂಬುದಕ್ಕೆ ಹೋಗಿ. ನೀವು iPad (iPadOS 17 ಅಥವಾ ನಂತರದ ಆವೃತ್ತಿಯ) ಅನ್ನು ಅಥವಾ ಇನ್ನೊಂದು iPhone (iOS 17 ಅಥವಾ ನಂತರದ ಆವೃತ್ತಿಯ) ಅನ್ನು ಹೊಂದಿದ್ದರೆ, ನಿಮ್ಮ iPhone ಅನ್ನು ನಿಮ್ಮ ಇತರ ಸಾಧನದ ಹತ್ತಿರ ತರಬಹುದು. ಇಲ್ಲದಿದ್ದರೆ, ನೀವು ಹಸ್ತಚಾಲಿತವಾಗಿ ಸೈನ್ ಇನ್ ಮಾಡಬಹುದು. ನೀವು ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ದೃಢೀಕರಿಸಲು, ಸೆಟ್ಟಿಂಗ್ಸ್ ಆ್ಯಪ್  > [ನಿಮ್ಮ ಹೆಸರು]; ನಿಮ್ಮ ಹೆಸರಿನ ಕೆಳಗೆ ಕಾಣಿಸುವ ನಿಮ್ಮ Apple ಖಾತೆಗೆ ಹೋಗಿ.

Face ID ಗುರುತಿಸುವಿಕೆ ಸೆಟಪ್ ಸ್ಕ್ರೀನ್. ವೃತ್ತವೊಂದು ಸುತ್ತುವರಿದಿರುವ ಮುಖವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿದೆ. ಮುಖದ ಕೆಳಗಿರುವ ಪಠ್ಯವು ವೃತ್ತವನ್ನು ಪೂರ್ಣಗೊಳಿಸಲು ತಮ್ಮ ತಲೆಯನ್ನು ನಿಧಾನವಾಗಿ ಮೂವ್ ಮಾಡುವಂತೆ ಬಳಕೆದಾರರಿಗೆ ಸೂಚಿಸುತ್ತದೆ.

Face ID ಅಥವಾ Touch IDಯನ್ನು ಸೆಟಪ್ ಮಾಡಿ

ನಿಮ್ಮ iPhone ಅನ್ನು ಸುರಕ್ಷಿತವಾಗಿ ಅನ್‌ಲಾಕ್ ಮಾಡಲು, ಅನೇಕ ಆ್ಯಪ್‌ಗಳಿಗೆ ಸೈನ್ ಇನ್ ಮಾಡಲು ಮತ್ತು ಖರೀದಿಗಳನ್ನು ಮಾಡಲು ನೀವು Face ID (ಮುಖ ಗುರುತಿಸುವಿಕೆ) ಅಥವಾ Touch ID (ನಿಮ್ಮ ಫಿಂಗರ್‌ಪ್ರಿಂಟ್) ಅನ್ನು ಬಳಸಬಹುದು. ನಿಮ್ಮ ಭದ್ರತೆಗಾಗಿ, Face ID ಮತ್ತು Touch ID ಡೇಟವನ್ನು ನಿಮ್ಮ ಸಾಧನದಿಂದ ಹೊರಗೆ ಬಹಿರಂಗವಾಗುವುದಿಲ್ಲ ಮತ್ತು ಬೇರೆ ಎಲ್ಲಿಯೂ ಸೇವ್ ಆಗುವುದಿಲ್ಲ.

ನಿಮ್ಮ iPhone ಮಾಡಲ್ ಅನ್ನು ಅವಲಂಬಿಸಿ, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

  • Face IDಯನ್ನು ಸೆಟಪ್ ಮಾಡಿ: ಸೆಟ್ಟಿಂಗ್ಸ್ ಆ್ಯಪ್  > Face ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ, Face ID ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

  • Touch IDಯನ್ನು ಸೆಟಪ್ ಮಾಡಿ: ಸೆಟ್ಟಿಂಗ್ಸ್ ಆ್ಯಪ್  > Touch ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ, ಫಿಂಗರ್‌ಪ್ರಿಂಟ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಮನೆಯಲ್ಲಿ ಎರಡು ಸಾಧನಗಳನ್ನು ತೋರಿಸುತ್ತಿರುವ ಹುಡುಕಿ ಆ್ಯಪ್‌ನ ಸ್ಕ್ರೀನ್.

iPhone ಅನ್ನು ಹುಡುಕಿ ಎಂಬುದನ್ನು ಆನ್ ಮಾಡಿ

ನಿಮ್ಮ iPhone ಅನ್ನು ನೀವು ಎಂದಾದರೂ ಕಳೆದುಕೊಂಡರೆ ಅಥವಾ ಕಳುವಾದರೆ ನೀವು ಅದನ್ನು ಪತ್ತೆ ಮಾಡಬಹುದು.

ಸೆಟ್ಟಿಂಗ್ಸ್ ಆ್ಯಪ್  > [ನಿಮ್ಮ ಹೆಸರು] > ಹುಡುಕಿ ಆ್ಯಪ್‌ ಎಂಬಲ್ಲಿಗೆ ಹೋಗಿ, iPhone ಅನ್ನು ಹುಡುಕಿ ಎಂಬುದನ್ನು ಟ್ಯಾಪ್ ಮಾಡಿ, ನಂತರ iPhone ಅನ್ನು ಹುಡುಕಿ ಎಂಬುದನ್ನು ಆನ್ ಮಾಡಿ. ಹುಡುಕಿ ಆ್ಯಪ್‌ನಲ್ಲಿ ನಿಮ್ಮ ಸಾಧನಗಳ ಸ್ಥಳವನ್ನು ನೀವು ನೋಡಬಹುದು. ನಿಮ್ಮ iPhone ಅನ್ನು ನೀವು ಕಳೆದುಕೊಂಡರೆ ಮತ್ತು ಹುಡುಕಿ ಆ್ಯಪ್‌ಗೆ ಆ್ಯಕ್ಸೆಸ್ ಹೊಂದಿರದಿದ್ದರೆ, iCloud.comನಲ್ಲಿ ಹುಡುಕಿ ಎಂಬುದರ ಮೂಲಕ ನಿಮ್ಮ ಸಾಧನವನ್ನು ನೀವು ಪತ್ತೆ ಮಾಡಬಹುದು.

iCloud ಸಂಗ್ರಹಣೆಯ ಮೀಟರ್ ಹಾಗೂ iCloudನೊಂದಿಗೆ ಬಳಸಬಹುದಾದ ಫೋಟೋಸ್ ಆ್ಯಪ್, iCloud Drive ಮತ್ತು iCloud Mailನಂತಹ ಆ್ಯಪ್‌ಗಳು ಮತ್ತು ಫೀಚರ್‌ಗಳ ಪಟ್ಟಿಯನ್ನು ತೋರಿಸುವ iCloud ಸೆಟ್ಟಿಂಗ್ಸ್ ಸ್ಕ್ರೀನ್.

ನಿಮ್ಮ ಡೇಟವನ್ನು iCloudನಲ್ಲಿ ಸಂಗ್ರಹಿಸಿ

ನಿಮ್ಮ ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಮತ್ತು ನಿಮ್ಮ ಸಾಧನಗಳಾದ್ಯಂತ ಸಿಂಕ್ ಆಗಿರಲು iCloud ನಿಮಗೆ ಸಹಾಯ ಮಾಡುತ್ತದೆ. ನಿಮ್ಮ iPhone ಅನ್ನು ನೀವು ಬದಲಾಯಿಸಿದರೆ ಅಥವಾ ಕಳೆದುಕೊಂಡರೆ ಅಥವಾ ಅದು ಹಾಳಾಗಿದ್ದರೆ ಅಥವಾ ಕಳುವಾದರೆ, ನಿಮ್ಮ ಫೋಟೋಗಳು, ವೀಡಿಯೊಗಳು ಮತ್ತು ಹೆಚ್ಚಿನವುಗಳು iCloudನಲ್ಲಿ ಸುರಕ್ಷಿತವಾಗಿರುತ್ತವೆ.

iCloudನೊಂದಿಗೆ ನೀವು ಬಳಸಲು ಬಯಸುವ ಫೀಚರ್‌ಗಳನ್ನು ಆನ್ ಮಾಡಲು ಅಥವಾ ಬದಲಾಯಿಸಲು, ಸೆಟ್ಟಿಂಗ್ಸ್ ಆ್ಯಪ್  > [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

ಎಲ್ಲಾ iPhone ಮಾಡಲ್‌ಗಳಿಗೆ ಎಲ್ಲಾ ಫೀಚರ್‌ಗಳು ಲಭ್ಯವಿರುವುದಿಲ್ಲ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.