ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಮತ್ತು ನಿಮ್ಮ ಇತರೆ ಸಾಧನಗಳ ನಡುವೆ ಟಾಸ್ಕ್‌ಗಳನ್ನು ಹ್ಯಾಂಡ್ ಆಫ್ ಮಾಡುವುದು

Handoffನೊಂದಿಗೆ, ನೀವು ಒಂದು ಸಾಧನದಲ್ಲಿ ಟಾಸ್ಕ್ ಅನ್ನು ಪ್ರಾರಂಭಿಸಬಹುದು ಮತ್ತು ಇನ್ನೊಂದು ಸಾಧನದಲ್ಲಿ ಅದನ್ನು ಪೂರ್ಣಗೊಳಿಸಬಹುದು. ಉದಾಹರಣೆಗೆ, ನಿಮ್ಮ iPadನಲ್ಲಿ ನೀವು ಒಂದು ಈಮೇಲ್ ಅನ್ನು ಪ್ರಾರಂಭಿಸಬಹುದು ಮತ್ತು ನಂತರ ಅದನ್ನು ನಿಮ್ಮ Mac ಕಂಪ್ಯೂಟರ್‌ನ ದೊಡ್ಡ ಸ್ಕ್ರೀನ್‌ನಲ್ಲಿ ಪೂರ್ಣಗೊಳಿಸಬಹುದು.

Safari, Mail, FaceTime, ಮತ್ತು ನಕ್ಷೆಯಂತಹ ಅನೇಕ Apple ಆ್ಯಪ್‌ಗಳೊಂದಿಗೆ ನೀವು Handoff ಅನ್ನು ಬಳಸಬಹುದು. ಕೆಲವು ಥರ್ಡ್-ಪಾರ್ಟಿ ಆ್ಯಪ್‌ಗಳು ಸಹ Handoff ಜೊತೆಗೆ ಕಾರ್ಯನಿರ್ವಹಿಸುತ್ತವೆ.

ನಿಮ್ಮ iPhone, iPad ಮತ್ತು Mac ನಡುವೆ ನೀವು Handoff ಅನ್ನು ಬಳಸಬಹುದು. ನಿಮ್ಮ Apple Watch ಮತ್ತು iPhone ನಡುವೆ ನೀವು ಟಾಸ್ಕ್‌ಗಳನ್ನು ಹ್ಯಾಂಡ್ ಆಫ್ ಮಾಡಬಹುದು.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

Handoff ಅನ್ನು ಆನ್ ಮಾಡಿ

ನಿಮ್ಮ iPad ಮತ್ತು ನಿಮ್ಮ ಇತರೆ Apple ಸಾಧನಗಳೆರಡರಲ್ಲಿಯೂ Handoff ಅನ್ನು ಆನ್ ಮಾಡಿ.

  • ನಿಮ್ಮ iPhone ಅಥವಾ iPadನಲ್ಲಿ: ಸೆಟ್ಟಿಂಗ್ಸ್  > ಸಾಮಾನ್ಯ > AirPlay ಮತ್ತು ಕಂಟಿನ್ಯುಯಿಟಿ ಎಂಬಲ್ಲಿಗೆ ಹೋಗಿ, ನಂತರ Handoff ಅನ್ನು ಆನ್ ಮಾಡಿ.

  • ನಿಮ್ಮ Macನಲ್ಲಿ: Apple ಮೆನು > ಸಿಸ್ಟಂ ಸೆಟ್ಟಿಂಗ್ಸ್‌ ಅನ್ನು ಆಯ್ಕೆಮಾಡಿ, ಸೈಡ್ ಬಾರ್‌ನಲ್ಲಿ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, Airplay ಮತ್ತು ಕಂಟಿನ್ಯುಯಿಟಿಯನ್ನು ಕ್ಲಿಕ್ ಮಾಡಿ, ನಂತರ Handoff ಅನ್ನು ಆನ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)

    ಗಮನಿಸಿ: ನಿಮ್ಮ Mac, macOS 12.5 ಅಥವಾ ಅದಕ್ಕಿಂತ ಮೊದಲಿನ ಆವೃತ್ತಿಯನ್ನು ಹೊಂದಿದ್ದರೆ, Apple ಮೆನು  > ಸಿಸ್ಟಂ ಆದ್ಯತೆಗಳನ್ನು ಆಯ್ಕೆಮಾಡಿ, ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, ನಂತರ “ಈ Mac ಮತ್ತು ನಿಮ್ಮ iCloud ಸಾಧನಗಳ ನಡುವೆ Handoff ಅನ್ನು ಅನುಮತಿಸಿ” ಎಂಬುದನ್ನು ಆಯ್ಕೆಮಾಡಿ.

ನಿಮ್ಮ iPad ಮತ್ತು ಇತರೆ ಸಾಧನಗಳ ನಡುವೆ ಟಾಸ್ಕ್ ಅನ್ನು ವರ್ಗಾಯಿಸುವುದು

ನಿಮ್ಮ ಸಾಧನಗಳು ಒಂದಕ್ಕೊಂದು ಹತ್ತಿರದಲ್ಲಿದ್ದಾಗ, ಕಾರ್ಯವನ್ನು ವರ್ಗಾಯಿಸಲು ಸಾಧ್ಯವಿರುವ ಎಲ್ಲಾ ಸಂದರ್ಭಗಳಲ್ಲಿ ಐಕಾನ್ ಕಾಣಿಸಿಕೊಳ್ಳುತ್ತದೆ. ನಿಮ್ಮ ಇತರ ಸಾಧನದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು Handoff ಐಕಾನ್ ಅನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.

Handoff ಐಕಾನ್ ಈ ಕೆಳಗಿನ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತದೆ:

  • iPhoneನಲ್ಲಿ: ಆ್ಯಪ್ ಸ್ವಿಚರ್ ಸ್ಕ್ರೀನ್‌ನ ಕೆಳಭಾಗದಲ್ಲಿ.

  • iPadನಲ್ಲಿ: Dockನ ಬಲಭಾಗದ ತುದಿಯಲ್ಲಿ.

  • Macನಲ್ಲಿ: Dock, ಸ್ಕ್ರೀನ್‌ನ ಕೆಳಭಾಗದಲ್ಲಿದ್ದರೆ Dockನ ಬಲ ತುದಿಯ ಕಡೆಗೆ. ನೀವು Dock ಅನ್ನು ನಿಮ್ಮ ಸ್ಕ್ರೀನ್‌ನ ಎಡ ಅಥವಾ ಬಲ ಬದಿಯಲ್ಲಿ ಕಾಣಿಸಬೇಕೆಂದು ಸೆಟಪ್ ಮಾಡಿದರೆ, Dockನ ಕೆಳಗೆ Handoff ಐಕಾನ್ ಕಾಣಿಸಿಕೊಳ್ಳುತ್ತದೆ.

Handoff ಕಾರ್ಯನಿರ್ವಹಿಸದಿದ್ದರೆ

  • ಎರಡೂ ಸಾಧನಗಳಲ್ಲಿ Wi-Fi ಮತ್ತು Bluetooth ಅನ್ನು ಆನ್ ಮಾಡಲಾಗಿದೆ ಮತ್ತು ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ನಿಮ್ಮ ಆ್ಯಪ್ Handoff ಅನ್ನು ಬೆಂಬಲಿಸುತ್ತಿದೆಯೇ ಎಂದು ಪರಿಶೀಲಿಸಿ. ಕ್ಯಾಲೆಂಡರ್, ಸಂಪರ್ಕ, FaceTime, Keynote, Mail, ನಕ್ಷೆ, Pages, Numbers, ರಿಮೈಂಡರ್ಸ್ ಮತ್ತು Safari ಸೇರಿದಂತೆ ಅನೇಕ ಥರ್ಡ್ ಪಾರ್ಟಿ ಆ್ಯಪ್‌ಗಳು Handoff ಅನ್ನು ಅನುಮತಿಸುತ್ತವೆ.

ಸಲಹೆ: Handoff ಆನ್ ಆಗಿರುವಾಗ ಸಾಧನಗಳ ನಡುವೆ ಪಠ್ಯ, ಚಿತ್ರಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಕಾಪಿ ಮತ್ತು ಪೇಸ್ಟ್ ಮಾಡಲು ನೀವು ಯುನಿವರ್ಸಲ್ ಕ್ಲಿಪ್‌ಬೋರ್ಡ್ ಅನ್ನು ಬಳಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.