ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಕ್ಯಾಲೆಂಡರ್ ಆ್ಯಪ್‌ನಲ್ಲಿ ಇವೆಂಟ್‌ಗಳನ್ನು ರಚಿಸಿ ಮತ್ತು ಎಡಿಟ್ ಮಾಡಿ

ಇವೆಂಟ್‌ಗಳು, ಅಪಾಯಿಂಟ್‌ಮೆಂಟ್‌ಗಳು ಮತ್ತು ಮೀಟಿಂಗ್‌ಗಳನ್ನು ರಚಿಸಲು ಮತ್ತು ಎಡಿಟ್ ಮಾಡಲು ಕ್ಯಾಲೆಂಡರ್ ಆ್ಯಪ್ ಅನ್ನು ಬಳಸಿ.

ದಿನದ ವ್ಯೂನಲ್ಲಿರುವ ಕ್ಯಾಲೆಂಡರ್. ಮೇಲಿನ ಮಧ್ಯಭಾಗದಲ್ಲಿರುವ ಬಟನ್‌ಗಳು ದಿನ, ವಾರ, ತಿಂಗಳು ಮತ್ತು ವರ್ಷದ ನಡುವೆ ವೀಕ್ಷಣೆಯನ್ನು ಬದಲಾಯಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಕ್ಯಾಲೆಂಡರ್‌ಗಳು ಎಂಬ ಬಟನ್ ಸ್ಕ್ರೀನ್‌ನ ಮೇಲಿನ ಎಡಭಾಗದಲ್ಲಿರುತ್ತದೆ ಮತ್ತು ಇನ್‌ಬಾಕ್ಸ್ ಬಟನ್ ಮೇಲಿನ ಎಡಭಾಗದ ಸಮೀಪ ಇರುತ್ತದೆ.

Siri: ಈ ರೀತಿ ಏನಾದರೂ ಹೇಳಿ:

  • “Set up a meeting with Gordon at 9”

  • “Do I have a meeting at 10?”

  • “Where is my 3:30 meeting?”

Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

ಇವೆಂಟ್ ಅನ್ನು ಸೇರಿಸಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ದಿನದ ವ್ಯೂನಲ್ಲಿ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಇವೆಂಟ್‌ನ ಶೀರ್ಷಿಕೆಯನ್ನು ನಮೂದಿಸಿ.

  4. ಸ್ಥಳ ಅಥವಾ ವೀಡಿಯೊ ಕರೆಯನ್ನು ಟ್ಯಾಪ್ ಮಾಡಿ, ನಂತರ ಭೌತಿಕ ಸ್ಥಳವನ್ನು ನಮೂದಿಸಿ ಅಥವಾ ರಿಮೋಟ್ ಇವೆಂಟ್‌ನ ವೀಡಿಯೊ ಲಿಂಕ್ ಅನ್ನು ನಮೂದಿಸಲು FaceTime ಅನ್ನು ಟ್ಯಾಪ್ ಮಾಡಿ.

    ನೀವು ರಚಿಸಿದ ಅಥವಾ ಸ್ವೀಕರಿಸಿದ FaceTime ಲಿಂಕ್ ಅನ್ನು ಸಹ ನೀವು ಕಾಪಿ ಮಾಡಬಹುದು ಮತ್ತು ಅದನ್ನು ಸ್ಥಳದ ಫೀಲ್ಡ್‌ನಲ್ಲಿ ಪೇಸ್ಟ್ ಮಾಡಬಹುದು. FaceTime ಕರೆಯ ಲಿಂಕ್ ಅನ್ನು ರಚಿಸಿ ಎಂಬುದನ್ನು ನೋಡಿ.

  5. ಇವೆಂಟ್ ಪ್ರಾರಂಭವಾಗುವ ಮತ್ತು ಕೊನೆಗೊಳ್ಳುವ ಸಮಯ, ಪ್ರಯಾಣದ ಸಮಯ, ಆಹ್ವಾನಿತರು, ಅಟ್ಯಾಚ್‌ಮೆಂಟ್‌ಗಳು ಮತ್ತು ಇತ್ಯಾದಿಗಳನ್ನು ನಮೂದಿಸಿ. (ಅಗತ್ಯವಿದ್ದಲ್ಲಿ, ಮೀಟಿಂಗ್‌ನ ಎಲ್ಲಾ ಮಾಹಿತಿಯನ್ನು ನಮೂದಿಸಲು ಮೇಲಕ್ಕೆ ಸ್ವೈಪ್ ಮಾಡಿ.)

  6. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಅಲರ್ಟ್ ಒಂದನ್ನು ಸೇರಿಸಿ

ಇವೆಂಟ್‌ನ ಕುರಿತು ನಿಮಗೆ ಮುಂಚಿತವಾಗಿ ನೆನಪಿಸುವುದಕ್ಕಾಗಿ ನೀವು ಅಲರ್ಟ್ ಅನ್ನು ಸೆಟ್ ಮಾಡಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಇವೆಂಟ್ ಅನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಇವೆಂಟ್ ವಿವರಗಳಲ್ಲಿ, ಅಲರ್ಟ್ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮಗೆ ಯಾವಾಗ ನೆನಪಿಸಬೇಕು ಎಂಬುದನ್ನು ಆಯ್ಕೆ ಮಾಡಿ.

    ಉದಾಹರಣೆಗೆ, “At time of event,” “5 minutes before” ಅಥವಾ ಬೇರೊಂದು ಆಯ್ಕೆ.

    ಗಮನಿಸಿ: ನೀವು ಇವೆಂಟ್‌ನ ಸ್ಥಳದ ವಿಳಾಸವನ್ನು ಸೇರಿಸಿದರೆ ನೀವು ಯಾವ ಸಮಯಕ್ಕೆ ಅಲ್ಲಿಗೆ ಹೊರಡಬೇಕೆಂದು ನಿಮಗೆ ತಿಳಿಸುವುದಕ್ಕಾಗಿ ಸ್ಥಳಗಳು, ಟ್ರಾಫಿಕ್ ಪರಿಸ್ಥಿತಿಗಳು ಮತ್ತು ಸಾರಿಗೆಯ ಆಯ್ಕೆಗಳನ್ನು ತಿಳಿದುಕೊಳ್ಳಲು ಕ್ಯಾಲೆಂಡರ್ ಆ್ಯಪ್ Apple Maps ಅನ್ನು ಬಳಸುತ್ತದೆ.

  5. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಅಟ್ಯಾಚ್‌ಮೆಂಟ್ ಅನ್ನು ಸೇರಿಸಿ

ಆಹ್ವಾನಿತರೊಂದಿಗೆ ಹಂಚಿಕೊಳ್ಳಲು ನೀವು ಕ್ಯಾಲೆಂಡರ್ ಇವೆಂಟ್‌ಗೆ ಅಟ್ಯಾಚ್‌ಮೆಂಟ್ ಅನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಇವೆಂಟ್ ಅನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಇವೆಂಟ್ ವಿವರಗಳಲ್ಲಿ, ಅಟ್ಯಾಚ್‌ಮೆಂಟ್ ಅನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ನೀವು ಅಟ್ಯಾಚ್ ಮಾಡಲು ಬಯಸುವ ಫೈಲ್ ಅನ್ನು ಪತ್ತೆ ಮಾಡಿ.

    ಫೈಲ್ ಅನ್ನು ಹುಡುಕಲು, ನೀವು ಹುಡುಕಾಟದ ಫೀಲ್ಡ್‌ನಲ್ಲಿ ಅದರ ಹೆಸರನ್ನು ನಮೂದಿಸಬಹುದು, ಸ್ಕ್ರಾಲ್ ಮಾಡಿ, ಫೋಲ್ಡರ್‌ಗಳನ್ನು ತೆರೆಯಲು ಅವುಗಳನ್ನು ಟ್ಯಾಪ್ ಮಾಡಬಹುದು, ಇತರ ಸ್ಥಳಗಳಲ್ಲಿ (ಉದಾಹರಣೆಗೆ iCloud Drive) ಹುಡುಕಲು ಬ್ರೌಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಬಹುದು. ಫೈಲ್ಸ್ ಆ್ಯಪ್‌ನಲ್ಲಿ ಫೈಲ್‌ಗಳು, ಫೋಲ್ಡರ್‌ಗಳನ್ನು ಮಾರ್ಪಡಿಸಿ ಮತ್ತು ಡೌನ್‌ಲೋಡ್‌ಗಳನ್ನು ನೋಡಿ ಎಂಬುದನ್ನು ನೋಡಿ.

  5. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಅಟ್ಯಾಚ್‌ಮೆಂಟ್ ಅನ್ನು ತೆಗೆದುಹಾಕಲು, ಇವೆಂಟ್ ಅನ್ನು ಟ್ಯಾಪ್ ಮಾಡಿ, ಮೇಲಿನ ಬಲಭಾಗದ ಬಳಿಯಿರುವ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಅಟ್ಯಾಚ್‌ಮೆಂಟ್‌ನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

ಇತರ ಆ್ಯಪ್‌ಗಳಲ್ಲಿನ ಇವೆಂಟ್‌ಗಳನ್ನು ಹುಡುಕಿ

Mail, ಸಂದೇಶ ಮತ್ತು Safari ಆ್ಯಪ್‌ಗಳಲ್ಲಿ ಕಂಡುಬಂದ ಫ್ಲೈಟ್ ರಿಸರ್ವೇಶನ್‌ಗಳು ಮತ್ತು ಹೋಟೆಲ್ ಬುಕಿಂಗ್‌ಗಳಂತಹ ಇವೆಂಟ್‌ಗಳನ್ನು ಕ್ಯಾಲೆಂಡರ್‌ಗೆ ಸುಲಭವಾಗಿ ಸೇರಿಸಲು ನಿಮಗೆ ಸಾಧ್ಯವಾಗುವಂತೆ Siri ನಿಮಗೆ ಅವುಗಳನ್ನು ಸೂಚಿಸಬಲ್ಲದು.

  1. ಸೆಟ್ಟಿಂಗ್ಸ್  > ಆ್ಯಪ್‌ಗಳು > ಕ್ಯಾಲೆಂಡರ್ ಎಂಬಲ್ಲಿಗೆ ಹೋಗಿ.

  2. Siriಯನ್ನು ಟ್ಯಾಪ್ ಮಾಡಿ, ನಂತರ ಇತರ ಆ್ಯಪ್‌ಗಳಲ್ಲಿ ಕಂಡುಬರುವ ಇವೆಂಟ್‌ಗಳನ್ನು ಸೂಚಿಸುವುದಕ್ಕಾಗಿ ಸಿರಿಗೆ ಅನುಮತಿಸಲು ಆ್ಯಪ್‌ನಲ್ಲಿ ತೋರಿಸಿ ಎಂಬುದನ್ನು ಆನ್ ಮಾಡಿ.

ನೀವು ಕ್ಯಾಲೆಂಡರ್ ಆ್ಯಪ್ ಅನ್ನು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿ ಇತರ ಆ್ಯಪ್‌ಗಳಲ್ಲಿ ಸಲಹೆಗಳನ್ನು ನೀಡಲು Siriಗೆ ಅನುಮತಿಸಲು, ಈ ಆ್ಯಪ್‌ನಿಂದ ಕಲಿಯಿರಿ ಎಂಬುದನ್ನು ಆನ್ ಮಾಡಿ.

ಈವೆಂಟ್ ಅನ್ನು ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ

ನೀವು ಇವೆಂಟ್ ಒಂದನ್ನು ಕಾಪಿ ಮಾಡಿ ಮತ್ತೊಂದು ದಿನಾಂಕಕ್ಕೆ ಪೇಸ್ಟ್ ಮಾಡಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಇವೆಂಟ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಕಾಪಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಬೇರೊಂದು ದಿನಾಂಕದಲ್ಲಿ, ನೀವು ಇವೆಂಟ್ ಅನ್ನು ಪೇಸ್ಟ್ ಮಾಡಲು ಬಯಸುವ ಸಮಯವನ್ನು ಒತ್ತಿ ಹಿಡಿದುಕೊಳ್ಳಿ.

    ನೀವು ಹಿಡಿದಿರುವುದನ್ನು ಬಿಟ್ಟಾಗ, ಹೊಸ ಇವೆಂಟ್ ಪುಟ ಕಾಣಿಸಿಕೊಳ್ಳುತ್ತದೆ ಮತ್ತು ಕಾಪಿ ಮಾಡಲಾದ ಇವೆಂಟ್ ಶೀರ್ಷಿಕೆಯ ಅಡಿಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಅದರ ಜೊತೆಗೆ ನೀವು ಇವೆಂಟ್ ಅನ್ನು ಪೇಸ್ಟ್ ಮಾಡಲು ಬಯಸುವ ದಿನಾಂಕ ಮತ್ತು ಸಮಯವೂ ಇರುತ್ತದೆ.

    ಸಲಹೆ: ಇವೆಂಟ್ ಒಂದನ್ನು ಕಾಪಿ ಮಾಡಿದ ನಂತರ ನೀವು ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸೇರಿಸಿ ಬಟನ್ ಅನ್ನು ಸಹ ಟ್ಯಾಪ್ ಮಾಡಬಹುದು.

  4. ಶೀರ್ಷಿಕೆಯ ಕೆಳಗಿರುವ ಕಾಪಿ ಮಾಡಿದ ಇವೆಂಟ್ ಅನ್ನು ಟ್ಯಾಪ್ ಮಾಡಿ.

  5. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಇವೆಂಟ್ ಅನ್ನು ಎಡಿಟ್ ಮಾಡಿ

ನೀವು ಇವೆಂಟ್‌ನ ಸಮಯವನ್ನು ಮತ್ತು ಈವೆಂಟ್‌ನ ಇತರ ಯಾವುದೇ ವಿವರಗಳನ್ನು ಬದಲಾಯಿಸಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಇವೆಂಟ್‌ನ ಸಮಯ ಮತ್ತು ಅವಧಿಯನ್ನು ತ್ವರಿತವಾಗಿ ಬದಲಾಯಿಸಿ: ದಿನ ಅಥವಾ ವಾರದ ವ್ಯೂನಲ್ಲಿ, ಇವೆಂಟ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಹೊಸ ಸಮಯಕ್ಕೆ ಡ್ರ್ಯಾಗ್ ಮಾಡಿ ಅಥವಾ ಗ್ರ್ಯಾಬ್ ಪಾಯಿಂಟ್‌ಗಳನ್ನು ಸರಿಹೊಂದಿಸಿ.

    • ಇವೆಂಟ್ ವಿವರಗಳನ್ನು ಬದಲಾಯಿಸಿ: ಇವೆಂಟ್ ಅನ್ನು ಟ್ಯಾಪ್ ಮಾಡಿ, ನಂತರ ಮೇಲಿನ ಬಲಭಾಗದ ಬಳಿಯಿರುವ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ಇವೆಂಟ್ ವಿವರಗಳಲ್ಲಿ, ಸೆಟ್ಟಿಂಗ್ ಒಂದನ್ನು ಬದಲಾಯಿಸಲು ಅದನ್ನು ಟ್ಯಾಪ್ ಮಾಡಿ ಅಥವಾ ಹೊಸ ಮಾಹಿತಿಯನ್ನು ಟೈಪ್ ಮಾಡಲು ಫೀಲ್ಡ್‌ನಲ್ಲಿ ಟ್ಯಾಪ್ ಮಾಡಿ.

ಇವೆಂಟ್ ಅನ್ನು ಡಿಲೀಟ್ ಮಾಡಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ದಿನದ ವ್ಯೂನಲ್ಲಿ, ಇವೆಂಟ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಇವೆಂಟ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.