ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ದೃಷ್ಟಿಯ ಆ್ಯಕ್ಸೆಸಬಿಲಿಟಿ ಫೀಚರ್‌ಗಳು

iPadನಲ್ಲಿ ದೃಷ್ಟಿಗಾಗಿ ಬಿಲ್ಟ್-ಇನ್ ಆ್ಯಕ್ಸೆಸಬಿಲಿಟಿ ಫೀಚರ್‌ಗಳ ಮೂಲಕ, ಸ್ಕ್ರೀನ್ ಮೇಲೆ ಏನಿದೆ ಎಂದು ನೋಡುವುದನ್ನು ನೀವು ಸುಲಭವಾಗಿಸಬಹುದು ಅಥವಾ ಸ್ಕ್ರೀನ್ ಮೇಲೆ ಏನಿದೆ ಎಂಬುದನ್ನು ಜೋರಾದ ಧ್ವನಿಯಲ್ಲಿ ಹೇಳುವುದನ್ನು ಕೇಳಿಸಿಕೊಳ್ಳಬಹುದು. ನಿಮ್ಮ iPad ಅನ್ನು ನೀವು ಮ್ಯಾಗ್ನಿಫೈಯಿಂಗ್ ಗ್ಲಾಸ್ ಆಗಿ ಸಹ ಬಳಸಬಹುದು ಮತ್ತು ನಿಮ್ಮ ಸುತ್ತಮುತ್ತಲಿನ ಸಂಗತಿಗಳ ವಿವರಣೆಗಳು ನಿಮಗೆ ಕಾಣಿಸದಿದ್ದರೆ ಅದನ್ನು ಪಡೆಯಲು iPad ಅನ್ನು ಮೇಲಕ್ಕೆ ಹಿಡಿದುಕೊಳ್ಳಬಹುದು.

ದೃಷ್ಟಿಯ ಆ್ಯಕ್ಸೆಸಬಿಲಿಟಿ ಫೀಚರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಲು, ಸೆಟ್ಟಿಂಗ್ಸ್ > ಆ್ಯಕ್ಸೆಸಬಿಲಿಟಿ ಎಂಬಲ್ಲಿಗೆ ಹೋಗಿ. ದೃಷ್ಟಿಯ ಫೀಚರ್‌ಗಳು ಮೇಲ್ಭಾಗದಲ್ಲಿವೆ.

ಸ್ಕ್ರೀನ್ ಮೇಲೆ ಏನಿದೆ ಎಂಬುದನ್ನು ಕೇಳಿ

VoiceOver ಮೂಲಕ iPad ಅನ್ನು ನಿಯಂತ್ರಿಸಿ

ಬಿಲ್ಟ್-ಇನ್ ಸ್ಕ್ರೀನ್ ರೀಡರ್ ಸ್ಕ್ರೀನ್ ಮೇಲೆ ಇರುವುದನ್ನು ಮಾತನಾಡುವಂತೆ ಮಾಡಿ. ನಿಮ್ಮ iPad ಅನ್ನು ಜೆಸ್ಚರ್‌ಗಳೊಂದಿಗೆ ಅಥವಾ ಕನೆಕ್ಟ್ ಮಾಡಲಾದ ಕೀಬೋರ್ಡ್ ಅಥವಾ ಬ್ರೇಲ್ ಡಿಸ್‌ಪ್ಲೇ ಮೂಲಕ ನ್ಯಾವಿಗೇಟ್ ಮಾಡಿ.

VoiceOver ಅನ್ನು ಆನ್ ಮಾಡಿ ಮತ್ತು ಅಭ್ಯಾಸ ಮಾಡಿ

ಸ್ಕ್ರೀನ್ ಮೇಲಿನ ಪಠ್ಯವನ್ನು ಮಾತನಾಡಿ

VoiceOver ಆಫ್ ಆಗಿದ್ದರೂ, ಸ್ಕ್ರೀನ್ ಮೇಲಿನ ಎಲ್ಲಾ ಪಠ್ಯವನ್ನು, ನೀವು ಏನನ್ನು ಟೈಪ್ ಮಾಡುತ್ತಿದ್ದೀರಿ ಎಂಬುದನ್ನು ಮತ್ತು ಇನ್ನೂ ಹೆಚ್ಚಿನದನ್ನು iPad ಓದುವಂತೆ ಮಾಡಿ.

ಸ್ಕ್ರೀನ್ ಮೇಲಿರುವ, ಆಯ್ದ ಪಠ್ಯ ಮತ್ತು ಟೈಪಿಂಗ್ ಫೀಡ್‌ಬ್ಯಾಕ್ ಅನ್ನು iPad ಮಾತನಾಡಿ ಹೇಳುವುದನ್ನು ಕೇಳಿ

ವೀಡಿಯೊದ ವಿವರಣೆಗಳನ್ನು ಆಲಿಸಿ

ಚಲನಚಿತ್ರಗಳು, ಟಿವಿ ಶೋಗಳು ಮತ್ತು ಇತರ ಮೀಡಿಯಾದ ವಿಷುವಲ್ ಕಂಟೆಂಟ್‌ನ ಮೌಖಿಕ ವಿವರಣೆಗಳು ಲಭ್ಯವಿದ್ದಾಗ ಅವುಗಳನ್ನು ಪಡೆಯಿರಿ.

ವೀಡಿಯೊ ಕಂಟೆಂಟ್‌ನ ಆಡಿಯೊ ವಿವರಣೆಗಳನ್ನು ಕೇಳಿ

ಸಲಹೆ: Siri ಮತ್ತು ಡಿಕ್ಟೇಷನ್ನೊಂದಿಗೆ, ನಿಮ್ಮ ಧ್ವನಿಯನ್ನು ಬಳಸಿಕೊಂಡು ನೀವು ಸಾಮಾನ್ಯ ಕಾರ್ಯಗಳನ್ನು ಪೂರ್ಣಗೊಳಿಸಬಹುದು ಮತ್ತು ಪಠ್ಯವನ್ನು ನಮೂದಿಸಬಹುದು.

ನಿಮ್ಮ ಸುತ್ತಮುತ್ತಲಿನ ಬಗ್ಗೆ ಮಾಹಿತಿ ಪಡೆಯಿರಿ

ಪಠ್ಯವನ್ನು ಸೂಚಿಸಿ ಮತ್ತು ಅದನ್ನು ಓದಿ ಹೇಳುವುದನ್ನು ಆಲಿಸಿ

ಗೃಹೋಪಯೋಗಿ ವಸ್ತುಗಳು, ATMಗಳು ಮತ್ತು ಇತ್ಯಾದಿಗಳ ಮೇಲಿನ ಪಠ್ಯವನ್ನು iPad ಓದುವಂತೆ ಮಾಡಿ.

ನಿಮ್ಮ ಸುತ್ತಲಿನ ಪಠ್ಯ ಮತ್ತು ಲೇಬಲ್‌ಗಳನ್ನು ಗಟ್ಟಿಯಾಗಿ ಓದಿ

ನಿಮ್ಮ ಸುತ್ತಮುತ್ತಲಿನ ಬಗ್ಗೆ ಕೇಳಿಸಿಕೊಳ್ಳಿ

iPad ಅನ್ನು ಮೇಲೆ ಹಿಡಿದುಕೊಳ್ಳಿ ಮತ್ತು ಪತ್ತೆಯಾದ ಜನರು, ಬಾಗಿಲುಗಳು ಅಥವಾ ಪಠ್ಯವನ್ನು ಸೇರಿದಂತೆ ನಿಮ್ಮ ಕ್ಯಾಮರಾ ಯಾವ ಕಡೆಗೆ ಮುಖಮಾಡಿದೆ ಎಂಬುದರ ಕುರಿತು ಮಾಹಿತಿಯನ್ನು ಪಡೆಯಿರಿ.

ನಿಮ್ಮ ಸುತ್ತಮುತ್ತಲಿನ ದೃಶ್ಯಮಾಹಿತಿಯ ಲೈವ್ ವಿವರಣೆಗಳನ್ನು ಪಡೆಯಿರಿ

ಹತ್ತಿರದ ನೋಟವನ್ನು ಪಡೆಯಿರಿ

ನಿಮ್ಮ ಸುತ್ತಮುತ್ತಲಿನ ವಸ್ತುಗಳ ಮೇಲೆ ಝೂಮ್ ಇನ್ ಮಾಡಲು iPad ಅನ್ನು ಮ್ಯಾಗ್ನಿಫೈಯಿಂಗ್ ಗ್ಲಾಸ್ ಆಗಿ ಬಳಸಿ.

ನಿಮ್ಮ ಸುತ್ತಮುತ್ತಲಿನ ವಸ್ತುಗಳನ್ನು ದೊಡ್ಡದಾಗಿಸಿ ಹಾಗು ಪರಿಶೀಲಿಸಿ

ಪಠ್ಯ ಮತ್ತು ಸ್ಕ್ರೀನ್ ಮೇಲಿನ ಇತರೆ ಕಂಟೆಂಟ್ ಅನ್ನು ದೊಡ್ಡದಾಗಿಸಿ

ಝೂಮ್ ಇನ್

ನೀವು ನೋಡುತ್ತಿರುವುದನ್ನು ದೊಡ್ಡದಾಗಿಸಿ—ಇಡೀ ಸ್ಕ್ರೀನ್ ಅಥವಾ ಅದರ ಒಂದು ಭಾಗ.

iPad ಸ್ಕ್ರೀನ್ ಮೇಲೆ ಝೂಮ್ ಇನ್ ಮಾಡಿ

ಪಠ್ಯವನ್ನು ದೊಡ್ಡದಾಗಿಸಿ ಮತ್ತು ಬೋಲ್ಡ್ ಮಾಡಿ

iPad ಆ್ಯಪ್‌ಗಳು ಮತ್ತು ಸಿಸ್ಟಂ ಫೀಚರ್‌ಗಳಲ್ಲಿನ ಪಠ್ಯದ ಓದುವ ಗಾತ್ರವನ್ನು ಸರಿಹೊಂದಿಸಿ.

ಪಠ್ಯವನ್ನು ಓದುವುದಕ್ಕೆ ಸುಲಭವಾಗಿಸಿ

ನೀವು ಟೈಪ್ ಮಾಡುವಾಗ ಪಠ್ಯವನ್ನು ದೊಡ್ಡದಾಗಿಸಿ

ನೀವು ಟೈಪ್ ಮಾಡುತ್ತಿರುವ ಪಠ್ಯದ ದೊಡ್ಡ ಆವೃತ್ತಿಯೊಂದಿಗಿನ ಪ್ರತ್ಯೇಕ ವಿಂಡೋವನ್ನು ತೋರಿಸಿ.

ಹೋವರ್ ಟೈಪಿಂಗ್ ಅನ್ನು ಬಳಸಿ

ನೀವು iPad ಜೊತೆಗೆ ಮೌಸ್ ಅಥವಾ ಟ್ರ್ಯಾಕ್‌ಪ್ಯಾಡ್ ಅನ್ನು ಬಳಸುತ್ತಿದ್ದರೆ, ನೀವು ಪಠ್ಯದ ಮೇಲೆ ಹೋವರ್ ಮಾಡಿದಾಗ ಅದರ ದೊಡ್ಡ ಆವೃತ್ತಿ ಕಾಣುವಂತೆ ಸಹ ನೀವು ಮಾಡಬಹುದು ಅಥವಾ ಪಾಯಿಂಟರ್ ಅನ್ನು ನೋಡಲು ಸುಲಭವಾಗುವಂತೆ ಮಾಡಬಹುದು.

ಸ್ಕ್ರೀನ್ ಮೇಲೆ ಇರುವುದನ್ನು ಹೆಚ್ಚು ಆರಾಮವಾದಾಯಕವಾಗಿ ನೋಡಿ

ಸ್ಕ್ರೀನ್ ಮೇಲಿನ ಚಲನೆಯನ್ನು ಕಡಿಮೆ ಮಾಡಿ

ಆ್ಯನಿಮೇಟೆಡ್ ಚಿತ್ರಗಳನ್ನು ವಿರಾಮಗೊಳಿಸಿ ಮತ್ತು ಬಳಕೆದಾರರ ಇಂಟರ್‌ಫೇಸ್ ಎಲಿಮೆಂಟ್‌ಗಳ ಚಲನೆಯನ್ನು ನಿಧಾನಗೊಳಿಸಿ. ಅಥವಾ ನೀವು ವೀಕ್ಷಿಸುತ್ತಿರುವ ಮೀಡಿಯಾ ಸ್ಟ್ರೋಬ್ ಅಥವಾ ಫ್ಲ್ಯಾಶಿಂಗ್ ಲೈಟ್‌ಗಳನ್ನು ತೋರಿಸುತ್ತಿರುವಾಗ ನಿಮ್ಮ ಡಿಸ್‌ಪ್ಲೇಯನ್ನು ಡಿಮ್ ಮಾಡಿ.

ಸ್ಕ್ರೀನ್ ಮೇಲಿನ ಚಲನೆಯನ್ನು ನಿಲ್ಲಿಸಿ ಅಥವಾ ಕಡಿಮೆ ಮಾಡಿ

ಕಾರಿನಲ್ಲಿ iPad ಅನ್ನು ಹೆಚ್ಚು ಆರಾಮದಾಯಕವಾಗಿ ಬಳಸಿ

ಮೋಷನ್ ಸಿಕ್‌ನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಬಹುದಾದ ಸ್ಕ್ರೀನ್ ಅಂಚುಗಳ ಮೇಲಿನ ಆ್ಯನಿಮೇಟೆಡ್ ಡಾಟ್‌ಗಳನ್ನು ಪಡೆಯಿರಿ.

ವಾಹನದಲ್ಲಿ ಪ್ರಯಾಣಿಕರಾಗಿ ಪ್ರಯಾಣ ಮಾಡುವಾಗ iPad ಅನ್ನು ಹೆಚ್ಚು ಆರಾಮದಾಯಕವಾಗಿ ಬಳಸಿ

ಡಾರ್ಕ್ ಮೋಡ್ ಬಳಸಿ

ನೀವು ಗಾಢಬಣ್ಣದ ಹಿನ್ನೆಲೆಯಲ್ಲಿ ತಿಳಿಬಣ್ಣದ ಪಠ್ಯವನ್ನು ಬಯಸಿದರೆ, iPad ಬಳಕೆದಾರರ ಇಂಟರ್‌ಫೇಸ್‌ಗಾಗಿ ಗಾಢಬಣ್ಣದ ಸ್ಕೀಮ್ ಅನ್ನು ಆಯ್ಕೆಮಾಡಿ.

ಡಾರ್ಕ್ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಿ

ಡಿಸ್‌ಪ್ಲೇ ಬಣ್ಣಗಳನ್ನು ಸರಿಹೊಂದಿಸಿ

ಬಣ್ಣಗಳನ್ನು ಇನ್ವರ್ಟ್ ಮಾಡುವ ಮೂಲಕ, ಬಣ್ಣದ ಫಿಲ್ಟರ್ ಅನ್ನು ಅನ್ವಯಿಸುವ ಮೂಲಕ ಮತ್ತು ಹೆಚ್ಚಿನವುಗಳ ಮೂಲಕ ಸ್ಕ್ರೀನ್ ಮೇಲಿನ ಕಂಟೆಂಟ್‌ನ ಭಿನ್ನತೆಯನ್ನು ಇನ್ನಷ್ಟು ಹೆಚ್ಚಿಸಿ.

ಸ್ಕ್ರೀನ್ ಮೇಲೆ ಇರುವುದನ್ನು ನೋಡಲು ಸುಲಭವಾಗುವಂತೆ iPadನಲ್ಲಿ ಡಿಸ್‌ಪ್ಲೇ ಬಣ್ಣಗಳನ್ನು ಬದಲಾಯಿಸಿ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.