ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸಗಳನ್ನು iPadನಲ್ಲಿನ ನಕ್ಷೆ ಆ್ಯಪ್‌ನಲ್ಲಿ ಸೆಟ್ ಮಾಡಿ

ನಿಮ್ಮ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನೈಜ-ಸಮಯದ ಟ್ರಾಫಿಕ್ ಅಪ್‌ಡೇಟ್‌ಗಳು, ದಾರಿಗಳು ಮತ್ತು ನೋಟಿಫಿಕೇಷನ್‌ಗಳಿಗೆ ಒಂದೇ ಟ್ಯಾಪ್‌ನಲ್ಲಿ ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ನೀವು ಸೆಟ್ ಮಾಡಬಹುದು.

ವಿಳಾಸವನ್ನು ಮನೆ, ಕೆಲಸ ಅಥವಾ ಶಾಲೆ ಎಂದು ಸೆಟ್ ಮಾಡುವ ಆಯ್ಕೆಗಳನ್ನು ಹೊಂದಿರುವ, ವಿವರಗಳ ಸ್ಕ್ರೀನ್ ಅನ್ನು ತೋರಿಸುತ್ತಿರುವ ನಕ್ಷೆ ಆ್ಯಪ್.

ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ಸೆಟ್ ಮಾಡುವುದು

ನೀವು ಸಂಪರ್ಕ ಆ್ಯಪ್‌ನಲ್ಲಿ ನಿಮ್ಮ ಸಂಪರ್ಕ ಕಾರ್ಡ್‌ನಲ್ಲಿರುವ ನಿಮ್ಮ ಮನೆ ಅಥವಾ ಕೆಲಸದ ವಿಳಾಸಕ್ಕಿಂತ ಭಿನ್ನವಾದ ಮನೆ ಅಥವಾ ಕೆಲಸದ ವಿಳಾಸವನ್ನು ಸೆಟ್ ಮಾಡಬಹುದು.

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯ ಅಡಿಯಲ್ಲಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ (ನೀವು ಎಡಕ್ಕೆ ಸ್ವೈಪ್ ಮಾಡಬೇಕಾಗಬಹುದು).

  3. ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಹುಡುಕುತ್ತಿರುವ ವಿಳಾಸವನ್ನು ನಮೂದಿಸಿ.

  4. ವಿಳಾಸ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅದನ್ನು ಒಂದು ಪ್ರಕಾರಕ್ಕೆ ನಿಯೋಜಿಸಿ: ನನ್ನ ಮನೆ, ನನ್ನ ಕೆಲಸ ಅಥವಾ ನನ್ನ ಶಾಲೆ.

  5. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನಕ್ಷೆ ಆ್ಯಪ್ ಅನ್ನು ನನ್ನ ಕಾರ್ಡ್ ಎಂಬುದಕ್ಕೆ ಸಿಂಕ್ ಮಾಡಲು ನಿಮ್ಮನ್ನು ಕೇಳಿಕೊಂಡ ನಂತರ ನಿಮ್ಮ ಮನೆ, ಕೆಲಸದ ಸ್ಥಳ ಅಥವಾ ಶಾಲೆಯ ವಿಳಾಸವನ್ನು ನೀವು ಬದಲಾಯಿಸಿದರೆ, ನೀವು ಸಂಪರ್ಕ ಆ್ಯಪ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್‌ಡೇಟ್ ಮಾಡಬೇಕಾಗಬಹುದು. ನಿಮ್ಮ ಸಂಪರ್ಕ ಮಾಹಿತಿ ಮತ್ತು ಫೋಟೋವನ್ನು ಸೇರಿಸಿ ಅಥವಾ ಎಡಿಟ್ ಮಾಡಿ ಎಂಬುದನ್ನು ನೋಡಿ.

ವಿಳಾಸದ ಸ್ಥಳವನ್ನು ಪರಿಷ್ಕರಿಸುವುದು

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯ ಕೆಳಗೆ, ನೀವು ಪರಿಷ್ಕರಿಸಲು ಬಯಸುವ ವಿಳಾಸವನ್ನು ಒತ್ತಿ ಹಿಡಿದುಕೊಳ್ಳಿ.

  3. ವಿವರಗಳನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ನಕ್ಷೆ ಆ್ಯಪ್‌ನಲ್ಲಿ ಸ್ಥಳವನ್ನು ಪರಿಷ್ಕರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಕ್ಷೆಯನ್ನು ಡ್ರ್ಯಾಗ್ ಮಾಡಿ.

  5. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನೀವು ಸೆಟ್ ಮಾಡಿದ ವಿಳಾಸದ ವಿವರಗಳನ್ನು ಬದಲಾಯಿಸುವುದು

ಆ ವಿಳಾಸಗಳು ಬದಲಾದರೆ ನಿಮ್ಮ ಸೆಟ್ ಮಾಡಲಾದ ವಿಳಾಸಗಳ ವಿವರಗಳನ್ನು ನೀವು ಬದಲಾಯಿಸಬಹುದು.

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯ ಕೆಳಗೆ, ನೀವು ಬದಲಾಯಿಸಲು ಬಯಸುವ ವಿಳಾಸವನ್ನು ಒತ್ತಿ ಹಿಡಿದುಕೊಳ್ಳಿ.

  3. ವಿವರಗಳನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಪಿನ್‌ನ ಹೆಸರನ್ನು ಬದಲಾಯಿಸಿ: ಲೇಬಲ್ ಫೀಲ್ಡ್‌ನಲ್ಲಿ ಹೊಸ ಹೆಸರನ್ನು ನಮೂದಿಸಿ.

    • ನಿಮ್ಮ ಮನೆ, ಕೆಲಸ ಅಥವಾ ಶಾಲೆಗೆ ವಿಳಾಸವನ್ನು ನಿಯೋಜಿಸಿ: ಪ್ರಕಾರ ಎಂಬುದರ ಕೆಳಗಿರುವ ಆಯ್ಕೆಯನ್ನು ಆರಿಸಿ.

    • ಪಿನ್‌ನ ಸ್ಥಳವನ್ನು ಬದಲಾಯಿಸಿ: ನಕ್ಷೆಯಲ್ಲಿ ಸ್ಥಳವನ್ನು ಪರಿಷ್ಕರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಸೆಟ್ ಮಾಡಲಾದ ವಿಳಾಸವನ್ನು ತೆಗೆದುಹಾಕುವುದು

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯ ಕೆಳಗೆ, ನೀವು ತೆಗೆದುಹಾಕಲು ಬಯಸುವ ವಿಳಾಸವನ್ನು ಒತ್ತಿ ಹಿಡಿದುಕೊಳ್ಳಿ.

  3. ಅನ್‌ಪಿನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.