ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ರಿಮೈಂಡರ್ಸ್ ಆ್ಯಪ್‌ನಲ್ಲಿ ವಿವರಗಳನ್ನು ಸೇರಿಸುವುದು

ಟಿಪ್ಪಣಿಗಳು, ಲಿಂಕ್‌ಗಳು, ಕೊನೆಯ ದಿನಾಂಕಗಳು ಮತ್ತು ಫೋಟೋಗಳಂತಹ ವಿವರಗಳನ್ನು ನಿಮ್ಮ ರಿಮೈಂಡರ್‌ಗಳಿಗೆ ನೀವು ಸೇರಿಸಬಹುದು.

ಗಮನಿಸಿ: ನೀವು iCloudನಲ್ಲಿ ಅಪ್‌ಡೇಟ್ ಮಾಡಲಾದ ರಿಮೈಂಡರ್‌ಗಳನ್ನು ಬಳಸಿದಾಗ ಈ ಗೈಡ್‌ನಲ್ಲಿ ವಿವರಿಸಲಾಗಿರುವ ರಿಮೈಂಡರ್ಸ್ ಆ್ಯಪ್‌ನ ಎಲ್ಲಾ ಫೀಚರ್‌ಗಳು ಲಭ್ಯವಿರುತ್ತವೆ. ಇತರ ಖಾತೆಗಳನ್ನು ಬಳಸುವಾಗ ಕೆಲವು ಫೀಚರ್‌ಗಳು ಲಭ್ಯವಿರುವುದಿಲ್ಲ.

ರಿಮೈಂಡರ್‌ಗೆ ಟಿಪ್ಪಣಿ, URL ಮತ್ತು ಇತರ ವಿವರಗಳನ್ನು ಸೇರಿಸುವುದು

  1. ನಿಮ್ಮ iPhoneನಲ್ಲಿರುವ ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  2. ಐಟಮ್ ಅನ್ನು ಟ್ಯಾಪ್ ಮಾಡಿ.

  3. ಟಿಪ್ಪಣಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೆಚ್ಚಿನ ಮಾಹಿತಿಯನ್ನು ಸೇರಿಸಿ.

  4. ಐಟಮ್ ವಿವರಗಳನ್ನು ಎಡಿಟ್ ಮಾಡಲು ವಿವರಗಳನ್ನು ಎಡಿಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ. ಉದಾಹರಣೆಗೆ, ನೀವು ದಿನಾಂಕ ಮತ್ತು ಸಮಯವನ್ನು ಸೆಟ್ ಮಾಡಬಹುದು, ಸ್ಥಳ-ಆಧಾರಿತ ರಿಮೈಂಡರ್ ಅನ್ನು ಸೆಟ್ ಮಾಡಬಹುದು, ಮುಖ್ಯವಾದ ಐಟಮ್ ಅನ್ನು ಫ್ಲ್ಯಾಗ್ ಮಾಡಬಹುದು ಅಥವಾ ಫೋಟೋವನ್ನು ಅಟ್ಯಾಚ್ ಮಾಡಬಹುದು.

ಯಾವಾಗ ಮತ್ತು ಎಲ್ಲಿ ನೆನಪಿಸಬೇಕು ಎಂಬುದನ್ನು ಸೆಟ್ ಮಾಡಿ

ನಿರ್ದಿಷ್ಟ ದಿನಾಂಕದಂದು, ನಿರ್ದಿಷ್ಟ ಸಮಯದಲ್ಲಿ ಅಥವಾ ಸ್ಥಳದಲ್ಲಿ, ಅಥವಾ ನೀವು ಸಂದೇಶ ಆ್ಯಪ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತಿರುವಾಗ ನಿಮಗೆ ನೆನಪಿಸುವಂತೆ ಸೆಟ್ ಮಾಡಿಕೊಳ್ಳಬಹುದು.

  1. ನಿಮ್ಮ iPhoneನಲ್ಲಿರುವ ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  2. ಐಟಮ್ ಒಂದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ:

    • ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ: ದಿನಾಂಕ ಮತ್ತು ಸಮಯದ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

      ಸಲಹೆ: ಕೊನೆಯ ದಿನಾಂಕವನ್ನು ಹೊಂದಿರುವ ರಿಮೈಂಡರ್‌ಗಳು ಕ್ಯಾಲೆಂಡರ್ ಆ್ಯಪ್‌ನಲ್ಲಿ ಇಡೀ ದಿನದ ಇವೆಂಟ್ ಆಗಿ ಕಾಣಿಸಿಕೊಳ್ಳುತ್ತವೆ. ಕ್ಯಾಲೆಂಡರ್‌ನಲ್ಲಿ ರಿಮೈಂಡರ್‌ಗಳನ್ನು ಬಳಸಿ ಎಂಬುದನ್ನು ನೋಡಿ.

    • ಮರುಕಳಿಸುವ ರಿಮೈಂಡರ್ ಅನ್ನು ಸೆಟ್ ಮಾಡಿ: ವಿವರಗಳನ್ನು ಎಡಿಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ಪುನರಾವರ್ತಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಆವರ್ತನವನ್ನು ಆಯ್ಕೆ ಮಾಡಿ.

    • ನಿಗದಿಪಡಿಸಿದ ದಿನಾಂಕ ಮತ್ತು ಸಮಯಕ್ಕಿಂತ ಮೊದಲೇ ಮುಂಚಿತವಾದ ರಿಮೈಂಡರ್ ಅನ್ನು ಪಡೆಯಿರಿ: ವಿವರಗಳನ್ನು ಎಡಿಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ಮುಂಚಿತ ರಿಮೈಂಡರ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮಗೆ ಯಾವಾಗ ನೆನಪಿಸಬೇಕು ಎಂಬುದನ್ನು ಆಯ್ಕೆ ಮಾಡಿ. ಉದಾಹರಣೆಗೆ, “5 ನಿಮಿಷಗಳ ಮೊದಲು”, “2 ದಿನಗಳ ಮೊದಲು”, ಅಥವಾ ಬೇರೊಂದು ಆಯ್ಕೆಯನ್ನು ಆರಿಸಿ.

    • ಸ್ಥಳವನ್ನು ಸೇರಿಸಿ: ಸ್ಥಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮಗೆ ಎಲ್ಲಿ ನೆನಪಿಸಬೇಕೆಂದು ಆಯ್ಕೆಮಾಡಿ—ಉದಾಹರಣೆಗೆ, ನೀವು ಮನೆಗೆ ಬಂದಾಗ ಅಥವಾ ನಿಮ್ಮ iPadಗೆ Bluetooth® ಕನೆಕ್ಷನ್ ಹೊಂದಿರುವ ಕಾರನ್ನು ಹತ್ತಿದಾಗ.

      ಗಮನಿಸಿ: ಸ್ಥಳ ಆಧಾರಿತ ರಿಮೈಂಡರ್‌ಗಳನ್ನು ಸ್ವೀಕರಿಸಲು, ನಿಮ್ಮ ನಿಖರವಾದ ಸ್ಥಳವನ್ನು ಬಳಸಲು ನೀವು ರಿಮೈಂಡರ್ಸ್ ಆ್ಯಪ್‌ಗೆ ಅನುಮತಿಸಬೇಕು. ಸೆಟ್ಟಿಂಗ್ಸ್ ಆ್ಯಪ್  > ಗೌಪ್ಯತೆ ಮತ್ತು ಭದ್ರತೆ > ಸ್ಥಳ ಸೇವೆಗಳು ಎಂಬಲ್ಲಿಗೆ ಹೋಗಿ. ಸ್ಥಳ ಸೇವೆಗಳನ್ನು ಆನ್ ಮಾಡಿ, ರಿಮೈಂಡರ್ಸ್ ಆ್ಯಪ್ ಅನ್ನು ಟ್ಯಾಪ್ ಮಾಡಿ, ಆ್ಯಪ್ ಅನ್ನು ಬಳಸುವಾಗ ಎಂಬುದನ್ನು ಆಯ್ಕೆಮಾಡಿ, ನಂತರ ನಿಖರವಾದ ಸ್ಥಳವನ್ನು ಆನ್ ಮಾಡಿ.

    • ಸಂದೇಶ ಆ್ಯಪ್‌ನಲ್ಲಿ ರಿಮೈಂಡರ್ ಪಡೆಯಿರಿ : ವಿವರಗಳನ್ನು ಎಡಿಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ‘ಸಂದೇಶ ಕಳುಹಿಸುವಾಗ’ ಎಂಬುದನ್ನು ಆನ್ ಮಾಡಿ, ನಂತರ ನಿಮ್ಮ ಸಂಪರ್ಕಗಳ ಪಟ್ಟಿಯಿಂದ ಯಾರನ್ನಾದರೂ ಆರಿಸಿಕೊಳ್ಳಿ. ನೀವು ಮುಂದಿನ ಬಾರಿ ನೀವು ಸಂದೇಶ ಆ್ಯಪ್‌ನಲ್ಲಿ ಆ ವ್ಯಕ್ತಿಯೊಂದಿಗೆ ಚ್ಯಾಟ್ ಮಾಡುವಾಗ ರಿಮೈಂಡರ್ ಕಾಣಿಸಿಕೊಳ್ಳುತ್ತದೆ.

ಫ್ಲ್ಯಾಗ್ ಮತ್ತು ಆದ್ಯತೆಯನ್ನು ಸೆಟ್ ಮಾಡಿ

  1. ನಿಮ್ಮ iPhoneನಲ್ಲಿರುವ ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  2. ಐಟಮ್ ಅನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಮುಖ್ಯವಾದ ಐಟಮ್ ಅನ್ನು ಫ್ಲ್ಯಾಗ್ ಮಾಡಿ: ಫ್ಲ್ಯಾಗ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

    • ಆದ್ಯತೆಯನ್ನು ಸೆಟ್ ಮಾಡಿ: ವಿವರಗಳನ್ನು ಎಡಿಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ಆದ್ಯತೆಯನ್ನು ಟ್ಯಾಪ್ ಮಾಡಿ, ನಂತರ ಕಡಿಮೆ, ಮಧ್ಯಮ ಅಥವಾ ಹೆಚ್ಚು ಎಂಬುದನ್ನು ಆಯ್ಕೆ ಮಾಡಿ.

ಫೋಟೋವನ್ನು ಸೇರಿಸಿ ಅಥವಾ ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಿ

  1. ನಿಮ್ಮ iPhoneನಲ್ಲಿರುವ ರಿಮೈಂಡರ್ಸ್ ಆ್ಯಪ್‌ಗೆ ಹೋಗಿ.

  2. ಐಟಮ್ ಅನ್ನು ಟ್ಯಾಪ್ ಮಾಡಿ, ನಂತರ ಫೋಟೋಸ್ ಆ್ಯಪ್‌ನ ಬಟನ್ ಅನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಹೊಸ ಫೋಟೋ ತೆಗೆದುಕೊಳ್ಳಿ.

    • ನಿಮ್ಮ ಫೋಟೋ ಲೈಬ್ರರಿಯಿಂದ ಫೋಟೋ ಆಯ್ಕೆ ಮಾಡಿ.

    • ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಿ.

    • ಸ್ಕ್ಯಾನ್ ಮಾಡಿ ಮತ್ತು ಪಠ್ಯವನ್ನು ಇನ್ಸರ್ಟ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.