ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ Freeform ಬೋರ್ಡ್ ಮೇಲೆ ಚಿತ್ರಿಸುವುದು ಅಥವಾ ಕೈಯಿಂದ ಬರೆಯುವುದು

ನೀವು Apple Pencil (ಹೊಂದಾಣಿಕೆ ನೋಡಿ) ಅಥವಾ ನಿಮ್ಮ ಬೆರಳಿನಿಂದ ಸ್ಕೆಚ್ ಮಾಡಬಹುದು ಅಥವಾ ಕೈಬರಹದ ಟಿಪ್ಪಣಿಯನ್ನು ಬರೆದುಕೊಳ್ಳಬಹುದು. ನೀವು ಟೈಪ್ ಮಾಡಿದ ಪಠ್ಯದಲ್ಲಿ ಮಾಡುವಂತೆ ಕೈಬರಹದ ಪಠ್ಯವನ್ನು ಸಹ ನೀವು ಎಡಿಟ್ ಮಾಡಬಹುದು ಮತ್ತು ಅದರೊಂದಿಗೆ ಕೆಲಸ ಮಾಡಬಹುದು.

Freeform ಬೋರ್ಡ್‌ನಲ್ಲಿ ಡ್ರಾಯಿಂಗ್ ಮತ್ತು ಕೈಬರಹದ ಪಠ್ಯ. ಡ್ರಾಯಿಂಗ್ ಟೂಲ್‌ಗಳು ಕೆಳಭಾಗದುದ್ದಕ್ಕೂ ಕಾಣಿಸಿಕೊಳ್ಳುತ್ತವೆ.

ಡ್ರಾ ಮಾಡಿ ಮತ್ತು ಕೈಯಿಂದ ಬರೆಯಿರಿ

  1. ನಿಮ್ಮ iPadನಲ್ಲಿ Freeform ಆ್ಯಪ್‌ಗೆ ಹೋಗಿ.

  2. ಬೋರ್ಡ್ ಒಂದನ್ನು ತೆರೆಯಿರಿ ಅಥವಾ ಹೊಸದನ್ನು ಪ್ರಾರಂಭಿಸಲು ಹೊಸ ಬೋರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಡ್ರಾಯಿಂಗ್ ಮತ್ತು ಕೈಬರಹದ ಟೂಲ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಬೆರಳಿನಿಂದ ಅಥವಾ Apple Pencilನಿಂದ ಚಿತ್ರಿಸಿ.

    ನೀವು Apple Pencil ಅನ್ನು ಬಳಸುತ್ತಿದ್ದರೆ ಮತ್ತು ನಿಮ್ಮ ಬೆರಳಿನಿಂದ ಚಿತ್ರಿಸುವುದಕ್ಕೆ ಬದಲಾಯಿಸಲು ಬಯಸಿದರೆ, ಡ್ರಾಯಿಂಗ್ ಟೂಲ್‌ಗಳು ಎಂಬುದರಲ್ಲಿ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಬೆರಳಿನಿಂದ ಚಿತ್ರಿಸಿ ಎಂಬುದನ್ನು ಆನ್ ಮಾಡಿ.

    ಸಲಹೆ: ಡ್ರಾಯಿಂಗ್ ಅನ್ನು ನೀವು ಪೂರ್ಣಗೊಳಿಸಿದಾಗ ಅದರ ಆಕಾರವನ್ನು ನಯವಾಗಿಸಲು ಅಥವಾ ನೇರವಾಗಿಸಲು ನಿಮ್ಮ ಬೆರಳನ್ನು ಅಥವಾ Apple Pencil ಅನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಹಿಡಿದುಕೊಳ್ಳಿ.

  4. ಟೂಲ್ ಅನ್ನು ಸ್ವಿಚ್ ಮಾಡಲು ಅದನ್ನು ಟ್ಯಾಪ್ ಮಾಡಿ. (ಫಿಲ್, ಕ್ರೇಯಾನ್, ಫೌಂಟೇನ್ ಪೆನ್ ಅಥವಾ ವಾಟರ್ ಕಲರ್ ಬ್ರಷ್‌ನಂತಹ ಇತರ ಟೂಲ್‌ಗಳನ್ನು ನೋಡಲು ಸ್ವೈಪ್ ಮಾಡಿ.)

    ಕೆಲವು Freeform ಡ್ರಾಯಿಂಗ್ ಟೂಲ್‌ಗಳು ಮತ್ತು ಅವುಗಳ ಸ್ಟ್ರೋಕ್‌ಗಳು: ಮಾರ್ಕರ್, ಪೆನ್, ಹೈಲೈಟರ್, ಪೆನ್ಸಿಲ್, ಕ್ರೇಯಾನ್, ಫೌಂಟೇನ್ ಪೆನ್ ಮತ್ತು ವಾಟರ್ ಕಲರ್ ಬ್ರಷ್.

    ಸ್ಟ್ರೋಕ್‌ನ ದಪ್ಪ ಅಥವಾ ಅಪಾರದರ್ಶಕತೆಯಂತಹ ಟೂಲ್‌ನ ಯಾವುದೇ ೊ ಗುಣಲಕ್ಷಣಗಳನ್ನು ಬದಲಾಯಿಸಲು ಎರಡನೇ ಬಾರಿಗೆ ಟ್ಯಾಪ್ ಮಾಡಿ.

    ಮುಚ್ಚಿದ ಆಕಾರದಲ್ಲಿ ಬಣ್ಣವನನ್ನು ತುಂಬಲು, ಫಿಲ್ ಟೂಲ್ (ಪೇಂಟ್ ಟ್ಯೂಬ್) ಅನ್ನು ಬಳಸಿ.

    ನೇರ ರೇಖೆಯನ್ನು ಡ್ರಾ ಮಾಡಲು, ರೂಲರ್ ಟೂಲ್ ಅನ್ನು ಟ್ಯಾಪ್ ಮಾಡಿ. (ಅದರ ಮೇಲೆ ಎರಡು ಬೆರಳುಗಳನ್ನು ಇರಿಸಿ, ನಿಮ್ಮ ಕೈಯನ್ನು ತಿರುಗಿಸುವ ಮೂಲಕ ನೀವು ಅದನ್ನು ತಿರುಗಿಸಬಹುದು.)

    Scribble (ಪೆನ್ ಪಕ್ಕದಲ್ಲಿದೆ) ನೀವು Apple Pencilನೊಂದಿಗೆ ಬರೆಯುವಾಗ ನಿಮ್ಮ ಕೈಬರಹವನ್ನು ಟೈಪ್ ಮಾಡಿದ ಪಠ್ಯವಾಗಿ ಪರಿವರ್ತಿಸುತ್ತದೆ. Apple Pencilನೊಂದಿಗೆ ಬೋರ್ಡ್‌ಗಳಲ್ಲಿ ಬರೆಯುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, Scribbleನೊಂದಿಗೆ ಪಠ್ಯವನ್ನು ನಮೂದಿಸಿ ಎಂಬುದನ್ನು ನೋಡಿ.

ಗಮನಿಸಿ: Apple Pencil ಡಿಫಾಲ್ಟ್ ಆಗಿ Freeformನಲ್ಲಿ ಡ್ರಾಯಿಂಗ್ ಮತ್ತು ಬರವಣಿಗೆಯ ಟೂಲ್ ಆಗಿ ಕಾರ್ಯನಿರ್ವಹಿಸುತ್ತದೆ. ನೀವು ಆಯ್ಕೆ ಮಾಡಲು ಮತ್ತು ಸ್ಕ್ರೋಲ್ ಮಾಡಲು ಸಹ Apple Pencil ಅನ್ನು ಬಳಸಲು ಬಯಸಿದರೆ ನೀವು ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು .

ಡ್ರಾಯಿಂಗ್‌ನ ಭಾಗಗಳನ್ನು ಆಯ್ಕೆಮಾಡಿ ಮತ್ತು ಎಡಿಟ್ ಮಾಡಿ

ನೀವು Freeform ಆ್ಯಪ್ನಲ್ಲಿ ಡ್ರಾ ಮಾಡುವಾಗ, ನಿಮ್ಮ ಸ್ಟ್ರೋಕ್‌ಗಳನ್ನು ಗುಂಪು ಮಾಡಲಾಗುತ್ತದೆ. ನೀವು ಡ್ರಾಯಿಂಗ್ ಅನ್ನು ಬೇರ್ಪಡಿಸಲು ಬಯಸಿದರೆ, ನಿಮ್ಮ ಸ್ಟ್ರೋಕ್‌ಗಳನ್ನು ಬೇರ್ಪಡಿಸಿ ಮತ್ತು ಅವುಗಳನ್ನು ವಿಲೀನಗೊಳಿಸಬಹುದು. ನೀವು ಡ್ರಾಯಿಂಗ್‌ನ ಭಾಗಗಳನ್ನು ಡಿಲೀಟ್ ಮಾಡಬಹುದು, ಮರುಗಾತ್ರಗೊಳಿಸಬಹುದು ಅಥವಾ ನೇರವಾಗಿಸಬಹುದು.

  1. ಡ್ರಾಯಿಂಗ್ ಟೂಲ್‌ಗಳ ಮೂಲಕ ನಿಮ್ಮ Freeform ಬೋರ್ಡ್‌ನಲ್ಲಿ ನೀವು ಚಿತ್ರಿಸಿದ ಅಥವಾ ಬರೆದ ನಂತರ, ಡ್ರಾಯಿಂಗ್ ಟೂಲ್‌ಗಳಲ್ಲಿ Lasso ಬಟನ್ (ಎರೇಸರ್ ಮತ್ತು ರೂಲರ್‌ ನಡುವೆ) ಅನ್ನು ಟ್ಯಾಪ್ ಮಾಡಿ.

  2. ನೀವು ಆಯ್ಕೆಮಾಡಲು ಬಯಸುವ ಡ್ರಾಯಿಂಗ್‌ನ ಭಾಗವನ್ನು ಟ್ಯಾಪ್ ಮಾಡಿ ಅಥವಾ ಅದರ ಸುತ್ತ ವೃತ್ತ ಬಿಡಿಸಿ, ನಂತರ ಒಂದು ಆಯ್ಕೆಯನ್ನು ಆರಿಸಿ.

    ಸಲಹೆ: ಕೈಯಿಂದ ಬಿಡಿಸಿದ ರೇಖೆಗಳನ್ನು ಸುಗಮವಾಗಿಸಲು ಅಥವಾ ನೇರವಾಗಿಸಲು ಸ್ನ್ಯಾಪ್ ಟು ಶೇಪ್ ಅನ್ನು ಆಯ್ಕೆಮಾಡಿ.

ನೀವು ಡ್ರಾಯಿಂಗ್ ಟೂಲ್‌ಗಳನ್ನು ಬಳಸದೇ ಇದ್ದಾಗ ಸಂಪೂರ್ಣ ಡ್ರಾಯಿಂಗ್ ಅಥವಾ ಇತರ ಐಟಮ್ ಅನ್ನು ಆಯ್ಕೆಮಾಡಲು ಸಹ ನೀವು ಟ್ಯಾಪ್ ಮಾಡಬಹುದು. ಐಟಮ್ ಅನ್ನು ಆಯ್ಕೆಮಾಡಲು ಅದನ್ನು ಟ್ಯಾಪ್ ಮಾಡಿ, ಫಾರ್ಮ್ಯಾಟಿಂಗ್ ಟೂಲ್‌ಗಳಲ್ಲಿ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕಟ್, ಕಾಪಿ ಅಥವಾ ಡ್ಯೂಪ್ಲಿಕೇಟ್ ಎಂಬುದನ್ನು ಟ್ಯಾಪ್ ಮಾಡಿ.

ಕೈಬರಹದ ಪಠ್ಯದೊಂದಿಗೆ ಕಾರ್ಯನಿರ್ವಹಿಸಿ

ನೀವು Freeform ಆ್ಯಪ್‌ನಲ್ಲಿ ಕೈಯಿಂದ ಬರೆಯುವಾಗ, ನಿಮ್ಮ ಕೈಬರಹವನ್ನು ಪದಗಳೆಂದು ಗುರುತಿಸಲಾಗುತ್ತದೆ. ನೀವು ಟೈಪ್ ಮಾಡಿದ ಪಠ್ಯವನ್ನು ಹುಡುಕುವ ರೀತಿಯಲ್ಲಿಯೇ ನೀವು ಕೈಯಿಂದ ಬರೆದ ಪಠ್ಯವನ್ನು ಸಹ ಹುಡುಕಬಹುದು. ನೀವು ಅದನ್ನು ಆಯ್ಕೆಮಾಡಬಹುದು, ಅದನ್ನು ಪಠ್ಯವಾಗಿ ಕಾಪಿ ಮಾಡಿ ಪೇಸ್ಟ್ ಮಾಡಬಹುದು, ನೇರವಾಗಿಸಬಹುದು ಅಥವಾ ಅದನ್ನು ಅನುವಾದಿಸಬಹುದು. ನೀವು ಫೋನ್ ಸಂಖ್ಯೆ ಅಥವಾ ವಿಳಾಸದಂತಹ ಏನನ್ನಾದರೂ ಬರೆಯುವಾಗ, ಫೋನ್ ಅಥವಾ ನಕ್ಷೆಯಂತಹ ಸಂಬಂಧಿತ ಆ್ಯಪ್‌ಗಳನ್ನು ತೆರೆಯಲು ನೀವು ಅದನ್ನು ಟ್ಯಾಪ್ ಮಾಡಬಹುದು.

  1. ಡ್ರಾಯಿಂಗ್ ಟೂಲ್‌ಗಳ ಮೂಲಕ ನಿಮ್ಮ Freeform ಬೋರ್ಡ್‌ನಲ್ಲಿ ನೀವು ಡ್ರಾ ಮಾಡಿದ ಅಥವಾ ಬರೆದ ನಂತರ, ಡ್ರಾಯಿಂಗ್ ಟೂಲ್‌ಗಳಲ್ಲಿ Lasso ಟೂಲ್ (ಎರೇಸರ್ ಮತ್ತು ರೂಲರ್‌ ನಡುವೆ) ಅನ್ನು ಟ್ಯಾಪ್ ಮಾಡಿ.

  2. ನೀವು ಆಯ್ಕೆಮಾಡಲು ಬಯಸುವ ಪದಗಳನ್ನು ಟ್ಯಾಪ್ ಮಾಡಿ ಅಥವಾ ಅದರ ಸುತ್ತ ವೃತ್ತ ಬಿಡಿಸಿ, ನಂತರ ಕಾಣಿಸಿಕೊಳ್ಳುವ ಮೆನುವಿನಿಂದ ಒಂದು ಆಯ್ಕೆಯನ್ನು ಆರಿಸಿ. (ಇತರ ಆಯ್ಕೆಗಳನ್ನು ನೋಡಲು ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ.)

    ಸಲಹೆ: ನಿಮ್ಮ ಅಕ್ಷರಗಳ ಬೇಸ್‌ಲೈನ್ ಅನ್ನು ಗ್ರಿಡ್‌ನೊಂದಿಗೆ ಹೊಂದಿಸಲು ನೇರವಾಗಿಸಿ ಎಂಬುದನ್ನು ಆಯ್ಕೆಮಾಡಿ ಅಥವಾ ನೀವು ಟೈಪ್ ಮಾಡಿದಂತೆಯೇ ಕಾಣುವ ಪಠ್ಯವನ್ನು ನಿಮ್ಮ ಕ್ಲಿಪ್‌ಬೋರ್ಡ್‌ಗೆ ಸೇರಿಸಲು ಪಠ್ಯವಾಗಿ ಕಾಪಿ ಮಾಡಿ ಎಂಬುದನ್ನು ಆಯ್ಕೆಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಮೆನು ಅಥವಾ ಇತರ ಸಂಬಂಧಿತ ಆ್ಯಪ್ ಅನ್ನು ತೆರೆಯಿರಿ: ಕೈಬರಹದ ಲಿಂಕ್, ವಿಳಾಸ, ಫೋನ್ ಸಂಖ್ಯೆ ಅಥವಾ ದಿನಾಂಕವನ್ನು ಟ್ಯಾಪ್ ಮಾಡಿ.

    • ಡ್ರ್ಯಾಗ್ ಮಾಡಿ ಮತ್ತು ಡ್ರಾಪ್ ಮಾಡಿ: ಪಠ್ಯವನ್ನು ಒತ್ತಿ ಹಿಡಿದುಕೊಳ್ಳಿ.

    • ಸ್ಮಾರ್ಟ್ ಆಯ್ಕೆ: ಪಠ್ಯವನ್ನು ಡಬಲ್ ಟ್ಯಾಪ್ ಮಾಡಿ.

    • ನಿಮ್ಮ ಸ್ವಂತ ಕೈಬರಹದಲ್ಲಿ ಪಠ್ಯವನ್ನು ಎಡಿಟ್ ಮಾಡಿ: ಕರ್ಸರ್ ಅನ್ನು ನಿಮ್ಮ ಕೈಬರಹದ ಪಠ್ಯದಲ್ಲಿರುವ ಪಾಯಿಂಟ್‌ಗೆ ಮೂವ್ ಮಾಡಿ ಮತ್ತು ಟೈಪ್ ಮಾಡಿ. ನಿಮ್ಮ ಪದಗಳು ನಿಮ್ಮದೇ ಬರವಣಿಗೆಯ ಶೈಲಿಯಂತೆ ಗೋಚರಿಸುತ್ತವೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.