ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಐಟಮ್‌ಗಳನ್ನು ಆಯ್ಕೆಮಾಡಲು, ಆ್ಯಕ್ಷನ್‌ಗಳನ್ನು ನಿರ್ವಹಿಸಲು ಮತ್ತು ಹೆಚ್ಚಿನದನ್ನು ಮಾಡಲು iPadನಲ್ಲಿ ಸ್ವಿಚ್ ಕಂಟ್ರೋಲ್ ಅನ್ನು ಬಳಸುವುದು

ನೀವು ಸ್ವಿಚ್ ಕಂಟ್ರೋಲ್ ಅನ್ನು ಸೆಟಪ್ ಮಾಡಿದ ನಂತರ ಮತ್ತು ಆನ್ ಮಾಡಿದ ನಂತರ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಒಂದನ್ನು ಮಾಡುವ ಮೂಲಕ ನೀವು ಸ್ಕ್ರೀನ್ ಮೇಲಿನ ಐಟಮ್‌ಗಳನ್ನು ಆಯ್ಕೆಮಾಡಬಹುದು:

  • ಐಟಮ್ ಮೋಡ್: ಕರ್ಸರ್ ಐಟಮ್‌ಗಳನ್ನು ಅಥವಾ ಐಟಮ್‌ಗಳ ಗುಂಪುಗಳನ್ನು ಅನುಕ್ರಮವಾಗಿ ಹೈಲೈಟ್ ಮಾಡುತ್ತದೆ. ನೀವು ಸ್ವಿಚ್ ಕಂಟ್ರೋಲ್ ಅನ್ನು ಆನ್ ಮಾಡಿದ ಮೊದಲ ಬಾರಿ ಮತ್ತು ಸ್ಕ್ಯಾನರ್ ಮೆನು ಕಾಣಿಸಿಕೊಂಡ ಪ್ರತಿಬಾರಿ ಇದು ಡಿಫಾಲ್ಟ್ ವಿಧಾನವಾಗಿರುತ್ತದೆ.

  • ಗ್ಲೈಡಿಂಗ್ ಕರ್ಸರ್: ನೀವು ಸ್ಕ್ಯಾನಿಂಗ್ ಕ್ರಾಸ್‌ಹೇರ್ಸ್ ಬಳಸಿ ಸ್ಕ್ರೀನ್ ಮೇಲಿನ ಪಾಯಿಂಟ್ ಒಂದನ್ನು ಆಯ್ಕೆಮಾಡುತ್ತೀರಿ. ನೀವು ನಕ್ಷೆಯಲ್ಲಿ ಅಥವಾ ಹಲವು ಐಟಮ್‌ಗಳನ್ನು ಹೊಂದಿರುವ ಸ್ಕ್ರೀನ್ ಮೇಲೆ ನಿರ್ದಿಷ್ಟ ಪಾಯಿಂಟ್ ಅನ್ನು ಆಯ್ಕೆಮಾಡಬೇಕಾದಾಗ ಈ ವಿಧಾನವು ಉಪಯುಕ್ತವಾಗುತ್ತದೆ.

  • ತಲೆಯ ಟ್ರ್ಯಾಕಿಂಗ್: ಬೆಂಬಲಿತ ಮಾಡಲ್‌ಗಳಲ್ಲಿ, ಸ್ಕ್ರೀನ್ ಮೇಲಿನ ಕರ್ಸರ್ ಅನ್ನು ನಿಯಂತ್ರಿಸಲು ನಿಮ್ಮ ತಲೆಯನ್ನು (ಮುಂಭಾಗಕ್ಕೆ ಮುಖ ಮಾಡಿರುವ ಕ್ಯಾಮರಾದಿಂದ ಪತ್ತೆಯಾಗಿದೆ) ನೀವು ಮೂವ್ ಮಾಡಬಹುದು. ನೀವು ನಕ್ಷೆಯಲ್ಲಿ ಅಥವಾ ಹಲವು ಐಟಮ್‌ಗಳನ್ನು ಹೊಂದಿರುವ ಸ್ಕ್ರೀನ್ ಮೇಲೆ ನಿರ್ದಿಷ್ಟ ಪಾಯಿಂಟ್ ಅನ್ನು ಆಯ್ಕೆಮಾಡಬೇಕಾದಾಗ ಈ ವಿಧಾನವು ಉಪಯುಕ್ತವಾಗುತ್ತದೆ.

ಕರ್ಸರ್ ನಿಮಗೆ ಬೇಕಾದ ಐಟಮ್‌ನ ಮೇಲೆ ಇರುವಾಗ,‘ಟ್ಯಾಪ್ ಮಾಡಿ’, ‘ಸ್ಕ್ರೋಲ್ ಮಾಡಿ’, ವಾಲ್ಯೂಮ್ ಅನ್ನು ನಿಯಂತ್ರಿಸಿ ಎಂಬಂತಹ ಮುಂತಾದ ಲಭ್ಯವಿರುವ ಆ್ಯಕ್ಷನ್‌ಗಳನ್ನು ತೋರಿಸಲು ಸ್ಕ್ಯಾನರ್ ಮೆನು ತೆರೆದುಕೊಳ್ಳುತ್ತದೆ.

ಐಟಮ್‌ಗಳನ್ನು ಆಯ್ಕೆಮಾಡಲು ಮತ್ತು ಆ್ಯಕ್ಷನ್‌ಗಳನ್ನು ನಿರ್ವಹಿಸಲು ಐಟಮ್ ಮೋಡ್ ಬಳಸುವುದು

  1. ನೀವು ಬಳಸುತ್ತಿರುವ ಸ್ಕ್ಯಾನಿಂಗ್ ಶೈಲಿಯನ್ನು ಅವಲಂಬಿಸಿ, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ವಯಂಚಾಲಿತ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ಐಟಮ್‌ಗಳ ಗುಂಪುಗಳನ್ನು ಅನುಕ್ರಮವಾಗಿ ಹೈಲೈಟ್ ಮಾಡುತ್ತಿರುವಾಗ ವೀಕ್ಷಿಸಿ ಅಥವಾ ಆಲಿಸಿ.

    • ಹಸ್ತಚಾಲಿತ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ಸ್ಕ್ರೀನ್ ಮೇಲಿನ ಐಟಮ್‌ಗಳ ಗುಂಪುಗಳನ್ನು ನ್ಯಾವಿಗೇಟ್ ಮಾಡಲು ನಿಮ್ಮ ‘ಮುಂದಿನ ಐಟಮ್‌ಗೆ ಮೂವ್ ಮಾಡಿ’ ಎಂಬ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

    • ಒಂದು ಸ್ವಿಚ್ ಹಂತದ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ಸ್ಕ್ರೀನ್ ಮೇಲಿನ ಐಟಮ್‌ಗಳ ಗುಂಪುಗಳನ್ನು ನ್ಯಾವಿಗೇಟ್ ಮಾಡಲು ನಿಮ್ಮ ‘ಮುಂದಿನ ಐಟಮ್‌ಗೆ ಮೂವ್ ಮಾಡಿ’ ಎಂಬ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

  2. ನಿಮಗೆ ಬೇಕಾದ ಗುಂಪನ್ನು ಹೈಲೈಟ್ ಆದಾಗ, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ವಯಂಚಾಲಿತ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

    • ಹಸ್ತಚಾಲಿತ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

    • ಒಂದು ಸ್ವಿಚ್ ಹಂತದ ಸ್ಕ್ಯಾನಿಂಗ್ ಅನ್ನು ಬಳಸುತ್ತಿದ್ದರೆ: ಪ್ರಸ್ತುತ ಗುಂಪನ್ನು ಸ್ವಯಂಚಾಲಿತವಾಗಿ ಆಯ್ಕೆಮಾಡುವವರೆಗೆ ನಿರೀಕ್ಷಿಸಿ.

  3. ಗುಂಪಿನೊಳಗೇ ಇರುವ ಒಂದು ಐಟಮ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಆಯ್ಕೆಮಾಡಲು 1 ಮತ್ತು 2ನೇ ಹಂತಗಳನ್ನು ಪುನರಾವರ್ತಿಸಿ.

  4. ಸ್ಕ್ಯಾನ್ ಮಾಡಲು ಮತ್ತು ಸ್ಕ್ಯಾನರ್ ಮೆನುವಿನಲ್ಲಿ ಆ್ಯಕ್ಷನ್ ಅನ್ನು ಆಯ್ಕೆಮಾಡಲು 1 ಮತ್ತು 2ನೇ ಹಂತಗಳನ್ನು ಪುನರಾವರ್ತಿಸಿ. ಮೆನುವಿನ ಕೆಳಭಾಗದಲ್ಲಿರುವ ಡಾಟ್‌ಗಳು ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತವೆ.

ಯಾವುದೇ ಆ್ಯಕ್ಷನ್ ಅನ್ನು ಆಯ್ಕೆಮಾಡದೆಯೇ ಸ್ಕ್ಯಾನರ್ ಮೆನುವನ್ನು ವಜಾಗೊಳಿಸಲು, ಮೂಲ ಐಟಮ್ ಹೈಲೈಟ್ ಆದಾಗ ಮತ್ತು ಮೆನುವಿನಲ್ಲಿರುವ ಎಲ್ಲಾ ಐಕಾನ್‌ಗಳು ಡಿಮ್ ಅದಾಗ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

ಪಾಯಿಂಟ್ ಅನ್ನು ಆಯ್ಕೆಮಾಡಲು ಗ್ಲೈಡಿಂಗ್ ಕರ್ಸರ್ ಅನ್ನು ಬಳಸುವುದು

ಡಿಫಾಲ್ಟ್ ಆಗಿ, ಸ್ವಿಚ್ ಕಂಟ್ರೋಲ್ ಐಟಮ್ ಮೋಡ್‌ನಲ್ಲಿ ಪ್ರಾರಂಭವಾಗುತ್ತದೆ. ಅದರ ಬದಲಿಗೆ ಗ್ಲೈಡಿಂಗ್ ಕರ್ಸರ್ ಅನ್ನು ಬಳಸಲು, ಈ ಕೆಳಗಿನವುಗಳನ್ನು ಮಾಡಿ:

  1. ಯಾವುದೇ ಐಟಮ್ ಅನ್ನು ಆಯ್ಕೆಮಾಡಲು ಐಟಮ್ ಮೋಡ್ ಅನ್ನು ಬಳಸಿ, ನಂತರ ಗ್ಲೈಡಿಂಗ್ ಕರ್ಸರ್ ಅನ್ನು ಆಯ್ಕೆಮಾಡಿ (ಸ್ಕ್ಯಾನರ್ ಮೆನುವಿನಲ್ಲಿ).

  2. ಲಂಬ ಕ್ರಾಸ್‌ಹೇರ್ ಅನ್ನು ಇರಿಸಲು, ನಿಮಗೆ ಬೇಕಾದ ಐಟಮ್ ಮೇಲೆ ಅಗಲವಾದ ಲಂಬ ಬ್ಯಾಂಡ್ ಇರುವಾಗ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

  3. ಐಟಮ್ ಮೇಲೆ ತೆಳುವಾದ ಲಂಬ ಸಾಲು ಇದ್ದಾಗ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಮತ್ತೆ ಸಕ್ರಿಯಗೊಳಿಸಿ.

  4. ಅಡ್ಡ ಕ್ರಾಸ್‌ಹೇರ್ ಅನ್ನು ಇರಿಸಲು, ನಿಮಗೆ ಬೇಕಾದ ಐಟಮ್ ಮೇಲೆ ಅಗಲವಾದ ಅಡ್ಡ ಬ್ಯಾಂಡ್ ಇರುವಾಗ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

  5. ಐಟಮ್ ಮೇಲೆ ತೆಳುವಾದ ಅಡ್ಡಸಾಲು ಇದ್ದಾಗ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಮತ್ತೆ ಸಕ್ರಿಯಗೊಳಿಸಿ.

  6. ಸ್ಕ್ಯಾನರ್ ಮೆನುವಿನಲ್ಲಿ, ನಿಮಗೆ ಬೇಕಾದ ಆ್ಯಕ್ಷನ್ ಅನ್ನು ಆಯ್ಕೆಮಾಡಿ, ನಂತರ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅನ್ನು ಸಕ್ರಿಯಗೊಳಿಸಿ.

ಐಟಮ್ ಮೋಡ್‌ಗೆ ಮರಳಲು, ಸ್ಕ್ಯಾನರ್ ಮೆನುವನ್ನು ತೆರೆಯಿರಿ, ನಂತರ ಐಟಮ್ ಮೋಡ್ ಆಯ್ಕೆಮಾಡಿ.

ತಲೆಯ ಟ್ರ್ಯಾಕಿಂಗ್ ಅನ್ನು ಸೆಟಪ್ ಮಾಡುವುದು

Face ID ಹೊಂದಿರುವ iPadನಲ್ಲಿ, ಸ್ಕ್ರೀನ್ ಮೇಲಿನ ಕರ್ಸರ್ ಅನ್ನು ನಿಯಂತ್ರಿಸಲು ನಿಮ್ಮ ತಲೆಯನ್ನು ನೀವು ಮೂವ್ ಮಾಡಬಹುದು. ನಗು ಅಥವಾ ಏರಿಸಿದ ಹುಬ್ಬುಗಳಂತಹ ಮುಖಭಾವಗಳಿಗೆ ಸಹ ನೀವು ಆ್ಯಕ್ಷನ್‌ಗಳನ್ನು ನಿಯೋಜಿಸಬಹುದು.

ತಲೆಯ ಟ್ರ್ಯಾಕಿಂಗ್ ಅನ್ನು ಸೆಟಪ್ ಮಾಡಲು, ಈ ಕೆಳಗಿನವುಗಳನ್ನು ಮಾಡಿ:

  • ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಸ್ವಿಚ್ ಕಂಟ್ರೋಲ್ > ಸ್ವಿಚ್‌ಗಳು ಎಂಬಲ್ಲಿಗೆ ಹೋಗಿ, ನಂತರ ನೀವು ಸ್ವಿಚ್‌ಗಳನ್ನು ಸೆಟಪ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಸೆಟ್ಟಿಂಗ್ಸ್ ಆ್ಯಪ್ > ಆ್ಯಕ್ಸೆಸಬಿಲಿಟಿ > ಸ್ವಿಚ್ ಕಂಟ್ರೋಲ್ > ತಲೆಯ ಟ್ರ್ಯಾಕಿಂಗ್ ಎಂಬುದಕ್ಕೆ ಹೋಗಿ, ತಲೆಯ ಟ್ರ್ಯಾಕಿಂಗ್ ಅನ್ನು ಆನ್ ಮಾಡಿ, ನಂತರ ಈ ಆಯ್ಕೆಗಳಲ್ಲಿ ಯಾವುದನ್ನಾದರೂ ಸೆಟ್ ಮಾಡಿ:

    • ಮುಖಭಾವಗಳಿಗೆ ಆ್ಯಕ್ಷನ್‌ಗಳನ್ನು ನಿಯೋಜಿಸಿ: ಪ್ರತಿಯೊಂದು ಅಭಿವ್ಯಕ್ತಿಯು ಭಿನ್ನವಾದ ಆ್ಯಕ್ಷನ್ ಮಾಡಬಹುದು ಮತ್ತು ಅದಕ್ಕೆ ಭಿನ್ನ ಮಟ್ಟದ ಮುಖಭಾವದ ಅಗತ್ಯವಿರುತ್ತದೆ.

    • ಪಾಯಿಂಟರ್ ನಿಮ್ಮ ತಲೆಯ ಚಲನೆಯನ್ನು ಹೇಗೆ ಟ್ರ್ಯಾಕ್ ಮಾಡುತ್ತದೆ ಎಂಬುದನ್ನು ಆರಿಸಿ: ಟ್ರ್ಯಾಕಿಂಗ್ ಮೋಡ್ ಅನ್ನು ಟ್ಯಾಪ್ ಮಾಡಿ, ನಂತರ ‘ಮುಖದ ಮೂಲಕ’, ’ಸ್ಕ್ರೀನ್ ಅಂಚುಗಳಿಗೆ ಮುಖ ಮಾಡಿದಾಗ’ ಅಥವಾ ’ತಲೆಗೆ ಸಂಬಂಧಿಸಿದಂತೆ’ ಎಂಬುದನ್ನು ಆಯ್ಕೆಮಾಡಿ.

    • ಪಾಯಿಂಟರ್ ವೇಗವನ್ನು ಸರಿಹೊಂದಿಸಿ: ಡಿಕ್ರೀಮೆಂಟ್ ಬಟನ್ ಅಥವಾ ಇಂಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡಿ.

ತಲೆಯ ಟ್ರ್ಯಾಕಿಂಗ್ ಬಳಸಿ

ತಲೆಯ ಟ್ರ್ಯಾಕಿಂಗ್ ಅನ್ನು ಬಳಸಲು, ಈ ಕೆಳಗಿನವುಗಳನ್ನು ಮಾಡಿ:

  1. ಯಾವುದೇ ಐಟಮ್ ಅನ್ನು ಆಯ್ಕೆ ಮಾಡಲು ಐಟಮ್ ಮೋಡ್ ಅನ್ನು ಬಳಸಿ, ನಂತರ ತಲೆಯ ಟ್ರ್ಯಾಕಿಂಗ್ ಅನ್ನು ಆಯ್ಕೆಮಾಡಿ (ಸ್ಕ್ಯಾನರ್ ಮೆನುವಿನಲ್ಲಿ).

  2. ನಿಮಗೆ ಬೇಕಾದ ಸ್ಥಳದ ಮೇಲೆ ಕರ್ಸರ್ ಅನ್ನು ಇರಿಸಲು ನಿಮ್ಮ ತಲೆಯನ್ನು ಮೂವ್ ಮಾಡಿ, ನಂತರ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅಥವಾ ಮುಖಭಾವವನ್ನು ಬಳಸಿಕೊಂಡು ಅದನ್ನು ಸಕ್ರಿಯಗೊಳಿಸಿ.

  3. ಸ್ಕ್ಯಾನರ್ ಮೆನುವಿನಲ್ಲಿ, ನಿಮಗೆ ಬೇಕಾದ ಆ್ಯಕ್ಷನ್ ಅನ್ನು ಆಯ್ಕೆಮಾಡಿ, ನಂತರ ನಿಮ್ಮ ‘ಐಟಮ್ ಆಯ್ಕೆಮಾಡಿ’ ಸ್ವಿಚ್ ಅಥವಾ ಮುಖಭಾವವನ್ನು ಸಕ್ರಿಯಗೊಳಿಸಿ.

ಐಟಮ್ ಮೋಡ್‌ಗೆ ಮರಳಲು, ಸ್ಕ್ಯಾನರ್ ಮೆನುವನ್ನು ತೆರೆಯಿರಿ, ನಂತರ ಐಟಮ್ ಮೋಡ್ ಆಯ್ಕೆಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.