ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಿಂದ ಪ್ರಿಂಟ್ ಮಾಡುವುದು

Mail, ಫೋಟೋಸ್, Safari ಮತ್ತು Freeformನಂತಹ ಆ್ಯಪ್‌ಗಳಿಂದ AirPrint-ಸಕ್ರಿಯಗೊಳಿಸಲಾದ ಪ್ರಿಂಟರ್‌ಗೆ ವೈರ್‌ಲೆಸ್ ಆಗಿ ಪ್ರಿಂಟ್ ಮಾಡಲು iPadನಲ್ಲಿ AirPrint ಅನ್ನು ಬಳಸಿ. App Storeನಲ್ಲಿ ಲಭ್ಯವಿರುವ ಹಲವು ಆ್ಯಪ್‌ಗಳು AirPrint ಅನ್ನು ಸಹ ಬೆಂಬಲಿಸುತ್ತವೆ.

ನಿಮ್ಮ iPad ಮತ್ತು ಪ್ರಿಂಟರ್ ಒಂದೇ Wi-Fi ನೆಟ್‌ವರ್ಕ್‌ನಲ್ಲಿರಬೇಕು. AirPrint ಕುರಿತು ಎಂಬ Apple ಬೆಂಬಲ ಲೇಖನವನ್ನು ನೋಡಿ.

AirPrint-ಸಕ್ರಿಯಗೊಳಿಸಲಾದ ಪ್ರಿಂಟರ್ ಅನ್ನು ಆಯ್ಕೆಮಾಡಿ

ನಿಮ್ಮ ಪ್ರಿಂಟರ್ AirPrint ಅನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ iPad ಹಾಗೂ ಪ್ರಿಂಟರ್ ಒಂದೇ Wi-Fi ನೆಟ್‌ವರ್ಕ್‌ನಲ್ಲಿವೆ ಎಂಬುದನ್ನು ದೃಢೀಕರಿಸಿದ ನಂತರ ಈ ಕೆಳಗಿನವುಗಳನ್ನು ಮಾಡಿ:

  1. ನೀವು ಪ್ರಿಂಟ್ ಮಾಡಲು ಬಯಸುವ ಆ್ಯಪ್ ಅನ್ನು ತೆರೆಯಿರಿ.

  2. ಹಂಚಿಕೊಳ್ಳಿ ಬಟನ್, ಇನ್ನಷ್ಟು ಬಟನ್, ಪ್ರತ್ಯುತ್ತರಿಸಿ ಬಟನ್ ಅಥವಾ ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ (ಆ್ಯಪ್ ಅನ್ನು ಆಧರಿಸಿ).

  3. ಪ್ರಿಂಟ್ ಎಂಬುದನ್ನು ಟ್ಯಾಪ್ ಮಾಡಿ, ಯಾವುದೇ ಪ್ರಿಂಟರ್ ಆಯ್ಕೆಮಾಡಿಲ್ಲ ಎಂಬುದನ್ನು ಟ್ಯಾಪ್ ಮಾಡಿ, ನಂತರ AirPrint-ಸಕ್ರಿಯಗೊಳಿಸಲಾದ ಪ್ರಿಂಟರ್ ಅನ್ನು ಆಯ್ಕೆಮಾಡಿ.

ಡಾಕ್ಯುಮಂಟ್ ಅನ್ನು ಪ್ರಿಂಟ್ ಮಾಡಿ

  1. ನೀವು ಪ್ರಿಂಟ್ ಮಾಡಲು ಬಯಸುವ ಆ್ಯಪ್ ಅನ್ನು ತೆರೆಯಿರಿ.

  2. ಹಂಚಿಕೊಳ್ಳಿ ಬಟನ್, ಇನ್ನಷ್ಟು ಬಟನ್, ಪ್ರತ್ಯುತ್ತರಿಸಿ ಬಟನ್ ಅಥವಾ ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ (ಆ್ಯಪ್ ಅನ್ನು ಆಧರಿಸಿ).

  3. ಪ್ರಿಂಟ್ ಎಂಬುದನ್ನು ಟ್ಯಾಪ್ ಮಾಡಿ. (ನಿಮಗೆ ಪ್ರಿಂಟ್ ಎಂಬುದು ಕಾಣಿಸದಿದ್ದರೆ, ಮೇಲಕ್ಕೆ ಸ್ವೈಪ್ ಮಾಡಿ.)

ಪ್ರಿಂಟ್ ಕೆಲಸದ ಸ್ಟೇಟಸ್ ಅನ್ನು ನೋಡಿ

 ಆ್ಯಪ್ ಸ್ವಿಚರ್ ತೆರೆಯಿರಿ, ನಂತರ ಪ್ರಿಂಟ್ ಸೆಂಟರ್ ಅನ್ನು ಟ್ಯಾಪ್ ಮಾಡಿ.

ಸರದಿಯಲ್ಲಿ ಎಷ್ಟು ಡಾಕ್ಯುಮೆಂಟ್‌ಗಳಿವೆ ಎಂಬುದನ್ನು ಐಕಾನ್‌ನಲ್ಲಿರುವ ಬ್ಯಾಡ್ಜ್ ತೋರಿಸುತ್ತದೆ.

ಪ್ರಿಂಟ್ ಕೆಲಸವನ್ನು ರದ್ದುಮಾಡಲು, ಅದನ್ನು ಪ್ರಿಂಟ್ ಸೆಂಟರ್‌ನಲ್ಲಿ ಆಯ್ಕೆಮಾಡಿ, ನಂತರ ಪ್ರಿಂಟ್ ಮಾಡುವುದನ್ನು ರದ್ದುಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.